ಜೊತೆಯಾಗಿ ಫೋಟೋಶೂಟ್ ಮಾಡಿಸಿದ ರಮ್ಯಾ-ವಿನಯ್ ರಾಜ್ಕುಮಾರ್; ಏನಿದು ಹೊಸ ಅಪ್ಡೇಟ್
ವಿನಯ್ ರಾಜಕುಮಾರ್ ಮತ್ತು ರಮ್ಯಾ ಅವರ ಇತ್ತೀಚಿನ ಫೋಟೋಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಫ್ಯಾನ್ಸ್ ಹೊಸ ಚಿತ್ರದ ನಿರೀಕ್ಷೆಯಲ್ಲಿದ್ದಾರೆ. ರಮ್ಯಾ ಅವರ ದೊಡ್ಡ ಪರದೆಗೆ ಮರಳುವಿಕೆಯ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಈ ಫೋಟೋಶೂಟ್ ಅವರ ಅಭಿಮಾನಿಗಳಿಗೆ ಸಂತೋಷ ತಂದಿದೆ.

ನಟಿ ರಮ್ಯಾ ಅವರು ಹಿರಿತೆರೆ ತೊರೆದು ಅದೆಷ್ಟೋ ಸಮಯ ಕಳೆದಿದೆ. ಅವರು ಮತ್ತೆ ದೊಡ್ಡ ಪರದೆಯಮೇಲೆ ಯಾವಾಗ ಕಾಣಿಸಿಕೊಳ್ಳುತ್ತಾರೆ ಎನ್ನುವ ಪ್ರಶ್ನೆಗೆ ಸ್ಪಷ್ಟ ಉತ್ತರ ಇಲ್ಲ. ಹೀಗಿರುವಾಗಲೇ ವಿನಯ್ ರಾಜ್ಕುಮಾರ್ ಹಾಗೂ ರಮ್ಯಾ (Ramya) ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋಶೂಟ್ ನೋಡಿ ಫ್ಯಾನ್ಸ್ ಕೂಡ ಖುಷಿಪಟ್ಟಿದ್ದಾರೆ. ಹಾಗಾದರೆ ಇವರು ಹೊಸ ಸಿನಿಮಾದಲ್ಲಿ ಒಟ್ಟಾಗಿ ನಟಿಸುತ್ತಿದ್ದಾರಾ? ಖಂಡಿತವಾಗಿಯೂ ಇಲ್ಲ. ಇವರು ಮ್ಯಾಗಜಿನ್ ಒಂದರ ಫೋಟೋಶೂಟ್ಗಾಗಿ ಒಟ್ಟಿಗೆ ಬಂದಿದ್ದಾರೆ.
ರಮ್ಯಾ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಆ್ಯಕ್ಟೀವ ಆಗಿದ್ದಾರೆ. ಇತ್ತೀಚೆಗೆ ಅವರಿಗೆ ನಟನೆಯ ಬಗ್ಗೆ ಆಸಕ್ತಿ ಹೋದಂತೆ ಇದೆ. ಅವರು ನಾಯಕಿ ಆಗಿ ಪರದೆ ಮೇಲೆ ಕಾಣಿಸಿಕೊಳ್ಳದೇ ಹಲವು ವರ್ಷಗಳೇ ಕಳೆದಿವೆ. ಅವರು ದೊಡ್ಡಪರದೆಗೆ ಬರಲಿ ಎಂದು ಫ್ಯಾನ್ಸ್ ಆಶಿಸುತ್ತಿರುವಾಗಲೇ ಈ ಫೋಟೋಶೂಟ್ ವಿಡಿಯೋ ವೈರಲ್ ಆಗಿದೆ. ಅನೇಕರು ಇದು ಲುಕ್ ಟೆಸ್ಟ್ ಇರಬಹುದು ಎಂದು ಭಾವಿಸಿದ್ದರು. ಆದರೆ, ಅದರ ಅಸಲಿಯತ್ತು ಬೇರೆಯೇ ಇದೆ.
ರಮ್ಯಾ ಹಾಗೂ ವಿನಯ್ ರಾಜ್ಕುಮಾರ್ ‘ಸ್ವಾಸ ಲೈಫ್’ ಹೆಸರಿನ ಮ್ಯಾಗಜಿನ್ಗಾಗಿ ಈ ಫೋಟೋಶೂಟ್ ಮಾಡಿಸಿದ್ದಾರೆ. ವಿನಯ್ ಅವರು ಮಸ್ತ್ ಆಗಿ ಕಾಣಿಸಿಕೊಂಡಿದ್ದಾರೆ. ರಮ್ಯಾ ಅವರು ಈಗಲೂ ಸಾಕಷ್ಟು ಸುಂದರವಾಗಿ ಕಾಣಿಸುತ್ತಿದ್ದಾರೆ. ಅವರ ಸೌಂದರ್ಯ ಯಾವಾಗಲೂ ಕಡಿಮೆ ಆಗುವಂಥದ್ದಲ್ಲ ಎಂದು ಅನೇಕರು ಅಭಿಪ್ರಾಯ ಪಟ್ಟಿದ್ದಾರೆ.
View this post on Instagram
ರಮ್ಯಾ ಹಾಗೂ ವಿನಯ್ಗೆ ಮೊದಲಿನಿಂದಲೂ ಪರಿಚಯ ಇದೆ. ರಮ್ಯಾ ಅವರು ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ರಾಜ್ಕುಮಾರ್ ಕುಟುಂಬದ ಬ್ಯಾನರ್ ಮೂಲಕ. ಇನ್ನು, ಪುನೀತ್ ಜೊತೆ ಅವರು ಕೆಲವು ಸಿನಿಮಾ ಮಾಡಿದ್ದಾರೆ. ಹೀಗಾಗಿ, ಸೆಟ್ನಲ್ಲಿ ಇರುವಾಗ ವಿನಯ್ ಹಾಗೂ ರಮ್ಯಾ ಅನೇಕ ಬಾರಿ ಭೇಟಿ ಮಾಡಿದ್ದು ಇದೆ. ಇವರು ತೆರೆಮೇಲೆ ಒಟ್ಟಾಗಿ ಕಾಣಿಸಕೊಳ್ಳಲಿ ಎಂದು ಫ್ಯಾನ್ಸ್ ಬಯಸುತ್ತಿದ್ದಾರೆ.
ಇದನ್ನೂ ಓದಿ: ಒಂದೇ ಬೇರಿನ ಕವಲು ನಾವು, ಶ್ರೇಷ್ಠತೆಗೆ ಬಡಿದಾಡುವುದು ಬೇಡ: ರಮ್ಯಾ
ರಮ್ಯಾ ದೊಡ್ಡ ಪರದೆಗೆ ಯಾವಾಗ ಕಂಬ್ಯಾಕ್ ಮಾಡುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅವರು ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರದಲ್ಲಿ ರಮ್ಯಾ ನಟಿಸಬೇಕಿತ್ತು. ಆದರೆ, ಅವರು ಚಿತ್ರದಿಂದ ಹೊರ ಬಂದರು. ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅವರು ನಟಿಸಿದರು. ನಂತರ ಭಿನ್ನಾಭಿಪ್ರಾಯ ಮೂಡಿ ಚಿತ್ರತಂಡದ ಮೇಲೆ ಕೇಸ್ ಹಾಕಿದರು. ಇನ್ನು, ಉತ್ತರಕಾಂಡ’ ಚಿತ್ರದಿಂದಲೂ ಅವರು ಹೊರ ನಡೆದಿದ್ದಾರೆ. ಇನ್ನು, ವಿನಯ್ ದುನಿಯಾ ವಿಜಯ್ ನಿರ್ದೇಶನ ಮಾಡುತ್ತಿರುವ ‘ಸಿಟಿಲೈಟ್ಸ್’ ಚಿತ್ರದ ಭಾಗವಾಗಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








