AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಸ್ಥಾನದಲ್ಲಿ ಪ್ರೇಮಿಗಳ ದಿನ ಆಚರಿಸಿದ ಯಶ್​-ರಾಧಿಕಾ ಪಂಡಿತ್; ಪ್ರೈವೇಟ್​ ಜೆಟ್​ನಲ್ಲಿ ಪ್ರಯಾಣ

ಮದುವೆ ಆಗುವ ಮೂಲಕ ಇವರ ಮಧ್ಯೆ ಹುಟ್ಟಿದ್ದ ಪ್ರೀತಿಗೆ ಹೊಸ ಅರ್ಥ ಕೊಟ್ಟರು. ಯಶ್ ಹಾಗೂ ರಾಧಿಕಾ ಪಂಡಿತ್ ಹಾಯಾಗಿ ಸುತ್ತಾಟ ನಡೆಸುತ್ತಿದ್ದಾರೆ.

ರಾಜಸ್ಥಾನದಲ್ಲಿ ಪ್ರೇಮಿಗಳ ದಿನ ಆಚರಿಸಿದ ಯಶ್​-ರಾಧಿಕಾ ಪಂಡಿತ್; ಪ್ರೈವೇಟ್​ ಜೆಟ್​ನಲ್ಲಿ ಪ್ರಯಾಣ
ರಾಧಿಕಾ-ಯಶ್
ರಾಜೇಶ್ ದುಗ್ಗುಮನೆ
|

Updated on:Feb 15, 2023 | 8:46 AM

Share

ನಟ ಯಶ್ (Yash) ಹಾಗೂ ರಾಧಿಕಾ ಪಂಡಿತ್ ಸಮಯ ಸಿಕ್ಕಾಗಲೆಲ್ಲ ಸುತ್ತಾಟ ನಡೆಸುತ್ತಿದ್ದಾರೆ. ‘ಕೆಜಿಎಫ್ 2’ ರಿಲೀಸ್ ಆದ ಬಳಿಕ ವಿವಿಧ ಕಡೆಗಳಲ್ಲಿ ಈ ಜೋಡಿ ಪ್ರಯಾಣ ಬೆಳೆಸಿದೆ. ಇದರ ಫೋಟೋಗಳನ್ನು ಅವರು ಹಂಚಿಕೊಳ್ಳುತ್ತಿರುತ್ತಾರೆ. ಈಗ ಯಶ್ರಾಧಿಕಾ (Radhika Pandit) ದಂಪತಿ ವ್ಯಾಲೆಂಟೈನ್ಸ್ ಡೇ (ಫೆಬ್ರವರಿ 14) ಆಚರಿಸಿದ್ದಾರೆ. ರಾಜಸ್ಥಾನದ ಜೈಪುರ್​ನಲ್ಲಿ ಈ ವಿಶೇಷ ದಿನವನ್ನು ಆಚರಣೆ ಮಾಡಿದ್ದಾರೆ. ಈ ಫೋಟೋನ ರಾಧಿಕಾ ಪಂಡಿತ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಯಶ್​ ಹಾಗೂ ರಾಧಿಕಾ ಪಂಡಿತ್​ ಸ್ಯಾಂಡಲ್​ವುಡ್​ನಲ್ಲಿ ತುಂಬಾನೇ ಖ್ಯಾತಿ ಪಡೆದಿದ್ದಾರೆ. ಇಬ್ಬರೂ ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿ ನಂತರ ಹಿರಿತೆರೆಗೆ ಕಾಲಿಟ್ಟರು. ಇಬ್ಬರೂ ಒಟ್ಟಾಗಿ ನಟಿಸಿದ ಮೊದಲ ಸಿನಿಮಾ ‘ಮೊಗ್ಗಿನ ಮನಸು’ ಸೂಪರ್ ಹಿಟ್ ಆಯಿತು. ಚಿತ್ರರಂಗಕ್ಕೆ ಕಾಲಿಟ್ಟಾಗಲೇ ಇಬ್ಬರೂ ಪ್ರೀತಿಸುತ್ತಿದ್ದರು. ಮದುವೆ ಆಗುವ ಮೂಲಕ ಇವರ ಮಧ್ಯೆ ಹುಟ್ಟಿದ್ದ ಪ್ರೀತಿಗೆ ಹೊಸ ಅರ್ಥ ಕೊಟ್ಟರು. ಯಶ್ ಹಾಗೂ ರಾಧಿಕಾ ಪಂಡಿತ್ ಹಾಯಾಗಿ ಸುತ್ತಾಟ ನಡೆಸುತ್ತಿದ್ದಾರೆ.

ಪ್ರತಿ ಬಾರಿಯೂ ಯಶ್​-ರಾಧಿಕಾ ವ್ಯಾಲೆಂಟೈನ್ಸ್​ ಡೇ ಆಚರಿಸುತ್ತಾರೆ. ಅಂತೆಯೇ ಈ ಬಾರಿ ದಂಪತಿ ರಾಜಸ್ಥಾನದ ಜೈಪುರಕ್ಕೆ ತೆರಳಿದ್ದಾರೆ. ಅಲ್ಲಿ ತೆಗೆದ ಫೋಟೋಗಳನ್ನು ರಾಧಿಕಾ ಹಂಚಿಕೊಂಡಿದ್ದಾರೆ. ಈ ಫೋಟೋಗೆ, ‘ಪ್ರೀತಿ ದೊಡ್ಡ ಪ್ರತಿಧ್ವನಿಯನ್ನು ಹೊಂದಿದೆ’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.

ಯಶ್ ಹಾಗೂ ರಾಧಿಕಾ ಪಂಡಿತ್ ಜೈಪುರ್​ನಲ್ಲಿ ಇಳಿದ ಸಂದರ್ಭದಲ್ಲಿ ತೆಗೆದ ಫೋಟೋ ಕೂಡ ವೈರಲ್ ಆಗಿದೆ. ಪ್ರೈವೇಟ್ ಜೆಟ್​ನಲ್ಲಿ ಈ ದಂಪತಿ ಪ್ರಯಾಣ ಬೆಳೆಸಿದ್ದಾರೆ.

ಯಶ್ ಮುಂದಿನ ಸಿನಿಮಾ ಯಾವುದು?

ಯಶ್ ಮುಂದಿನ ಸಿನಿಮಾ ಯಾವುದು ಎನ್ನುವುದು ಸದ್ಯ ಯಕ್ಷ ಪ್ರಶ್ನೆಯಾಗಿದೆ. ಅವರು ಯಾವ ನಿರ್ದೇಶಕನ ಜತೆ ಸಿನಿಮಾ ಮಾಡುತ್ತಾರೆ ಅನ್ನೋ ಬಗ್ಗೆ ಸದ್ಯಕ್ಕಂತೂ ಸುಳಿವು ಸಿಕ್ಕಿಲ್ಲ. ಈ ವಿಚಾರದಲ್ಲಿ ನಿತ್ಯ ಒಂದಿಲ್ಲೊಂದು ವದಂತಿಗಳು ಹುಟ್ಟಿಕೊಳ್ಳುತ್ತಲೇ ಇದೆ. ಈ ಮೊದಲು ನರ್ತನ್ ಜತೆ ಯಶ್ ಸಿನಿಮಾ ಮಾಡಲಿದ್ದಾರೆ ಎನ್ನಲಾಗಿತ್ತು. ಈ ವಿಚಾರ ಅಧಿಕೃತ ಆಗಿಲ್ಲ. ಅವರ ಸಿನಿಮಾ ಘೋಷಣೆ ಆಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 7:12 am, Wed, 15 February 23