ಮಧ್ಯರಾತ್ರಿ 12 ಗಂಟೆಗೆ ಹೊಸ ನ್ಯೂಸ್ ಕೊಡ್ತಾರೆ ರಕ್ಷಿತ್ ಶೆಟ್ಟಿ! ಅಭಿಮಾನಿಗಳ ನಿರೀಕ್ಷೆ ಏನು?
ನಟನೆ ಮಾತ್ರವಲ್ಲದೆ, ನಿರ್ದೇಶನ ಮತ್ತು ಸಿನಿಮಾ ನಿರ್ಮಾಣದಲ್ಲೂ ರಕ್ಷಿತ್ ಶೆಟ್ಟಿ ತೊಡಗಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡಲಿರುವ ಹೊಸ ಸಿನಿಮಾದ ಬಗ್ಗೆ ಅಪ್ಡೇಟ್ ಸಿಗಬಹುದಾ?
ನಟ ರಕ್ಷಿತ್ ಶೆಟ್ಟಿ ಸದ್ಯ ‘777 ಚಾರ್ಲಿ’ ಸಿನಿಮಾದ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಅದರ ಜೊತೆಗೆ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ಕೂಡ ನಿರೀಕ್ಷೆ ಹುಟ್ಟು ಹಾಕಿದೆ. ಅದರ ಜೊತೆಗೆ ಮತ್ತೊಂದು ಹೊಸ ಸುದ್ದಿ ನೀಡಲು ರಕ್ಷಿತ್ ಶೆಟ್ಟಿ ಸಜ್ಜಾಗಿದ್ದಾರೆ. ಅವರು ಕೊಡಲಿರುವ ಸುದ್ದಿ ಏನು ಅಂತ ತಿಳಿದುಕೊಳ್ಳಲು ಎಲ್ಲ ಅಭಿಮಾನಿಗಳು ಕಾಯುತ್ತಿದ್ದಾರೆ.
‘ಈ ಶಿವರಾತ್ರಿ ಸಂದರ್ಭದಲ್ಲಿ ನಾವು ನಮ್ಮ ದಿಗಂತವನ್ನು ವಿಸ್ತರಿಸುತ್ತಿದ್ದೇವೆ. ಏನೋ ವಿಶೇಷವಾದದ್ದು ಕಾಯುತ್ತಿದೆ. ನಿರೀಕ್ಷಿಸಿ’ ಎಂದು ರಕ್ಷಿತ್ ಶೆಟ್ಟಿ ಟ್ವೀಟ್ ಮಾಡಿದ್ದಾರೆ. ಅದು ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ. ರಕ್ಷಿತ್ ಶೆಟ್ಟಿ ಒಡೆತನದ ‘ಪರಂವಾ ಸ್ಟುಡಿಯೋಸ್’ ಮೂಲಕ ರಾತ್ರಿ 12 ಗಂಟೆಗೆ ಹೊಸ ಸುದ್ದಿ ಹೊರಬೀಳಲಿದೆ.
ನಟನೆ ಮಾತ್ರವಲ್ಲದೆ, ನಿರ್ದೇಶನ ಮತ್ತು ಸಿನಿಮಾ ನಿರ್ಮಾಣದಲ್ಲೂ ರಕ್ಷಿತ್ ಶೆಟ್ಟಿ ತೊಡಗಿಕೊಂಡಿದ್ದಾರೆ. ಅವರು ನಿರ್ದೇಶನ ಮಾಡಲಿರುವ ಹೊಸ ಸಿನಿಮಾದ ಬಗ್ಗೆ ಅಪ್ಡೇಟ್ ಸಿಗಬಹುದಾ? ರಕ್ಷಿತ್ ಅವರ ಹೊಸ ಚಿತ್ರ ಘೋಷಣೆ ಆಗಬಹುದಾ ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳ ಮನದಲ್ಲಿ ಕೊರೆಯುತ್ತಿದೆ. ರಕ್ಷಿತ್ ಮಾಡಿರುವ ಪೋಸ್ಟ್ಗೆ ಕಾಮೆಂಟ್ ಮಾಡುತ್ತಿರುವ ನೆಟ್ಟಿಗರು ಹಲವು ಬಗೆಯಲ್ಲಿ ಊಹೆ ಮಾಡುತ್ತಿದ್ದಾರೆ. ರಕ್ಷಿತ್ ಅವರು ವೆಬ್ ಸಿರೀಸ್ ಶುರು ಮಾಡಬಹುದು, ‘777 ಚಾರ್ಲಿ’ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಬಹುದು ಎಂದೆಲ್ಲ ಜನರು ಕಾಮೆಂಟ್ ಮಾಡುತ್ತಿದ್ದಾರೆ.
‘ಕಿರಿಕ್ ಪಾರ್ಟಿ 2’ ಸಿನಿಮಾ ಅನೌನ್ಸ್ ಮಾಡಿ ಎಂದು ಕೆಲವರು ಬೇಡಿಕೆ ಇಡುತ್ತಿದ್ದಾರೆ. ಆ ಚಿತ್ರದ ಬಗ್ಗೆ ಸುದ್ದಿ ಕೇಳಲು ಅಭಿಮಾನಿಗಳಿಗೆ ಕಾತರ ಇದೆ. ’777 ಚಾರ್ಲಿ’ ಚಿತ್ರವನ್ನು ತೆಲುಗಿಗೂ ಡಬ್ ಮಾಡಿ ಎಂದು ಟಾಲಿವುಡ್ ಸಿನಿಪ್ರಿಯರಿಂದ ಕೋರಿಕೆ ಬರುತ್ತಿದೆ. ಅಂತಿಮವಾಗಿ ರಕ್ಷಿತ್ ಕೊಡಲಿರುವ ಬ್ರೇಕಿಂಗ್ ನ್ಯೂಸ್ ಏನೆಂಬುದು ರಾತ್ರಿ 12 ಗಂಟೆಗೆ ಗೊತ್ತಾಗಬೇಕಿದೆ.
Expanding our horizon this Shivaratri. Something special is in the queue. Stay tuned ✨ pic.twitter.com/uqSPOkesG4
— Rakshit Shetty (@rakshitshetty) March 11, 2021
ಇನ್ನು, ರಕ್ಷಿತ್ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾ ತಂಡದಿಂದಲೂ ಶಿವರಾತ್ರಿ ಹಬ್ಬದ ಪ್ರಯುಕ್ತ ಫಸ್ಟ್ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ತುಂಬ ಸಿಂಪಲ್ ಆದ ಗೆಟಪ್ನಲ್ಲಿ ರಕ್ಷಿತ್ ಕಾಣಿಸಿಕೊಂಡಿದ್ದಾರೆ. ಕೆಲವೇ ದಿನಗಳ ಹಿಂದೆ ಈ ಚಿತ್ರದ ನಾಯಕಿ ರುಕ್ಮಿಣಿ ವಸಂತ್ ಅವರ ಲುಕ್ ಬಹಿರಂಗಗೊಳಿಸಲಾಗಿತ್ತು. ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರಕ್ಕೆ ಹೇಮಂತ್ ಎಂ. ರಾವ್ ನಿರ್ದೇಶನ ಮಾಡುತ್ತಿದ್ದಾರೆ. ‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಸಿನಿಮಾ ನಂತರ ರಕ್ಷಿತ್ ಮತ್ತು ಹೇಮಂತ್ ಒಂದಾಗಿರುವುದು ವಿಶೇಷ.
ಇದನ್ನೂ ಓದಿ: 8 ವರ್ಷಗಳ ಹಿಂದೆ ಶುರುವಾದ ಲವ್ಸ್ಟೋರಿ ಬಗ್ಗೆ ರಕ್ಷಿತ್ ಶೆಟ್ಟಿ ಮನದಾಳದ ಮಾತು!
ಇನ್ನೂ ಉತ್ತಂಗಕ್ಕೇರು: ರಶ್ಮಿಕಾಗೆ ಮನಃಪೂರ್ವಕವಾಗಿ ಹಾರೈಸಿದ ರಕ್ಷಿತ್ ಶೆಟ್ಟಿ