‘ನಾನು ಹಿಂದಿ ಸಿನಿಮಾ ಮಾಡಲ್ಲ, ಕನ್ನಡಿಗರಿಂದ ನಾನು ಇಲ್ಲಿದ್ದೇನೆ’; ರಿಷಬ್ ಶೆಟ್ಟಿ ನೇರ ಮಾತು

‘ಕಾಂತಾರ’ ಸಿನಿಮಾ ಹಿಂದಿಯಲ್ಲಿ 62+ ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವ ಮಟ್ಟದಲ್ಲಿ ನೂರಾರು ಕೋಟಿ ಗಳಿಸಿದೆ. ಇತ್ತೀಚೆಗೆ ತೆರೆಗೆ ಬಂದ ಅಕ್ಷಯ್ ಕುಮಾರ್ ಅಭಿನಯದ ‘ರಾಮ್ ಸೇತು’ ಚಿತ್ರದ ಗಳಿಕೆಯನ್ನು ಈ ಸಿನಿಮಾ ಹಿಂದಿಕ್ಕಲಿದೆ.

‘ನಾನು ಹಿಂದಿ ಸಿನಿಮಾ ಮಾಡಲ್ಲ, ಕನ್ನಡಿಗರಿಂದ ನಾನು ಇಲ್ಲಿದ್ದೇನೆ’; ರಿಷಬ್ ಶೆಟ್ಟಿ ನೇರ ಮಾತು
ರಿಷಬ್
Updated By: ರಾಜೇಶ್ ದುಗ್ಗುಮನೆ

Updated on: Nov 07, 2022 | 8:02 PM

ರಿಷಬ್ ಶೆಟ್ಟಿ (Rishab Shetty) ಅವರು ‘ಕಾಂತಾರ’ ಚಿತ್ರದಿಂದ ಸೂಪರ್ ಸ್ಟಾರ್ ಆಗಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಇಡೀ ದೇಶಕ್ಕೆ ಪರಿಚಯಗೊಂಡಿದ್ದಾರೆ. ರಿಷಬ್ ಶೆಟ್ಟಿ ನಟನೆ ಹಾಗೂ ನಿರ್ದೇಶನಕ್ಕೆ ಪರಭಾಷೆಯವರು ಫುಲ್​ಮಾರ್ಕ್ಸ ನೀಡಿದ್ದಾರೆ. ರಿಷಬ್ ಶೆಟ್ಟಿ ಅವರ ನಟನೆ ಕಂಡು ಎಲ್ಲರೂ ಫಿದಾ ಆಗಿದ್ದಾರೆ. ಈ ಚಿತ್ರ ಹಿಟ್ ಆದ ಬಳಿಕ ಅವರಿಗೆ ಪರಭಾಷೆಯವರಿಂದಲೂ ಆಫರ್ ಬರುತ್ತಿದೆ. ಹಿಂದಿಯಲ್ಲಿ ಅವರು ಸಿನಿಮಾ ಮಾಡುತ್ತಾರಾ ಎನ್ನುವ ಪ್ರಶ್ನೆ ಮೂಡಿತ್ತು. ಇದಕ್ಕೆ ರಿಷಬ್ ಉತ್ತರ ನೀಡಿದ್ದಾರೆ.

‘ನನಗೆ ಕನ್ನಡ ಸಿನಿಮಾ ಮಾಡಬೇಕು ಎಂಬ ಆಸೆ ಇದೆ. ನಾನು ಹೆಮ್ಮೆಯ ಕನ್ನಡಿಗ. ಕನ್ನಡ ಸಿನಿಮಾ ರಂಗ ಹಾಗೂ ಕನ್ನಡಿಗರಿಂದ ನಾನು ಇಲ್ಲಿದ್ದೇನೆ. ಒಂದು ಸಿನಿಮಾ ಹಿಟ್ ಆಗಿದ್ದಕ್ಕೆ ನನ್ನ ಕುಟುಂಬ ಹಾಗೂ ಗೆಳೆಯರು ಬದಲಾಗುವುದಿಲ್ಲ. ಕನ್ನಡ ಚಿತ್ರರಂಗವೇ ನನ್ನ ಜೀವಾಳ’ ಎಂದು ರಿಷಬ್ ಅವರು ಬಾಲಿವುಡ್​ ಬಬಲ್​ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

‘ನನ್ನ ಸಿನಿಮಾಗಳನ್ನು ಜನರು ಇಷ್ಟಪಟ್ಟರೆ ಅದನ್ನು ಹಿಂದಿಯಲ್ಲಿ ರಿಲೀಸ್ ಮಾಡುತ್ತೇನೆ. ಇಲ್ಲವಾದರೆ ಕರ್ನಾಟಕದಲ್ಲಿ ಮಾತ್ರ ಆ ಸಿನಿಮಾ ರಿಲೀಸ್ ಆಗುತ್ತದೆ. ಕಾಂತಾರ ಚಿತ್ರವನ್ನು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಮಾಡುವ ಆಲೋಚನೆ ಇರಲಿಲ್ಲ. ಆದರೆ, ಈ ಸಿನಿಮಾವೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಲು ದಾರಿ ಕಂಡುಕೊಂಡಿತು’  ಎಂದಿದ್ದಾರೆ ರಿಷಬ್.

ಇದನ್ನೂ ಓದಿ
Kantara: ‘ಇದು ರಿಷಬ್​ ಮಾಡಿದ ಚಿತ್ರ ಅಲ್ಲ, ದೇವರೇ ಮಾಡ್ಸಿದ್ದು’; ವಿದೇಶದಲ್ಲಿ ‘ಕಾಂತಾರ’ ನೋಡಿ ಜಗ್ಗೇಶ್​ ಪ್ರತಿಕ್ರಿಯೆ
Anushka Shetty: ‘ಕಾಂತಾರ’ ನೋಡಿ ಅನುಷ್ಕಾ ಶೆಟ್ಟಿ ಫಿದಾ; ರಿಷಬ್​ ಬಗ್ಗೆ ಸ್ಪೆಷಲ್​ ಮಾತುಗಳನ್ನು ಹೇಳಿದ ಸ್ಟಾರ್​ ನಟಿ
Kantara Review: ಹಲವು ಸಂಘರ್ಷಗಳ ‘ಕಾಂತಾರ’; ರಿಷಬ್​ ಶೆಟ್ಟಿಯ ಹೊಸ ಅವತಾರ
Kantara Review: ‘ಕಾಂತಾರ’ ವಿಮರ್ಶೆ ಮಾಡಿದ ರಮ್ಯಾ; ರಿಷಬ್​ ಶೆಟ್ಟಿ ಚಿತ್ರದ ಬಗ್ಗೆ ‘ಮೋಹಕ ತಾರೆ’ ಹೇಳಿದ್ದೇನು?

‘ಕಾಂತಾರ’ ಸಿನಿಮಾ ಹಿಂದಿಯಲ್ಲಿ 62+ ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿಶ್ವ ಮಟ್ಟದಲ್ಲಿ ನೂರಾರು ಕೋಟಿ ಗಳಿಸಿದೆ. ಇತ್ತೀಚೆಗೆ ತೆರೆಗೆ ಬಂದ ಅಕ್ಷಯ್ ಕುಮಾರ್ ಅಭಿನಯದ ‘ರಾಮ್ ಸೇತು’ ಚಿತ್ರದ ಗಳಿಕೆಯನ್ನು ಈ ಸಿನಿಮಾ ಹಿಂದಿಕ್ಕಲಿದೆ. ರಿಷಬ್ ಶೆಟ್ಟಿ ಚಿತ್ರದ ಬಗ್ಗೆ ಕೆಲವರು ಕೊಂಕು ನುಡಿದಿದ್ದೂ ಇದೆ. ಆದರೆ, ಈ ಬಗ್ಗೆ ಅವರು ತಲೆಕೆಡಿಸಿಕೊಂಡಿಲ್ಲ.

ಇದನ್ನೂ ಓದಿ: ‘ಯಶಸ್ಸಿಗಾಗಿ ನಾನು ಕೆಲಸ ಮಾಡಿಲ್ಲ’; ಚರ್ಚೆ ಆಗುತ್ತಿರುವ ವಿಚಾರಕ್ಕೆ ನೇರವಾಗಿ ಪ್ರತಿಕ್ರಿಯಿಸಿದ ರಿಷಬ್ ಶೆಟ್ಟಿ

ರಿಷಬ್ ಚಿತ್ರದ ಅಬ್ಬರ ಸದ್ಯ ಮುಂದುವರಿದಿದೆ. ಈ ತಿಂಗಳ ಮಧ್ಯದ ವೇಳೆಗೆ ಚಿತ್ರ ‘ಅಮೇಜಾನ್ ಪ್ರೈಮ್ ವಿಡಿಯೋ’ ಮೂಲಕ ರಿಲೀಸ್ ಆಗಲಿದೆ ಎನ್ನಲಾಗುತ್ತಿದೆ. ಆದರೆ, ಈ ಬಗ್ಗೆ ಅಧಿಕೃತ ಘೋಷಣೆ ಆಗಿಲ್ಲ. ಈ ಚಿತ್ರವನ್ನು ಹಲವರು ಒಟಿಟಿಯಲ್ಲಿ ಕಣ್ತುಂಬಿಕೊಳ್ಳಲು ಕಾದಿದ್ದಾರೆ.