AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರವಿಚಂದ್ರನ್ ‘ದೃಶ್ಯ 2’ ತೆರೆಗೆ ಬರುವುದಕ್ಕೂ ಮೊದಲು ಮತ್ತೊಮ್ಮೆ ರಿಲೀಸ್ ಆಗ್ತಿದೆ ‘ದೃಶ್ಯ’; ಎಲ್ಲೆಲ್ಲಿ ಶೋ?

‘ದೃಶ್ಯ’ ಸಿನಿಮಾ ತೆರೆಗೆ ಬಂದು 7 ವರ್ಷ ಕಳೆದಿದೆ. ಎರಡನೇ ಪಾರ್ಟ್​ ನೋಡುವುದಕ್ಕೂ ಮುನ್ನ ಮೊದಲ ಪಾರ್ಟ್​ ನೋಡಬೇಕು ಎಂದು ಸಿನಿಪ್ರಿಯರು ಬಯಸೋದು ಸಾಮಾನ್ಯ. ಈ ಕಾರಣಕ್ಕೆ ಚಿತ್ರತಂಡ ‘ದೃಶ್ಯ 2’ಗೂ ಮೊದಲು ‘ದೃಶ್ಯ’ ಸಿನಿಮಾವನ್ನು ಪ್ರದರ್ಶನ ಮಾಡುತ್ತಿದೆ.

ರವಿಚಂದ್ರನ್ ‘ದೃಶ್ಯ 2’ ತೆರೆಗೆ ಬರುವುದಕ್ಕೂ ಮೊದಲು ಮತ್ತೊಮ್ಮೆ ರಿಲೀಸ್ ಆಗ್ತಿದೆ ‘ದೃಶ್ಯ’; ಎಲ್ಲೆಲ್ಲಿ ಶೋ?
ದೃಶ್ಯ ಸಿನಿಮಾ ಪೋಸ್ಟರ್​
TV9 Web
| Edited By: |

Updated on: Dec 04, 2021 | 9:45 PM

Share

ರವಿಚಂದ್ರನ್​ ಅಭಿನಯದ ‘ದೃಶ್ಯ’ ಸಿನಿಮಾ 2014ರಲ್ಲಿ ತೆರೆಗೆ ಬಂದು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ರಾಜೇಂದ್ರ ಪೊನ್ನಪ್ಪ ಆಗಿ ರವಿಚಂದ್ರನ್​ ಕಾಣಿಸಿಕೊಂಡಿದ್ದರು. ಈ ಸಿನಿಮಾದ ಸೀಕ್ವೆಲ್​ ಈಗ ಸಿದ್ಧಗೊಂಡಿದ್ದು, ಡಿಸೆಂಬರ್​ 10ಕ್ಕೆ ರಿಲೀಸ್​ ಆಗುತ್ತಿದೆ. ವಿಶೇಷ ಎಂದರೆ ಈ ಚಿತ್ರ ರಿಲೀಸ್​ ಆಗುವುದಕ್ಕೂ ಮೊದಲು ‘ದೃಶ್ಯ’ ಸಿನಿಮಾ ಬೆಂಗಳೂರಿನ ಕೆಲ ಮಲ್ಟಿಪ್ಲೆಕ್ಸ್​ನಲ್ಲಿ ಪ್ರದರ್ಶನ ಕಾಣುತ್ತಿದೆ. ಈ ವಿಚಾರ ಕೇಳಿ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.

‘ದೃಶ್ಯ’ ಸಿನಿಮಾ ತೆರೆಗೆ ಬಂದು 7 ವರ್ಷ ಕಳೆದಿದೆ. ಎರಡನೇ ಪಾರ್ಟ್​ ನೋಡುವುದಕ್ಕೂ ಮುನ್ನ ಮೊದಲ ಪಾರ್ಟ್​ ನೋಡಬೇಕು ಎಂದು ಸಿನಿಪ್ರಿಯರು ಬಯಸೋದು ಸಾಮಾನ್ಯ. ಈ ಕಾರಣಕ್ಕೆ ಚಿತ್ರತಂಡ ‘ದೃಶ್ಯ 2’ಗೂ ಮೊದಲು ‘ದೃಶ್ಯ’ ಸಿನಿಮಾವನ್ನು ಪ್ರದರ್ಶನ ಮಾಡುತ್ತಿದೆ. ‘ದೃಶ್ಯ’ ಮತ್ತು ‘ದೃಶ್ಯ 2’ ಚಿತ್ರದ ಕಥೆಗೆ ಲಿಂಕ್​ ಇದೆ. ಈ ಕಾರಣಕ್ಕೆ ಸಿನಿ ಪ್ರಿಯರಿಗೆ ಕಥೆ ನೆನಪು ಮಾಡಿಕೊಳ್ಳೋಕೆ ಒಂದೊಳ್ಳೆಯ ಅವಕಾಶ ಇದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.

E4 Entertainment ಸಂಸ್ಥೆ ‘ದೃಶ್ಯ’ ಚಿತ್ರದ ಮೊದಲ ಹಾಗೂ ಎರಡನೇ ಭಾಗ ನಿರ್ಮಾಣ ಮಾಡಿದೆ. ಪಿ.ವಾಸು ಅವರು ಎರಡೂ ಭಾಗಗಳನ್ನು ನಿರ್ದೇಶಿಸಿದ್ದಾರೆ. ಮುಖ್ಯ ಭೂಮಿಕೆಯಲ್ಲಿ ರವಿಚಂದ್ರನ್​ ಹಾಗೂ ನವ್ಯ ನಾಯರ್ ನಟಿಸಿದ್ದಾರೆ. ಮೊದಲ ಭಾಗದಲ್ಲಿದ್ದ ಬಹುತೇಕ ಸದಸ್ಯರು ಎರಡನೇ ಭಾಗದಲ್ಲೂ ಮುಂದುವರೆದಿದ್ದಾರೆ. ‘ದೃಶ್ಯ 2’ ಚಿತ್ರದ ವಿಶೇಷ ಪಾತ್ರದಲ್ಲಿ ಹಿರಿಯ ನಟ ಅನಂತನಾಗ್ ಅಭಿನಯಿಸಿದ್ದಾರೆ.

ಭಾನುವಾರ (ಡಿಸೆಂಬರ್​ 5) ಕೆಲ ಮಲ್ಟಿಪ್ಲೆಕ್ಸ್​ಗಳಲ್ಲಿ ‘ದೃಶ್ಯ 2’ ಪ್ರದರ್ಶನ ಕಾಣುತ್ತಿದೆ. ಬುಕ್ ಮೈ ಶೋನಲ್ಲಿ ಟಿಕೆಟ್ ಬುಕಿಂಗ್ ಆರಂಭವಾಗಿದೆ. ವೀಕೆಂಡ್​ ಆಗಿರುವುದರಿಂದ ಈ ಸಿನಿಮಾ ನೋಡೋಕೆ ಪ್ರೇಕ್ಷಕರು ಬರಹುದು ಎನ್ನುವ ನಿರೀಕ್ಷೆ ಇದೆ. ಎಂಎಸ್​ಆರ್​ ಎಲಿಮೆಂಟ್ಸ್​ ಮಾಲ್​ನಲ್ಲಿರುವ ಪಿವಿಆರ್ ರೆಗಲಿಯಾದಲ್ಲಿ ಬೆಳಗ್ಗೆ 11.55ಕ್ಕೆ ಶೋ ಇದೆ.  ಒರಾಯನ್​ ಮಾಲ್​ನಲ್ಲಿ ಮಧ್ಯಾಹ್ನ 3:30ಕ್ಕೆ ಶೋ ಇದೆ.  ETA ಮಾಲ್​ನಲ್ಲಿ 6.30ಕ್ಕೆ ಶೋ ಆಯೋಜಿಸಲಾಗಿದೆ. ಮಲ್ಲೇಶ್ವರದ ಐನಾಕ್ಸ್​ನಲ್ಲಿ ರಾತ್ರಿ 9.45ಕ್ಕೆ ‘ದೃಶ್ಯ’ ಶೋ ಇದೆ.

ಇದನ್ನೂ ಓದಿ: ರವಿಚಂದ್ರನ್​ ‘ದೃಶ್ಯ 2’ ಶೂಟಿಂಗ್​ ಶುರು; ಚಿತ್ರತಂಡಕ್ಕೆ ಹೊಸ ಎಂಟ್ರಿ ಅನಂತ್​ ನಾಗ್​​

Drishya 2 Trailer: ಕುತೂಹಲ ಹೆಚ್ಚಿಸಿದ ‘ದೃಶ್ಯ 2’ ಟ್ರೇಲರ್​; ರವಿಚಂದ್ರನ್​ ಚಿತ್ರಕ್ಕೆ ಸುದೀಪ್​ ಬೆಂಬಲ

ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಹಿಮಾಚಲ ಪ್ರದೇಶದಲ್ಲಿ ಭಾರೀ ಬಸ್ ಅಪಘಾತ; 9 ಜನ ಸಾವು, 40 ಮಂದಿಗೆ ಗಾಯ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಕಾಡು ಹಂದಿಗೆ ಹಾಕಿದ್ದ ಉರುಳಿಗೆ ಚಿರತೆ ಬಲಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಮಹಿಳೆಯರಿಗೆ ಬೆಂಗಳೂರು ಫುಲ್ ಸೇಫ್: ಸಿಲಿಕಾನ್ ಸಿಟಿಯನ್ನ ಕೊಂಡಾಡಿದ ಯುವತಿ
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಕೆಎಸ್‌ ಈಶ್ವರಪ್ಪಗೆ ವಿದೇಶದಿಂದ ಜೀವ ಬೆದರಿಕೆ , ದೂರು ದಾಖಲು!
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಚಿರತೆ ರಕ್ಷಣೆ, ವಿಡಿಯೋ ನೋಡಿ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
‘ಜನ ನಾಯಗನ್’ಗೆ ಹೈಕೋರ್ಟ್ ಶಾಕ್: ಬೆಳಿಗ್ಗೆ ನೀಡಿದ ಆದೇಶಕ್ಕೆ ಮಧ್ಯಾಹ್ನ ತಡೆ
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಆಸ್ತಿ ವಿವಾದ: ಕೆಸರು ಗದ್ದೆಯಲ್ಲೇ ನಡೀತು ಫಿಲ್ಮಿ ಸ್ಟೈಲ್​​ ಫೈಟ್​​
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಕಳಪೆ ಕೊಟ್ಟ ರಾಶಿಕಾ ಮೇಲೆ ಉರಿದು ಬಿದ್ದ ರಕ್ಷಿತಾ, ನಕ್ಕ ಧ್ರುವಂತ್
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಡೆಂಟಲ್ ವಿದ್ಯಾರ್ಥಿನಿ ಆತ್ಮಹತ್ಯೆ: ಉಪನ್ಯಾಸಕನ ವಿರುದ್ಧ ತಾಯಿ ಗಂಭೀರ ಆರೋಪ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಸತೀಶ್ ಜಾರಕಿಹೊಳಿ ಸ್ಫೋಟಕ ಹೇಳಿಕೆ