‘ಯಶಸ್ಸಿಗಾಗಿ ನಾನು ಕೆಲಸ ಮಾಡಿಲ್ಲ’; ಚರ್ಚೆ ಆಗುತ್ತಿರುವ ವಿಚಾರಕ್ಕೆ ನೇರವಾಗಿ ಪ್ರತಿಕ್ರಿಯಿಸಿದ ರಿಷಬ್ ಶೆಟ್ಟಿ
‘ಕಾಂತಾರ’ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ಆಸ್ಕರ್ಗೆ ರೇಸ್ಗೆ ಹೋಗಬೇಕು ಎಂದು ಕೆಲವರು ಹಕ್ಕೊತ್ತಾಯ ಮಾಡಿದ್ದರು. ಈ ಕುರಿತು ರಿಷಬ್ ಪ್ರತಿಕ್ರಿಯೆ ನೀಡಿದ್ದಾರೆ.
‘ಕಾಂತಾರ’ ಸಿನಿಮಾ (Kantara Movie) ರಿಲೀಸ್ ಆಗಿ ತಿಂಗಳ ಮೇಲಾಗಿದೆ. ಆದಾಗ್ಯೂ ಚಿತ್ರದ ಅಬ್ಬರ ಕಡಿಮೆ ಆಗಿಲ್ಲ. ಅನೇಕ ಕಡೆಗಳಲ್ಲಿ ಈ ಚಿತ್ರ ಹೌಸ್ಫುಲ್ ಪ್ರದರ್ಶನ ಕಾಣುತ್ತಿದೆ. ಇದು ಚಿತ್ರತಂಡದ ಖುಷಿಯನ್ನು ಹೆಚ್ಚಿಸಿದೆ. ರಿಷಬ್ ಶೆಟ್ಟಿ ಅವರು ನಾನಾ ನಗರಗಳಿಗೆ ತೆರಳಿ ಸಕ್ಸಸ್ಮೀಟ್ನಲ್ಲಿ ಭಾಗಿ ಆಗುತ್ತಿದ್ದಾರೆ. ಅವರನ್ನು ಹುಡುಕಿಕೊಂಡು ಹಲವು ಆಫರ್ಗಳು ಬರುತ್ತಿವೆ. ದೇಶಾದ್ಯಂತ ರಿಷಬ್ ಪರಿಚಯ ಆಗಿದೆ. ಈ ಮಧ್ಯೆ ರಿಷಬ್ (Rishab Shetty) ಅವರು ‘ಕಾಂತಾರ’ ಚಿತ್ರಕ್ಕೆ ಆಸ್ಕರ್ ಸಿಗಬೇಕು ಎಂದು ನಡೆಯುತ್ತಿದ್ದ ಚರ್ಚೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವಿಚಾರದಲ್ಲಿ ಅವರು ತಮ್ಮ ನಿಲುವು ಏನು ಎಂಬುದನ್ನು ತಿಳಿಸಿದ್ದಾರೆ.
‘ಕಾಂತಾರ’ ಚಿತ್ರ ಮಾಡಿದ ಸಾಧನೆ ತುಂಬಾ ದೊಡ್ಡದು. ಕಡಿಮೆ ಬಜೆಟ್ನಲ್ಲಿ ಸಿದ್ಧವಾದ ಈ ಚಿತ್ರ ನೂರಾರು ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ.ಭೂತ ಕೋಲ ಹಾಗೂ ಕಾಡು, ಕಾಡಿನ ಪ್ರಾಣಿಗಳನ್ನು ಉಳಿಸಬೇಕು ಎಂಬ ಸಂದೇಶ ಈ ಚಿತ್ರದಲ್ಲಿದೆ. ‘ಕಾಂತಾರ’ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಈ ಚಿತ್ರ ಆಸ್ಕರ್ಗೆ ರೇಸ್ಗೆ ಹೋಗಬೇಕು ಎಂದು ಕೆಲವರು ಹಕ್ಕೊತ್ತಾಯ ಮಾಡಿದ್ದರು. ಈ ಕುರಿತು ರಿಷಬ್ ಪ್ರತಿಕ್ರಿಯೆ ನೀಡಿದ್ದಾರೆ.
ಜನರು ಈ ಸಿನಿಮಾ ಬಗ್ಗೆ ತೋರುತ್ತಿರುವ ಪ್ರೀತಿಗೆ ರಿಷಬ್ಗೆ ಖುಷಿ ಇದೆ. ಇಟೈಮ್ಸ್ ಜೊತೆ ಮಾತನಾಡಿರುವ ರಿಷಬ್, ‘ನಾನು ಈ ವಿಚಾರದಲ್ಲಿ ಪ್ರತಿಕ್ರಿಯೆ ನೀಡುವುದಿಲ್ಲ. ಅದರ ಬಗ್ಗೆ ಸುಮಾರು 25,000 ಟ್ವೀಟ್‌ಗಳಿವೆ. ಇದು ನನಗೆ ಸಂತೋಷವನ್ನು ನೀಡುತ್ತದೆ. ಆದರೆ ನಾನು ಅದರ ಬಗ್ಗೆ ಮಾತನಾಡುವುದಿಲ್ಲ. ಏಕೆಂದರೆ ಯಶಸ್ಸಿಗಾಗಿ ನಾನು ಕೆಲಸ ಮಾಡಿಲ್ಲ. ನಾನು ಕೆಲಸಕ್ಕಾಗಿ ಕೆಲಸ ಮಾಡಿದೆ ಅಷ್ಟೇ’ ಎಂದಿದ್ದಾರೆ.
ಇದನ್ನೂ ಓದಿ: ‘ಕಾಂತಾರ’ ಸೂಪರ್ ಹಿಟ್ ಆದ್ಮೇಲೆ ರಿಷಬ್ ಶೆಟ್ಟಿ ಏನು ಮಾಡ್ತಿದ್ದಾರೆ? ಪ್ರೈವೇಟ್ ಜೆಟ್ ಏರಿದ ಶಿವ
‘ಕಾಂತಾರ’ ಚಿತ್ರದಲ್ಲಿ ರಿಷಬ್ ನಟಿಸುವುದರ ಜತೆಗೆ ನಿರ್ದೇಶನ ಕೂಡ ಮಾಡಿದ್ದಾರೆ. ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ. ‘ಹೊಂಬಾಳೆ ಫಿಲ್ಮ್ಸ್’ ಈ ಚಿತ್ರಕ್ಕೆ ಬಂಡವಾಳ ಹೂಡಿದೆ. ಈ ಚಿತ್ರದಿಂದ ನಿರ್ಮಾಣ ಸಂಸ್ಥೆಗೆ ಅಪಾರ ಲಾಭ ಆಗಿದೆ. ‘ಕಾಂತಾರ’ವನ್ನು ಅನೇಕರು ಎರಡು-ಮೂರು ಬಾರಿ ವೀಕ್ಷಣೆ ಮಾಡಿದ್ದಾರೆ.