ಏಕಕಾಲಕ್ಕೆ ಟಿವಿ, ಒಟಿಟಿಗೆ ಮ್ಯಾಕ್ಸ್ ಸಿನಿಮಾ ಎಂಟ್ರಿ; ದಿನಾಂಕ, ಸಮಯದ ಮಾಹಿತಿ ಇಲ್ಲಿದೆ..
2024ರ ಅಂತ್ಯದಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆದ ‘ಮ್ಯಾಕ್ಸ್’ ಸಿನಿಮಾ ಯಾವಾಗ ಒಟಿಟಿಯಲ್ಲಿ ಬರಲಿದೆ ಎಂದು ಸುದೀಪ್ ಫ್ಯಾನ್ಸ್ ಕೇಳುತ್ತಿದ್ದರು. ಆ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ವಿಶೇಷ ಏನೆಂದರೆ, ಟಿವಿ ಮತ್ತು ಒಟಿಟಿಯಲ್ಲಿ ಏಕಕಕಾಲಕ್ಕೆ ಈ ಸಿನಿಮಾ ಪ್ರಸಾರ ಆಗಲಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಜನಮೆಚ್ಚಿದ ‘ಮ್ಯಾಕ್ಸ್’ ಸಿನಿಮಾದಿಂದ ಕಿಚ್ಚ ಸುದೀಪ್ ಅವರಿಗೆ ಗೆಲುವು ಸಿಕ್ಕಿದೆ. ಥಿಯೇಟರ್ನಲ್ಲಿ ಅಬ್ಬರಿಸಿದ ಈ ಸಿನಿಮಾವನ್ನು ಟಿವಿಯಲ್ಲಿ ಮತ್ತು ಒಟಿಟಿಯಲ್ಲಿ ನೋಡಲು ಫ್ಯಾನ್ಸ್ ಕಾಯುತ್ತಿದ್ದರು. ಆ ಸಮಯ ಈಗ ಬಂದಿದೆ. ಹೌದು, ಚಿತ್ರಮಂದಿರದಲ್ಲಿ ಯಶಸ್ವಿಯಾಗಿ 50 ದಿನಗಳನ್ನು ಪೂರೈಸಿದ ಬಳಿಕ ಈ ಸಿನಿಮಾ ಒಟಿಟಿ ಹಾಗೂ ಟಿವಿಗೆ ಎಂಟ್ರಿ ನೀಡುತ್ತಿದೆ. ಹೌದು, ಫೆಬ್ರವರಿ 15ರಂದು ‘ಜೀ ಕನ್ನಡ’ ಮತ್ತು ‘ಜೀ5’ ಒಟಿಟಿಯಲ್ಲಿ ‘ಮ್ಯಾಕ್ಸ್’ ಸಿನಿಮಾ ಪ್ರಸಾರ ಆಗಲಿದೆ. ಸೂಪರ್ ಹಿಟ್ ಸಿನಿಮಾವನ್ನು ಕಿರುತೆರೆಯಲ್ಲಿ ವೀಕ್ಷಿಸಲು ಫ್ಯಾನ್ಸ್ ಎಗ್ಸೈಟ್ ಆಗಿದ್ದಾರೆ.
ಕಳೆದ ವರ್ಷ ಡಿಸೆಂಬರ್ 25ರಂದು ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಪೊಲೀಸ್ ಪಾತ್ರ ಮಾಡಿದ್ದಾರೆ. ಕಾಲಿವುಡ್ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಅವರು ನಿರ್ದೇಶನ ಮಾಡಿದ್ದಾರೆ. ಕನ್ನಡ ಮತ್ತು ತೆಲುಗಿನಲ್ಲೂ ಈ ಸಿನಿಮಾ ಬಿಡುಗಡೆ ಆಗಿತ್ತು. ಈಗ ಏಕಕಾಲಕ್ಕೆ ಒಟಿಟಿ ಹಾಗೂ ಟಿವಿಯಲ್ಲಿ ‘ಮ್ಯಾಕ್ಸ್’ ಪ್ರಸಾರ ಆಗಲಿದೆ ಎಂಬುದನ್ನು ತಿಳಿದು ಅಭಿಮಾನಿಗಳಿಗೆ ಖುಷಿ ಆಗಿದೆ.
ಥಿಯೇಟರ್ನಲ್ಲಿ ರಿಲೀಸ್ ಆಗುವುದಕ್ಕೂ ಮುನ್ನವೇ ‘ಮ್ಯಾಕ್ಸ್’ ಸಿನಿಮಾದ ಕಿರುತೆರೆ ಪ್ರಸಾರ ಹಕ್ಕುಗಳನ್ನು ‘ಜೀ ಕನ್ನಡ’ ವಾಹಿನಿ ಪಡೆದುಕೊಂಡಿತ್ತು. ಫೆಬ್ರವರಿ 15ರಂದು ರಾತ್ರಿ 7.30ಕ್ಕೆ ಟಿವಿಯಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ. ‘ಜೀ 5’ ಒಟಿಟಿಯಲ್ಲಿ ಕೂಡ ಅದೇ ಸಮಯದಿಂದ ಸಿನಿಮಾ ಸ್ಟ್ರೀಮಿಂಗ್ ಆರಂಭ ಆಗಲಿದೆ. ಒಟಿಟಿ ಹಾಗೂ ಟಿವಿಯಲ್ಲಿ ನೋಡಲಿರುವ ಪ್ರೇಕ್ಷಕರು ಯಾವ ರೀತಿ ಪ್ರತಿಕ್ರಿಯಿಸುತ್ತಾರೆ ಎಂಬದನ್ನು ತಿಳಿಯುವ ಸಮಯ ಬಂದಿದೆ.
ಇದನ್ನೂ ಓದಿ: ಮ್ಯಾಕ್ಸ್ ಸುಂದರಿ ಸುಕೃತಾ ವಾಗ್ಳೆ ಸೂಪರ್ ಫೋಟೋಶೂಟ್
ಕಾಲಿವುಡ್ನ ನಿರ್ಮಾಪಕ ಕಲೈಪುಲಿ ಎಸ್. ಧಾನು ಅವರು ‘ಮ್ಯಾಕ್ಸ್’ ಸಿನಿಮಾವನ್ನು ನಿರ್ಮಿಸಿದ್ದಾರೆ. ಕಿಚ್ಚ ಸುದೀಪ್ ಅವರ ಜೊತೆ ಉಗ್ರಂ ಮಂಜು, ವರಲಕ್ಷ್ಮೀ ಶರತ್ ಕುಮಾರ್, ಸಂಯುಕ್ತಾ ಹೊರನಾಡು, ಸುಕೃತಾ ವಾಗ್ಳೆ, ವಿಜಯ್ ಚೆಂಡೂರು, ಸುಧಾ ಬೆಳವಾಡಿ, ಶರತ್ ಲೋಹಿತಾಶ್ವ, ಸುನೀಲ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ. ಬಾಕ್ಸ್ ಆಫೀಸ್ನಲ್ಲಿ ಸದ್ದು ಮಾಡಿದ ಈ ಸಿನಿಮಾ ಈಗ ಒಟಿಟಿಯಲ್ಲೂ ಅಬ್ಬರಿಸಲಿದೆ. ಒಂದೇ ರಾತ್ರಿಯಲ್ಲಿ ನಡೆಯುವ ಥ್ರಿಲ್ಲರ್ ಕಹಾನಿ ‘ಮ್ಯಾಕ್ಸ್’ ಸಿನಿಮಾದಲ್ಲಿ ಇದೆ. ಆ್ಯಕ್ಷನ್ ದೃಶ್ಯಗಳಲ್ಲಿ ಸುದೀಪ್ ಮಿಂಚಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.