ಪ್ರೇಮದ ಪಾತ್ರ ಮಾಡುತ್ತ ಪ್ರೀತಿಯಲ್ಲಿ ಬಿದ್ದ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಇವರು

Valentine’s Day 2024: ಒಟ್ಟಿಗೆ ನಟಿಸುವಾಗ ಸೆಟ್ನಲ್ಲಿ ಗೆಳೆತನ ಉಂಟಾಗೋದು ಸಾಮಾನ್ಯ. ಕೆಲವರಿಗೆ ಅದು ಪ್ರೀತಿಗೆ ತಿರುಗಿದ್ದು ಇದೆ. ಕನ್ನಡದಲ್ಲಿ ಪ್ರೀತಿಸಿ ಮದುವೆ ಆದ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಪ್ರೇಮದ ಪಾತ್ರ ಮಾಡುತ್ತ ವಿವಾಹ ಆದ ಸ್ಯಾಂಡಲ್ವುಡ್ ಜೋಡಿಗಳ ಪಟ್ಟಿ ಇಲ್ಲಿದೆ.

ಪ್ರೇಮದ ಪಾತ್ರ ಮಾಡುತ್ತ ಪ್ರೀತಿಯಲ್ಲಿ ಬಿದ್ದ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಇವರು
ಪ್ರೇಮದ ಪಾತ್ರ ಮಾಡುತ್ತ ಪ್ರೀತಿಯಲ್ಲಿ ಬಿದ್ದ ಸ್ಯಾಂಡಲ್​ವುಡ್ ಸೆಲೆಬ್ರಿಟಿಗಳು ಇವರು
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Feb 14, 2024 | 7:12 AM

Valentine’s Day 2024: ಬಣ್ಣ ಹಚ್ಚಿ ಕ್ಯಾಮೆರಾ ಎದುರು ನಟಿಸುವಾಗ ಕೆಲವೊಮ್ಮೆ ಭಾವನೆಗಳು ಹುಟ್ಟಿಕೊಂಡಿದ್ದು ಇದೆ. ಮಾಡುತ್ತಿರುವುದು ನಟನೆ ಎಂಬುದು ಗೊತ್ತಿದ್ದೂ ಅದನ್ನು ಮರೆತು ಒಬ್ಬರಿಗೊಬ್ಬರು ಹತ್ತಿರ ಆದವರು ಅನೇಕರಿದ್ದಾರೆ. ಒಟ್ಟಿಗೆ ನಟಿಸುವಾಗ ಸೆಟ್​​ನಲ್ಲಿ ಗೆಳೆತನ ಉಂಟಾಗುತ್ತದೆ. ಕೆಲವರಿಗೆ ಅದು ಪ್ರೀತಿಗೆ ತಿರುಗುತ್ತದೆ. ಸ್ಯಾಂಡಲ್​ವುಡ್​ನಲ್ಲಿ(Sandalwood) ಪ್ರೀತಿಸಿ ಮದುವೆ ಆದ ಅನೇಕ ಸೆಲೆಬ್ರಿಟಿಗಳು ಇದ್ದಾರೆ. ಪ್ರೇಮದ ಪಾತ್ರ ಮಾಡುತ್ತ ವಿವಾಹ ಆದ ಸ್ಯಾಂಡಲ್​ವುಡ್​ ಜೋಡಿಗಳ ಪಟ್ಟಿ ಇಲ್ಲಿದೆ.

ಯಶ್​-ರಾಧಿಕಾ:

ಯಶ್ ಹಾಗೂ ರಾಧಿಕಾ ಪಂಡಿತ್​ಗೆ ಚಿತ್ರರಂಗದಲ್ಲಿ ಸಖತ್ ಬೇಡಿಕೆ ಇದೆ. ಇವರ ಮಧ್ಯೆ ಪರಿಚಯ ಬೆಳೆದಿದ್ದು ಕಿರುತೆರೆಯಲ್ಲಿ. ಇಬ್ಬರೂ ‘ನಂದಗೋಕುಲ’ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದರು. ‘ಮೊಗ್ಗಿನ ಮನಸು’ ಚಿತ್ರದಲ್ಲಿ ಇವರು ಒಟ್ಟಿಗೆ ಬಣ್ಣ ಹಚ್ಚಿದರು. ಈ ಸಿನಿಮಾ ಯಶಸ್ಸು ಕಂಡಿತು. ನಂತರ ಇಬ್ಬರ ಮಧ್ಯೆ ಪ್ರೀತಿ ಹುಟ್ಟಿತು. ಕೆಲವು ಸಿನಿಮಾಗಳಲ್ಲಿ ಇವರು ಒಟ್ಟಾಗಿ ತೆರೆ ಹಂಚಿಕೊಂಡಿದ್ದಾರೆ. ಇವರದ್ದು ಹಿಟ್ ಜೋಡಿ. ತಮ್ಮ ಪ್ರೀತಿಯನ್ನು ಇವರು ಗುಟ್ಟಾಗಿಯೇ ಇಟ್ಟಿದ್ದರು. 2016ರಲ್ಲಿ ಇವರು ಮದುವೆ ಆದರು. ಇವರಿಗೆ ಆಯ್ರಾ ಹಾಗೂ ಯಥರ್ವ್​ ಹೆಸರಿನ ಮಕ್ಕಳು ಇದ್ದಾರೆ.

ಐಂದ್ರಿತಾ-ದಿಗಂತ್​:

ಸ್ಯಾಂಡಲ್​ವುಡ್​ನ ಮತ್ತೊಂದು ಕ್ಯೂಟ್ ಜೋಡಿಗಳ ಸಾಲಿನಲ್ಲಿ ಐಂದ್ರಿತಾ ರೇ ಹಾಗೂ ದಿಗಂತ್ ಇದ್ದಾರೆ. ಇವರು ವಿವಾಹ ಆಗಿ ಕೆಲ ವರ್ಷಗಳು ಕಳೆದಿವೆ. ಇವರು ಕೂಡ ಪ್ರೀತಿಸಿ ಮದುವೆ ಆದವರು. ಐಂದ್ರಿತಾ ಅವರನ್ನು ದಿಗಂತ್ ಮೊದಲು ನೋಡಿದ್ದು ಸಂದರ್ಶನದ ಕ್ಲಿಪ್ ಒಂದರಲ್ಲಿ. ‘ಸಖತ್ ಕ್ಯೂಟ್ ಆಗಿದ್ದಾಳೆ’ ಎಂದು ತಮಗೆ ತಾವೇ ಹೇಳಿಕೊಂಡಿದ್ದರು ದಿಗಂತ್. ‘ಮನಸಾರೆ’ ಸಿನಿಮಾದಲ್ಲಿ ಐಂದ್ರಿತಾ ಹಾಗೂ ದಿಗಂತ್ ಒಟ್ಟಿಗೆ ನಟಿಸಿದರು. ಈ ಚಿತ್ರ ಅವರನ್ನು ಹತ್ತಿರ ಮಾಡಿತು. ಈ ಚಿತ್ರದ ಶೂಟಿಂಗ್ ಮಾಡುವಾಗ ದಿಗಂತ್​ ಅವರಿಗೆ ಅನಾರೋಗ್ಯಕ್ಕೆ ಕಾಡಿತ್ತು. ಆಗ ಐಂದ್ರಿತಾ ಹಣ್ಣನ್ನು ಕಳುಹಿಸಿದ್ದರು. ನಂತರ ನಿಧಾನಕ್ಕೆ ಪ್ರೀತಿ ಚಿಗುರಿತು.

ಅಂಬರೀಷ್​-ಸುಮಲತಾ:

ರೆಬೆಲ್ ಸ್ಟಾರ್ ಅಂಬರೀಷ್ ಇವತ್ತು ನಮ್ಮ ಜೊತೆ ಇಲ್ಲ. ಆದರೆ, ಸುಮಲತಾ ಜೊತೆಗಿನ ಪ್ರೇಮಕಥೆ ಎವರ್​ಗ್ರೀನ್​. ಇವರ ಲವ್​​ಸ್ಟೋರಿ ನಡೆದಿದ್ದು 90ರ ದಶಕದಲ್ಲಿ. ಇಬ್ಬರೂ ಅಂದಿನ ಕಾಲಕ್ಕೆ  ಟಾಪ್​ನಲ್ಲಿದ್ದವರು. ‘ಆಹುತಿ’ ಸಿನಿಮಾದಲ್ಲಿ ಇಬ್ಬರೂ ಒಟ್ಟಿಗೆ ತೆರ ಹಂಚಿಕೊಂಡರು. 1984ರಲ್ಲೇ ಸುಮಲತಾ ಅವರನ್ನು ಅಂಬರೀಷ್ ನೋಡಿದ್ದರು. ಸಿನಿಮಾ ಸೆಟ್​ನಲ್ಲಿ ಆದ ಪರಿಚಯ ನಂತರ ಪ್ರೀತಿಗೆ ತಿರುಗಿತು.

ಪ್ರಜ್ವಲ್​ ದೇವರಾಜ್​-ರಾಗಿಣಿ:

ಪ್ರಜ್ವಲ್ ದೇವರಾಜ್ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ರಾಗಿಣಿಯನ್ನು ಪ್ರೀತಿಸಿ ಮದುವೆ ಆದರು. ಹಾಗಂತ ಇವರ ಪ್ರೀತಿ ಇಂದು ನಿನ್ನೆಯ ಪ್ರೀತಿಯಲ್ಲ. 9ನೇ ತರಗತಿಯಲ್ಲಿ ಇದ್ದಾಗ ರಾಗಿಣಿ ಚಂದ್ರನ್ ಮೊದಲ ಬಾರಿಗೆ ಪ್ರಜ್ವಲ್ ದೇವರಾಜ್ ಕಣ್ಣಿಗೆ ಬಿದ್ದರು. ಆಗ ರಾಗಿಣಿ ಚಂದ್ರನ್ 6ನೇ ತರಗತಿಯಲ್ಲಿ ಓದುತ್ತಿದ್ದರು. ನಂತರ ಇಬ್ಬರೂ ಡ್ಯಾನ್ಸ್​ ಕ್ಲಾಸ್​ಗೆ ಒಟ್ಟಿಗೆ ಸೇರಿದರು. ಅಲ್ಲಿಂದ ಪ್ರೀತಿ ಬೆಳೆಯಿತು. ಇವರ ಪ್ರೇಮಕ್ಕೆ ಮನೆಯವರು ಒಪ್ಪಿಗೆ ಕೊಟ್ಟರು.

ಡಾರ್ಲಿಂಗ್​ ಕೃಷ್ಣ-ಮಿಲನಾ ನಾಗರಾಜ್​:

ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ‘ಲವ್ ಮಾಕ್ಟೇಲ್’ ಬಳಿಕ ಹಲವು ಸಿನಿಮಾಗಳಲ್ಲಿ ಒಟ್ಟಾಗಿ ತೆರೆ ಹಂಚಿಕೊಂಡರು. ಇವರ ಮಧ್ಯೆ ಪರಿಚಯ ಬೆಳೆದಿದ್ದು 2015ರಲ್ಲಿ ತೆರೆಕಂಡ ‘ಚಾರ್ಲಿ’ ಸಿನಿಮಾದಿಂದ. ಈ ಚಿತ್ರದಲ್ಲಿ ಇವರು ಒಟ್ಟಿಗೆ ಬಣ್ಣ ಹಚ್ಚಿದರು. ಸಿನಿಮಾ ಕೊನೆಯಲ್ಲಿ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿದ್ದ ಕೃಷ್ಣ ಮದುವೆ ಪ್ರಪೋಸ್‌ ಮಾಡಿದ್ದರು. ಮಿಲನಾಗೂ ಪ್ರೀತಿ ಹುಟ್ಟಿದ್ದರಿಂದ ಇದನ್ನು ಒಪ್ಪಿದರು.

ಇದನ್ನೂ ಓದಿ: ವಿಚ್ಛೇದನದ ಬಳಿಕ ಮತ್ತೆ ನಟನೆಗೆ ಮರಳಿದ ಚಿರಂಜೀವಿ ಮನೆ ಮಗಳು ನಿಹಾರಿಕಾ ಕೊನಿಡೆಲಾ

ಮೇಘನಾ ರಾಜ್​- ಚಿರು ಸರ್ಜಾ:

ಚಿರಂಜೀವಿ ಸರ್ಜಾ ಇಂದು ನಮ್ಮೊಂದಿಗೆ ಇಲ್ಲ. ಆದರೆ, ಮೇಘನಾ ರಾಜ್​ಗೆ ಚಿರು ಮೇಲೆ ಇರುವ ಪ್ರಿತಿ ಕಡಿಮೆ ಆಗುವಂಥದ್ದಲ್ಲ. ‘ಪೈರಸಿ ಮುಕ್ತ ಕನ್ನಡ ಚಲನಚಿತ್ರ’ ಕಾರ್ಯಕ್ರಮದಲ್ಲಿ ಮೇಘನಾ ರಾಜ್​-ಚಿರಂಜೀವಿ ಸರ್ಜಾ ಭೇಟಿ ಆದರು. ದ್ವಾರಕೀಶ್ ನಿರ್ಮಾಣ ಮಾಡಿದ್ದ ‘ಆಟಗಾರ’ ಚಿತ್ರದಲ್ಲಿ ಚಿರಂಜೀವಿ ಸರ್ಜಾ ಮತ್ತು ನಟಿ ಮೇಘನಾ ರಾಜ್ ಒಟ್ಟಿಗೆ ತೆರೆ ಹಂಚಿಕೊಂಡರು. ನಂತರ ಗೆಳೆತನ ಪ್ರೀತಿಗೆ ತಿರುಗಿತು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ