ಹೋಮ್ ಬ್ಯಾನರ್ನಲ್ಲಿ ನಟಿಸಲಿದ್ದಾರೆ ಪುನೀತ್? ಪಿಆರ್ಕೆ ನಿರ್ಮಾಣದ ಸಿನಿಮಾಗೆ ನಿರ್ದೇಶಕ ಯಾರು?
ಪಿಆರ್ಕೆ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಮೂಡಿ ಬರುವ ಚಿತ್ರದಲ್ಲಿ ಪುನೀತ್ ನಟಿಸಬೇಕು ಎಂಬುದು ಅಭಿಮಾನಿಗಳ ಕನಸಾಗಿತ್ತು. ಅಷ್ಟೇ ಅಲ್ಲ, ಪುನೀತ್ ಕೂಡ ಈ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು.

ಪುನೀತ್ ರಾಜ್ಕುಮಾರ್ ಅವರು ಪಿಆರ್ಕೆ ಪ್ರೊಡಕ್ಷನ್ ಆರಂಭಿಸಿ ಕೆಲವು ವರ್ಷಗಳು ಕಳೆದಿವೆ. ಈ ಬ್ಯಾನರ್ ಅಡಿಯಲ್ಲಿ ಸಾಕಷ್ಟು ಹೊಸ ಪ್ರತಿಭೆಗಳಿಗೆ ಅವರು ಅವಕಾಶ ನೀಡಿದ್ದಾರೆ. ಸಾಕಷ್ಟು ಸಿನಿಮಾಗಳನ್ನು ಪಿಆರ್ಕೆ ಬ್ಯಾನರ್ ನಿರ್ಮಾಣ ಮಾಡಿದೆ. ಆದರೆ, ಈವರೆಗೆ ಅವರು ತಮ್ಮದೇ ಬ್ಯಾನರ್ ಸಿನಿಮಾದಲ್ಲಿ ನಟಿಸಿಲ್ಲ. ಈಗ ಇದಕ್ಕೆ ಕಾಲ ಕೂಡಿ ಬಂದಿದೆ. ಅವರು ನಟಿಸುತ್ತಿರುವ ಮುಂದಿನ ಚಿತ್ರಕ್ಕೆ ನಿರ್ದೇಶಕರು ಫೈನಲ್ ಆಗಿದ್ದು, ಪಿಆರ್ಕೆ ಇದರ ನಿರ್ಮಾಣದ ಜವಾಬ್ದಾರಿ ಹೊತ್ತುಕೊಳ್ಳಲಿದೆ ಎನ್ನಲಾಗುತ್ತಿದೆ.
ಪಿಆರ್ಕೆ ಪ್ರೊಡಕ್ಷನ್ ಹೌಸ್ ಅಡಿಯಲ್ಲಿ ಮೂಡಿ ಬರುವ ಚಿತ್ರದಲ್ಲಿ ಪುನೀತ್ ನಟಿಸಬೇಕು ಎಂಬುದು ಅಭಿಮಾನಿಗಳ ಕನಸಾಗಿತ್ತು. ಅಷ್ಟೇ ಅಲ್ಲ, ಪುನೀತ್ ಕೂಡ ಈ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದರು. ಆದರೆ, ಅದು ಈವರೆಗೆ ಸಾಧ್ಯವಾಗಿರಲಿಲ್ಲ. ಈಗ ಈ ಕನಸು ನನಸಾಗುವ ಕಾಲ ಸನಿಹವಾಗಿದೆ ಎನ್ನುವ ಮಾತು ಗಾಂಧಿನಗರದ ಅಂಗಳದಲ್ಲಿ ಕೇಳಿ ಬರುತ್ತಿದೆ.
ಪುನೀತ್ ಸದ್ಯ ‘ಜೇಮ್ಸ್’ ಮತ್ತು ‘ದ್ವಿತ್ವ’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಈ ಎರಡೂ ಸಿನಿಮಾಗಳ ಕೆಲಸಗಳು ಭರದಿಂದ ಸಾಗುತ್ತಿವೆ. ಇದಾದ ನಂತರ ಪುನೀತ್ ಅವರು ಜೇಕಬ್ ವರ್ಗೀಸ್ ಜತೆ ಮತ್ತೆ ಕೈ ಜೋಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ‘ಸವಾರಿ’, ‘ಪೃಥ್ವಿ’ ಮೊದಲಾದ ಸಿನಿಮಾಗಳನ್ನು ನಿರ್ದೇಶನ ಮಾಡಿದ ಖ್ಯಾತಿ ಅವರಿಗೆ ಇದೆ. ಈಗ ಪುನೀತ್ ಜತೆ ಜೇಕಬ್ ಕೈ ಜೋಡಿಸುತ್ತಿದ್ದಾರೆ ಎನ್ನುತ್ತಿವೆ ಮೂಲಗಳು.
‘ಪೃಥ್ವಿ’ ಸಿನಿಮಾದಲ್ಲಿ ಪುನೀತ್ ಹಾಗೂ ಜೇಕಬ್ ಒಟ್ಟಾಗಿ ಕೆಲಸ ಮಾಡಿದ್ದರು. ಈ ಸಿನಿಮಾದಲ್ಲಿ ಐಎಎಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗ ಇದೇ ರೀತಿಯ ಕಥೆಯನ್ನು ಜೇಕಬ್ ಹೆಣೆದಿದ್ದಾರೆ. ಪುನೀತ್ ಚಿತ್ರಕ್ಕೆ ಹೀರೋ. ಪಿಎಆರ್ಕೆ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿ ಬರುತ್ತಿದೆ. ಈ ಬಗ್ಗೆ ಚಿತ್ರತಂಡದಿಂದ ಯಾವುದೇ ಅಧಿಕೃತ ಮಾಹಿತಿ ಹೊರ ಬಿದ್ದಿಲ್ಲ.
ಇದನ್ನೂ ಓದಿ: ‘ಸಲಾಂ ಸೋಲ್ಜರ್, ದೇಶಕ್ಕೆ ನೀನೆ ಪವರ್’; ‘ಜೇಮ್ಸ್’ ಚಿತ್ರದ ಪುನೀತ್ ಪವರ್ಫುಲ್ ಲುಕ್ ಅನಾವರಣ
ದೊಡ್ಮನೆ ಮಗಳ ಚಿತ್ರ ನೋಡಿ ಅಣ್ಣಾವ್ರ ಮಕ್ಕಳು ಹೇಳಿದ್ದೇನು? ಒಂದೇ ಫ್ರೇಮ್ನಲ್ಲಿ ಶಿವಣ್ಣ, ರಾಘಣ್ಣ, ಪುನೀತ್
Published On - 4:23 pm, Mon, 18 October 21




