ಯುವರತ್ನಕ್ಕೆ ಮೊದಲ ದಿನವೇ ಶುರುವಾಯ್ತು ಪೈರಸಿ ಕಾಟ; ಎಲ್ಲೇ ಪೈರಸಿ ಲಿಂಕ್ ಸಿಕ್ಕರೂ ರಿಪೋರ್ಟ್ ಮಾಡಿ ಎಂದ ಚಿತ್ರತಂಡ
ಯುವರತ್ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಅವರ ಮನವಿಗೆ ಓಗೊಟ್ಟಿರುವ ಸಿನಿಮಾ ಅಭಿಮಾನಿಗಳು ಟೆಲಿಗ್ರಾಂನಲ್ಲಿ ತಮಗೆ ಸಿಕ್ಕ ಪೈರಸಿ ಲಿಂಕ್ಗಳ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದಾರೆ. ದಯವಿಟ್ಟು ತಕ್ಷಣವೇ ಈ ಪೈರಸಿ ಲಿಂಕ್ಗಳನ್ನು ರಿಪೋರ್ಟ್ ಮಾಡಿ ಕ್ರಮ ಕೈಗೊಳ್ಳುವಂತೆ ಅಭಿಮಾನಿಗಳು ಸಹ ಕೋರಿಕೊಂಡಿದ್ದಾರೆ.
ಬೆಂಗಳೂರು: ರಾಬರ್ಟ್ ಸಿನಿಮಾದ ನಂತರ ಇದೀಗ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಅದ್ದೂರಿ ಸಿನಿಮಾ ಯುವರತ್ನಕ್ಕೂ ಪೈರಸಿ ಕಾಟ ಶುರುವಾಗಿದೆ. ಮೊದಲ ದಿನವೇ ಯುವರತ್ನ ಸಿನಿಮಾ ಪೈರಸಿ ಆಗಿದ್ದು, ಟೆಲಿಗ್ರಾಂನಲ್ಲಿ ಯುವರತ್ನ ಸಿನಿಮಾದ ಲಿಂಕ್ಗಳು ಹರಿದಾಡ್ತಿವೆ. ಯುವರತ್ನ ಚಿತ್ರದ ಪೈರಸಿ ಲಿಂಕ್ಗಳು ಎಲ್ಲೇ ಸಿಕ್ಕರೂ ರಿಪೋರ್ಟ್ ಮಾಡಿ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಮನವಿ ಮಾಡಿಕೊಂಡಿದ್ದಾರೆ.
‘ಪವರ್ ಸ್ಟಾರ್’ ಪುನೀತ್ ರಾಜ್ಕುಮಾರ್ ಮತ್ತು ನಿರ್ದೇಶಕ ಸಂತೋಷ್ ಆನಂದ್ರಾಮ್ ಕಾಂಬಿನೇಷನ್ನಲ್ಲಿ ಮೂಡಿಬಂದಿದ್ದ ‘ರಾಜಕುಮಾರ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಹಾಗಾಗಿ, ಅವರಿಬ್ಬರು ಜೊತೆಯಾಗಿ ಮಾಡಿರುವ ‘ಯುವರತ್ನ’ ಸಿನಿಮಾ ಮೇಲೆ ಹೆಚ್ಚಿನ ನಿರೀಕ್ಷೆ ಮೂಡಿರುವುದು ಸಹಜ. ರಾಜಕುಮಾರ ಚಿತ್ರದ ರೀತಿಯೇ ಯುವರತ್ನದಲ್ಲಿಯೂ ಒಂದು ಮೆಸೇಜ್ ನೀಡುವ ಪ್ರಯತ್ನವನ್ನು ಮಾಡಲಾಗಿದೆ. ಈ ಬಾರಿ ಪೋಷಕರು ಮತ್ತು ವಿದ್ಯಾರ್ಥಿಗಳನ್ನು ಸಂತೋಷ್ ಆನಂದ್ ರಾಮ್ ಟಾರ್ಗೆಟ್ ಮಾಡಿದ್ದಾರೆ.
All pirated links shud be reported to antipiracy@aiplex.com
They will remove instantly. We will have to fight it together. #Yuvarathnaa
— Karthik Gowda (@Karthik1423) April 1, 2021
ಯುವರತ್ನ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಅವರ ಮನವಿಗೆ ಓಗೊಟ್ಟಿರುವ ಸಿನಿಮಾ ಅಭಿಮಾನಿಗಳು ಟೆಲಿಗ್ರಾಂನಲ್ಲಿ ತಮಗೆ ಸಿಕ್ಕ ಪೈರಸಿ ಲಿಂಕ್ಗಳ ಸ್ಕ್ರೀನ್ಶಾಟ್ಗಳನ್ನು ಹಂಚಿಕೊಂಡಿದ್ದಾರೆ. ದಯವಿಟ್ಟು ತಕ್ಷಣವೇ ಈ ಪೈರಸಿ ಲಿಂಕ್ಗಳನ್ನು ರಿಪೋರ್ಟ್ ಮಾಡಿ ಕ್ರಮ ಕೈಗೊಳ್ಳುವಂತೆ ಅಭಿಮಾನಿಗಳು ಸಹ ಕೋರಿಕೊಂಡಿದ್ದಾರೆ.
— PramodPacchiii (@PPacchiii) April 1, 2021
How about telegram, plz try to delete the videos from this group pic.twitter.com/N3TvIC3KKH
— Vishnu S (@vishnujackie) April 1, 2021
ಕಳೆದ 2 ವರ್ಷಗಳಿಂದ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಚಿತ್ರಮಂದಿರದಲ್ಲಿ ತಮ್ಮ ನೆಚ್ಚಿನ ನಟನ ದರ್ಶನ ಆಗಿರಲಿಲ್ಲ. ಹಾಗಾಗಿ ಎಲ್ಲರಲ್ಲೂ ಹೆಚ್ಚಿನ ಕಾತರ ಇತ್ತು. ಅದಕ್ಕೆ ತಕ್ಕಂತೆಯೇ ದೊಡ್ಡಮಟ್ಟದಲ್ಲಿ ಸಿನಿಮಾ ಸೌಂಡ್ ಮಾಡುತ್ತಿದೆ. ಕರ್ನಾಟಕದ 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಯುವರತ್ನನ ಆಗಮನ ಆಗಿದೆ. ಕನ್ನಡದ ಜೊತೆಗೆ ತೆಲುಗಿಗೂ ಈ ಸಿನಿಮಾ ಡಬ್ ಆಗಿದೆ. ಆಂಧ್ರ ಮತ್ತು ತೆಲಂಗಾಣದ 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ.
ಸ್ಟಾರ್ ಸಿನಿಮಾಗಳನ್ನು ಮುಂಜಾನೆಯೇ ಕಣ್ತುಂಬಿಕೊಳ್ಳದಿದ್ದರೆ ಅಭಿಮಾನಿಗಳಿಗೆ ಸಮಾಧಾನವೇ ಆಗುವುದಿಲ್ಲ. ಅಪ್ಪು ಫ್ಯಾನ್ಸ್ಗೂ ಈ ಮಾತು ಅನ್ವಯ. ಬೆಂಗಳೂರಿನ ಜೆಪಿ ನಗರದ ಸಿದ್ದೇಶ್ವರ, ಸಿದ್ದಲಿಂಗೇಶ್ವರ, ತಾವರೆಕರೆಯ ಬಾಲಾಜಿ ಚಿತ್ರಮಂದಿರ ಸೇರಿದಂತೆ ಅನೇಕ ಕಡೆಗಳಲ್ಲಿ ಮುಂಜಾನೆ 6 ಗಂಟೆಗೆ ಶೋ ಶುರುವಾಗಿತ್ತು. ಎಲ್ಲಾ ಕಡೆಗಳಲ್ಲಿ ಪುನೀತ್ ಕಟೌಟ್ಗಳು ರಾರಾಜಿಸುತ್ತಿವೆ.
ಬೆಂಗಳೂರಿನಲ್ಲಿ ಮೊದಲ ದಿನವೇ ಯುವರತ್ನ ಚಿತ್ರಕ್ಕೆ 650 ಶೋಗಳು ಮೀಸಲಾಗಿವೆ. ಬಹುತೇಕ ಕಡೆಗಳಲ್ಲಿ ಟಿಕೆಟ್ಗಳು ಸೋಲ್ಡ್ಔಟ್ ಆಗಿವೆ. ಇನ್ನು, ವಿದೇಶದಲ್ಲೂ ಪುನೀತ್ ಹವಾ ಜೋರಾಗಿದೆ. ಕರ್ನಾಟಕದ ರೀತಿಯೇ ಅಮೆರಿಕಾ, ಸಿಂಗಾಪುರ, ದುಬೈ ಮುಂತಾದ ಕಡೆಗಳಲ್ಲಿ ಈ ಸಿನಿಮಾ ಪ್ರದರ್ಶನ ಆಗುತ್ತಿದೆ.
ಆದರೆ ಟೆಲಿಗ್ರಾಂನಲ್ಲಿ ಯುವರತ್ನ ಸಿನಿಮಾದ ಪೈರಸಿ ಲಿಂಕ್ಗಳು ಸಿಗುತ್ತಿರುವುದು ನಿಜಕ್ಕೂ ಖೇದಕರವೇ ಆಗಿದೆ. ಕನ್ನಡ ಸಿನಿಮಾಗಳನ್ನು ಪೈರಸಿ ಲಿಂಕ್ ಮೂಲಕ ವೀಕ್ಷಿಸಬೇಡಿ, ಲಿಂಕ್ ಸಿಕ್ಕರೆ ತಕ್ಷಣವೇ ರಿಪೋರ್ಟ್ ಮಾಡಿ ಎಂದು ಹಲವು ಕನ್ನಡ ಸಿನಿಮಾ ಅಭಿಮಾನಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ: Yuvarathnaa Movie Review: ಸೂಪರ್ ಸಂದೇಶ ಸಾರುವ ಯುವರತ್ನ; ಫ್ಯಾನ್ಸ್ ಮೆಚ್ಚಿಸುವ ಯತ್ನ!
ಸೌಂಡ್ ಸರಿಯಾಗಿ ಕೇಳಿಸಲ್ಲ ಎಂದು ಗಲಾಟೆ ಮಾಡಿದ ‘ಯುವರತ್ನ’ ಪ್ರೇಕ್ಷಕರು; ಹಣ ಮರಳಿಸಿದ ಊರ್ವಶಿ ಥಿಯೇಟರ್ ಮಾಲೀಕರು