ಮುಂದುವರೆದ ‘ಪ್ರೇಮದ ಊರಲಿ’ ಹವಾ, 24 ಗಂಟೆಯಲ್ಲಿ 2.60 ಲಕ್ಷ ಟಿಕೆಟ್ ಸೋಲ್ಡ್ ಔಟ್

ಹಳ್ಳಿಗಳಿಂದ ಜನ ತಂಡೋಪತಂಡವಾಗಿ ಪಟ್ಟಣಗಳಿಗೆ ಬಂದು ‘ಪ್ರೇಮದ ಊರಲಿ’ ಸಿನಿಮಾ ನೋಡಿಕೊಂಡು ಹೋಗುತ್ತಿದ್ದಾರೆ. ಚಿತ್ರಮಂದಿರಗಳು ಕುಟುಂಬ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ. ಬಿಡುಗಡೆ ಆದ ಮೊದಲ ವಾರ ಒಂದು ಕೋಟಿ ಗಳಿಸಲು ಒದ್ದಾಡಿದ್ದ ಸಿನಿಮಾ ಕಳೆದ ಎರಡು ವಾರದಲ್ಲಿ 40 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ದಿನಕಳೆದಷ್ಟು ಸಿನಿಮಾದ ಅಬ್ಬರ ಜೋರಾಗುತ್ತಲೇ ಸಾಗುತ್ತಿದೆ. ಇತ್ತೀಚೆಗಷ್ಟೆ ಈ ಸಿನಿಮಾ ಬುಕ್​ ಮೈ ಶೋನಲ್ಲಿ ದಾಖಲೆಯನ್ನೇ ಬರೆದಿದೆ.

ಮುಂದುವರೆದ ‘ಪ್ರೇಮದ ಊರಲಿ’ ಹವಾ, 24 ಗಂಟೆಯಲ್ಲಿ 2.60 ಲಕ್ಷ ಟಿಕೆಟ್ ಸೋಲ್ಡ್ ಔಟ್
Premada Oorali Movie

Updated on: Oct 11, 2026 | 6:11 PM

ಮುಖ್ಯಾಂಶಗಳು

  • ಮುಂದುವರೆದ ‘ಪ್ರೇಮದ ಊರಲಿ’ ಸಿನಿಮಾ ಯಶಸ್ಸು
  • ಹೊಸ ದಾಖಲೆ ಬರೆದ ‘ಪ್ರೇಮದ ಊರಲಿ’ ಸಿನಿಮಾ
  • ಒಂದು ದಿನದಲ್ಲಿ 2.60 ಲಕ್ಷ ಟಿಕಟ್ ಮಾರಾಟ

‘ಪ್ರೇಮದ ಊರಲಿ’ ಸಿನಿಮಾ ಬಾಕ್ಸ್ ಆಫೀಸ್​​ನಲ್ಲಿ ಮ್ಯಾಜಿಕ್ಕನ್ನೇ ಮಾಡುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾದ ಗಳಿಕೆ ಏರುತ್ತಲೇ ಸಾಗುತ್ತಿದೆ. ಹಳ್ಳಿಗಳಿಂದ ಜನ ತಂಡೋಪತಂಡವಾಗಿ ಪಟ್ಟಣಗಳಿಗೆ ಬಂದು ‘ಪ್ರೇಮದ ಊರಲಿ’ ಸಿನಿಮಾ ನೋಡಿಕೊಂಡು ಹೋಗುತ್ತಿದ್ದಾರೆ. ಚಿತ್ರಮಂದಿರಗಳು ಕುಟುಂಬ ಪ್ರೇಕ್ಷಕರಿಂದ ತುಂಬಿ ತುಳುಕುತ್ತಿದೆ. ಬಿಡುಗಡೆ ಆದ ಮೊದಲ ವಾರ ಒಂದು ಕೋಟಿ ಗಳಿಸಲು ಒದ್ದಾಡಿದ್ದ ಸಿನಿಮಾ ಕಳೆದ ಎರಡು ವಾರದಲ್ಲಿ 40 ಕೋಟಿಗೂ ಹೆಚ್ಚು ಮೊತ್ತ ಗಳಿಸಿದೆ. ದಿನಕಳೆದಷ್ಟು ಸಿನಿಮಾದ ಅಬ್ಬರ ಜೋರಾಗುತ್ತಲೇ ಸಾಗುತ್ತಿದೆ. ಇತ್ತೀಚೆಗಷ್ಟೆ ಈ ಸಿನಿಮಾ ಬುಕ್​ ಮೈ ಶೋನಲ್ಲಿ ದಾಖಲೆಯನ್ನೇ ಬರೆದಿದೆ.

ಸಿನಿಮಾ ಬಿಡುಗಡೆ ಆದ ಮೂರನೇ ವಾರದ ಬಳಿಕ ಕೇವಲ 24 ಗಂಟೆಯ ಅವಧಿಯಲ್ಲಿ ‘ಪ್ರೇಮದ ಊರಲಿ’ ಸಿನಿಮಾದ ಬರೋಬ್ಬರಿ 2.60 ಲಕ್ಷ ಟಿಕೆಟ್‌ಗಳು ಕೇವಲ ಬುಕ್ ಮೈ ಶೋ ಒಂದರಲ್ಲೇ ಸೋಲ್ಡ್ ಔಟ್ ಆಗಿದೆ. ಇದು ಸಾಮಾನ್ಯ ಸಂಖ್ಯೆಯಲ್ಲ. ದೊಡ್ಡ ದೊಡ್ಡ ಸಿನಿಮಾಗಳೇ 24 ಗಂಟೆಯಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಟಿಕೆಟ್​​ಗಳನ್ನು ಮಾರಾಟ ಮಾಡಲಾಗುವುದಿಲ್ಲ. ಆದರೆ ‘ಪ್ರೇಮದ ಊರಲಿ’ ಸಿನಿಮಾ ಈ ದಾಖಲೆ ಮಾಡಿದೆ. ಮಾತ್ರವಲ್ಲದೆ, ಗಳಿಕೆಯನ್ನು ಇನ್ನೂ ಹೆಚ್ಚಿಸಿಕೊಂಡೇ ಸಾಗುತ್ತಿದೆ.

ಕನ್ನಡ ಮಾತ್ರವೇ ಅಲ್ಲದೆ ತೆಲುಗಿನಲ್ಲೂ ಈ ಸಿನಿಮಾ ಮ್ಯಾಜಿಕ್ ಮಾಡುತ್ತಿದೆ. ‘ಪ್ರೇಮನೆ ಊರಿಲೊ’ ಹೆಸರಿನಲ್ಲಿ ಈ ಸಿನಿಮಾ ತೆಲುಗಿನಲ್ಲೂ ಸಹ ರಿಲೀಸ್ ಆಗಿದ್ದು, ಅಲ್ಲಿಯೂ ಸಹ ಸಿನಿಮಾ ಭರ್ಜರಿ ಗಳಿಕೆ ಮಾಡುತ್ತಿದೆ. ಕರ್ನಾಟಕದ ರೀತಿ, ಅಲ್ಲಿಯೂ ಸಹ ಕುಟುಂಬ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದೆ. ಹಲವು ಯುವಕ-ಯುವತಿಯರು ಸಹ ಸಿನಿಮಾ ನೋಡಿ ಕೊಂಡಾಡುತ್ತಿದ್ದಾರೆ. ತೆಲುಗಿನಲ್ಲೂ ಸಹ ಸಿನಿಮಾ ಒಳ್ಳೆಯ ಗಳಿಕೆ ಮಾಡುತ್ತಿದೆ. ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್​​ಗೆ ಸಹ ಹೋಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.

ಇದನ್ನೂ ಓದಿ:‘ಪ್ರೇಮದ ಊರಲಿ’: ಬುಕ್​​ ಮೈ ಶೋನಲ್ಲಿ ಗಂಟೆಗೆ ಸಾವಿರಾರು ಟಿಕೆಟ್ ಮಾರಾಟ

ಶ್ರೀರಾಮ್, ರಮಿಕಾ ಶಿವು, ತಪಸ್ವಿನಿ ಪೂಣಚ್ಚ ಹಾಗೂ ಹಿರಿಯ ನಟ ರಂಗಾಯಣ ರಘು ಅವರ ಭಾವನಾತ್ಮಕ ಅಭಿನಯ ಮತ್ತು ಸುನಾದ್ ಗೌತಮ್ ಅವರ ಮಧುರ ಸಂಗೀತ, ಮನೋಜ್ ಅವರ ಅದ್ಭುತ ನಿರ್ದೇಶನ ಚಿತ್ರದ ಗೆಲುವಿಗೆ ಪ್ರಮುಖ ಕಾರಣವಾಗಿದೆ. ಅತಿ ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾದರೂ, ತನ್ನ ಸರಳತೆಯಿಂದಲೇ ‘ಪ್ರೇಮದ ಊರಲಿ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಲಾಭ ಗಳಿಸಿದ ದಾಖಲೆಯತ್ತ ದಾಪುಗಾಲಿಟ್ಟಿದೆ. ವೀಕೆಂಡ್‌ಗಳಲ್ಲಿ ಮಾತ್ರವಲ್ಲದೆ ವಾರದ ದಿನಗಳಲ್ಲೂ ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುವ ಮೂಲಕ ಈ ಚಿತ್ರವು ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
Loading...
Unable to load recommendations.
Follow Us