AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಯುಐ’ ಚಿತ್ರದಲ್ಲಿ ಚೀಪ್​ ಸಾಂಗ್​; ಉಪ್ಪಿ ಸಾಹಿತ್ಯ ಕೇಳಿ ತಲೆ ಕೆಡಿಸಿಕೊಂಡ ಫ್ಯಾನ್ಸ್​

‘ನಂದು ತುಂಬ ದೊಡ್ಡದು. ಅವನಿಗಿಂತ ನಿಂದು ಚಿಕ್ಕದು. ನಿಂದು ತುಂಬ ಚಿಕ್ಕದು. ಇವನಿಗಿಂತ ಅವನ್ದು ದೊಡ್ಡದು. ಎಲ್ಲ ಚೀಪ್​ ಚೀಪ್​..’. ಇದು ‘ಯುಐ’ ಸಿನಿಮಾದ ಹಾಡಿನಲ್ಲಿರುವ ಸಾಲುಗಳು. ಉಪೇಂದ್ರ ಅವರು ಈ ಹಾಡು ಬರೆದಿದ್ದಾರೆ. ಇಂದು (ಫೆ.14) ‘ಚೀಪ್​ ಸಾಂಗ್​’ ಪ್ರೋಮೋ ಬಿಡುಗಡೆ ಆಗಿದೆ. ಇದು ಟ್ರೆಂಡ್​ ಆಗುವ ಎಲ್ಲ ಲಕ್ಷಣ ಕಾಣುತ್ತಿದೆ.

‘ಯುಐ’ ಚಿತ್ರದಲ್ಲಿ ಚೀಪ್​ ಸಾಂಗ್​; ಉಪ್ಪಿ ಸಾಹಿತ್ಯ ಕೇಳಿ ತಲೆ ಕೆಡಿಸಿಕೊಂಡ ಫ್ಯಾನ್ಸ್​
ಉಪೇಂದ್ರ
ಮದನ್​ ಕುಮಾರ್​
|

Updated on: Feb 14, 2024 | 11:16 AM

Share

ನಟ, ನಿರ್ದೇಶಕ ಉಪೇಂದ್ರ ಅವರು ‘ಯುಐ’ ಸಿನಿಮಾದ (UI movie) ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ಸಿನಿಮಾದಲ್ಲಿ ಅವರು ನಟಿಸುವುದರ ಜೊತೆಗೆ ನಿರ್ದೇಶನ ಕೂಡ ಮಾಡುತ್ತಿರುವುದರಿಂದ ಭಾರಿ ನಿರೀಕ್ಷೆ ಸೃಷ್ಟಿ ಆಗಿದೆ. ಉಪೇಂದ್ರ (Upendra) ಬರೆಯುವ ಹಾಡುಗಳು ಎಂದರೆ ಅಭಿಮಾನಿಗಳಿಗೆ ಸಖತ್​ ಇಷ್ಟ. ಈಗ ಅವರು ‘ಯುಐ’ ಸಿನಿಮಾದ ಮೊದಲ ಹಾಡಿನ ಝಲಕ್​ ತೋರಿಸಿದ್ದಾರೆ. ಇದು ಚೀಪ್​ ಸಾಂಗ್​. ಅಂದರೆ ಹಾಡಿನ ಕ್ವಾಲಿಟಿ ಹಾಗಿದೆ ಅಂತಲ್ಲ. ಅದರ ಹೆಸರೇ ‘ಚೀಪ್​ ಸಾಂಗ್​’. ಇನ್ನು, ಅದರಲ್ಲಿನ ಸಾಹಿತ್ಯ ಕೇಳಿ ಎಲ್ಲರಿಗೂ ಅಚ್ಚರಿ ಆಗುತ್ತಿದೆ. ‘ಲಹರಿ ಫಿಲ್ಮ್ಸ್​​’ ಮೂಲಕ ಈ ಹಾಡಿನ (Cheap song) ಪ್ರೋಮೋ ಬಿಡುಗಡೆ ಆಗಿದೆ. ಅಜನೀಶ್​ ಬಿ. ಲೋಕನಾಥ್​ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

ವಿಜಯ್​ ಪ್ರಕಾಶ್​, ನಕಾಶ್​ ಅಜೀಜ್​, ದೀಪಕ್​ ಬ್ಲ್ಯೂ ಅವರು ‘ಚೀಪ್​’ ಹಾಡಿಗೆ ಧ್ವನಿ ನೀಡಿದ್ದಾರೆ. ಉಪೇಂದ್ರ ಅವರು ಸ್ವಲ್ಪ ವಿಚಿತ್ರವಾಗಿ ಸಾಹಿತ್ಯ ಬರೆದಿದ್ದಾರೆ. ‘ಎಲ್ಲ ಚೀಪ್​ ಚೀಪ್​. ನಂದು ತುಂಬ ದೊಡ್ಡದು. ಅವನಿಗಿಂತ ನಿಂದು ಚಿಕ್ಕದು. ನಿಂದು ತುಂಬ ಚಿಕ್ಕದು. ಇವನಿಗಿಂತ ಅವನ್ದು ದೊಡ್ಡದು. ಎಲ್ಲ ಚೀಪ್​ ಚೀಪ್​..’ ಎಂಬ ಸಾಲುಗಳು ಈ ಹಾಡಿನಲ್ಲಿ ಇವೆ. ‘ಚಿಕ್ಕದೋ ಅಥವಾ ದೊಡ್ಡದೋ ಗೊತ್ತಿಲ್ಲ. ಈ ಹಾಡು ಸೂಪರ್​ ಆಗಿದೆ’ ಎಂದು ಫ್ಯಾನ್ಸ್​ ಕಮೆಂಟ್​ ಮಾಡುತ್ತಿದ್ದಾರೆ.

‘ಚೀಪ್​ ಸಾಂಗ್​’ ಪ್ರೋಮೋ:

ಉಪೇಂದ್ರ ಅವರು ಬರೆದು ಹಾಡುಗಳಲ್ಲಿ ಬಗೆಬಗೆಯ ಅರ್ಥ ಇರುತ್ತದೆ. 25 ವರ್ಷಗಳ ಹಿಂದೆ ಅವರು ‘ಉಪೇಂದ್ರ’ ಸಿನಿಮಾದ ‘ಏನಿಲ್ಲ ಏನಿಲ್ಲ..’ ಹಾಡಿನ ಸಾಲುಗಳು ಈಗ ಇನ್​ಸ್ಟಾಗ್ರಾಮ್​ನಲ್ಲಿ ಟ್ರೆಂಡ್​ ಆಗಿರುವುದು ಗೊತ್ತೇ ಇದೆ. ಎಲ್ಲರ ಬಾಯಲ್ಲೂ ‘ಕರಿಮಣಿ ಮಾಲಿಕ ನೀನಲ್ಲ’ ಎಂಬ ಲೈನ್​ ರಾರಾಜಿಸುತ್ತಿದೆ. ಈಗ ‘ಯುಐ’ ಸಿನಿಮಾದ ‘ಚೀಪ್​ ಸಾಂಗ್​’ ಕೂಡ ಅದೇ ರೀತಿ ಟ್ರೆಂಡ್​ ಆಗುವ ಸಾಧ್ಯತೆ ದಟ್ಟವಾಗಿದೆ. ಚಿನ್ನಿ ಪ್ರಕಾಶ್​ ಅವರು ಈ ಹಾಡಿಗೆ ಕೊರಿಯೋಗ್ರಫಿ ಮಾಡಿದ್ದಾರೆ. ಸದ್ಯಕ್ಕೆ ಬಿಡುಗಡೆ ಆಗಿರುವುದು ಪ್ರೋಮೋ ಮಾತ್ರ. ಫೆಬ್ರವರಿ 26ರಂದು ಫುಲ್​ ಹಾಡು ಬಿಡುಗಡೆ ಆಗಲಿದೆ.

ಇದನ್ನೂ ಓದಿ: ಉಪೇಂದ್ರ ಬಗ್ಗೆ ಶಿವಣ್ಣನಿಗೆ ಯಾಕೆ ಇಷ್ಟು ಪ್ರೀತಿ? ‘ಯುಐ’ ವೇದಿಕೆಯಲ್ಲಿ ಮನಸಾರೆ ಮಾತಾಡಿದ ‘ಹ್ಯಾಟ್ರಿಕ್​ ಹೀರೋ’

‘ಓಂ’, ‘ಶ್​’, ‘ಎ’, ‘ಉಪೇಂದ್ರ’ ಮುಂತಾದ ಸೂಪರ್​ ಹಿಟ್​ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಉಪೇಂದ್ರ ಅವರ ಸಾಮರ್ಥ್ಯದ ಬಗ್ಗೆ ಅಭಿಮಾನಿಗಳಿಗೆ ಭಾರಿ ಭರವಸೆ ಇದೆ. ಹಲವು ವರ್ಷಗಳ ಬಳಿಕ ಅವರು ‘ಯುಐ’ ಸಿನಿಮಾಗೆ ನಿರ್ದೇಶನ ಮಾಡುತ್ತಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ. ಈ ಸಿನಿಮಾಗೆ ಜಿ. ಮನೋಹರನ್​ ಮತ್ತು ಕೆ.ಪಿ. ಶ್ರೀಕಾಂತ್​ ಅವರು ಬಂಡವಾಳ ಹೂಡಿದ್ದಾರೆ. ನವೀನ್​ ಮನೋಹರನ್​ ಸಹ-ನಿರ್ಮಾಪಕರಾಗಿದ್ದಾರೆ. ಈಗಾಗಲೇ ಈ ಸಿನಿಮಾದ ಟೀಸರ್​ ಸಖತ್​ ಕೌತುಕ ಮೂಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ