ಮೇಘನಾ ರಾಜ್ ಮನೆ ಎಷ್ಟು ಸುಂದರ; ನಟಿಯ ಹೋಮ್ ಟೂರ್ ವಿಡಿಯೋ
ಮೇಘನಾ ರಾಜ್ ಅವರು ತಮ್ಮ ಮನೆಯ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಅವರು ತಮ್ಮ ಮನೆಯ ಸೋಫಾ, ಅವಾರ್ಡ್, ದೊಡ್ಡ ಟಿವಿ, ವಿಶಾಲವಾದ ಅಡುಗೆಮನೆ ಮತ್ತು ಓದುವ ಕೋಣೆಯನ್ನು ತೋರಿಸಿದ್ದಾರೆ. ಅವರ ಬೃಹತ್ ಪುಸ್ತಕ ಸಂಗ್ರಹ ಮತ್ತು ಶೂ ಕಲೆಕ್ಷನ್ ಕೂಡ ವಿಡಿಯೋದಲ್ಲಿ ಕಾಣಿಸುತ್ತದೆ. ಟೆರೇಸ್ ಬಾಲ್ಕನಿ ಕೂಡ ಅವರ ಮನೆಯ ಪ್ರಮುಖ ಆಕರ್ಷಣೆಯಾಗಿದೆ.

ಸೆಲೆಬ್ರಿಟಿಗಳ ಮನೆಯನ್ನು ನೋಡಬೇಕು ಎನ್ನುವ ಆಸೆ ಎಲ್ಲರಿಗೂ ಇರುತ್ತದೆ. ಕೆಲವೊಮ್ಮೆ ವಿವಿಧ ವ್ಲಾಗರ್ಸ್ ಮನೆಯ ವಿಡಿಯೋಗಳನ್ನು ಮಾಡಿ ಹಾಕಿದರೆ ಇನ್ನೂ ಕೆಲವೊಮ್ಮೆ ನಟಿಯರೇ ಈ ಬಗ್ಗೆ ವಿಡಿಯೋ ಮಾಡಿ ಪೋಸ್ಟ್ ಮಾಡುತ್ತಾರೆ. ನಟಿ ಮೇಘನಾ ರಾಜ್ (Meghana Raj) ಅವರ ಮನೆಯನ್ನು ನೋಡಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಈ ಆಸೆಯನ್ನು ಕೊನೆಗೂ ನಟಿ ಈಡೇರಿಸಿದ್ದಾರೆ ಎಂದೇ ಹೇಳಬಹುದು. ಅವರು ಮನೆಯ ಒಳಗೆ ಏನೆಲ್ಲ ಇದೆ ಎಂಬುದರ ಟೂರ್ ಮಾಡಿ ತೋರಿಸಿದ್ದಾರೆ. ಈ ವಿಡಿಯೋ ಫ್ಯಾನ್ಸ್ಗೆ ಇಷ್ಟ ಆಗಿದೆ.
ಮೇಘನಾ ರಾಜ್ ಅವರು ಹೊಸ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಅವರು ಯೂಟ್ಯೂಬ್ ವಿಡಿಯೋ ಮಾಡೋಕೆ ಆರಂಭಿಸಿ 2-3 ವರ್ಷಗಳು ಕಳೆದಿವೆ. ವಿವಿಧ ರೀತಿ ಟುಟೋರಿಯಲ್, ಧನಾತ್ಮಕ ವಿಚಾರ, ಕೆಲವು ಪ್ರಮೋಷನ್ಗಳನ್ನು ಈ ಚಾನೆಲ್ ಮೂಲಕ ಮಾಡುತ್ತಾರೆ. ಇದಕ್ಕೆ ಸುಮಾರು 4 ಲಕ್ಷ ಸಬ್ಸ್ಕ್ರೈಬರ್ಗಳು ಇದ್ದಾರೆ. ಇದೇ ಮೊದಲ ಬಾರಿಗೆ ಅವರು ಮನೆಯ ವಿಡಿಯೋ ಮಾಡಿದ್ದಾರೆ.
ಮನೆಯಲ್ಲಿ ಆರಂಭದಲ್ಲಿ ಸೋಫಾ ಹೇಗಿದೆ ಎಂಬುದನ್ನು ತೋರಿಸಿದ್ದಾರೆ. ಈ ಸೋಫಾ ವಿಶೇಷತೆ ಬಗ್ಗೆ ಅವರು ಮಾತನಾಡಿದ್ದಾರೆ. ಮನೆಗೆ ಬಂದ ಅತಿಥಿಗಳಿಗೆ ಟೀ ಅಥವಾ ಕಾಫಿ ಕೊಟ್ಟಾಗ ಅದನ್ನು ಇಟ್ಟುಕೊಳ್ಳೋಕೆ ಸಹಕಾರಿ ಆಗುವಂಥ ಸೋಫಾನ ಹುಡುಕಿ ತರಲಾಗಿದೆ. ಇನ್ನು ಮನೆಯಲ್ಲಿ ಅವಾರ್ಡ್ ಇಡಲು ವಿಶೇಷ ಜಾಗ ಇದೆ. ಅದನ್ನು ತೋರಿಸಿದ್ದಾರೆ ಮೇಘನಾ ರಾಜ್.
ಮೇಘನಾ ರಾಜ್ ಹೋಮ್ ಟೂರ್
ಮನೆಯಲ್ಲಿ ದೊಡ್ಡದಾದ ಟಿವಿ ಇದೆ. ದಿನವೂ 1-2 ಸಿನಿಮಾಗಳನ್ನು ಈಗ ಅವರು ನೋಡುತ್ತಿದ್ದಾರೆ. ಇತ್ತೀಚೆಗೆ ಸಿನಿಮಾ ಕೆಲಸಗಳನ್ನು ಕಡಿಮೆ ಮಾಡಿದ್ದಾರೆ. ಹೀಗಾಗಿ, ಅವರಿಗೆ ಸಮಯ ಸಿಗುತ್ತಿದೆ ಮತ್ತು ಸಿನಿಮಾ ನೋಡಲು ಈ ಸಮಯ ಬಳಕೆ ಮಾಡಿಕೊಳ್ಳುತ್ತಾ ಇದ್ದಾರೆ.
ಇದನ್ನೂ ಓದಿ: ಮಕ್ಕಳಿಂದಾಗಿ ನಮ್ಮ ಕುಟುಂಬದಲ್ಲಿ ಒಗ್ಗಟ್ಟು; ಧ್ರುವ ಮಕ್ಕಳ ಬಗ್ಗೆ ಮೇಘನಾ ರಾಜ್ ಮಾತು
ಇವರ ಮನೆಯಲ್ಲಿ ದೊಡ್ಡ ಅಡುಗೆ ಮನೆ ಇದೆ. ಡೈನಿಂಗ್ ಟೇಬಲ್, ಅಡುಗೆ ಮನೆ ಇದೆ. ಅಡುಗೆ ಮನೆ ತುಂಬಾನೇ ಸುಂದರವಾಗಿ ಇದೆ. ಅವರ ರೂಂ ಕೂಡ ಸಖತ್ ಆಗಿದೆ. ಅವರಿಗೆ ಪುಸ್ತಕ ಓದೋದು ಅಂದರೆ ಇಷ್ಟ. ಈ ಕಾರಣಕ್ಕೆ ಪುಸ್ತಕದ ರ್ಯಾಕ್ ಕೂಡ ಇಡಲಾಗಿದೆ. ಅಲ್ಲಿ ರಾಯನ್ನ ದೊಡ್ಡ ಫೋಟೋ ಇದೆ. ಅವರಿಗೆ ಶೂ ಹಾಗೂ ಚಪ್ಪಲಿ ಕಲೆಕ್ಷನ್ ದೊಡ್ಡದಾಗಿದೆ. ಟೆರೇಸ್ ಮೇಲೆ ಇರುವ ಬಾಲ್ಕನಿ ಕೂಡ ದೊಡ್ಡದಾಗಿದೆ. ಇದನ್ನು ಅವರು ಹೆಚ್ಚು ಬಳಕೆ ಮಾಡುತ್ತಾರಂತೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.







