AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಡಿಕೆಶಿ ಬೆನ್ನಲ್ಲೇ ರಶ್ಮಿಕಾ ಹಾಗೂ ಸಿಸಿಎಲ್ ಆಟಗಾರರ ವಿರುದ್ಧ ಕಾಂಗ್ರೆಸ್​ ಶಾಸಕ ಗರಂ

ಇತ್ತೀಚೆಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಟರಿಗೆ ಎಚ್ಚರಿಕೆ ನೀಡಿದ್ದರು. ಕಲಾವಿದರಿಗೆ ಅವಮಾನ ಮಾಡಿದ ಆರೋಪ ಅವರ ಮೇಲೆ ಕೇಳಿ ಬಂದಿದೆ. ಈ ಮಧ್ಯೆ ರಶ್ಮಿಕಾ ಮಂದಣ್ಣರ ಬಗ್ಗೆ ರವಿಕುಮಾರ್ ಗಣಿಗ ಮಾತನಾಡಿದ್ದಾರೆ. ಅವರಿಗೆ ಆಹ್ವಾನ ನೀಡಿದರೂ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

ಡಿಕೆಶಿ ಬೆನ್ನಲ್ಲೇ ರಶ್ಮಿಕಾ ಹಾಗೂ ಸಿಸಿಎಲ್ ಆಟಗಾರರ ವಿರುದ್ಧ ಕಾಂಗ್ರೆಸ್​ ಶಾಸಕ ಗರಂ
ರಶ್ಮಿಕಾ-ಸಿಸಿಎಲ್​
ರಾಜೇಶ್ ದುಗ್ಗುಮನೆ
|

Updated on:Mar 03, 2025 | 12:56 PM

Share

ಇತ್ತೀಚೆಗೆ ನಡೆದ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಉದ್ಘಾಟನೆ ಸಂದರ್ಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಿಟ್ಟಾಗಿದ್ದರು. ಉದ್ಘಾಟನೆ ವೇಳೆ ಸೆಲೆಬ್ರಿಟಿಗಳು ಹೆಚ್ಚಿನ ಸಂಖ್ಯೆಯಲ್ಲಿ ನೆರೆಯದೇ ಇದ್ದಿದ್ದನ್ನು ನೋಡಿದ ಡಿಕೆ ಶಿವಕುಮಾರ್, ನಟರ ವಿರುದ್ಧ ಸಿಟ್ಟಾದರು. ‘ಯಾರು ಯಾರಿಗೆ ಎಲ್ಲೆಲ್ಲಿ ನಟ್ಟು ಬೋಲ್ಟು ಟೈಟ್ ಮಾಡಬೇಕು ಎಂಬುದು ನನಗೂ ಗೊತ್ತಿದೆ’ ಎಂದಿದ್ದರು. ಈ ಹೇಳಿಕೆ ಬಗ್ಗೆ ಚರ್ಚೆ ನಡೆಯುತ್ತಿದೆ. ಹೀಗಿರುವಾಗಲೇ ಡಿಕೆಶಿ ಹೇಳಿಕೆಯನ್ನು ಕಾಂಗ್ರೆಸ್ ಶಾಸಕ ರವಿ ಗಣಿಗ ಬೆಂಬಲಿಸಿದ್ದಾರೆ. ಜೊತೆಗೆ ಅವರು ಕೆಲ ಕಲಾವಿದ ಬಗ್ಗೆ ಸಿಟ್ಟಾಗಿದ್ದಾರೆ.

ಕಳೆದ ವರ್ಷ ಸಿನಿಮೋತ್ಸವ ಉದ್ಘಾಟನೆಗೆ ರಶ್ಮಿಕಾಗೆ ಆಹ್ವಾನ ನೀಡಲಾಗಿತ್ತಂತೆ. ಆದರೆ, ಅವರು ಬಂದಿಲ್ಲ. ಈ ಬಗ್ಗೆ ಮಾತನಾಡಿರೋ ರವಿ, ‘ರಶ್ಮಿಕಾ ಚಿತ್ರರಂಗಕ್ಕೆ ಕಾಲಿಟ್ಟಿದ್ದು ಕನ್ನಡದಿಂದ. ಕಳೆದ ಬಾರಿ ಚಲನಚಿತ್ರೋತ್ಸವಕ್ಕೆ ಕರೆದೆವು. ಆದರೆ ನಾನು ಇರೋದು ಹೈದರಾಬಾದ್​​ನಲ್ಲಿ. ಕರ್ನಾಟಕ ಎಲ್ಲಿದೆ ಗೊತ್ತಿಲ್ಲ. ನನಗೆ ಟೈಮ್ ಇರಲ್ಲ ಬರಲ್ಲ ಅಂದ್ರು’ ಎಂದು ರಶ್ಮಿಕಾ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ.

‘ನಮ್ಮ ಶಾಸಕ ಮಿತ್ರರು ರಶ್ಮಿಕಾ ಮನೆಗೆ ಹೋಗಿ ಹತ್ತಾರು ಬರೆದು ಕರೆದರು. ಆದಾಗ್ಯೂ ಇಷ್ಟೊಂದು ಉದ್ಧಟತನ ತೋರಿಸುತ್ತಿದ್ದಾರೆ. ಕನ್ನಡದಿಂದ ಬೆಳೆದು ಕನ್ನಡದ ಬಗ್ಗೆ ಉದ್ಧಟನ ತೋರುತ್ತಾ ಇದ್ದಾರೆ. ಇವರಿಗೆ ಬುದ್ಧಿ ಕಲಿಸಬೇಕೋ ಬೇಡವೋ? ನಾನು ಸಿಎಂ ಹಾಗೂ ಡಿಸಿಎಂಗೆ ಪತ್ರ ಬರೆಯುತ್ತೇನೆ. ಸಿನಿಮಾದವರಿಗೆ ನೀಡಿರೋ ಸಬ್ಸಿಡಿಯನ್ನು ಪರಾಮರ್ಶಿಸಬೇಕು ಎಂದು ಪತ್ರಬರೆಯುತ್ತೇನೆ’ ಎಂದಿದ್ದಾರೆ ರವಿ ಗಣಿಗ ಸಿಟ್ಟಾಗಿದ್ದಾರೆ.

ಇದನ್ನೂ ಓದಿ
Image
ರಶ್ಮಿಕಾ ಮಂದಣ್ಣ ಹಿಂಗೆಲ್ಲ ಮಾಡಿದರೂ ಕ್ಯೂಟ್ ಅಂತಾರೆ ಅಭಿಮಾನಿಗಳು
Image
ಅಬ್ಬರಿಸುತ್ತ ಬಂದ ಸಿಕಂದರ್ ಟೀಸರ್; ಖುಷಿಯಾದ ಸಲ್ಮಾನ್ ಖಾನ್ ಫ್ಯಾನ್ಸ್
Image
ಮುಂಜಾನೆ ನಾಲ್ಕು ಗಂಟೆಗೆ ರಶ್ಮಿಕಾ ತಿನ್ನೋ ಸ್ನ್ಯಾಕ್ಸ್ ಏನು? ಫೋಟೋ ವೈರಲ್
Image
ರಶ್ಮಿಕಾ ಮಂದಣ್ಣಗೆ ಗುಲಾಬಿ ಹೂವು ನೀಡಿದ ಪ್ರೇಮಿ: ಆ ವ್ಯಕ್ತಿ ಮೇಲೆ ಅನುಮಾನ

‘ನರಸಿಂಹಲು ಆಂಧ್ರದಿಂದ ಬಂದ ವ್ಯಕ್ತಿ. ಆಂಧ್ರ ನಿರ್ಮಾಪಕರು ರಿಯಲ್​ ಎಸ್ಟೇಟ್ ಮಾಡಿ, ಧಿಮಾಕು ದೌಲತ್ತು ಮಾಡುತ್ತಾರೆ. ಪರಭಾಷೆಯಿಂದ ಬಂದು ಇಲ್ಲಿ ಸಿನಿಮಾ ಮಾಡಿ, ದುಡ್ಡು ದೋಚಿದವರಿಗೆ ಬುದ್ಧಿ ಕಲಿಸಬೇಕಾ ಬೇಡ್ವಾ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ: ರೋಚಕತೆ ಪಡೆದುಕೊಂಡ ಸಿಸಿಎಲ್ ಫೈನಲ್; ಗೆದ್ದವರು ಯಾರು?

ಇತ್ತೀಚೆಗೆ ಸಿಸಿಎಲ್​ ನಡೆದಿದೆ. ಸಿನಿಮೋತ್ಸವ ನಡೆಯುವ ಸಂದರ್ಭದಲ್ಲೇ ಮ್ಯಾಚ್ ಇತ್ತು. ಹೀಗಾಗಿ, ಅನೇಕ ಸೆಲೆಬ್ರಿಟಿಗಳು ಬಂದಿಲ್ಲ. ಈ ಬಗ್ಗೆಯೂ ಮಾತನಾಡಿರೋ ರವಿ, ‘ಸಿಸಿಎಲ್ ಮ್ಯಾಚ್ ಆಡಿಸೋಕೆ ಬಿಟ್ಟಿದ್ರು. ಏನು ಮಾಡ್ತಾ ಇದ್ರು ಚಲನಚಿತ್ರ ವಾಣಿಜ್ಯ ಮಂಡಳಿಯವರು? ಸಿಸಿಎಲ್ ನಿಲ್ಲಿಸಿ ಬೆಂಗಳೂರಿಗೆ ಬನ್ನಿ ಎಂದು ಹೇಳೋಕೆ ಅವರಿಗೆ ಆಗಿಲ್ಲವಾ? ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ ನರಸಿಂಹಲು ಅವರಿಗೆ ಇದು ಲಾಸ್ಟ್ ವಾರ್ನಿಂಗ್’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 12:03 pm, Mon, 3 March 25