ರಾಜ್ ಬಿ. ಶೆಟ್ಟಿ ಸಿನಿಮಾ ಮೇಕಿಂಗ್​ನ ಮೊದಲೇ ಹೊಗಳಿದ್ದ ಪ್ರಶಾಂತ್ ನೀಲ್

Prashanth Neel: ರಾಜ್ ಬಿ. ಶೆಟ್ಟಿ ಅವರ 'ಸು ಫ್ರಮ್ ಸೋ' ಚಿತ್ರದಿಂದ ಭರ್ಜರಿ ಯಶಸ್ಸು ಕಂಡಿದ್ದಾರೆ. 'ಒಂದು ಮೊಟ್ಟೆಯ ಕಥೆ'ಯಿಂದ ಅವರ ಸಿನಿಮಾ ಪ್ರಯಾಣ ಆರಂಭ ಆಯಿತು. ‘ಸು ಫ್ರಮ್ ಸೋ' ಚಿತ್ರದ ಬಾಕ್ಸ್ ಆಫೀಸ್ ಸಾಧನೆ ನಿಜಕ್ಕೂ ದೊಡ್ಡದು.

ರಾಜ್ ಬಿ. ಶೆಟ್ಟಿ ಸಿನಿಮಾ ಮೇಕಿಂಗ್​ನ ಮೊದಲೇ ಹೊಗಳಿದ್ದ ಪ್ರಶಾಂತ್ ನೀಲ್
ಪ್ರಶಾಂತ್-ರಾಜ್
Updated By: ರಾಜೇಶ್ ದುಗ್ಗುಮನೆ

Updated on: Jul 29, 2025 | 10:39 AM

ರಾಜ್ ಬಿ. ಶೆಟ್ಟಿ ಅವರು ‘ಸು ಫ್ರಮ್ ಸೋ’ ಚಿತ್ರದ (Su From So) ಮೂಲಕ ಗೆಲುವು ಕಂಡಿದ್ದು ಗೊತ್ತೇ ಇದೆ. ಅವರನ್ನು ಎಲ್ಲರೂ ಹೊಗಳುವ ಕೆಲಸವನ್ನು ಮಾಡುತ್ತಿದ್ದಾರೆ. ರಾಜ್ ಬಿ. ಶೆಟ್ಟಿ ಅವರು ನಿರ್ಮಾಪಕನಾಗಿ ಮತ್ತು ನಟನಾಗಿ ಈ ಚಿತ್ರದಿಂದ ಗೆಲುವು ಕಂಡಿದ್ದಾರೆ ಎಂದರೂ ತಪ್ಪಾಗಲಾರದು. ಈ ಚಿತ್ರವು ವಿಮರ್ಶೆಯಲ್ಲಿ ಒಳ್ಳೆಯ ರೇಟಿಂಗ್ ಮತ್ತು ಒಳ್ಳೆಯ ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡುತ್ತಿರುವುದನ್ನು ನೀವು ಕಾಣಬಹುದು. ರಾಜ್ ಬಿ. ಶೆಟ್ಟಿ ಅವರ ಕಲೆಯನ್ನು ಪ್ರಶಾಂತ್ ನೀಲ್ ಈ ಮೊದಲೇ ಗುರುತಿಸಿದ್ದರು. ಅವರು ರಾಜ್ ಬಿ. ಶೆಟ್ಟಿಯನ್ನು ಹೊಗಳಿದ್ದರು.

ಪ್ರಶಾಂತ್ ನೀಲ್ ಅವರು ‘ಕೆಜಿಎಫ್’ ರೀತಿಯ ಸಿನಿಮಾಗಳನ್ನು ನೀಡಿದವರು. ಅವರು ಈಗ ಜೂನಿಯರ್ ಎನ್​ಟಿಆರ್ ಜೊತೆ ಚಿತ್ರ ಮಾಡುತ್ತಿದ್ದು ಇದಕ್ಕೆ ‘ಡ್ರ್ಯಾಗನ್’ ಎಂದು ಟೈಟಲ್ ಇಡಲಾಗಿದೆಯಂತೆ. ಈಗ ‘ಸು ಫ್ರಮ್ ಸೋ’ ಸಿನಿಮಾ ಹಿಟ್ ಆದ ಬಳಿಕ ಅವರ ಒಂದು ಹಳೆಯ ವಿಡಿಯೋ ವೈರಲ್ ಆಗಿದೆ. ಪ್ರಶಾಂತ್ ನೀಲ್ ಆಗಲೇ ರಾಜ್ ಅವರ ಕಲೆಯನ್ನು ಗುರುತಿಸಿ ಆಗಿತ್ತು.

ಇದನ್ನೂ ಓದಿ
ಶ್ರಾವಣದ ಉಪವಾಸ ಮಾಡಿ ಬಳಿಕ ಕುರಿ ಮರಿ ತಿಂದ ನಟಿ; ವ್ಯಕ್ತವಾಯಿತು ಟೀಕೆ
ಜೀ ಕನ್ನಡದಲ್ಲಿ ‘ನಾವು ನಮ್ಮವರು’ ಶೋ; ತಾರಾ, ಶರಣ್, ಅಮೂಲ್ಯ ಜಡ್ಜ್
ಸೋಮವಾರವೂ ಭಾನುವಾರದಷ್ಟೇ ಗಳಿಸಿದ ‘ಸು ಫ್ರಮ್ ಸೋ’
‘ಕನಿಷ್ಠ ಸಭ್ಯತೆ ಇರಲಿ’; ದರ್ಶನ್ ಅಭಿಮಾನಿಗಳ ಬಳಿ ಕೋರಿದ್ರಾ ರಕ್ಷಿತಾ

‘ಒಂದು ಮೊಟ್ಟೆಯ ಕಥೆ’ ಹೆಸರಿನ ಹಾಸ್ಯ ಚಿತ್ರದ ಮೂಲಕ ರಾಜ್ ಬಿ ಶೆಟ್ಟಿ ಅವರು ನಿರ್ದೇಶನ ಹಾಗೂ ನಟನೆಗೆ ಇಳಿದರು. ತಮ್ಮ ತಲೆಯಲ್ಲಿ ಕೂದಲು ಇಲ್ಲ ಎಂಬ ವಿಚಾರ ಇಟ್ಟುಕೊಂಡೇ ಅವರು ಸಿನಿಮಾ ಮಾಡಿದರು ಎನ್ನಬಹುದು. ಆ ಬಳಿಕ ಹಲವು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದರು.

‘ಇಡೀ ದೇಶವೇ ತಿರುಗಿ ನೋಡಬೇಕಾದ ನಿರ್ದೇಶಕರು ಯಾರು’ ಎಂದು ಕೇಳಿದಾಗ ‘ರಾಜ್ ಬಿ ಶೆಟ್ಟಿ’ ಹೆಸರನ್ನು ಪ್ರಶಾಂತ್ ನೀಲ್ ಹೇಳಿದರು. ಪುಟ್ಟಣ್ಣ ಕಣಗಾಲ್ ಅವರ ಹೆಸರನ್ನು ಏಕೆ ತೆಗೆದುಕೊಂಡಿಲ್ಲ ಎಂಬುದಕ್ಕೆ ಕಾರಣಗಳನ್ನು ನೀಡಿದರು. ‘ನಾನು ಪುಟ್ಟಣ್ಣ ಕಣಗಾಲ್ ಕಾಲದಲ್ಲಿ ಇರಲಿಲ್ಲ. ಹೀಗಾಗಿ, ಆ ಕಾಲದವರ ಬಗ್ಗೆ ಮಾತನಾಡಲ್ಲ’ ಎಂದಿದ್ದರು ಪ್ರಶಾಂತ್ ನೀಲ್.

ಇದನ್ನೂ ಓದಿ: ‘ಸಲಾರ್ 2’ ಬಳಿಕ ತೆಲುಗಿನ ಮತ್ತೊಬ್ಬ ಸ್ಟಾರ್ ಜೊತೆ ಪ್ರಶಾಂತ್ ನೀಲ್ ಸಿನಿಮಾ

ರಾಜ್ ಬಿ. ಶೆಟ್ಟಿ ಸಿನಿಮಾಗಳನ್ನು ಬಹುವಾಗಿ ಇಷ್ಟಪಟ್ಟಿದ್ದಾರೆ ಪ್ರಶಾಂತ್ ನೀಲ್. ಅವರು ಕೂಡ ‘ಸು ಫ್ರಮ್ ಸೋ’ ಸಿನಿಮಾ ನೋಡಿ ವಿಮರ್ಶೆ ತಿಳಿಸಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.  ಎಲ್ಲ ವರ್ಗದವರಿಗೂ ಈ ಸಿನಿಮಾ ಇಷ್ಟ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.