ಸೋಮವಾರ ತಗ್ಗಿತು ‘ಮಾರ್ಟಿನ್’ ಸಿನಿಮಾ ಗಳಿಕೆ; ಒಟ್ಟಾರೆ ಕಲೆಕ್ಷನ್ ಎಷ್ಟು?
‘ಆ್ಯಕ್ಷನ್ ಪ್ರಿನ್ಸ್’ ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಗ್ರ್ಯಾಂಡ್ ಆಗಿ ಬಿಡುಗಡೆ ಆಗಿದೆ. ಎ.ಪಿ. ಅರ್ಜುನ್ ನಿರ್ದೇಶನ ಮಾಡಿದ ಈ ಸಿನಿಮಾಗೆ ಸಿನಿಪ್ರಿಯರು ಭರ್ಜರಿ ಸ್ವಾಗತ ಕೋರಿದ್ದಾರೆ. ಹಲವು ಚಿತ್ರಮಂದಿರಗಳು ಹೌಸ್ಫುಲ್ ಆಗಿವೆ. ಈ ಚಿತ್ರದ ಒಟ್ಟಾರೆ ಗಳಿಕೆ ಎಷ್ಟು ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿತ್ತು. ಇದಕ್ಕೆ ಉತ್ತರ ಸಿಕ್ಕಿದೆ.
ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಸೂಪರ್ ಹಿಟ್ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರಪ್ರತಿಕ್ರಿಯೆ ಸಿಕ್ಕಿದೆ. ಇದು ಫ್ಯಾನ್ಸ್ ಬೇಸರಕ್ಕೆ ಕಾರಣ ಆಗಿದೆ. ಈ ಚಿತ್ರದ ಒಟ್ಟಾರೆ ಗಳಿಕೆ ಎಷ್ಟು ಎನ್ನುವ ಕುತೂಹಲ ಅಭಿಮಾನಿಗಳಿಗೆ ಮೂಡಿತ್ತು. ಅದಕ್ಕೆ ಉತ್ತರ ಸಿಕ್ಕಿದೆ. Sacnilk ‘ಮಾರ್ಟಿನ್’ ಗಳಿಕೆ ಬಗ್ಗೆ ವರದಿ ಮಾಡಿದೆ.
‘ಮಾರ್ಟಿನ್’ ಸಿನಿಮಾ ಮೊದಲ ದಿನ 6.7 ಕೋಟಿ ರೂಪಾಯಿ ಗಳಿಕೆ ಮಾಡಿತ್ತು ಎಂದು sacnilk ಹೇಳಿತ್ತು. ಅದೇ ರೀತಿ ಎರಡನೇ ದಿನ 5.5 ಕೋಟಿ ರೂಪಾಯಿ ಹಾಗೂ ಮೂರನೇ ದಿನ 3.35 ಕೋಟಿ ರೂಪಾಯಿ ಗಳಿಕೆ ಆಗಿತ್ತು. ನಾಲ್ಕನೇ ದಿನ ಚಿತ್ರ 1.35 ಕೋಟಿ ರೂಪಾಯಿ ಗಳಿಸಲಷ್ಟೇ ಶಕ್ಯವಾಗಿದೆ. ಈ ಮೂಲಕ ಚಿತ್ರದ ಒಟ್ಟಾರೆ ಗಳಿಕೆ ಸುಮಾರು 17 ಕೋಟಿ ರೂಪಾಯಿ ಆಗಿದೆ.
‘ಮಾರ್ಟಿನ್’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿದೆ. ‘ಕೆಜಿಎಫ್ 2’, ‘ಕಾಂತಾರ’ ರೀತಿಯಲ್ಲೇ ನಿರೀಕ್ಷೆ ಇಟ್ಟುಕೊಂಡು ಪರಭಾಷಿಗರು ‘ಮಾರ್ಟಿನ್’ ನೋಡಲು ಹೋಗಿದ್ದರು. ಆದರೆ, ಅವರಿಗೆ ನಿರಾಸೆ ಆಗಿದೆ. ಆದರೆ, ಚಿತ್ರತಂಡದ ‘ಮಾರ್ಟಿನ್’ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ ಎಂದು ಹೇಳುತ್ತಲೇ ಬರುತ್ತಿದೆ.
‘ಮಾರ್ಟಿನ್’ ಸಿನಿಮಾ ತಂಡ ಅಕ್ಟೋಬರ್ 14ರಂದು ಸಕ್ಸಸ್ ಮೀಟ್ ಆಯೋಜನೆ ಮಾಡಿತ್ತು. ಈ ವೇಳೆ ತಂಡದವರು ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಪರಭಾಷೆಯಿಂದಲೂ ಚಿತ್ರಕ್ಕೆ ಮೆಚ್ಚುಗೆ ಸಿಗುತ್ತಿದೆ ಎನ್ನುವ ಅಭಿಪ್ರಾಯವನ್ನು ಅವರು ಹೊರಹಾಕುತ್ತಿದ್ದಾರೆ. ‘ಮಾರ್ಟಿನ್’ ಚಿತ್ರದಲ್ಲಿ ಧ್ರುವ ಸರ್ಜಾ ಅವರು ದ್ವಿಪಾತ್ರ ಮಾಡಿದ್ದಾರೆ. ಅವರ ನಟನೆ ಫ್ಯಾನ್ಸ್ಗೆ ಇಷ್ಟ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ಬಗ್ಗೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ: ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾಗೆ ಮಕ್ಕಳಿಂದ ಸಿಕ್ತು ಭರ್ಜರಿ ಸ್ವಾಗತ
ಧ್ರುವ ಸರ್ಜಾ ಅವರು ಸದ್ಯ ‘ಕೆಡಿ’ ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಈ ಚಿತ್ರಕ್ಕೆ ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಸಂಜಯ್ ದತ್ ಅವರು ವಿಲನ್ ಪಾತ್ರ ಮಾಡುತ್ತಿದ್ದು, ಶಿಲ್ಪಾ ಶೆಟ್ಟಿ ಕೂಡ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.