AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬರಿದಾಯ್ತು ‘ರಾಜಕುಮಾರ’ ನಿವಾಸ; ಪುನೀತ್​ ಮನೆಯ ಫೋಟೋ ವೈರಲ್​

ಪುನೀತ್​ ಸಿನಿಮಾ ರಿಲೀಸ್ ಆಗುವಾಗ ಅಭಿಮಾನಿಗಳು ಅವರ ಕಟೌಟ್​ಗೆ ಹಾರಗಳನ್ನು ಹಾಕುತ್ತಿದ್ದರು. ಹಾಲಿನ ಅಭಿಷೇಕ ಮಾಡುತ್ತಿದ್ದರು. ಆದರೆ, ಈಗ ಅವರ ಫೋಟೋಗೆ ಮಾಲೆ ಹಾಕಿ ನೋಡೋದು ತುಂಬಾನೇ ಕಷ್ಟದ ಕೆಲಸ.

ಬರಿದಾಯ್ತು ‘ರಾಜಕುಮಾರ’ ನಿವಾಸ; ಪುನೀತ್​ ಮನೆಯ ಫೋಟೋ ವೈರಲ್​
ಪುನೀತ್​
TV9 Web
| Edited By: |

Updated on: Oct 31, 2021 | 8:05 PM

Share

ಪುನೀತ್ ರಾಜ್​ಕುಮಾರ್​ ಅವರು ಮೃತಪಟ್ಟಿದ್ದಾರೆ ಎನ್ನುವ ವಿಚಾರವನ್ನು ಅನೇಕರಿಗೆ ನಂಬೋಕೆ ಇಲ್ಲಿಯವರೆಗೂ ಸಾಧ್ಯವಾಗಿಲ್ಲ. ಅವರ ಅಂತ್ಯಸಂಸ್ಕಾರ ನಡೆದರೂ ಅಭಿಮಾನಿಗಳ ಬಳಿ ಇದನ್ನು ಒಪ್ಪಿಕೊಳ್ಳೋಕೆ ಸಾಧ್ಯವಾಗುತ್ತಿಲ್ಲ. ಪುನೀತ್​ ಅಂತ್ಯಸಂಸ್ಕಾರದ ಫೋಟೋಗಳು ಹಾಗೂ ವಿಡಿಯೋಗಳು ಸಾಕಷ್ಟು ವೈರಲ್​ ಆಗಿದ್ದು ಅಭಿಮಾನಿಗಳ ದುಃಖವನ್ನು ಮತ್ತಷ್ಟು ಹೆಚ್ಚಿಸಿದೆ. ಈ ಮಧ್ಯೆ ಪುನೀತ್​ ಮನೆಯ ಫೋಟೋ ಒಂದು ವೈರಲ್​ ಆಗಿದ್ದು, ಅಭಿಮಾನಿಗಳ ಸಂಕಟವನ್ನು ಮತ್ತಷ್ಟು ಹೆಚ್ಚಿಸಿದೆ. ‘ರಾಜಕುಮಾರ’ ನಿವಾಸ ಬರಿದಾಗಿದೆ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.

ಪುನೀತ್​ ರಾಜ್​ಕುಮಾರ್​ ಅವರು ಸದಾಶಿವ ನಗರದ ಮನೆಯಲ್ಲಿ ವಾಸವಾಗಿದ್ದರು. ಇದು ದೊಡ್ಮನೆ ಎಂದೇ ಕರೆಯಲ್ಪಡುತ್ತಿತ್ತು. ಈ ಮನೆಯಲ್ಲಿ ಪುನೀತ್​ ಇಷ್ಟು ದಿನ ನಗುನಗುತ್ತಾ ಓಡಾಡಿಕೊಂಡಿದ್ದರು. ಆದರೆ, ಈಗ ಅವರು ಆ ಮನೆಯಲ್ಲಿ ಫೋಟೋವಾಗಿ, ಗೋಡೆಯ ಮೇಲಿದ್ದಾರೆ. ಈ ಚಿತ್ರ ಸೋಶಿಯಲ್​ ಮೀಡಿಯಾದಲ್ಲಿ ಸಾಕಷ್ಟು ವೈರಲ್​ ಆಗುತ್ತಿದೆ.

ಪುನೀತ್​ ಅವರು ನಗುತ್ತಾ ಇರುವ ಫೋಟೋ ಗೋಡೆಯ ಮೇಲಿದೆ. ಅದರ ಹಿಂಭಾಗದಲ್ಲಿ ರಾಜ್​ಕುಮಾರ್​ ಹಾಗೂ ಪಾರ್ವತಮ್ಮ ಅವರ ಫೋಟೋಗಳು ಇವೆ. ಪುನೀತ್​ ಫೋಟೋಗೆ ಹೂವಿನ ಹಾರ ಹಾಕಲಾಗಿದೆ. ಇದನ್ನು ನೋಡಿದ ಅನೇಕರು ‘ನಾವು ಇದನ್ನು ನಂಬೋಕೆ ಸಿದ್ಧರಿಲ್ಲ’ ಎಂದು ಹೇಳಿಕೊಂಡಿದ್ದಾರೆ. ಇನ್ನೂ ಕೆಲವರು, ‘ಪುನೀತ್​ ಅವರನ್ನು ಈ ರೀತಿ ನೋಡೋಕೆ ಸಾಧ್ಯವೇ ಇಲ್ಲ’ ಎಂದು ಹೇಳಿಕೊಂಡಿದ್ದಾರೆ. ಈ ದುಃಖದ ಘಟನೆಯಿಂದ ಹೊರ ಬರೋಕೆ ಅಭಿಮಾನಿಗಳಿಗೆ ಇನ್ನೂ ಹೆಚ್ಚಿನ ಸಮಯ ಬೇಕಾಗಬಹುದು. ​

ಪುನೀತ್​ ಸಿನಿಮಾ ರಿಲೀಸ್ ಆಗುವಾಗ ಅಭಿಮಾನಿಗಳು ಅವರ ಕಟೌಟ್​ಗೆ ಹಾರಗಳನ್ನು ಹಾಕುತ್ತಿದ್ದರು. ಹಾಲಿನ ಅಭಿಷೇಕ ಮಾಡುತ್ತಿದ್ದರು. ಆದರೆ, ಈಗ ಅವರ ಫೋಟೋಗೆ ಮಾಲೆ ಹಾಕಿ ನೋಡೋದು ತುಂಬಾನೇ ಕಷ್ಟದ ಕೆಲಸ.

ಇದನ್ನೂ ಓದಿ: 1985ರಲ್ಲಿ ಪುನೀತ್​​ ಹೆಸರು ಬದಲಾಯಿಸಿದ್ದಾಗ ನೀಡಿದ್ದ ಜಾಹೀರಾತು ವೈರಲ್​

‘ಪುನೀತ್​ ಆಸ್ಪತ್ರೆಗೆ ಬಂದಾಗ ಸಹಜವಾಗಿಯೇ ಇದ್ದರು’; ಹಾಗಿದ್ದರೆ ತಪ್ಪು ನಡೆದಿದ್ದೆಲ್ಲಿ? ವೈದ್ಯರು ವಿವರಿಸಿದ್ದು ಹೀಗೆ

ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೆಂಗಳೂರಿನಲ್ಲಿ ಭಾರೀ ಅಗ್ನಿ ಅವಘಡ: ಹತ್ತಾರು ಬೈಕ್ ಸುಟ್ಟು ಭಸ್ಮ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ಬೇಡ್ತಿ-ವರದಾ ಯೋಜನೆ ವಿರೋಧಿಸುತ್ತಿರುವುದೇಕೆ? ಸ್ವಾಮೀಜಿ ಶಾಕಿಂಗ್​ ಹೇಳಿಕೆ
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ವರದಾ-ಬೇಡ್ತಿ ನದಿ ಪ್ರಾಜೆಕ್ಟ್: ಕಾಗೇರಿ-ವೈದ್ಯ ಮಧ್ಯೆ ಟಾಕ್ ವಾರ್
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ಸಿಎಂ ಕ್ಷೇತ್ರದಲ್ಲೇ ಹೀಗ್ ಮಾಡಿದ್ರೆ ಹೇಗೆ? ಅಧಿಕಾರಿಗೆ ಯತೀಂದ್ರ ಕ್ಲಾಸ್!
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ವರದಾ-ಬೇಡ್ತಿ ನದಿ ಜೋಡಣೆ ವಿರೋಧಿಸಿ ಬೃಹತ್ ಪ್ರತಿಭಟನೆ: ಸ್ವಾಮೀಜಿ ಎಚ್ಚರಿಕೆ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಕೆಲಸಕ್ಕೆ ಕನ್ನಡಿಗರು ಬೇಡ್ವಂತೆ:ಕನ್ನಡಿಗರನ್ನು ಕೆರಳಿಸಿದ ಬೆಂಗಳೂರಿನ ಕಂಪನಿ
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಶ್ರೀರಾಮುಲು ದೊಡ್ಡ ಪಾಳೇಗಾರನಾ? ಬಂದವ್ನೆ ಹೊಡಿರೋ: ರೆಡ್ಡಿ ವಿಡಿಯೋ ರಿಲೀಸ್‌
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಅವನ ಬಿಟ್ಟು ಇವನು, ಇವನ ಬಿಟ್ಟು ಅವನು: ಏನಿದು ಕಳ್ಳಾಟ?
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಬೆಂಗಳೂರಿನ ಸುಜಾತಾ ಅಂಡರ್‌ಪಾಸ್‌ನಲ್ಲಿ ಅವೈಜ್ಞಾನಿಕ ರಸ್ತೆ ಕಾಮಗಾರಿ
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?
ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯೇ ಅಲ್ಲ ಅಂತಾ ಅಧಿಕಾರಿ ಹೇಳಿದ್ಯಾಕೆ?