ಪ್ರೇಮದ ಕಾಣಿಕೆಯಿಂದ ಯುವರತ್ನದವರೆಗೆ; ಭಾಗ್ಯವಂತ ಪುನೀತ್​ ರಾಜ್​ಕುಮಾರ್ ಸಿನಿ ಪಯಣಕ್ಕೆ 45 ವರ್ಷ​​!

1985ರಲ್ಲಿ ತೆರೆಕಂಡ ಬೆಟ್ಟದ ಹೂವು ಚಿತ್ರಕ್ಕಾಗಿ ಪುನೀತ್​ ರಾಷ್ಟ್ರಪ್ರಶಸ್ತಿ ಒಲಿದು ಬಂದಿತ್ತು. ಚಲಿಸುವ ಮೋಡಗಳು ಹಾಗೂ ಎರಡು ಕನಸು ಚಿತ್ರದಲ್ಲಿ ಪುನೀತ್​ ನಟನೆಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಕೂಡ ದೊರೆತಿತ್ತು.

ಪ್ರೇಮದ ಕಾಣಿಕೆಯಿಂದ ಯುವರತ್ನದವರೆಗೆ; ಭಾಗ್ಯವಂತ ಪುನೀತ್​ ರಾಜ್​ಕುಮಾರ್ ಸಿನಿ ಪಯಣಕ್ಕೆ 45 ವರ್ಷ​​!
ಪುನೀತ್​ ರಾಜ್​ಕುಮಾರ್
Follow us
ರಾಜೇಶ್ ದುಗ್ಗುಮನೆ
| Updated By: ಸಾಧು ಶ್ರೀನಾಥ್​

Updated on: Mar 01, 2021 | 3:50 PM

ಅದು 1976ನೇ ಇಸ್ವಿ. ಡಾ.ರಾಜ್​ಕುಮಾರ್​, ಆರತಿ ಹಾಗೂ ಜಯಮಾಲ ಅಭಿನಯದ ಪ್ರೇಮದ ಕಾಣಿಕೆ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​ 6 ತಿಂಗಳ ಶಿಶುವಾಗಿ ಕಾಣಿಸಿಕೊಂಡಿದ್ದರು. ಈ ಮೂಲಕ ಬೆಳ್ಳಿ ಪರದೆಗೆ ಕಾಲಿಡುವ ಸೂಚನೆಯನ್ನು ಅಂದೇ ನೀಡಿದ್ದರು. ಇದಾದ ನಂತರ ಬಾಲ ಕಲಾವಿದನಾಗಿ, ಹೀರೋ ಆಗಿ ಪುನೀತ್​ ಕರ್ನಾಟಕದ ಮನೆ ಮನೆಗಳಲ್ಲಿ ಹೆಸರುವಾಸಿಯಾಗಿದ್ದಾರೆ. ಅವರ ಸಿನಿ ಪ್ರಯಾಣಕ್ಕೆ ಈಗ ಬರೋಬ್ಬರಿ 45 ವರ್ಷ. ಈ ವಿಶೇಷ ದಿನದಂದು ಪುನೀತ್​ಗೆ ಸಾಕಷ್ಟು ಕಲಾವಿದರು ಶುಭ ಕೋರಿದ್ದಾರೆ. ಪ್ರೇಮದ ಕಾಣಿಸಿಕೆ ಸಿನಿಮಾ ತೆರೆಕಂಡ ನಂತರ ಪುನೀತ್​ ಸನಾದಿ ಅಪ್ಪಣ್ಣ ಚಿತ್ರದಲ್ಲಿ ಅಭಿನಯಿಸಿದ್ದರು. ನಂತರದಲ್ಲಿ ತಾಯಿಗೆ ತಕ್ಕ ಮಗ, ವಸಂತ ಗೀತಾ, ಭೂಮಿಗೆ ಬಂದ ಭಗವಂತ, ಭಾಗ್ಯವಂತ, ಹೊಸ ಬೆಳಕು ಸೇರಿ ಸಾಕಷ್ಟು ಸಿನಿಮಾಗಳಲ್ಲಿ ಬಾಲ ಕಲಾವಿದನಾಗಿ ಪುನೀತ್​ ನಟಿಸಿದ್ದರು. ಈ ಸಮಯದಲ್ಲಿ ಪುನೀತ್​ ಮಾಸ್ಟರ್​ ಲೋಹಿತ್​ ಆಗಿ ಪರಿಚಯಗೊಂಡಿದ್ದರು.

1985ರಲ್ಲಿ ತೆರೆಕಂಡ ಬೆಟ್ಟದ ಹೂವು ಚಿತ್ರಕ್ಕಾಗಿ ಪುನೀತ್​ ರಾಷ್ಟ್ರಪ್ರಶಸ್ತಿ ಒಲಿದು ಬಂದಿತ್ತು. ಚಲಿಸುವ ಮೋಡಗಳು ಹಾಗೂ ಎರಡು ಕನಸು ಚಿತ್ರದಲ್ಲಿ ಪುನೀತ್​ ನಟನೆಗೆ ಅತ್ಯುತ್ತಮ ಬಾಲ ನಟ ಪ್ರಶಸ್ತಿ ಕೂಡ ದೊರೆತಿತ್ತು. 2002ರಲ್ಲಿ ತೆರೆಕಂಡ ಅಪ್ಪು ಸಿನಿಮಾ ಮೂಲಕ ಪುನೀತ್​ ಪೂರ್ಣ ಪ್ರಮಾಣದ ನಟನಾಗಿ ಸ್ಯಾಂಡಲ್​ವುಡ್​ಗೆ ಕಾಲಿಟ್ಟರು. ಅಲ್ಲಿಂದ ಇಲ್ಲಿಯವರೆಗೆ ಸುಮಾರು 25 ಸಿನಿಮಾಗಳಲ್ಲಿ ಪುನೀತ್​ ನಟಿಸಿದ್ದಾರೆ.

ಪ್ರೇಮದ ಕಾಣಿಕೆ ಸಿನಿಮಾ ತೆರೆಕಂಡು ಇದೀಗ 45 ವರ್ಷಗಳು ಕಳೆದಿವೆ. ಈ ವಿಶೇಷ ದಿನಕ್ಕೆ ಕಿಚ್ಚ ಸುದೀಪ್​, ರಿಷಬ್​ ಶೆಟ್ಟಿ ಸೇರಿ ಸಾಕಷ್ಟು ಮಂದಿ ಶುಭಾಶಯ ಕೋರಿದ್ದಾರೆ.

21ನೇ ಸಂಭ್ರಮಕ್ಕೆ ಶು ಭಕೋರಿದ ಎಲ್ಲರಿಗೂ ಪುನೀತ್​ ಧನ್ಯವಾದ ಹೇಳಿದ್ದಾರೆ. ಈ ದಿನವನ್ನು ವಿಶೇಷಗೊಳಿಸಿದ ನಿಮ್ಮೆಲ್ಲರಿಗೂ ನನ್ನ ಅಭಿನಂದನೆಗಳು. ೪೫ ವರ್ಷದ ಈ ಪಯಣದಲ್ಲಿ ನನ್ನನ್ನು ಪ್ರೋತ್ಸಾಹಿಸಿ, ಪ್ರೀತಿಸಿದ ಅಭಿಮಾನಿಗಳಿಗೆ, ಸಹಉದ್ಯೋಗಿಗಳಿಗೆ, ಬಂಧುಮಿತ್ರರಿಗೆ ನನ್ನ ಹೃದಯಪೂರ್ವಕ ನಮನಗಳು ಎಂದಿದ್ದಾರೆ.

ಇದನ್ನೂ ಓದಿ: ನಿಜಕ್ಕೂ ಇದೊಂದು ದೊಡ್ಡ ಸಾಧನೆ: ಪುನೀತ್​ ರಾಜ್​ಕುಮಾರ್​ಗೆ ಅಭಿನಂದಿಸಿದ ಕಿಚ್ಚ ಸುದೀಪ್​

ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ರಾಜ್ಯ ಬಿಜೆಪಿ ಘಟಕಗಳಿಗೆ ಅಧ್ಯಕ್ಷನನ್ನು ಆಯ್ಕೆಮಾಡುವ ಪ್ರಕ್ರಿಯೆ ಶುರು:ಜೋಶಿ
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ಸಿಎಂ ಪಕ್ಕದಲ್ಲಿದ್ದ ಗೋವಿಂದರಾಜು ಆಗಂತುಕನನ್ನು ಗದರಿದ್ದು ಯಾಕೆ ಗೊತ್ತಾ?
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ದಲಿತ ಸಮಾಜಕ್ಕೆ ಪ್ರಿಯಾಂಕ್ ಖರ್ಗೆ ಕೊಡುಗೆ ದೊಡ್ಡ ಶೂನ್ಯ: ನಾರಾಯಣಸ್ವಾಮಿ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಬಸ್ ಚಾಲಕ ಇದ್ದಕ್ಕಿದ್ದಂತೆ ಬ್ರೇಕ್ ಅದುಮಿದ್ದರಿಂದ ಸಂಭವಿಸಿದ ಅಪಘಾತ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸಚಿನ್ ಬರೆದಿರುವ ಡೆತ್ ನೋಟಲ್ಲಿ ಪ್ರಿಯಾಂಕ್ ಖರ್ಗೆ ಹೆಸರಿದೆ: ಆರ್ ಅಶೋಕ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಸರ್ಕಾರ ದಾಖಲೆಪತ್ರಗಳಲ್ಲಿ ಪ್ರಿನ್ಸೆಸ್ ರೋಡ್ ಅಂತಲೇ ವಿಳಾಸ ದಾಖಲಾಗಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಮೆಟ್ರೋನಲ್ಲಿ ಪ್ರಯಾಣಿಸುವ ಮನೋವಿಕಾರ ವ್ಯಕ್ತಿಗಳ ಸಂಖ್ಯೆ ಹೆಚ್ಚುತ್ತಿದೆ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ಶಾಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ ಸಂಭವಿಸಿರುವ ಗುಮಾನಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ನಮ್ಮಣ್ಣ ಹುಟ್ಟೇ ಇರಲಿಲ್ಲ ಅಂತ ಸರ್ಕಾರ ಹೇಳಬಹುದು: ಸಚಿನ್ ಸಹೋದರಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ
ಹುಲಿ ಹಿಂಸ್ರಪಶುವಾದರೂ ತನ್ನ ಮರಿಗಳ ವಿಷಯದಲ್ಲಿ ಮಮತಾಮಯಿ