‘ಒಂದೇ ಒಂದು ಸಲ’: ದರ್ಶನ್ ವ್ಯಕ್ತಿತ್ವ ಕೊಂಡಾಡಿದ ನಟಿ ರಚನಾ ರೈ
Darshan Thoogudeepa: ನಟ ದರ್ಶನ್ ತೂಗುದೀಪ ಪ್ರಸ್ತುತ ಕೊಲೆ ಆರೋಪಿಯಾಗಿ ಜೈಲಿನಲ್ಲಿದ್ದಾರೆ. ದರ್ಶನ್ ವ್ಯಕ್ತಿತ್ವದ ಹಲವಾರು ರೀತಿಯ ವಿಮರ್ಶೆ, ಟೀಕೆ, ನಿಂದನೆಗಳು ಹೊರಗೆ ಕೇಳಿ ಬರುತ್ತಿವೆ. ಇದೀಗ ದರ್ಶನ್ ಜೊತೆಗೆ ‘ಡೆವಿಲ್’ ಸಿನಿಮಾನಲ್ಲಿ ನಟಿಸಿರುವ ರಚನಾ ರೈ, ದರ್ಶನ್ ವ್ಯಕ್ತಿತ್ವವನ್ನು ಕೊಂಡಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ. ನಟಿ ಹೇಳಿರುವುದೇನು? ಇಲ್ಲಿದೆ ಮಾಹಿತಿ...

ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಕನಿಷ್ಟ ಇನ್ನೂ ಒಂದು ವರ್ಷ ಅವರು ಹೊರಗೆ ಬರುವುದು ಕಷ್ಟಸಾಧ್ಯ ಎಂದೇ ಹೇಳಲಾಗುತ್ತಿದೆ. ಕೊಲೆ ಆರೋಪಿ ದರ್ಶನ್ ಬಗ್ಗೆ ಟೀಕೆ, ವಿಮರ್ಶೆ, ನಿಂದನೆ ಎಲ್ಲವೂ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಲೇ ಇದೆ. ಆದರೆ ಅವರ ಅಭಿಮಾನಿಗಳು, ಕೆಲ ಸ್ನೇಹಿತರು ದರ್ಶನ್ ಗುಣಗಾನ ಮಾಡುತ್ತಾ ಬರುತ್ತಿದ್ದಾರೆ. ಇದೀಗ ದರ್ಶನ್ ಜೊತೆಗೆ ‘ದಿ ಡೆವಿಲ್’ ಸಿನಿಮಾನಲ್ಲಿ ನಟಿಸಿದ ನಟಿ ರಚನಾ ರೈ, ದರ್ಶನ್ ವ್ಯಕ್ತಿತ್ವವನ್ನು ಕೊಂಡಾಡಿದ್ದಾರೆ. ದರ್ಶನ್ ಬಗ್ಗೆ ಉದ್ದನೆಯ ಟ್ವಿಟ್ಟರ್ ಪೋಸ್ಟ್ ಹಂಚಿಕೊಂಡಿದ್ದಾರೆ.
ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿರುವ ರಚನಾ ರೈ, ‘ನಿಮ್ಮಂಥಹಾ ಸೂಪರ್ ಸ್ಟಾರ್ ಜೊತೆಗೆ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಅದೃಷ್ಟ. ಸೆಟ್‌ನಲ್ಲಿ ನಿಮ್ಮ ಏಕಾಗ್ರತೆ, ನಿಮ್ಮ ತಾಳ್ಮೆ ಮತ್ತು ನಿಮ್ಮ ಅಚಲ ಸಮರ್ಪಣೆ, ಪಾತ್ರಗಳಿಗೆ ಜೀವ ತುಂಬುವ ನಿಮ್ಮ ಆ ಪ್ರಕ್ರಿಯೆಗಳನ್ನು ಪ್ರತಿದಿನವೂ ಸೆಟ್‌ನಲ್ಲಿ ನೋಡುವುದು ನನಗೆ ಒಂದು ಅದ್ಭುತ ಪಾಠವಾಯ್ತು. ಕ್ಯಾಮೆರಾ ಮುಂದೆ ಮಾತ್ರವಲ್ಲದೆ ಕ್ಯಾಮೆರಾ ಹಿಂದೆ ನಿಮ್ಮ ಪ್ರೀತಿ, ಆಪ್ತತೆ, ದಯೆ ನಿಮ್ಮ ವ್ಯಕ್ತಿತ್ವದ ದೊಡ್ಡ ಛಾಪು ಇತರರಲ್ಲಿ ಮೂಡಿಸುತ್ತದೆ. ನಾನು ಭೇಟಿ ಆಗಿರುವ ಅದ್ಭುತ ವ್ಯಕ್ತಿಗಳಲ್ಲಿ ನೀವೂ ಒಬ್ಬರು. ಒಬ್ಬ ಅದ್ಭುತ ಸಹನಟ ಆಗಿದ್ದಕ್ಕೆ ನಿಮಗೆ ಧನ್ಯವಾದಗಳು. ಅದಕ್ಕಿಂತಲೂ ಹೆಚ್ಚಾಗಿ ಒಬ್ಬ ಅದ್ಭುತ ವ್ಯಕ್ತಿಯಾಗಿ ಜೊತೆಗಿದ್ದಿದ್ದಕ್ಕೆ ನಿಮಗೆ ಧನ್ಯವಾದಗಳು’ ಎಂದಿದ್ದಾರೆ ನಟಿ.
#Ondeondusala❤️🔥 @dasadarshan Sir 🙏🏻✨️ Working alongside a SuperStar like you has been an absolute blessings 🌼🙏🏻Every single day on set has been a lesson watching you focus, your patience and your unwavering dedication,effortless way of bringing a scene to life🌼Beyond camera… pic.twitter.com/MfQUjQgAzO
— 𝐑𝐚𝐜𝐡𝐚𝐧𝐚 𝐑𝐚𝐢 (@TheRachanaRai) October 12, 2025
ಸಿನಿಮಾ ಚಿತ್ರೀಕರಣವನ್ನು ನೆನಪು ಮಾಡಿಕೊಂಡಿರುವ ನಟಿ ರಚನಾ ರೈ, ‘ಬೀಚ್ನಲ್ಲಿ ಚಿತ್ರೀಕರಣ ಬಹಳ ಕಷ್ಟವಾಗಿತ್ತು. ಉರಿಯುವ ಸೂರ್ಯ, ಸನ್ ಬರ್ನ್, ಗಂಟೆಗೊಮ್ಮೆ ಬದಲಾಗುತ್ತಿದ್ದ ಹವಾಮಾನ, ಬೀಚ್ನಲ್ಲಿ ಲಾಂಗ್ ಶಾಟ್ಗಳು ಎಲ್ಲವೂ ಬಹಳ ಕಷ್ಟವಾಗಿದ್ದವು. ಆದರೆ ಆ ಕಷ್ಟ ಸಹಿಸಿಕೊಂಡಿದ್ದಕ್ಕೆ ಇಷ್ಟು ಅದ್ಭುತವಾದ ಹಾಡು ಮೂಡಿಬಂದಿದೆ. ಶ್ರಮ, ಕಷ್ಟ ಸಹಿಷ್ಣುತೆ ಮತ್ತು ಸಿನಿಮಾ ಮೇಲಿನ ಪ್ರೀತಿಯಿಂದಾಗಿ ಈ ಹಾಡು ಇಷ್ಟು ಅದ್ಭುತವಾಗಿ ಮೂಡಿ ಬಂದಿದೆ’ ಎಂದಿದ್ದಾರೆ ರಚನಾ ರೈ.
‘ನಮ್ಮ ಹಾಡನ್ನು ಇಷ್ಟಪಟ್ಟು ಪ್ರೀತಿ ತೋರುತ್ತಿರುವ ಎಲ್ಲರಿಗೂ ನಮ್ಮ ಹಾಡಿಗೆ ನೀವು ತೋರುತ್ತಿರುವ ಪ್ರೀತಿ ಮತ್ತು ಆದರಕ್ಕೆ ನಾವು ಋಣಿ. ನಮ್ಮ ಹಾಡಿಗೆ ನೀವು ತೋರುತ್ತಿರುವ ಪ್ರೀತಿ ನಮ್ಮನ್ನು ತಲುಪುತ್ತಿದೆ. ಎಲ್ಲರಿಗೂ ಅನನ್ಯ ಧನ್ಯವಾದಗಳು’ ಎಂದು ಟ್ವಿಟ್ಟರ್ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ ನಟಿ ರಚನಾ ರೈ. ದರ್ಶನ್ ಅವರ ಜೊತೆಗಿನ ಕೆಲವು ರೊಮ್ಯಾಂಟಿಕ್ ಚಿತ್ರಗಳನ್ನು ಸಹ ನಟಿ ಹಂಚಿಕೊಂಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




