ಪುನೀತ್ ನಟನೆಯ ಎರಡು ಸಿನಿಮಾ ಒಟ್ಟಿಗೆ ಮರು ಬಿಡುಗಡೆ, ಅಭಿಮಾನಿಗಳಿಗೆ ಬೇಸರ

ದಿವಂಗತ ಪುನೀತ್ ರಾಜ್​ಕುಮಾರ್ ನಟನೆಯ ಎರಡು ಸಿನಿಮಾಗಳು ಇಂದು (ಮೇ 10) ಮರು ಬಿಡುಗಡೆ ಆಗಿವೆ. ಆದರೆ ಒಂದೇ ದಿನ ಎರಡು ಸಿನಿಮಾ ಬಿಡುಗಡೆ ಮಾಡಿರುವುದಕ್ಕೆ ಕೆಲ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪುನೀತ್ ನಟನೆಯ ಎರಡು ಸಿನಿಮಾ ಒಟ್ಟಿಗೆ ಮರು ಬಿಡುಗಡೆ, ಅಭಿಮಾನಿಗಳಿಗೆ ಬೇಸರ
Follow us
ಮಂಜುನಾಥ ಸಿ.
|

Updated on: May 10, 2024 | 12:12 PM

ಸ್ಟಾರ್ ನಟರ ಹಳೆಯ ಸಿನಿಮಾಗಳ ಮರು ಬಿಡುಗಡೆ ಟ್ರೆಂಡ್ ಇತ್ತೀಚೆಗೆ ಮತ್ತಷ್ಟು ಹೆಚ್ಚಿದೆ. ಮುಂಚೆ ಕೆಲವೇ ಸಂಖ್ಯೆಗಳಲ್ಲಿ, ಕೆಲವೇ ಸಿನಿಮಾಗಳು ಮರು ಬಿಡುಗಡೆ ಆಗುತ್ತಿದ್ದವು. ಆದರೆ ಇತ್ತೀಚೆಗೆ ಆ ಟ್ರೆಂಡ್ ತುಸು ಹೆಚ್ಚಾಗಿದೆ. ನೆರೆಯ ತೆಲುಗು ಚಿತ್ರರಂಗದಲ್ಲಿ ಈ ಟ್ರೆಂಡ್ ಜೋರಾಗಿ ನಡೆಯುತ್ತಿದೆ. ಸ್ಟಾರ್ ನಟರ ಸಿನಿಮಾಗಳು ಒಂದರ ಹಿಂದೊಂದರಂತೆ ಬಿಡುಗಡೆ ಆಗಿ ಭರ್ಜರಿ ಕಲೆಕ್ಷನ್ ಮಾಡುತ್ತಿವೆ. ಪ್ರೇಕ್ಷಕರು ಸಹ ಆ ಸಿನಿಮಾಗಳನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಕನ್ನಡದಲ್ಲಿ ನಟ ಪುನೀತ್ ರಾಜ್​ಕುಮಾರ್ (Puneeth Rajkumar) ಅವರ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗಿದೆ.

ದಿವಂಗತ ಪುನೀತ್ ರಾಜ್​ಕುಮಾರ್ ನಟನೆಯ ಎರಡು ಸಿನಿಮಾಗಳು ಇಂದು (ಮೇ 10) ಒಂದೇ ದಿನ ಬಿಡುಗಡೆ ಆಗಿವೆ. ನಿರ್ಮಾಪಕರ ವೈಯಕ್ತಿಕ ತಿಕ್ಕಾಟದಿಂದಾಗಿ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆ ಆಗಿದ್ದು, ಇದು ಅಭಿಮಾನಿಗಳಲ್ಲಿ ತುಸು ಅಸಮಾಧಾನವನ್ನೂ ಸಹ ತಂದಿದೆ. ಪುನೀತ್ ನಟನೆಯ ‘ಅಂಜನಿಪುತ್ರ’ ಹಾಗೂ ಪುನೀತ್ ಹಾಗೂ ತ್ರಿಷಾ ಒಟ್ಟಿಗೆ ನಟಿಸಿದ್ದ ‘ಪವರ್’ ಸಿನಿಮಾ ಇದೇ ದಿನ ಬಿಡುಗಡೆ ಆಗಿವೆ.

ಎರಡೂ ಸಿನಿಮಾಗಳು ಮೊದಲು ಬಿಡುಗಡೆ ಆದಾಗ ಉತ್ತಮ ಪ್ರದರ್ಶನ ಕಂಡಿದ್ದವು. ಅಪ್ಪು ಅಭಿಮಾನಿಗಳ ಮೆಚ್ಚಿನ ಸಿನಿಮಾಗಳಲ್ಲಿ ‘ಅಂಜನಿಪುತ್ರ’ ಹಾಗೂ ‘ಪವರ್’ ಸಹ ಸೇರಿವೆ. ಐಪಿಎಲ್ ಹಾಗೂ ಲೋಕಸಭೆ ಚುನಾವಣೆಗಳ ಭರಾಟೆಯಲ್ಲಿ ಹೊಸ ಸಿನಿಮಾಗಳು ತೆರೆ ಕಾಣದೆ ಚಿತ್ರಮಂದಿರಗಳು ಬಸವಳಿದಿದ್ದವು. ಹಾಗಾಗಿ ಅವಕ್ಕೆ ಮರು ಜೀವ ನೀಡುವ ದೃಷ್ಟಿಯಿಂದ ಅಪ್ಪು ನಟನೆಯ ಎರಡು ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ:ಪುನೀತ್ ಹುಟ್ಟುಹಬ್ಬಕ್ಕೆ ಅಶ್ವಿನಿ ಪುನೀತ್ ರಾಜ್​ಕುಮಾರ್ ಗೈರು, ಕಾರಣವೇನು?

ಎರಡು ಸಿನಿಮಾಗಳನ್ನು ಒಂದೇ ದಿನ ಬಿಡುಗಡೆ ಮಾಡಬೇಡಿ ಎಂದು ಅಪ್ಪು ಅಭಿಮಾನಿಗಳು ಮನವಿ ಮಾಡಿದ್ದರು. ಆದರೆ ಇಬ್ಬರೂ ನಿರ್ಮಾಪಕರು ಅಭಿಮಾನಿಗಳ ಮನವಿಗೆ ಸ್ಪಂದಿಸದೆ ತಮ್ಮ-ತಮ್ಮ ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ. ಇದು ಕೆಲವು ಅಪ್ಪು ಅಭಿಮಾನಿಗಳ ಅಸಮಾಧಾನಕ್ಕೂ ಕಾರಣವಾಗಿದೆ. ‘ಒಂದೇ ದಿನ ಒಬ್ಬನೇ ನಟನ ಎರಡು ಸಿನಿಮಾಗಳನ್ನು ಮರು ಬಿಡುಗಡೆ ಮಾಡುವುದು ಸರಿಯಲ್ಲ. ಇದು ಅಪ್ಪು ಸರ್ ಗೆ ಮಾಡಿದ ದ್ರೋಹ ಅನ್ನಿಸುತ್ತೆ. ಮರು ಬಿಡುಗಡೆ ಮಾಡಲಿ ಆದರೆ ಈ ರೀತಿ ಮಾಡೋದು ಸರಿಯಲ್ಲ. ಈ ಹಿಂದೆ ಮರು ಬಿಡುಗಡೆ ಆಗಿದ್ದ ‘ಜಾಕಿ’ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಅದಕ್ಕೆ ಈಗ ರೀ ರಿಲೀಸ್ ಮಾಡಿದ್ದಾರೆ. ಯಾವುದಾದರೂ ವಿಶೇಷ ಸಂದರ್ಭದಲ್ಲಿ ಮರು ಬಿಡುಗಡೆ ಮಾಡಬೇಕಿತ್ತು, ಹೀಗೆ ಸುಮ್ಮನೆ ಮರು ಬಿಡುಗಡೆ ಮಾಡುವುದು ಸರಿಯಲ್ಲ’ ಎಂದಿದ್ದಾರೆ ಒಬ್ಬ ಅಪ್ಪು ಅಭಿಮಾನಿ.

ಪುನೀತ್ ರಾಜ್​ಕುಮಾರ್ ಹಾಗೂ ತ್ರಿಷಾ ನಟಿಸಿದ್ದ ‘ಪವರ್’ ಸಿನಿಮಾ ಭೂಮಿಕಾ ಚಿತ್ರಮಂದಿರದಲ್ಲಿ ಮರು ಬಿಡುಗಡೆ ಆಗಿದೆ. ಪುನೀತ್ ರಾಜ್​ಕುಮಾರ್, ರಶ್ಮಿಕಾ ಮಂದಣ್ಣ ನಟಿಸಿದ್ದ ‘ಅಂಜನಿಪುತ್ರ’ ಸಿನಿಮಾ ನರ್ತನ್ ಚಿತ್ರಮಂದಿರದಲ್ಲಿ ಮರು ಬಿಡುಗಡೆ ಆಗಿದೆ. ‘ಪವರ್’ ಸಿನಿಮಾ 2014 ರಲ್ಲಿ ಮೊದಲು ಬಿಡುಗಡೆ ಆಗಿತ್ತು. ಆಗ ಆ ಸಿನಿಮಾ ಉತ್ತಮ ಪ್ರದರ್ಶನ ಕಂಡಿತ್ತು. ಇನ್ನು ‘ಅಂಜನಿಪುತ್ರ’ ಸಿನಿಮಾ 2017 ರಲ್ಲಿ ಬಿಡುಗಡೆ ಆಗಿತ್ತು. ಇದು ರಶ್ಮಿಕಾ ಮಂದಣ್ಣ ನಟನೆಯ ಎರಡನೇ ಸಿನಿಮಾ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ಈ ಕೋತಿ ಚಪಾತಿಯನ್ನೂ ಮಾಡುತ್ತೆ, ಪಾತ್ರೆಯನ್ನೂ ತೊಳೆಯುತ್ತೆ!
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ರಜೆಗೆ ಮನೆಗೆ ಹೊರಟಿದ್ದ ಸೈನಿಕ ಕಾಲು ಜಾರಿ ರೈಲಿನಡಿ ಬಿದ್ದು ಸಾವು
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ಹೊಸ ವರ್ಷದಂದು ಬೆಂಗಳೂರಿನ ಅಧಿಕಾರಿಗಳಿಗೆ ರಜೆ ಇಲ್ಲ: ಡಿಕೆ ಶಿವಕುಮಾರ್
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ದೋಸೆ ಜೊತೆ ಅವರೇ ಕಾಳಿನ ಹಲವಾರು ತಿಂಡಿಗಳು ಮೇಳದಲ್ಲಿ ಲಭ್ಯ
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಹೊಲಗಳಿಗೆ ಕುಟುಂಬವಾಗಿ ತೆರಳಿ ಒಟ್ಟಿಗೆ ಕೂತು ಉಣ್ಣುವುದೇ ಒಂದು ಸಂಭ್ರಮ!
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಬೆಂಗಳೂರು ನಗರದಲ್ಲಿ ಒತ್ತುವರಿ ಮಾಡಿಕೊಳ್ಳುವ ಕಾಯಕ ಎಗ್ಗಿಲ್ಲದೆ ಸಾಗುತ್ತಿದೆ
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಹಿಮಪಾತದಿಂದ ಮನಾಲಿಯಲ್ಲಿ ಟ್ರಾಫಿಕ್ ಜಾಮ್; ಹಿಮದಲ್ಲೇ ಮುಚ್ಚಿಹೋದ ಕಾರುಗಳು
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮುನಿರತ್ನಗೆ ಒಂದು ನೋಟೀಸ್ ನೀಡುವ ಯೋಗ್ಯತೆ ಬಿಜೆಪಿಗಿಲ್ಲ: ಪ್ರಿಯಾಂಕ್ ಖರ್ಗೆ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಮಹಿಳೆಯರ ವಿಷಯದಲ್ಲಿ ಅವಾಚ್ಯ ಪದಬಳಕೆ ಸಲ್ಲದು: ಬಸವರಾಜ ಹೊರಟ್ಟಿ, ಸಭಾಪತಿ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ
ಕೇರಳವನ್ನು ಮಿನಿ ಪಾಕಿಸ್ತಾನ ಎಂದು ಕರೆದ ಸಚಿವ ನಿತೇಶ್​ ರಾಣೆ