‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ 14.8 ಕೆಜಿ ಚಿನ್ನ

ಕನ್ನಡ ಚಿತ್ರರಂಗದ ನಟಿ ರನ್ಯಾ ರಾವ್ ದುಬೈನಿಂದ 14.8 ಕೆಜಿ ಚಿನ್ನವನ್ನು ಅಕ್ರಮವಾಗಿ ತಂದು ಸಾಗಿಸುತ್ತಿದ್ದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದಾರೆ. ಇದರ ಬೆಲೆ 12 ಕೋಟಿ ರೂಪಾಯಿಗಳಷ್ಟು ಆಗಿದೆ. ಐಪಿಎಸ್ ಅಧಿಕಾರಿಯ ಮಗಳಾದ ರನ್ಯಾ ತಂದೆಯ ಹೆಸರನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಆರೋಪವಿದೆ. ಈ ಪ್ರಕರಣ ದೊಡ್ಡ ಸಂಚಲನವನ್ನು ಸೃಷ್ಟಿಸಿದೆ.

‘ಮಾಣಿಕ್ಯ’ ಚಿತ್ರದ ನಟಿ ರನ್ಯಾ ಬಳಿ ಸಿಕ್ಕಿದ್ದು, ಒಂದಲ್ಲ ಎರಡಲ್ಲ ಬರೋಬ್ಬರಿ 14.8 ಕೆಜಿ ಚಿನ್ನ
ರನ್ಯಾ
Edited By:

Updated on: Mar 04, 2025 | 2:20 PM

ಕನ್ನಡದ ‘ಮಾಣಿಕ್ಯ’ ಚಿತ್ರದಲ್ಲಿ ನಟಿಸಿದ್ದ ರನ್ಯಾ ರಾವ್ ಅವರು ಅಕ್ರಮ ಚಿನ್ನ ಸಾಗಾಟ ಆರೋಪದಲ್ಲಿ ಸಿಕ್ಕಿ ಬಿದ್ದಿದ್ದಾರೆ. ಈ ವಿಚಾರ ಸೆನ್ಸೇನ್ ಸೃಷ್ಟಿ ಮಾಡಿತ್ತು. ಈಗ ಈ ವಿಚಾರ ಮತ್ತಷ್ಟು ಸೆನ್ಸೇಷನ್ ಸೃಷ್ಟಿಸುವ ರೀತಿಯಲ್ಲಿ ಇದೆ. ದುಬೈನಿಂದ ಬಂದಿದ್ದ ಅವರ ಬಳಿ ಇದ್ದಿದ್ದು ಒಂದಲ್ಲ, ಎರಡಲ್ಲ ಬರೋಬ್ಬರಿ 14.8 ಕೆಜಿ ಚಿನ್ನ! ಈ ವಿಚಾರ ಕೇಳಿ ಅನೇಕರು ಹೌಹಾರಿದ್ದಾರೆ.

ನಟಿ ರನ್ಯಾ ರಾವ್ ಆಗಾಗ ದುಬೈಗೆ ಹೋಗುತ್ತಿದ್ದರು. ಬಿಸ್ನೆಸ್ ಕೆಲಸದ ನಿಮಿತ್ತ ದುಬೈಗೆ ಹೋಗುತ್ತಿದ್ದಾಗಿ ಅವರು ಹೇಳುತ್ತಿದ್ದರು. ಅದೇ ರೀತಿ ಮಾರ್ಚ್ 3ರ ರಾತ್ರಿ ಕೂಡ ಅವರು ದುಬೈನಿಂದ ಬಂದಿದ್ದಾರೆ. ಈ ವೇಳೆ ಅವರನ್ನು ವಶಕ್ಕೆ ಪಡೆದಾಗ ಉಡುಪಿನ ಒಳಗೆ ಬರೋಬ್ಬರಿ 14.8 ಕೆಜಿ ಚಿನ್ನ ಸಿಕ್ಕಿದೆ.

12 ಕೋಟಿ ರೂಪಾಯಿ ಮೌಲ್ಯ

ಅನೇಕ ಬಾರಿ ದುಬೈಗೆ ಹೋಗಿ ಬರುತ್ತಿದ್ದರು ರನ್ಯಾ. ಈ ವಿಚಾರದಿಂದ ಕಸ್ಟಮ್​ನ ಡಿಆರ್​ಐ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ಹೀಗಾಗಿ ದೆಹಲಿಯ DRI ಅಧಿಕಾರಿಗಳು ನಟಿಯ ಹಿಂದೆ ಬಿದ್ದಿದ್ದರು. ಅವರು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರುವ ಎರಡು ಗಂಟೆ ಮೊದಲೇ ಆಗಮಿಸಿದ್ದರು. ಈ ರೀತಿ ವಶಕ್ಕೆ ಪಡೆದ ಚಿನ್ನದ ಮೌಲ್ಯ ಸುಮಾರು 12 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ರನ್ಯಾ ರಾವ್ ಅನೇಕ ಬಾರಿ ಈ ರೀತಿ ಚಿನ್ನಸಾಗಾಣಿಗೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಇದನ್ನೂ ಓದಿ
ಡಿಕೆಶಿ ಬೆನ್ನಲ್ಲೇ ರಶ್ಮಿಕಾ ಹಾಗೂ ಸಿಸಿಎಲ್ ಆಟಗಾರರ ವಿರುದ್ಧ ಶಾಸಕ ಗರಂ
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
‘ಪಾರ್ಟಿ ಅನ್ನೋದು ವೈಯಕ್ತಿಕ’; ಕಿಚ್ಚ ಸುದೀಪ್ ಅವರ ಆಲೋಚೆನೆಯೇ ಬೇರೆ
ಏಕಕಾಲಕ್ಕೆ ಟಿವಿ, ಒಟಿಟಿಗೆ ಮ್ಯಾಕ್ಸ್ ಎಂಟ್ರಿ; ದಿನಾಂಕ, ಸಮಯದ ಮಾಹಿತಿ..

ಇದನ್ನೂ ಓದಿ: ದುಬೈನಿಂದ ಅಕ್ರಮವಾಗಿ ಚಿನ್ನ ತಂದ ಕನ್ನಡದ ನಟಿ; ವಿಮಾನ ನಿಲ್ದಾಣದಲ್ಲೇ ಹೀರೋಯಿನ್ ವಶಕ್ಕೆ

ಐಪಿಎಸ್ ಅಧಿಕಾರಿ ಮಗಳು!

ಐಪಿಎಸ್ ಅಧಿಕಾರಿ, ಡಿಜಿ ರಾಮಚಂದ್ರ ರಾವ್ ಅವರಿಗೆ ರನ್ಯಾ ಮಲ ಮಗಳು. ರಾಮಚಂದ್ರ ರಾವ್ 2ನೇ ಮದುವೆ ಆಗಿದ್ದಾರೆ. ಆ ಮಹಿಳೆಗೂ ಇದು ಎರಡನೇ ಮದುವೆ. ರಾಮಚಂದ್ರ ಪತ್ನಿಯ ಮೊದಲ ಪತಿಯಿಂದ ಹುಟ್ಟಿದವರೇ ರನ್ಯಾ. ಮೊಟ್ಟ ಮೊದಲನೇ ಬಾರಿಗೆ IPS ಅಧಿಕಾರಿಯ ಮಗಳ ಬಂಧನ ಆದಂತೆ ಆಗಿದೆ.

ಚೆಕಿಂಗ್ ಇರುತ್ತಿರಲಿಲ್ಲ..

ನಟಿ ರನ್ಯಾ ರಾವ್ ನಾನು DG ಮಗಳು ಎಂದು ಹೇಳುತ್ತಿದ್ದರು. ಈ ಕಾರಣಕ್ಕೆ ಅವರನ್ನು ಅಧಿಕಾರಿಗಳು ಚೆಕ್ ಮಾಡುತ್ತಿರಲಿಲ್ಲ. ಇದರ ಲಾಭವನ್ನು ಅವರು ಸಂಪೂರ್ಣವಾಗಿ ಪಡೆದುಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.