‘ಅವಳಿನ್ನೂ ಸಣ್ಣವಳು’; ನನ್ನ ಬಗ್ಗೆ ಮಾತನಾಡಬೇಡಿ ಎಂದ ದೀಪಿಕಾ ದಾಸ್ಗೆ ಪುಷ್ಪಾ ಪ್ರತಿಕ್ರಿಯೆ
ಪುಷ್ಪಾ ಮತ್ತು ದೀಪಿಕಾ ದಾಸ್ ನಡುವಿನ ಜಗಳ ಕನ್ನಡ ಚಿತ್ರರಂಗದಲ್ಲಿ ಸುದ್ದಿಯಾಗಿದೆ. ಪುಷ್ಪಾ ಅವರು ದೀಪಿಕಾ ಅವರ ಬಗ್ಗೆ ನೀಡಿದ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ದೀಪಿಕಾ ಅವರು ಪುಷ್ಪಾ ಅವರ ಹೇಳಿಕೆಗಳಿಗೆ ತಿರುಗೇಟು ನೀಡಿದ್ದಾರೆ. ಈ ವಿವಾದದ ಬಗ್ಗೆ ಪುಷ್ಪಾ ಅವರು ಟಿವಿ9 ಕನ್ನಡ ಜೊತೆ ಮಾತನಾಡಿದ್ದು, ದೀಪಿಕಾ ಇನ್ನೂ ಚಿಕ್ಕವಳು ಎಂದಿದ್ದಾರೆ.

ಈಗ ಯಶ್ ತಾಯಿ ಪುಷ್ಪಾ vs ದೀಪಿಕಾ ದಾಸ್ (Deepika Das) ಎಂಬಂತಾಗಿದೆ. ದೀಪಿಕಾ ದಾಸ್ ಅವರ ಬಗ್ಗೆ ಪುಷ್ಪಾ ಬಳಕೆ ಮಾಡಿದ ಸಾಲುಗಳು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿತ್ತು. ದೀಪಿಕಾ ದಾಸ್ ಕಿವಿಗೂ ಈ ಹೇಳಿಕೆ ಬಿದ್ದಂತಿದೆ. ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದಾರೆ. ಆಗ ದೀಪಿಕಾ ಅವರು ‘ನನ್ನ ಯೋಗ್ಯತೆ ಬಗ್ಗೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ’ ಎಂದು ಹೇಳಿದ್ದರು. ಈ ವಿಚಾರವಾಗಿ ಪುಷ್ಪಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಪುಷ್ಪಾ ಅವರು ದೀಪಿಕಾಗೆ ದೊಡ್ಡಮ್ಮ ಆಗಬೇಕು. ಆದರೆ, ಇವರು ಓಪನ್ ಆಗಿ, ಕುಟುಂಬದ ಕಾರ್ಯಕ್ರಮದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಕಡಿಮೆ. ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಪುಷ್ಪಾ ಅವರು, ದೀಪಿಕಾ ದಾಸ್ ಅವರನ್ನು ದೂರವೇ ಇಟ್ಟಿದ್ದಾಗಿ ಹೇಳಿದ್ದರು. ಇಷ್ಟೇ ಅಲ್ಲ, ದೀಪಿಕಾ ಏನನ್ನೂ ಸಾಧಿಸಿಲ್ಲ ಎಂದು ಕೊಂಕು ನುಡಿದಿದ್ದರು.
ದೀಪಿಕಾ ಪ್ರತಿಕ್ರಿಯೆ
View this post on Instagram
ಈ ವಿಚಾರವಾಗಿ ದೀಪಿಕಾ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದರು. ತಾವು ಹೊಸಬರನ್ನು ಬೆಳೆಸೋದಾಗಿ ಪುಷ್ಪಾ ಹೇಳಿಕೊಂಡಿದ್ದಾರೆ. ಈ ರೀತಿ ಬೆಳೆಸುವವರು ಬೇರೆ ಕಲಾವಿದರಿಗೆ ಗೌರವ ಕೊಡೋದು ಕಲಿತಿರಬೇಕು ಎಂದು ದೀಪಿಕಾ ಹೇಳಿದ್ದರು. ದೀಪಿಕಾಗೆ ನನ್ನ ಕಂಡರೆ ಭಯ ಎಂದು ಪುಷ್ಪಾ ಹೇಳಿಕೊಂಡಿದ್ದರು. ‘ಕೆಲವರಿಗೆ ಬೆಲೆಕೊಟ್ಟ ಮಾತ್ರಕ್ಕೆ ಯಾರಿಗೂ ಯಾರ ಮೇಲೂ ಭಯ ಇದೆ ಅಂತ ಅಲ್ಲ. ಅದು ಅಮ್ಮ ಆದರೂ ಸರಿ, ದೊಡ್ಡಮ್ಮ ಆದರೂ ಸರಿ ಅಥವಾ ಪುಷ್ಪಮ್ಮ ಆದರೂ ಸರಿ’ ಎಂದಿದ್ದರು ದೀಪಿಕಾ. ಇನ್ನು, ‘ನನ್ನ ಬಗ್ಗೆ ಹೀನಾಯವಾಗಿ ಮಾತನಾಡೋ ಯೋಗ್ಯತೆ ಯಾರಿಗೂ ಇಲ್ಲ ಎಂದು ದೀಪಿಕಾ ಎಚ್ಚರಿಸಿದ್ದಾರೆ.
ಇದನ್ನೂ ಓದಿ: ‘ನನ್ನ ಬಗ್ಗೆ ಹೀನಾಯವಾಗಿ ಮಾತನಾಡುವ ಯೋಗ್ಯತೆ ಯಾರಿಗೂ ಇಲ್ಲ’; ಪುಷ್ಪಾಗೆ ಎಚ್ಚರಿಸಿದ ದೀಪಿಕಾ ದಾಸ್
ಈ ಎಲ್ಲಾ ಬೆಳವಣಿಗೆ ಬಗ್ಗೆ ಪುಷ್ಪಾ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ‘ದೀಪಿಕಾ ದಾಸ್ ಇನ್ನೂ ಚಿಕ್ಕವಳು. ಈ ಘಟನೆ ಬಗ್ಗೆ ನಾನು ಈಗಲೇ ಮಾತನಾಡುವುದಿಲ್ಲ’ ಎಂದು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








