AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರು ಬಳಿ ನಾನ್​ವೆಜ್ ಅಡುಗೆಯ ರಿಸಿಪಿ ಕೇಳಿದ್ದ ಪುನೀತ್; ಹಳೆಯ ಆಡಿಯೋ ಕ್ಲಿಪ್ ವೈರಲ್

ನಟಿ ಮಾಲಾಶ್ರೀ ಅವರಿಗೆ ಚಂದ್ರು ಮೇಕಪ್​ಮ್ಯಾನ್ ಆಗಿದ್ದರು. ಚಂದ್ರು ಅವರು ಮಾಲಾಶ್ರೀ ಜೊತೆಗೆ ಬರೋಬ್ಬರಿ 72 ಸಿನಿಮಾಗಳಲ್ಲಿ ಮೇಕಪ್​ಮ್ಯಾನ್ ಆಗಿ ಕೆಲಸ ಮಾಡಿದ್ದರು. ರಾಜ್​ಕುಮಾರ್ ಕುಟುಂಬದ ಜೊತೆ ಚಂದ್ರುಗೆ ಒಳ್ಳೆಯ ಬಾಂಧವ್ಯ ಇದೆ. ಇದಕ್ಕೆ ಈಗ ವೈರಲ್ ಆಗಿರೋ ವಿಡಿಯೋ ಸಾಕ್ಷಿ.

ಚಂದ್ರು ಬಳಿ ನಾನ್​ವೆಜ್ ಅಡುಗೆಯ ರಿಸಿಪಿ ಕೇಳಿದ್ದ ಪುನೀತ್; ಹಳೆಯ ಆಡಿಯೋ ಕ್ಲಿಪ್ ವೈರಲ್
ಚಂದ್ರು-ಪುನೀತ್
 ಶ್ರೀಲಕ್ಷ್ಮೀ ಎಚ್
| Edited By: |

Updated on:Feb 14, 2024 | 9:29 AM

Share

ಪುನೀತ್ ರಾಜ್​ಕುಮಾರ್ (Puneeth Rajkumar) ಅವರನ್ನು ಕಳೆದುಕೊಂಡು ಮೂರು ವರ್ಷ ಕಳೆಯುತ್ತಾ ಬಂದಿದೆ. ಅವರು ನಮ್ಮೊಂದಿಗೆ ಇಲ್ಲ ಎಂಬುದನ್ನು ಈಗಲೂ ಅನೇಕರ ಬಳಿ ಅರಗಿಸಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಅವರನ್ನು ನಾನಾ ರೀತಿಯಲ್ಲಿ ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ. ಪಾರ್ಕ್​, ರಸ್ತೆಗಳಿಗೆ ಪುನೀತ್ ಅವರ ಹೆಸರನ್ನು ಇಡಲಾಗಿದೆ. ಈ ಮೂಲಕ ಅವರ ಹೆಸರನ್ನು ಅಜರಾಮರವಾಗಿಸುವ ಕೆಲಸ ಆಗಿದೆ. ಪುನೀತ್ ನಟನೆಯ ಸಿನಿಮಾಗಳು ಈಗಲೂ ಅನೇಕರ ಫೇವರಿಟ್ ಎನಿಸಿಕೊಂಡಿವೆ. ಆಗಾಗ ಪುನೀತ್​ಗೆ ಸಂಬಂಧಿಸಿದ ಹಳೆಯ ವಿಡಿಯೋಗಳು ವೈರಲ್ ಆಗುತ್ತವೆ. ಈಗ ಪುನೀತ್ ಅವರ ಆಡಿಯೋ ಕ್ಲಿಪ್ ಒಂದು ವೈರಲ್ ಆಗಿದೆ.

ಹೋಟೆಲ್ ಮಾಲೀಕ ಹಾಗೂ ಬಾಣಸಿಗ ಚಂದ್ರು ಅವರು ಇತ್ತೀಚೆಗೆ ಸಖತ್ ಫೇಮಸ್ ಆಗಿದ್ದಾರೆ. ಅವರು ಹೇಳಿದ ಬೆಳ್ಳುಳ್ಳಿ ಕಬಾಬ್ ರೆಸಿಪಿ ಸಾಕಷ್ಟು ವೈರಲ್ ಆಗಿದೆ. ಇವರು ಮೊದಲು ಮೇಕಪ್ ಆರ್ಟಿಸ್ಟ್ ಆಗಿದ್ದರು. ನಂತರ ಹೋಟೆಲ್ ಉದ್ಯಮಕ್ಕೆ ಬಂದರು. ಅವರ ಹೆಸರು ಹಾಗೂ ಅವರ ರೆಸಿಪಿಗಳು ಸಾಕಷ್ಟು ವೈರಲ್ ಆಗಿವೆ. ಚಂದ್ರು ಜೊತೆ ಸಹಾಯಕನಾಗಿರುವ ರಾಹುಲ್ ಹೆಸರು ಕೂಡ ಪ್ರಚಲಿತದಲ್ಲಿದೆ. ರಾಜ್​ಕುಮಾರ್ ಕುಟುಂಬದ ಜೊತೆ ಚಂದ್ರುಗೆ ಒಳ್ಳೆಯ ಬಾಂಧವ್ಯ ಇದೆ. ಇದಕ್ಕೆ ಈಗ ವೈರಲ್ ಆಗಿರೋ ವಿಡಿಯೋ ಸಾಕ್ಷಿ.

ಪುನೀತ್ ರಾಜ್​ಕುಮಾರ್ ಅವರಿಗೆ ಆಹಾರದ ಬಗ್ಗೆ ವಿಶೇಷ ಪ್ರೀತಿ. ಅವರು ಒಮ್ಮೆ ಸೌದೆ ಒಲೆಯಲ್ಲಿ ಮಟನ್ ಸಾರು ಮಾಡೋದು ಹೇಗೆ ಎಂದು ಚಂದ್ರುಗೆ ಕರೆ ಮಾಡಿ ಕೇಳಿದ್ದರು. ಅವರು ಕಾಲ್ ಮಾಡಿದ್ದು ಕಾಶ್ಮೀರದಿಂದ ಎನ್ನಲಾಗಿದೆ. ಈ ಮೊದಲು ಕೂಡ ಈ ಆಡಿಯೋ ವೈರಲ್ ಆಗಿತ್ತು. ಆದರೆ, ಆಗ ಚಂದ್ರು ಯಾರು ಎಂಬುದು ಜನರಿಗೆ ಅಷ್ಟಾಗಿ ತಿಳಿದಿರಲಿಲ್ಲ. ಈಗ ಚಂದ್ರು ಕೂಡ ಫೇಮಸ್ ಆದ ಬಳಿಕ ಅವರ ಹಾಗೂ ಪುನೀತ್ ಮಧ್ಯೆ ನಡೆದ ಮಾತುಕತೆಯ ಆಡಿಯೋ ಕ್ಲಿಪ್ ವೈರಲ್ ಆಗಿದೆ.

ಇದನ್ನೂ ಓದಿ: ಚಂದ್ರು ಮಾಡಿದ ಅಡುಗೆ ಸವಿದು ಒನ್​ ಮೋರ್​ ಅಂತಿದ್ರು ಪುನೀತ್​ ರಾಜ್​ಕುಮಾರ್​

‘ನನಗೆ ನಾಳೆಗೆ ರೆಸಿಪಿ ಬೇಕು. ನಾನು 10 ಕೇಜಿ ಮಟನ್ ಸಾರು ಮಾಡಬೇಕು. ಅದಕ್ಕೆ ಏನೇನು ಬೇಕು ಎಂದು ಹೇಳಿ’ ಎಂಬುದಾಗಿ ಪುನೀತ್ ರಾಜ್​ಕುಮಾರ್ ಅವರು ಚಂದ್ರುಗೆ ಫೋನ್ ಮಾಡಿ ಕೇಳಿದ್ದರು. ‘ನಾನು ಬೆಳಿಗ್ಗೆ ವಿಡಿಯೋ ಮಾಡಿ ಕಳಿಸುತ್ತೇನೆ. ಅದನ್ನು ನೋಡಿದ್ರೆ ಸುಲಭವಾಗುತ್ತದೆ’ ಎಂದಿದ್ದರು ಚಂದ್ರು. ಈ ವಿಡಿಯೋ ಈ ವೈರಲ್ ಆಗುತ್ತಿದೆ. ಎಲ್ಲರೂ ಪುನೀತ್ ರಾಜ್​ಕುಮಾರ್ ಅವರನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ವೈರಲ್ ಆದ ವಿಡಿಯೋ..

View this post on Instagram

A post shared by KA-07 (@kolar_ka_07)

ಖ್ಯಾತ ನಟಿ ಮಾಲಾಶ್ರೀ ಅವರಿಗೆ ಚಂದ್ರು ಮೇಕಪ್​ಮ್ಯಾನ್ ಆಗಿದ್ದರು. ಮಾಲಾಶ್ರೀ ಜೊತೆಗೆ ಬರೋಬ್ಬರಿ 72 ಸಿನಿಮಾಗಳಲ್ಲಿ ಚಂದ್ರು ಅವರ ಮೇಕಪ್​ಮ್ಯಾನ್ ಆಗಿ ಕೆಲಸ ಮಾಡಿದ್ದರು ಎನ್ನಲಾಗಿದೆ. ಆ ಬಳಿಕ ಅವರು ರಸ್ತೆ ಬದಿಯಲ್ಲಿ ಹೋಟೆಲ್ ಆರಂಭ ಮಾಡಿದರು. ರಾಜ್​ಕುಮಾರ್ ಅವರು ಕೂಡ ಚಂದ್ರು ಅವರ ಕೈರುಚಿ ಸವಿದು ಭೇಷ್ ಎಂದಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 9:21 am, Wed, 14 February 24

ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಅಡಿಕೆಗೆ ಬಂಪರ್ ಬೆಲೆ: ತೋಟಕ್ಕೆ ಹೈ ಸೆಕ್ಯುರಿಟಿ ನೀಡಿದ ರೈತ
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಕೊಲಂಬಿಯಾದಲ್ಲಿ ವಿಮಾನ ಪತನ, ಸಂಸದ ಸೇರಿ 15 ಮಂದಿ ಸಾವು
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಯತೀಂದ್ರ ಹಸ್ತಕ್ಷೇಪ ವಿಚಾರ ಸದನದಲ್ಲಿ ಚರ್ಚೆ: ಕೆಜೆ ಜಾರ್ಜ್ ಹೇಳಿದ್ದೇನು?
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ಟ್ರಕ್​ನಲ್ಲಿ ಪ್ಲಾಸ್ಟಿಕ್​ ಬಾಟಲಿಗಳ ನಡುವೆ ಹಸುಗಳನ್ನು ತುಂಬಿ ಕಳ್ಳಸಾಗಣೆ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
ನಾವು ಈಗ ಸುಧಾರಣಾ ಎಕ್ಸ್​​ಪ್ರೆಸ್​ನಲ್ಲಿದ್ದೇವೆ: ಪ್ರಧಾನಿ ಮೋದಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
‘ಟಾಕ್ಸಿಕ್’ ವಿಷಯದಲ್ಲಿ ಯಶ್ ಬೆಂಬಲಕ್ಕೆ ನಿಂತ ಮಹಿಳಾ ನಿರ್ದೇಶಕಿ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
ಟ್ರಕ್​ಗಳ ನಡುವೆ ಅಪಘಾತ, ಹೊತ್ತಿಕೊಂಡ ಬೆಂಕಿ, ಚಾಲಕ ಸಜೀವದಹನ
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
400 ಕೋಟಿ ದರೋಡೆ ಪ್ರಕರಣಕ್ಕೆ ಸಿಗುತ್ತಾ ಮತ್ತೊಂದು ಟ್ವಿಸ್ಟ್?
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಮೊದಲ ಎಸೆತಗಳಲ್ಲೇ ವಿಶ್ವ ದಾಖಲೆ ಬರೆದ ಮ್ಯಾಟ್ ಹೆನ್ರಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ
ಸಾರ್ವಜನಿಕ ಸಾಮಾರಂಭದಲ್ಲಿ ಡ್ಯಾನ್ಸ್​ ಮಾಡುತ್ತಿದ್ದ ಮಹಿಳೆಗೆ ಒದ್ದ ವ್ಯಕ್ತಿ