ಅಭಿಮಾನಿಯ ಅತಿರೇಕ: ಮುಟ್ಟಲು ಬಂದವನಿಗೆ ಏಟು ಕೊಟ್ಟ ರಾಗಿಣಿ ದ್ವಿವೇದಿ

ಖ್ಯಾತ ನಟಿ ರಾಗಿಣಿ ದ್ವಿವೇದಿ ಅವರೊಂದಿಗೆ ಅಭಿಮಾನಿಯೊಬ್ಬ ಇತ್ತೀಚೆಗೆ ಮಿತಿ ಮೀರಿ ನಡೆದುಕೊಂಡಿದ್ದಾನೆ. ಆತನ ಕೆನ್ನೆಗೆ ರಾಗಿಣಿ ಬಾರಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಸಂದರ್ಭದ ವಿಡಿಯೋ ವೈರಲ್ ಆಗುತ್ತಿದೆ. ಕಾರ್ಯಕ್ರಮವೊಂದರಲ್ಲಿ ರಾಗಿಣಿ ಅವರ ಜೊತೆ ಅತಿರೇಕದಿಂದ ವರ್ತಿಸಿದವನನ್ನು ಬೌನ್ಸರ್​ಗಳು ಕೂಡಲೇ ಹೊರಗೆ ಕಳಿಸಿದರು.

ಅಭಿಮಾನಿಯ ಅತಿರೇಕ: ಮುಟ್ಟಲು ಬಂದವನಿಗೆ ಏಟು ಕೊಟ್ಟ ರಾಗಿಣಿ ದ್ವಿವೇದಿ
Ragini Dwivedi

Updated on: Mar 10, 2025 | 9:21 PM

ನಟಿ ರಾಗಿಣಿ ದ್ವಿವೇದಿ (Ragini Dwivedi) ಅವರು ತಾಳ್ಮೆ ಕಳೆದುಕೊಂಡಿದ್ದಾರೆ. ಅದಕ್ಕೆ ಬಲವಾದ ಕಾರಣ ಕೂಡ ಇದೆ. ಸಾಮಾನ್ಯವಾಗಿ ರಾಗಿಣಿ ದ್ವಿವೇದಿ ಅವರು ತುಂಬಾ ಕೂಲ್ ಆಗಿ ನಡೆದುಕೊಳ್ಳುತ್ತಾರೆ. ಅಭಿಮಾನಿಗಳ ಜೊತೆ ಪ್ರೀತಿಯಿಂದಲೇ ಮಾತನಾಡುತ್ತಾರೆ. ಆದರೆ ಕೆಲವೊಮ್ಮೆ ಅಭಿಮಾನಿಗಳು ಅತಿರೇಕವಾಗಿ ವರ್ತಿನಿಸಿದರೆ ಎಂಥವರಿಗೂ ಕೋಪ ಬರುತ್ತದೆ. ರಾಗಿಣಿ ದ್ವಿವೇದಿ ವಿಚಾರದಲ್ಲೂ ಹಾಗೆಯೇ ಆಗಿದೆ. ತಮ್ಮನ್ನು ಬಲವಂತವಾಗಿ ಮುಟ್ಟಲು ಬಂದ ವ್ಯಕ್ತಿಯೊಬ್ಬನಿಗೆ ರಾಗಿಣಿ ದ್ವಿವೇದಿ ಬಾರಿಸಿದ್ದಾರೆ. ನಟಿ ಮಾಡಿದ್ದು ಸರಿಯಾಗಿಯೇ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.

ಇತ್ತೀಚೆಗೆ ರಾಗಿಣಿ ದ್ವಿವೇದಿ ಅವರು ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಿದ್ದರು. ಅಲ್ಲಿ ಅವರನ್ನು ನೋಡಲು ಜನಜಂಗುಳಿ ಉಂಟಾಗಿತ್ತು. ರಾಗಿಣಿ ಜೊತೆ ಫೋಟೋ ತೆಗೆದುಕೊಳ್ಳಬೇಕು ಎಂದು ಫ್ಯಾನ್​ಸ್ ಮುಗಿಬಿದ್ದರು. ಈ ವೇಳೆ ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ಅತಿರೇಕದ ವರ್ತನೆ ತೋರಿಸಿದ್ದಾನೆ. ರಾಗಿಣಿಯ ಕೈ ಹಿಡಿದು ಎಳೆದಿದ್ದಾನೆ. ಇದರಿಂದ ರಾಗಿಣಿಗೆ ವಿಪರೀತ ಕೋಪ ಬಂದಿದೆ. ಕೂಡಲೇ ಆ ವ್ಯಕ್ತಿಗೆ ರಾಗಿಣಿ ಪೆಟ್ಟು ಕೊಟ್ಟಿದ್ದಾರೆ.

ಇದನ್ನೂ ಓದಿ
‘ಸ್ಯಾಂಡಲ್​​ವುಡ್ ಸಣ್ಣ ಇಂಡಸ್ಟ್ರಿ ಆಗಿತ್ತು, ಈಗ ಹೇಗೆ ಬೆಳೆದಿದೆ ನೋಡಿ’
ಸಿನಿಮಾ ರಂಗದವರಿಗೆ ಡಿಕೆ ಶಿವಕುಮಾರ್ ಎಚ್ಚರಿಕೆ ಉಮಾಪತಿ ಹೇಳಿದ್ದೇನು?
4 ಚಿತ್ರಮಂದಿರ, 23 ಸಿನಿಮಾ ಸ್ಕ್ರೀನ್​, ಡಿಸಿಎಂ ಡಿಕೆಶಿಯ ಸಿನಿಮಾ ನಂಟು
‘ನೆಟ್ಟು, ಬೋಲ್ಟ್ ಟೈಟ್ ಮಾಡುವೆ’: ನಟರಿಗೆ ನೇರ ಎಚ್ಚರಿಕೆ ಕೊಟ್ಟ ಡಿಕೆಶಿ

ವೈರಲ್ ವಿಡಿಯೋ:

ನಟಿಯರು ತೆರೆಮೇಲೆ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಾರೆ. ರಾಗಿಣಿ ದ್ವಿವೇದಿ ಕೂಡ ಸಿನಿಮಾಗಳಲ್ಲಿ ಹಾಟ್ ಗೆಟಪ್​ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ರಂಜಿಸಿದ್ದಾರೆ. ಹಾಗಂತ ಅದು ಅವರ ರಿಯಲ್​ ಲೈಫ್ ವ್ಯಕ್ತಿತ್ವ ಅಲ್ಲ. ಪರ್ಸನಲ್ ಬದುಕಿನಲ್ಲಿ ಅವರಿಗೂ ಬೌಂಡರಿ ಇರುತ್ತದೆ. ಅದಕ್ಕೆ ಅಭಿಮಾನಿಗಳು ಬೆಲೆ ಕೊಡಬೇಕು. ತಮ್ಮ ಕೈ ಹಿಡಿಯಲು ಬಂದ ವ್ಯಕ್ತಿಯ ಕೆನ್ನೆಗೆ ರಾಗಿಣಿ ಅವರು ಬಾರಿಸಿದ್ದಾರೆ.

ಇದನ್ನೂ ಓದಿ: ಮೋಹನ್​ಲಾಲ್​ ಜೊತೆ ಊಟ ಸವಿದ ರಾಗಿಣಿ ದ್ವಿವೇದಿ; ಕಾದಿದೆ ಸರ್ಪ್ರೈಸ್

ಹಲವು ವರ್ಷಗಳಿಂದ ರಾಗಿಣಿ ಅವರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಸ್ಟಾರ್ ಹೀರೋಗಳ ಜೊತೆ ನಟಿಸಿ ಹೆಸರು ಮಾಡಿದ್ದಾರೆ. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿ ಅವರು ಖ್ಯಾತಿ ಗಳಿಸಿದ್ದಾರೆ. ಮಾಲಿವುಡ್ ಸ್ಟಾರ್​ ನಟ ಮೋಹನ್​ಲಾಲ್​ ಜೊತೆ ಕೂಡ ರಾಗಿಣಿ ದ್ವಿವೇದಿ ಸಿನಿಮಾ ಮಾಡಿದ್ದಾರೆ. ಹೊಸ ಹೊಸ ಅವಕಾಶಗಳು ಅವರಿಗೆ ಸಿಗುತ್ತಿವೆ. ವಿವಿಧ ಕಾರ್ಯಕ್ರಮಗಳಿಗೆ ಅತಿಥಿಯಾಗಿಯೂ ಅವರು ತೆರಳುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:20 pm, Mon, 10 March 25