ಅಂದು ಹಾವು-ಮುಂಗುಸಿ, ಈಗ ಸ್ವೀಟ್ ಬ್ರದರ್-ಸಿಸ್ಟರ್; ಶ್ರುತಿ-ಶರಣ್ ಬಾಂಧವ್ಯದ ಕಥೆ

ಸ್ಯಾಂಡಲ್‌ವುಡ್‌ನ ಪ್ರಸಿದ್ಧ ಸಹೋದರ-ಸಹೋದರಿ ಶರಣ್ ಮತ್ತು ಶ್ರುತಿ ರಕ್ಷಾ ಬಂಧನ ಹಬ್ಬದ ಸಂದರ್ಭದಲ್ಲಿ ಗಮನ ಸೆಳೆದಿದ್ದಾರೆ. ಸಣ್ಣ ವಯಸ್ಸಿನಲ್ಲಿ ಹಾವು-ಮುಂಗುಸಿಯಂತೆ ಕಿತ್ತಾಡುತ್ತಿದ್ದ ಇವರ ನಡುವೆ ಬೆಳೆಯುತ್ತಾ ಬಾಂಧವ್ಯ ಗಟ್ಟಿಯಾಗಿದೆ. ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಇಬ್ಬರೂ ಹಂಚಿಕೊಂಡ ಬಾಲ್ಯದ ಮೋಜಿನ ಘಟನೆಗಳು ಮತ್ತು ಸಿನಿ ಜರ್ನಿ ನೆನಪುಗಳು ಇಲ್ಲಿವೆ.

ಅಂದು ಹಾವು-ಮುಂಗುಸಿ, ಈಗ ಸ್ವೀಟ್ ಬ್ರದರ್-ಸಿಸ್ಟರ್; ಶ್ರುತಿ-ಶರಣ್ ಬಾಂಧವ್ಯದ ಕಥೆ
ಶ್ರುತಿ-ಶರಣ್

Updated on: Aug 28, 2026 | 11:03 AM

ಮುಖ್ಯಾಂಶಗಳು

  • ಹಾವು-ಮುಂಗುಸಿಯಂತೆ ಕಿತ್ತಾಡುತ್ತಿದ್ದ ಶರಣ್-ಶ್ರುತಿ
  • ಬಾಲ್ಯದ ತುಂಟಾಟದ ಕಥೆ
  • ಗಾಯದ ಗುರುತಿಗೆ ತಂಗಿ ಶ್ರುತಿಯೇ ಕಾರಣವಂತೆ

ಇಂದು (ಆಗಸ್ಟ್ 28) ಎಲ್ಲೆಡೆ ರಕ್ಷಾ ಬಂಧನವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡಲಾಗುತ್ತಿದೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ರಕ್ಷಾ ಬಂಧನ ಆಚರಿಸಲಾಗುತ್ತಿದೆ. ಪ್ರೀತಿಯ ಸಹೋದರನಿಗೆ ರಾಖಿ ಕಟ್ಟುವ ಮೂಲಕ ಹಬ್ಬವನ್ನು ಆಚರಿಸಲಾಗುತ್ತಿದೆ. ಸ್ಯಾಂಡಲ್​ವುಡ್​ನ ಸ್ವೀಟ್ ಬ್ರದರ್-ಸಿಸ್ಟರ್​​ ಸಾಲಿನಲ್ಲಿ ಶ್ರುತಿ ಹಾಗೂ ಶರಣ್ ಬರುತ್ತಾರೆ. ಇಬ್ಬರೂ ಚಿತ್ರರಂಗದಲ್ಲಿ ಆ್ಯಕ್ಟಿವ್ ಆಗಿದ್ದಾರೆ. ಅವರು ಅಂದು ಹಾವು-ಮುಂಗುಸಿ ರೀತಿ ಕಿತ್ತಾಡುತ್ತಿದ್ದರು. ಬೆಳೆದು ದೊಡ್ಡವರಾದಂತೆ ಇಬ್ಬರ ಮಧ್ಯೆ ಅಣ್ಣ-ತಂಗಿ ಬಾಂಧವ್ಯ ಗಟ್ಟಿ ಆಗಿ, ಕಿತ್ತಾಟ ಹೋಗಿ, ಪ್ರೀತಿ ಬೆಳೆಯಿತು.

‘ವೀಕೆಂಡ್ ವಿತ್ ರಮೇಶ್ ಶೋ’ಗೆ ಶ್ರುತಿ ಆಗಮಿಸಿದ್ದರು. ಆಗ ಶರಣ್ ಅವರು, ತಂಗಿಯ ಬಗ್ಗೆ ಮಾತನಾಡಿದ್ದರು. ‘ಶ್ರುತಿ ಹಠಮಾರಿ, ಟಾಮ್ ಬಾಯ್. ಅವಳ ಕ್ಯಾರೆಕ್ಟರ್ ಇರೋದೇ ಹಾಗೆ. ಅಪ್ಪನ ಮುದ್ದಿನ ಮಗಳು ನೀನು. ಅದರಿಂದಲೇ ನೀನು ಬಚಾವ್ ಆದೆ’ ಎಂದು ಶರಣ್ ಹೇಳಿದ್ದರು. ಸಣ್ಣ ವಯಸ್ಸಿನಲ್ಲಿ ಇದ್ದಾಗ ಇಬ್ಬರೂ ಕಿತ್ತಾಡಿಕೊಳ್ಳುತ್ತಿದ್ದರಂತೆ. ಬೆಳೆದು ದೊಡ್ಡವರಾಗುತ್ತಿದ್ದಂತೆ ಕಿತ್ತಾಟ ಕಡಿಮೆ ಆಗಿ ಪ್ರೀತಿ ಹೆಚ್ಚಿತು.

‘ಅಥಣಿ ಕ್ಯಾಂಪ್​ನಲ್ಲಿ ದೊಡ್ಡ ತರಲೆ ಮಾಡಿದ್ದೆವು. ಇದನ್ನು ಚಿಕ್ಕಪ್ಪ ನೋಡಿದರು. ನಮ್ಮನ್ನು ಬೆನ್ನತ್ತಿಕೊಂಡು ಬಂದರು. ನಾನು ದೊಡ್ಡವನು. ಓಡಿ ಹೋದೆ. ಆ ಬಳಿಕ ಚಿಕ್ಕಪ್ಪ ಶ್ರುತಿ ಕಾಲಿಗೆ ದಾರ ಕಟ್ಟಿ, ಕಂಬಕ್ಕೆ ಕಟ್ಟಿಹಾಕಿದ್ದರು. ಒಂದು ದಿನ ನಾನು ಕಣ್ಮರೆ ಆಗಿದ್ದೆ. ಮನೆಗೆ ಮರಳಿದರೂ ಕೋಪ ಕಡಿಮೆ ಆಗಿರಲಿಲ್ಲ’ ಎಂದು ಶರಣ್ ವಿವರಿಸಿದ್ದರು.

ಶರಣ್ ಅವರ ಸಿನಿ ಜರ್ನಿ ಕಷ್ಟದ ಬಗ್ಗೆ ಮಾತನಾಡಿದ್ದ ಶ್ರುತಿ, ‘ನಾನು ಚಿತ್ರರಂಗದಲ್ಲಿ ಬೇಗ ಹಿಟ್ ಆದೆ. ಆದರೆ, ಶರಣ್ ತುಂಬಾ ಸ್ಟ್ರಗಲ್ ಮಾಡಿದ. ನಿಜಕ್ಕೂ ನನಗಿಂತ, ಅವನು ಹೆಚ್ಚು ಸಾಧನೆ ಮಾಡಿದ್ದಾನೆ. ಅವನು ಅನೇಕರಿಗೆ ಸ್ಫೂರ್ತಿ. ಅವಾಗ ಅವನು ಸ್ವೀಟ್ ಇರಲಿಲ್ಲ, ಈಗ ತುಂಬಾ ಸ್ವೀಟ್ ಆಗಿದ್ದಾನೆ’ ಎಂದು ಶ್ರುತಿ ಅವರು ಹೇಳಿದ್ದರು.

ಇದನ್ನೂ ಓದಿ: ‘ಸಾಲಗಾರರ ಸಹಕಾರ ಸಂಘ’ ಚಿತ್ರದ ಹಾಡಿಗೆ ಧ್ವನಿ ನೀಡಿದ ಅಧ್ಯಕ್ಷ ಶರಣ್

ಶರಣ್ ಹಣೆಮೇಲೆ ಒಂದು ಮಾರ್ಕ್ ಇದೆ. ಈ ಮಾರ್ಕ್ ಶ್ರುತಿ ಕಡೆಯಿಂದ ಆಗಿದ್ದಂತೆ. ‘ಅಣ್ಣನ ಬ್ಯಾಗ್​ ನಾನೇ ಹಾಕಿಕೊಳ್ಳಬೇಕಿತ್ತು. ಹೊಡೆಯುತ್ತಲೇ ಶಾಲೆಗೆ ಕರೆದುಕೊಂಡು ಹೋಗುತ್ತಿದ್ದ. ಒಂದು ದಿನ ಮನೆ ಬಳಿ ಅತ್ತು ಬಿಟ್ಟೆ. ಆಗ ಸಗಣಿ ತೆಗೆದು ನನ್ನ ಬಾಯಿಗೆ ಹಾಕಿದ್ದರು’ ಎಂದು ಹಳೆ ಘಟನೆ ನೆನೆದಿದ್ದಾರೆ ಶ್ರುತಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us