Prajwal Devaraj: ಟೈಮ್​ ಲೂಪ್​ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​; ‘ಮಮ್ಮಿ’ ಖ್ಯಾತಿಯ ಲೋಹಿತ್​ ನಿರ್ದೇಶನ

Kannada Time loop Movie: ಈ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿದೆ. ಡಿಸೆಂಬರ್​ನಲ್ಲಿ ಚಿತ್ರದ ಕೆಲಸಗಳು ಆರಂಭ ಆಗಲಿವೆ. ಸಿನಿಮಾದ ಟೈಟಲ್ ಏನು ಎಂಬುದು ಇನ್ನೂ ರಿವೀಲ್​ ಆಗಿಲ್ಲ.

Prajwal Devaraj: ಟೈಮ್​ ಲೂಪ್​ ಸಿನಿಮಾದಲ್ಲಿ ಪ್ರಜ್ವಲ್​ ದೇವರಾಜ್​; ‘ಮಮ್ಮಿ’ ಖ್ಯಾತಿಯ ಲೋಹಿತ್​ ನಿರ್ದೇಶನ
ಪ್ರಜ್ವಲ್ ದೇವರಾಜ್, ಲೋಹಿತ್ ಎಚ್.
Edited By:

Updated on: Nov 17, 2022 | 8:41 AM

ಟೈಮ್​ ಲೂಪ್​ ಕಾನ್ಸೆಪ್ಟ್​ನಲ್ಲಿ ಮೂಡಿಬಂದ ಕನ್ನಡ ಸಿನಿಮಾಗಳ ಸಂಖ್ಯೆ ವಿರಳ. ಅಂಥದ್ದೊಂದು ಪ್ರಯತ್ನಕ್ಕೆ ಈಗ ನಟ ಪ್ರಜ್ವಲ್​ ದೇವರಾಜ್​ (Prajwal Devaraj) ಕೈ ಹಾಕಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಅವರು ಬ್ಯಾಕ್​ ಟು ಬ್ಯಾಕ್​ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಪ್ರಸ್ತುತ ‘ಮಮ್ಮಿ’ ಖ್ಯಾತಿಯ ನಿರ್ದೇಶಕ ಲೋಹಿತ್​ ಎಚ್. (Lohith H) ಜೊತೆ ಅವರು ‘ಮಾಫಿಯಾ’ ಸಿನಿಮಾ ಮಾಡುತ್ತಿದ್ದಾರೆ. ಇದೇ ನಟ-ನಿರ್ದೇಶಕನ ಜೋಡಿ ಈಗ ಟೈಮ್​ ಲೂಪ್​ ಕಾನ್ಸೆಪ್ಟ್​ ಇರುವ ಸಿನಿಮಾ ಮಾಡಲು ಸಿದ್ಧತೆ ಮಾಡಿಕೊಂಡಿದೆ. ‘ಮಾಫಿಯಾ’ (Mafia) ಚಿತ್ರಕ್ಕೆ ಸದ್ಯ ಪೋಸ್ಟ್​ ಪ್ರೊಡಕ್ಷನ್​ ಕೆಲಸಗಳು ನಡೆಯುತ್ತಿವೆ. ಅದರ ನಡುವೆಯೇ ಲೋಹಿತ್​ ಮತ್ತು ಪ್ರಜ್ವಲ್​ ಜೊತೆಯಾಗಿ ಹೊಸ ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಪ್ರಜ್ವಲ್​ ಅವರು ಟೈಮ್​ ಲೂಪ್​ ಮಾದರಿಯ ಸಿನಿಮಾದಲ್ಲಿ ನಟಿಸಲಿರುವುದು ಇದೇ ಮೊದಲು.

‘ನಿರ್ದೇಶಕ ಲೋಹಿತ್ ಹೇಳಿದ ಕಥೆಯ ಎಳೆ ತುಂಬಾ ಇಷ್ಟ ಆಯ್ತು. ಅವರ ಕೆಲಸದ ಶೈಲಿ ಹಾಗೂ ಸಾಮರ್ಥ್ಯವನ್ನು ಹತ್ತಿರದಿಂದ ಅರಿತಿರುವುದರಿಂದ ಮತ್ತೊಂದು ಸಿನಿಮಾವನ್ನು ಅವರೊಂದಿಗೆ ಮಾಡಲು ಕೈ ಜೋಡಿಸಿದ್ದೇನೆ’ ಎಂದು ಪ್ರಜ್ವಲ್ ದೇವರಾಜ್ ಹೇಳಿದ್ದಾರೆ.

ಈ ಸಿನಿಮಾಗೆ ಗ್ರೀನ್​ ಸಿಗ್ನಲ್​ ಸಿಕ್ಕಿದ್ದರ ಬಗ್ಗೆ ಲೋಹಿತ್​ ಮಾಹಿತಿ ನೀಡಿದ್ದಾರೆ. ‘ಮಾಫಿಯಾ ಸಿನಿಮಾದ ಕೆಲಸಗಳು ನಡೆಯುತ್ತಿರುವಾಗಲೇ ಟೈಮ್​ ಲೂಪ್​ ಕಥೆ ಬಗ್ಗೆ ನಾನು ಪ್ರಜ್ವಲ್ ಅವರ ಜೊತೆ ಮಾತನಾಡಿದ್ದೆ. ಕಥೆ ಕೇಳಿ ಸಖತ್ ಇಂಪ್ರೆಸ್ ಆಗಿ ನಾವೇ ಈ ಪ್ರಾಜೆಕ್ಟ್ ಮಾಡೋಣ ಅಂತ ಹೇಳಿದ್ದರು. ‘ಮಾಫಿಯಾ’ದಲ್ಲಿ ಅವರ ಜೊತೆ ಕೆಲಸ ಮಾಡಿದ್ದು ಒಂದೊಳ್ಳೆಯ ಅನುಭವ ನೀಡಿದೆ. ತುಂಬಾ ಸಪೋರ್ಟಿವ್ ಆಗಿರುತ್ತಾರೆ. ಅವರ ಜೊತೆ ಮತ್ತೊಂದು ಸಿನಿಮಾ ಮಾಡುತ್ತಿರುವುದರಿಂದ ಅಂದುಕೊಂಡಂತೆ ಸಿನಿಮಾ ಔಟ್ ಪುಟ್ ತೆಗೆಯಬಹುದು’ ಎಂದಿದ್ದಾರೆ ನಿರ್ದೇಶಕ ಲೋಹಿತ್.

ಇದನ್ನೂ ಓದಿ
ಪ್ರಜ್ವಲ್​ ದೇವರಾಜ್​-ಪ್ರಿಯಾಂಕಾ ತಿಮ್ಮೇಶ್​ ಅಭಿನಯದ ‘ಅರ್ಜುನ್​ ಗೌಡ’ ಸಿನಿಮಾ ಹೇಗಿದೆ?
‘ಮಾಫಿಯಾ’ ಚಿತ್ರಕ್ಕಾಗಿ ಗೆಟಪ್​ ಬದಲಿಸಿ ಕ್ಯಾನ್ಸರ್​ ಪೀಡಿತರಿಗೆ ಕೂದಲು ದಾನ ಮಾಡಿದ ಪ್ರಜ್ವಲ್​ ದೇವರಾಜ್​
ಪ್ರಜ್ವಲ್​ ದೇವರಾಜ್ ​- ರಾಗಿಣಿ ಚಂದ್ರನ್​ ವಿವಾಹ ವಾರ್ಷಿಕೋತ್ಸವ ಸಂಭ್ರಮ; ಮದುವೆ ವಿಡಿಯೋ ವೈರಲ್​
ಪ್ರಜ್ವಲ್​ ಹುಟ್ಟುಹಬ್ಬದಂದೇ ಹೊರಬಿತ್ತು ‘ಮಾಫಿಯಾ’ ವಿಷಯ; ಡೈನಾಮಿಕ್​ ಪ್ರಿನ್ಸ್​ ಕೈಗೆ ಬೇಡಿ

ಶಾನ್ವಿ ಎಂಟರ್ ಪ್ರೈಸಸ್ ಬ್ಯಾನರ್ ಮೂಲಕ ಶಾನ್ವಿ ಎನ್. ಮತ್ತು ಅಚಿಂತ್ಯ ಆರ್.ಆರ್. ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ನೊಬಿನ್ ಪೌಲ್ ಸಂಗೀತ ನಿರ್ದೇಶನ, ಜೆಬಿನ್ ಪಿ. ಜೇಕಬ್ ಛಾಯಾಗ್ರಹಣ, ಸಿ. ರವಿಚಂದ್ರನ್ ಸಂಕಲನ ಈ ಚಿತ್ರಕ್ಕೆ ಇರಲಿದೆ.

ಈ ಹೊಸ ಸಿನಿಮಾದ ಸ್ಕ್ರಿಪ್ಟ್ ಪೂಜೆ ನಡೆದಿದೆ. ಡಿಸೆಂಬರ್​ನಲ್ಲಿ ಚಿತ್ರದ ಕೆಲಸಗಳು ಆರಂಭ ಆಗಲಿವೆ. ಇದೊಂದು ಹಾರರ್ ಥ್ರಿಲ್ಲರ್ ಕಥೆಯನ್ನು ಒಳಗೊಂಡ ಟೈಮ್​ ಲೂಪ್ ಸಿನಿಮಾವಾಗಿದೆ. ಸಿನಿಮಾದ ಟೈಟಲ್ ಏನು ಎಂಬುದು ಇನ್ನೂ ರಿವೀಲ್​ ಆಗಿಲ್ಲ. ಅದೇ ರೀತಿ, ಈ ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಾರೆ ಎಂಬ ಬಗ್ಗೆಯೂ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 8:41 am, Thu, 17 November 22