ದಚ್ಚು-ಅಪ್ಪು ಫ್ಯಾನ್ ವಾರ್.. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ವಾಗ್ವಾದ

ಪುನೀತ್ ರಾಜ್‍ಕುಮಾರ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದ ಶುರುವಾಗಿದೆ. ದಚ್ಚು-ಕಿಚ್ಚ ಫ್ಯಾನ್ಸ್ ವಾರ್ ಅಂತ್ಯಗೊಂಡು ದಚ್ಚು-ಅಪ್ಪು ಫ್ಯಾನ್ ವಾರ್ ನಡೆಯುತ್ತಿದೆ.

ದಚ್ಚು-ಅಪ್ಪು ಫ್ಯಾನ್ ವಾರ್.. ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿ ವಾಗ್ವಾದ
ದಚ್ಚು-ಅಪ್ಪು ಫ್ಯಾನ್ ವಾರ್
Follow us
ಆಯೇಷಾ ಬಾನು
|

Updated on:Apr 02, 2021 | 12:26 PM

ಬೆಂಗಳೂರು: ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ರಿಲೀಸ್ ಬೆನ್ನಲ್ಲೇ ಫ್ಯಾನ್ಸ್​ ವಾರ್ ಶುರುವಾಗಿದೆ. ಪುನೀತ್ ರಾಜ್‍ಕುಮಾರ್ ಮತ್ತು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕುವ ಮೂಲಕ ಕಚ್ಚಾಡಿಕೊಂಡಿದ್ದಾರೆ.

ಪವರ್‌ ಸ್ಟಾರ್‌ ಪುನೀತ್ ರಾಜ್‌ಕುಮಾರ್‌ ಅಭಿನಯದ ಯುವರತ್ನ ಸಿನಿಮಾ ರಿಲೀಸ್ ಆಗಿದೆ. ಭರ್ಜರಿ ಓಪನಿಂಗ್‌ ಪಡೆದ ಯುವರತ್ನ ಸಿನಿಮಾ ನೋಡಿದ ಫ್ಯಾನ್ಸ್ ಇದು ಪುನೀತ್‌ ರಾಜ್‌ಕುಮಾರ್‌ಗೆ ತಕ್ಕನಾದ ಸಿನಿಮಾ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿ ಸಂಭ್ರಮಿಸಿದ್ದರು.

ಆದ್ರೆ ಈಗ ಪುನೀತ್ ರಾಜ್‍ಕುಮಾರ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಾಗ್ವಾದ ಶುರುವಾಗಿದೆ. ದಚ್ಚು-ಕಿಚ್ಚ ಫ್ಯಾನ್ಸ್ ವಾರ್ ಅಂತ್ಯಗೊಂಡು ದಚ್ಚು-ಅಪ್ಪು ಫ್ಯಾನ್ ವಾರ್ ನಡೆಯುತ್ತಿದೆ.

ಡಿ ಬಾಸ್ ದರ್ಶನ್ ಅಭಿಮಾನಿಯೊಬ್ಬ ಯುವರತ್ನ ಸಿನಿಮಾ ಕರ್ನಾಟಕದಲ್ಲಿ ಹೇಗೆ ಓಡುತ್ತಿದೆ ನೋಡಿ ಎಂಬಂತೆ ಟ್ವಿಟರ್ ಖಾತೆಯಲ್ಲಿ ಎಡಿಟ್ ಮಾಡಲಾದ ಭಕ್ತ ಪ್ರಹ್ಲಾದ ಸಿನಿಮಾದ ದೃಶ್ಯವನ್ನು ಫೋಸ್ಟ್ ಮಾಡಿದ್ದ. ಇದನ್ನು ನೋಡಿದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿಮಾನಿಗಳು ನಾಜೂಕಾಗಿ ದರ್ಶನ್ ಅಭಿಮಾನಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ. ಹಾಗೆಯೇ ಫೋಸ್ಟ್ ಡಿಲೀಟ್ ಮಾಡುವಂತೆ ತಿಳಿಸಿದ್ದಾರೆ. ಈ ವೇಳೆ ಅಭಿಮಾನಿಗಳ ನಡುವೆ ಮಾತಿನ ಸಮರ ನಡೆದಿದೆ.

ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ ಯುವರತ್ನ ಇನ್ನು ಕರ್ನಾಟಕ, ಆಂಧ್ರ, ತೆಲಂಗಾಣ ಸೇರಿ ಒಟ್ಟು 600ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ಯುವರತ್ನ ತೆರೆಕಂಡಿದೆ. ಅದ್ರಲ್ಲೂ ಮೊದಲ ದಿನ ಕರ್ನಾಟಕದ ಬಹುತೇಕ ಎಲ್ಲಾ ಚಿತ್ರಮಂದಿರಗಳೂ ಹೌಸ್‌ಫುಲ್‌ ಬೋರ್ಡ್ ಹಾಕಿದ್ವು. ಅಂದ್ರೆ ಮೊದಲ ದಿನ ಚಿತ್ರ ತಂಡದ ನಿರೀಕ್ಷೆಯಂತೆ ಬಾಕ್ಸಾಫೀಸ್‌ ಭರ್ತಿಯಾಗಿದೆ. ಇನ್ನು ಬಹುತೇಕ ಕಡೆಯಲ್ಲಿ ಈಗಾಗಲೇ ಮುಂಗಡ ಟಿಕೆಟ್ ಬುಕ್ಕಿಂಗ್ ಕೂಡ ಆಗಿದೆ. ಯುವರತ್ನ ಪಕ್ಕಾ ಕೌಟುಂಬಿಕ ಸಿನಿಮಾ. ಸಮಾಜಕ್ಕೆ ಅತಿ ಅವಶ್ಯಕವಾಗಿ ಬೇಕಿರೋ ಸಂದೇಶ ಹೊತ್ತಿರೋ ಸಿನಿಮಾ.

ಯುವರತ್ನ ಸಂತೋಷ್‌ ಆಂದನ್‌ ರಾಮ್‌ ಮತ್ತು ಪುನೀತ್‌ ರಾಜ್‌ಕುಮಾರ್‌ ಕಾಂಬಿನೇಷನ್‌ನ 2ನೇ ಸಿನಿಮಾ. ರಾಜಕುಮಾರ ಸಿನಿಮಾ ಸತತ 100 ದಿನಗಳ ಕಾಲ ಪ್ರದರ್ಶನ ಕಂಡು ಬಾಕ್ಸಾಫೀಸ್‌ ನಲ್ಲಿ ಹೊಸ ದಾಖಲೆ ಹುಟ್ಟುಹಾಕಿತ್ತು. ಈಗ ಯುವರತ್ನನ ಸರದಿ. ಯುವರತ್ನ ಚಿತ್ರ ಕೂಡ ಸೂಪರ್‌ ಹಿಟ್‌ ಲಿಸ್ಟ್ ಸೇರೋ ಭರವಸೆ ಮೂಡಿಸಿದೆ.

Puneeth Rajkumar And Darshan Fans

ದಚ್ಚು-ಅಪ್ಪು ಫ್ಯಾನ್ ವಾರ್

Puneeth Rajkumar And Darshan Fans

ದಚ್ಚು-ಅಪ್ಪು ಫ್ಯಾನ್ ವಾರ್

Puneeth Rajkumar And Darshan Fans

ದಚ್ಚು-ಅಪ್ಪು ಫ್ಯಾನ್ ವಾರ್

ಇದನ್ನೂ ಓದಿ: ಯುವರತ್ನಕ್ಕೆ ಮೊದಲ ದಿನವೇ ಶುರುವಾಯ್ತು ಪೈರಸಿ ಕಾಟ; ಎಲ್ಲೇ ಪೈರಸಿ ಲಿಂಕ್ ಸಿಕ್ಕರೂ ರಿಪೋರ್ಟ್ ಮಾಡಿ ಎಂದ ಚಿತ್ರತಂಡ

(Puneeth Rajkumar And Darshan Fans Talk war in Social Media)

Published On - 12:10 pm, Fri, 2 April 21

ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಕೆಪಿಸಿಸಿ ಅಧ್ಯಕ್ಷನ ಸ್ಥಾನಕ್ಕೆ ನಾನು ಆಕಾಂಕ್ಷಿಯಲ್ಲ: ಡಿಕೆ ಸುರೇಶ್
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ
ಮೈಸೂರಲ್ಲಿ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಗಿತ, ಪರದಾಡುತ್ತಿರುವ ಜನ