‘ಶ್ರೀ ಅಲ್ಲಮ ಪ್ರಭು’ ಚಿತ್ರಕ್ಕೆ ಶುಭಕೋರಲು ಬಂದ ಪ್ರಮೋದ್​ ಮುತಾಲಿಕ್​; ಸಿನಿಮಾ ಬಗ್ಗೆ ಹೇಳಿದ್ದೇನು?

| Updated By: ಮದನ್​ ಕುಮಾರ್​

Updated on: Jun 03, 2022 | 7:30 AM

Pramod Muthalik: ‘ವ್ಯೋಮಕಾಯ ಶ್ರೀ ಅಲ್ಲಮ ಪ್ರಭು’ ಸಿನಿಮಾದ ಟ್ರೇಲರ್​ ಬಿಡುಗಡೆ ಆಗಿದೆ. ಸಚಿನ್ ಸುವರ್ಣ, ನೀನಾಸಂ ಅಶ್ವತ್ಥ್, ರಮೇಶ್ ಪಂಡಿತ್, ಶೃಂಗೇರಿ ರಾಮಣ್ಣ, ಮತ್ತಿತರರು ಈ ಚಿತ್ರದಲ್ಲಿ ನಟಿಸಿದ್ದಾರೆ.

‘ಶ್ರೀ ಅಲ್ಲಮ ಪ್ರಭು’ ಚಿತ್ರಕ್ಕೆ ಶುಭಕೋರಲು ಬಂದ ಪ್ರಮೋದ್​ ಮುತಾಲಿಕ್​; ಸಿನಿಮಾ ಬಗ್ಗೆ ಹೇಳಿದ್ದೇನು?
‘ಶ್ರೀ ಅಲ್ಲಮ ಪ್ರಭು’ ಚಿತ್ರದ ಸುದ್ದಿಗೋಷ್ಠಿ
Follow us on

ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್​ ಮುತಾಲಿಕ್ (Pramod Muthalik)​ ಅವರಿಗೆ ಸಿನಿಮಾ ಕ್ಷೇತ್ರದ ಜೊತೆ ಯಾವುದೇ ನಂಟು ಇಲ್ಲ. ಹಾಗಿದ್ದರೂ ಕೂಡ ಅವರೊಂದು ಸಿನಿಮಾ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಹೌದು, ‘ವ್ಯೋಮಕಾಯ ಶ್ರೀ ಅಲ್ಲಮ ಪ್ರಭು’ (Sri Allama Prabhu) ಸಿನಿಮಾದ ಟ್ರೇಲರ್​ ಲಾಂಚ್​ ಸಮಾರಂಭಕ್ಕೆ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ಶುಭ ಕೋರಿದ್ದಾರೆ. ಈ ಚಿತ್ರಕ್ಕೆ ಶರಣ್ ಗದ್ವಾಲ್ ನಿರ್ದೇಶನ ಮಾಡಿದ್ದಾರೆ. ಮಹಾವೀರ ಪ್ರಭು ಮತ್ತು ಮಾಧವಾನಂದ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ‘ನನಗೂ ಚಿತ್ರರಂಗಕ್ಕೂ ಸಂಬಂಧವಿಲ್ಲ. ನನ್ನ ಕ್ಷೇತ್ರವೇ ಬೇರೆ. ಆದರೂ ನನ್ನನ್ನು ಏಕೆ ಕರೆದರು ಎಂದು ಯೋಚಿಸುತ್ತಿದೆ. ಈ ತಂಡದವರು ನನ್ನ ಮೇಲಿಟ್ಟಿರುವ ಪ್ರೀತಿ ಅಪಾರ. ಹಾಗಾಗಿ ಬಂದಿದ್ದೀನಿ. ಕಮರ್ಷಿಯಲ್ ಚಿತ್ರಗಳ ಪೈಪೋಟಿ ಇರುವ ಈ ಸಮಯದಲ್ಲಿ ಇಂತಹ ಕಥೆ ಆಯ್ದುಕೊಂಡಿರುವ ನಿರ್ಮಾಪಕರಿಗೆ ಮೊದಲು ಧನ್ಯವಾದ ತಿಳಿಸಬೇಕು’ ಎಂದಿದ್ದಾರೆ ಪ್ರಮೋದ್​ ಮುತಾಲಿಕ್​.

‘ವೀರಭೂಮಿ, ಧರ್ಮಭೂಮಿ, ಪುಣ್ಯಭೂಮಿ ಅಂತ ಬೇರೆ ಯಾವ ದೇಶಕ್ಕೂ ಹೆಸರಿಲ್ಲ.‌ ಆ ಎಲ್ಲಾ ಹೆಸರುಗಳು ಇರುವುದು ನಮ್ಮ ದೇಶಕ್ಕೆ ಮಾತ್ರ. ಭಾರತಕ್ಕೆ ಈ ರೀತಿಯ ಹೆಸರು ಬರಲು ಸಾಕಷ್ಟು ಜನ ಸಾಧು-ಸಂತರು ಇಲ್ಲಿ ಅವತರಿಸುವುದೇ ಕಾರಣ. ಅಂತಹ ಮಹಾಪುರುಷರಲ್ಲಿ ಒಬ್ಬರಾದ ಅಲ್ಲಮಪ್ರಭುಗಳ ಕುರಿತಾದ ಈ ಸಿನಿಮಾ ಯಶಸ್ವಿಯಾಗಲಿ’ ಎಂದು ಪ್ರಮೋದ್​ ಮುತಾಲಿಕ್​ ಹಾರೈಸಿದ್ದಾರೆ.

‘ವ್ಯೋಮಕಾಯ ಶ್ರೀ ಅಲ್ಲಮ ಪ್ರಭು’ ಸಿನಿಮಾಗೆ ನಟ ‘ನೆನಪಿರಲಿ’ ಪ್ರೇಮ್​ ಕೂಡ ಶುಭ ಕೋರಿದ್ದಾರೆ. ‘ಹಿಂದೆ ಎಷ್ಟೋ ಜನ ನಮ್ಮ ದೇಶದ ಸಂಪತ್ತು ಲೂಟಿ ಹೊಡೆದರೂ, ಇನ್ನೂ ನಮ್ಮಲ್ಲಿ ಸಂಪತ್ತು ಇದೆ ಅಂದರೆ ಅದಕ್ಕೆ ಅಲ್ಲಮಪ್ರಭುಗಳಂತಹ ಸಾಧು-ಸಂತರ ಆಶೀರ್ವಾದವೇ ಕಾರಣ’ ಎಂಬುದು ಪ್ರೇಮ್ ಮಾತು.

ಇದನ್ನೂ ಓದಿ
21 ನಗರಗಳಲ್ಲಿ ಪ್ರೀಮಿಯರ್​ ಆಗಲಿದೆ ‘777 ಚಾರ್ಲಿ’; ಹೊಸ ದಾಖಲೆ ಬರೆಯಲು ಸಜ್ಜಾದ ರಕ್ಷಿತ್​ ಶೆಟ್ಟಿ ಸಿನಿಮಾ
‘ಕ್ಷೇತ್ರಪತಿ’ ಆದ ನವೀನ್​ ಶಂಕರ್​ಗೆ ಶುಭ ಕೋರಿದ ಡಾಲಿ ಧನಂಜಯ; ಮೋಷನ್​ ಪೋಸ್ಟರ್​ ರಿಲೀಸ್​
ತುಳುನಾಡಿನ ಸಂಸ್ಕೃತಿ ಸಾರುವ ‘ವೀರ ಕಂಬಳ’ ಸಿನಿಮಾಗೆ ರಾಜೇಂದ್ರ ಸಿಂಗ್​ ಬಾಬು ನಿರ್ದೇಶನ
Ragini Dwivedi Birthday: ರಾಗಿಣಿ ದ್ವಿವೇದಿ ಬರ್ತ್​​ಡೇಗೆ ಸಿಕ್ತು ಸಖತ್ ಗಿಫ್ಟ್​; ಫ್ಯಾನ್ಸ್ ಖುಷ್

ಇದನ್ನೂ ಓದಿ: ರಶ್ಮಿಕಾ ಮಂದಣ್ಣಗೆ ಖಂಡಿತಾ ಇಷ್ಟ ಆಗಲಿದೆ ರಕ್ಷಿತ್​ ಶೆಟ್ಟಿಯ ‘777 ಚಾರ್ಲಿ’ ಸಿನಿಮಾ; ಕಾರಣ ಏನು?

ತೇರದಾಳ, ಬನವಾಸಿ ಹಾಗೂ ಬೆಂಗಳೂರಿನಲ್ಲಿ ಈ ಸಿನಿಮಾಗೆ ಶೂಟಿಂಗ್​ ಮಾಡಲಾಗಿದೆ. ನಿರ್ದೇಶಕ ಶರಣ್ ಗದ್ವಾಲ್ ಅವರಿಗೆ ಇದು ಮೊದಲ ಸಿನಿಮಾ. ‘ಹನ್ನೆರಡನೇ ಶತಮಾನದ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ತೆರೆಗೆ ತರುವುದು ಅಷ್ಟು ಸುಲಭವಲ್ಲ. ಆ ಪ್ರಯತ್ನ ಮಾಡಿದ್ದೇವೆ’ ಎಂದು ಅವರು ಹೇಳಿದ್ದಾರೆ. ಈ ಚಿತ್ರಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷ ಭಾ.ಮ. ಹರೀಶ್​ ಕೂಡ ಆಲ್​ ದಿ ಬೆಸ್ಟ್​ ಹೇಳಿದ್ದಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್​ ಹಾದಿಯಲ್ಲಿ ಸಾಗ್ತಿದ್ದಾರೆ ಕಮಲ್​ ಹಾಸನ್​; ಕನ್ನಡದ ಟ್ರೆಂಡ್​ ಫಾಲೋ ಮಾಡ್ತಿದೆ ‘ವಿಕ್ರಮ್​’ ಚಿತ್ರ

ಸುವರ್ಣ, ನೀನಾಸಂ ಅಶ್ವತ್ಥ್​, ರಮೇಶ್ ಪಂಡಿತ್, ಶೃಂಗೇರಿ ರಾಮಣ್ಣ, ಗಣೇಶ್ ರಾವ್ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆರ್​. ಗಿರಿ ಛಾಯಾಗ್ರಹಣ, ಕೆಂಪರಾಜು ಸಂಕಲನ ಮಾಡಿದ್ದಾರೆ. ಕುಮಾರ್​ ಈಶ್ವರ್​ ಸಂಗೀತ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.