‘ಜೀವ ನೀನೆ..’ ಸಾಂಗ್ ಮೂಲಕ ಗಮನ ಸೆಳೆದ ‘ಮಾರ್ಟಿನ್’ ಸಿನಿಮಾ ತಂಡ

ಧ್ರುವ ಸರ್ಜಾ ನಟನೆಯ ‘ಮಾರ್ಟಿನ್’ ಸಿನಿಮಾ ಅಕ್ಟೋಬರ್ 11ರಂದು ರಿಲೀಸ್ ಆಗಲಿದೆ. ಇದಕ್ಕೆ ತಂಡ ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದೆ. ಈ ಚಿತ್ರದ ಸಾಂಗ್ ರಿಲೀಸ್ ಆಗಿದೆ. ಮಣಿ ಶರ್ಮಾ ಅವರ ಸಂಗೀತ ಸಂಯೋಜನೆಯಲ್ಲಿ ‘ಜೀವ ನೀನೆ..’ ಹಾಡು ಮೂಡಿ ಬಂದಿದೆ.

‘ಜೀವ ನೀನೆ..’ ಸಾಂಗ್ ಮೂಲಕ ಗಮನ ಸೆಳೆದ ‘ಮಾರ್ಟಿನ್’ ಸಿನಿಮಾ ತಂಡ
‘ಜೀವ ನೀನೆ..’ ಸಾಂಗ್ ಮೂಲಕ ಗಮನ ಸೆಳೆದ ‘ಮಾರ್ಟಿನ್’ ಸಿನಿಮಾ ತಂಡ
Follow us
|

Updated on: Sep 03, 2024 | 2:27 PM

ಧ್ರುವ ಸರ್ಜಾ ಅವರು ‘ಮಾರ್ಟಿನ್’ ಸಿನಿಮಾದಲ್ಲಿ ನಟಿಸುತ್ತಿದ್ದಾತೆ. ಈ ಚಿತ್ರಕ್ಕೆ ಎಪಿ ಅರ್ಜುನ್ ನಿರ್ದೇಶನ ಮಾಡಿದ್ದಾರೆ. ಅಕ್ಟೋಬರ್ 11ರಂದು ಸಿನಿಮಾ ತೆರೆಮೇಲೆ ಬರುತ್ತಿದೆ. ಅದಕ್ಕೂ ಮೊದಲು ಸಿನಿಮಾದ ಟ್ರೇಲರ್ ರಿಲೀಸ್ ಮಾಡಲಾಗಿತ್ತು. ಟ್ರೇಲರ್​ನಲ್ಲಿ ಭರ್ಜರಿ ಆ್ಯಕ್ಷನ್ ಇತ್ತು. ಈಗ ‘ಜೀವ ನೀನೆ..’ ಹೆಸರಿನ ರೊಮ್ಯಾಂಟಿಕ್ ಹಾಡನ್ನು ರಿಲೀಸ್ ಮಾಡಲಾಗಿದೆ. ಇದರಲ್ಲಿ ಧ್ರುವ ಸರ್ಜಾ ಹಾಗೂ ವೈಭವಿ ಶಾಂಡಿಲ್ಯ ಅವರ ಕೆಮಿಸ್ಟ್ರಿ ಫ್ಯಾನ್ಸ್​ಗೆ ಇಷ್ಟ ಆಗಿದೆ.

‘ಮಾರ್ಟಿನ್’ ಚಿತ್ರದ ಹಾಡುಗಳಿಗೆ ಮಣಿ ಶರ್ಮಾ ಅವರು ಸಂಗೀತ ಸಂಯೋಜನೆ ಮಾಡಿದ್ದಾರೆ. ರವಿ ಬಸ್ರೂರು ಅವರು ಹಿನ್ನೆಲೆ ಸಂಗೀತ ನೀಡಿದ್ದಾರೆ. ಮಣಿ ಶರ್ಮಾ ಅವರು ತೆಲುಗು ಸಿನಿಮಾಗಳಲ್ಲಿ ಕೆಲಸ ಮಾಡಿ ಫೇಮಸ್ ಆಗಿದ್ದಾರೆ. ಅವರ ಸಂಗೀತ ಸಂಯೋಜನೆಯಲ್ಲಿ ‘ಜೀವ ನೀನೆ..’ ಹಾಡು ಮೂಡಿ ಬಂದಿದೆ. ಈ ಹಾಡನ್ನು ಫ್ಯಾನ್ಸ್ ಮೆಚ್ಚಿಕೊಂಡಿದ್ದಾರೆ. ರಿಲೀಸ್ ಆದ ಒಂದು ಗಂಟೆಯಲ್ಲಿ ಸಾವಿರಾರು ಬಾರಿ ಈ ಹಾಡು ವೀಕ್ಷಣೆ ಕಂಡಿದೆ.

ಈ ಹಾಡನ್ನು ಭಾರತದ ಅನೇಕ ಸುಂದರ ಸ್ಥಳಗಳಲ್ಲಿ ಶೂಟ್ ಮಾಡಲಾಗಿದೆ. ಹೀಗಾಗಿ, ಕೇವಲ ಕಿವಿಗೆ ಮಾತ್ರವಲ್ಲದೆ, ಈ ಹಾಡು ಕಣ್ಣಿಗಳಿಗೂ ತಂಪು ನೀಡುತ್ತದೆ. ಸೋನು ನಿಗಮ, ಶ್ರುತಿಕಾ ಸಮುದ್ರಲಾ ಅವರು ಈ ಹಾಡನ್ನು ಹಾಡಿದ್ದಾರೆ. ಎಪಿ ಅರ್ಜುನ್ ಅವರೇ ಸಾಹಿತ್ಯ ಬರೆದಿದ್ದಾರೆ. ಈ ಹಾಡು ಸದ್ಯ (ಸೆಪ್ಟೆಂಬರ್ 3 ಮಧ್ಯಾಹ್ನ 2 ಗಂಟೆಗೆ) ಮ್ಯೂಸಿಕ್ ವಿಭಾಗದ ಟ್ರೆಂಡಿಂಗ್​ನಲ್ಲಿ 14ನೇ ಸ್ಥಾನದಲ್ಲಿ ಇದೆ.

ಇದನ್ನೂ ಓದಿ: ‘ಮಾರ್ಟಿನ್’ ಜೊತೆ ಕ್ಲ್ಯಾಶ್ ಮಾಡಿಕೊಂಡ ‘ವೆಟ್ಟೈಯನ್’ ಸಿನಿಮಾ; ರಿಲೀಸ್ ದಿನಾಂಕ ರಿವೀಲ್

‘ಮಾರ್ಟಿನ್’ ಸಿನಿಮಾ ಸಖತ್ ಮಾಸ್ ಆಗಿರಲಿದೆ ಎಂದು ಎಲ್ಲರೂ ನಿರೀಕ್ಷಿಸುತ್ತಿದ್ದಾರೆ. ಈ ಚಿತ್ರದ ಕೆಲಸಗಳು ಕಾರಣಾಮತರಗಳಿಂದ ವಿಳಂಬ ಆದವು. ಈಗ ಎಲ್ಲಾ ವಿಘ್ನಗಳನ್ನು ಮೀರಿ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾದ ಟ್ರೇಲರ್ ಕನ್ನಡ ಜೊತೆಗೆ ತೆಲುಗು, ತಮಿಳು, ಚೈನಿಸ್, ಕೊರಿಯನ್ ಸೇರಿ 13 ಭಾಷೆಗಳಲ್ಲಿ ರಿಲೀಸ್ ಆಗಿತ್ತು ಅನ್ನೋದು ವಿಶೇಷ. ಈ ಚಿತ್ರವನ್ನು ಉದಯ್ ಮೆಹ್ತಾ ಅವರು ನಿರ್ಮಾಣ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.