ನಟಿ ರಶ್ಮಿಕಾ ಮಂದಣ್ಣ ಕಾಲೇಜ್​ ದಿನಗಳ ಫೋಟೋ ವೈರಲ್​; ಹೇಗಿದ್ರು ನೋಡಿ ನ್ಯಾಷನಲ್​ ಕ್ರಶ್

ಸಾಕಷ್ಟು ಹೀರೋಯಿನ್​ಗಳು ಕಾಲೇಜು ದಿನಗಳಲ್ಲಿ ನೋಡಲು ಸಿಂಪಲ್​ ಆಗಿದ್ದರೂ ಸಿನಿಮಾ ಇಂಡಸ್ಟ್ರಿಗೆ ಬಂದ ನಂತರ ಬದಲಾಗುತ್ತಾರೆ. ಅವರಲ್ಲಿ ಹೆಚ್ಚುವ ಸೌಂದರ್ಯಪ್ರಜ್ಞೆಯಿಂದ ಮತ್ತಷ್ಟು ಅಂದವಾಗಿ ಕಾಣುತ್ತಾರೆ.

ನಟಿ ರಶ್ಮಿಕಾ ಮಂದಣ್ಣ ಕಾಲೇಜ್​ ದಿನಗಳ ಫೋಟೋ ವೈರಲ್​; ಹೇಗಿದ್ರು ನೋಡಿ ನ್ಯಾಷನಲ್​ ಕ್ರಶ್
ನಟಿ ರಶ್ಮಿಕಾ ಮಂದಣ್ಣ ಕಾಲೇಜ್​ ದಿನಗಳ ಫೋಟೋ ವೈರಲ್​
Edited By:

Updated on: May 30, 2021 | 7:24 AM

ನಟಿ ರಶ್ಮಿಕಾ ಮಂದಣ್ಣ ಸ್ಯಾಂಡಲ್​ವುಡ್​, ಟಾಲಿವುಡ್​, ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಅವರನ್ನು ಹೀರೋಯಿನ್​ ಆಗಿ ಆಯ್ಕೆ ಮಾಡಿಕೊಳ್ಳೋಕೆ ದೊಡ್ಡದೊಡ್ಡ ನಿರ್ಮಾಪಕರು ಸದಾ ರೆಡಿ ಆಗಿರುತ್ತಾರೆ. ಈಗ ಅವರ ಕಾಲೇಜು ದಿನಗಳ ಪೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗುತ್ತಿದೆ.

ಸಾಕಷ್ಟು ಹೀರೋಯಿನ್​ಗಳು ಕಾಲೇಜು ದಿನಗಳಲ್ಲಿ ನೋಡಲು ಸಿಂಪಲ್​ ಆಗಿದ್ದರೂ ಸಿನಿಮಾ ಇಂಡಸ್ಟ್ರಿಗೆ ಬಂದ ನಂತರ ಬದಲಾಗುತ್ತಾರೆ. ಅವರಲ್ಲಿ ಹೆಚ್ಚುವ ಸೌಂದರ್ಯಪ್ರಜ್ಞೆಯಿಂದ ಮತ್ತಷ್ಟು ಅಂದವಾಗಿ ಕಾಣುತ್ತಾರೆ. ಕಾಲೇಜು ದಿನಗಳಲ್ಲಿ ನಟಿಮಣಿಯರು ಹೇಗಿದ್ದರು ಎಂಬ ಫೋಟೋಗಳನ್ನು ಅಭಿಮಾನಿಗಳು ಈ ಮೊದಲು ಹಂಚಿಕೊಂಡಿದ್ದಿದೆ. ಈಗ ರಶ್ಮಿಕಾ ಅಭಿಮಾನಿಗಳ ಸರದಿ.

ರಶ್ಮಿಕಾ ಅವರು ಕಾಲೇಜು ದಿನಗಳಲ್ಲಿ ಗೆಳತಿಯರ ಜತೆಗೆ ತೆಗಿಸಿಕೊಂಡಿರುವುದು ಎನ್ನಲಾದ ಫೋಟೋ ಒಂದು ಈಗ ವೈರಲ್​ ಆಗಿದೆ. ಇದನ್ನು ನೋಡಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸಾಕಷ್ಟು ಟ್ರೋಲ್​ ಪೇಜ್​ಗಳಲ್ಲೂ ಈ ಫೋಟೋ ವೈರಲ್​ ಆಗುತ್ತಿದೆ.

ರಶ್ಮಿಕಾ ಮಂದಣ್ಣ ಇತ್ತೀಚೆಗೆ ಬಾಲ್ಯದ ಫೋಟೋ ಒಂದನ್ನು ಹಂಚಿಕೊಂಡು ಅಚ್ಚರಿ ಮೂಡಿಸಿದ್ದರು.  ಆ ಫೋಟೋಗೆ ಕ್ಯಾಪ್ಶನ್ ನೀಡಿದ್ದ ಅವರು, ಕೊರೊನಾ ಹೋಗುವುದನ್ನು ಕಾಯುವುದು ಹೀಗೆಯೇ ಇರುತ್ತದೆ ಎಂದು ಕುಹಕವಾಡಿದ್ದರು. ಅಲ್ಲದೆ, ಇದಕ್ಕೆ #ThrowbackThursday ಎಂದು ಹ್ಯಾಶ್ಟ್ಯಾಗ್ ಕೂಡ ನೀಡಿದ್ದರು.

ರಶ್ಮಿಕಾ ಮಂದಣ್ಣ ಅವರು ‘ಮಿಷನ್ ಮಜ್ನು’, ‘ಗುಡ್ ಬೈ’ ಚಿತ್ರದಲ್ಲೂ ನಟಿಸುತ್ತಿದ್ದಾರೆ. ‘ಗುಡ್ ಬೈ’ ಚಿತ್ರದಲ್ಲಿ ಅಮಿತಾಭ್ ಬಚ್ಚನ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ವೃತ್ತಿ ಜೀವನದ ದೃಷ್ಟಿಯಿಂದ ಇದು ಬಹಳ ಮಹತ್ವ ಪಡೆದುಕೊಂಡಿದೆ. ಇದಲ್ಲದೆ, ತೆಲುಗಿನಲ್ಲಿ ಅಲ್ಲು ಅರ್ಜುನ್ ನಟನೆಯ ‘ಪುಷ್ಪ’ಸಿನಿಮಾದಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ರಶ್ಮಿಕಾ ಡಿ-ಗ್ಲಾಮ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಕಾಡಿನ ಹಿನ್ನೆಲೆಯಲ್ಲಿ ನಡೆಯಲಿದೆ. ಎರಡು ಪಾರ್ಟ್​ಗಳಲ್ಲಿ ಮೂಡಿ ಬರಲಿದೆ ಎನ್ನುವ ಮಾತು ಕೂಡ ಕೇಳಿ ಬಂದಿದೆ.

ಇದನ್ನೂ ಓದಿ: ಈ ಫೋಟೋದಲ್ಲಿರುವ ಸ್ಯಾಂಡಲ್​ವುಡ್​ ಬ್ಯೂಟಿ ಯಾರು ಎಂದು ಗೆಸ್​ ಮಾಡ್ತೀರಾ?

‘ಕಿರಿಕ್​ ಪಾರ್ಟಿ ಹಿಂದಿ ರಿಮೇಕ್​ನಲ್ಲಿ ನಾನು ನಟಿಸಲ್ಲ’; ರಶ್ಮಿಕಾ ಖಡಕ್​ ನಿರ್ಧಾರಕ್ಕಿದೆ ಬಲವಾದ ಕಾರಣ