
ನಟ ರಾಕಿಂಗ್ ಸ್ಟಾರ್ ಯಶ್ ಹಾಗೂ ತಾಯಿ ಪುಷ್ಪಾ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತು ಇತ್ತೀಚೆಗೆ ಜೋರಾಗಿದೆ. ಇದಕ್ಕೆ ಕಾರಣ ಪುಷ್ಪಾ (Pushpa) ಅವರು ಮಾತನಾಡುತ್ತಿರುವ ರೀತಿ. ಮಗನ ಸಿನಿಮಾಗೆ ಹಾಗೂ ಮಗನಿಗೆ ಸಂಬಂಧವೇ ಇಲ್ಲ ಎಂಬ ರೀತಿಯಲ್ಲಿ ಮಾತನಾಡುತ್ತಿದ್ದರು. ಆದರೆ, ಅವರು ಹೀಗೆ ನಡೆದುಕೊಳ್ಳುವುದಕ್ಕೂ ಒಂದು ಕಾರಣ ಇದೆ ಎಂದು ಪುಷ್ಪಾ ಹೇಳಿದ್ದಾರೆ. ಅಲ್ಲದೆ, ಎಂಜಿ ರಸ್ತೆಯಲ್ಲಿ ಯಶ್ ಮನೆ ಕೊಡಿಸಿರುವ ವಿಚಾರವನ್ನೂ ಅವರು ರಿವೀಲ್ ಮಾಡಿದ್ದಾರೆ.
ಯಶ್ ಬಗ್ಗೆ ಪುಷ್ಪಾ ನೆಗೆಟಿವ್ ಮಾತನಾಡುತ್ತಾರೆ ಎಂಬ ಬಗ್ಗೆ ಚರ್ಚೆ ನಡೆದಿದೆ. ಈ ವಿಚಾರ ಅವರ ಕಿವಿಗೂ ಬಿದ್ದಿದೆಯಂತೆ. ‘ನಾವು ಯಾರಿಗೋಸ್ಕರವೂ ಬದುಕಬಾರದು. ಮನುಷ್ಯರ ಬಾಯಿ ಮುಚ್ಚಿಸಲಾಗದು. ಕೆಲವರು ನಮ್ಮ ಬಗ್ಗೆ ಮಾತನಾಡುತ್ತಾರೆ. ಏನಿದು ತಾಯಿ ಆಗಿ ಮಗನ ಬಗ್ಗೆ ಈ ರೀತಿ ಮಾತನಾಡುತ್ತಾರಲ್ಲ ಎಂದು ಅನೇಕರಿಗೆ ಅನಿಸಿರಬಹುದು. ನಾನು ಹಾಗೂ ಯಶ್ ಜಗಳ ಆಡೋದು ಗುರಡ ರಾಮ್ಗೂ ಇಷ್ಟ ಆಗುತ್ತಿರಲಿಲ್ಲ. ನಾನು ಯಾಕೆ ಹಾಗೆ ಮಾಡುತ್ತಿದ್ದೆ ಅನ್ನೋದು ಈಗ ರಾಮ್ಗೆ ಗೊತ್ತಾಗಿದೆ. ನಾನು ಯಶ್ನ ಪ್ಯಾಂಪರ್ ಮಾಡಲ್ಲ. ಜೊತೆಗೆ ಅವನಿಗೆ ಕಷ್ಟ ಕೊಡಬಾರದು ಅನ್ನೋದು ನನ್ನ ಪಾಲಿಸಿ. ಪ್ರತಿ ವಿಚಾರವನ್ನು ಜನರು ಟೀಕೆ ಮಾಡುತ್ತಾರೆ. ಅವನು ಬೇರೆ ಸಾಧನೆ ಮಾಡುತ್ತಾ ಇದ್ದಾನೆ. ಅವನಿಗೆ ಈ ಕಷ್ಟ ಕೊಟ್ಟರೆ ಹೇಗೆ’ ಎಂದಿದ್ದಾರೆ ಅವರು.
‘ನಾನು ಹಾಸನದವಳು. ನಾನು ಹುಟ್ಟಿದ್ದು ಹಾಡವಳ್ಳಿ. ಅಲ್ಲಿ ನನ್ನ ತಂದೆ ರೈಲ್ವೆಯಲ್ಲಿ ಇದ್ದರು. ಈಗ ಹಾಸನದ ಎಂಜಿ ರೋಡ್ನಲ್ಲಿ ಯಶ್ ಮನೆ ಕೊಡಿಸಿದ್ದಾನೆ. ನಾನು ಅಲ್ಲಿಯೇ ಇರೋದು. ಮನೆ ಪಕ್ಕದಲ್ಲೇ ದೊಡ್ಡ ಸೈಟ್ ಕೂಡ ಇದೆ. ಅದನ್ನೂ ಯಶ್ ಕೊಡಿಸಿದ್ದಾನೆ. ಅಮ್ಮ ಇದೆಲ್ಲ ಬೇಕಾ ಎಂದು ಕೇಳಿದ. ಬೇಕು ಕೊಡಿಸು ಎಂದೆ, ಮರುಮಾತಾಡದೆ ಕೊಡಿಸಿದ’ ಎಂದು ಪುಷ್ಪಾ ಹೇಳಿದ್ದಾರೆ. ಹಾಸನದ ಪಾಶ್ ಏರಿಯಾಗಳಲ್ಲಿ ಈ ಎಂಜಿ ರಸ್ತೆ ಇದೆ.
ಇದನ್ನೂ ಓದಿ: ಯಾರದ್ದೋ ಜಿದ್ದಿನ ಮೇಲೆ ಸಿನಿಮಾ ನಿರ್ಮಿಸುತ್ತಿದ್ದಾರಾ ಯಶ್ ತಾಯಿ?
ಪುಷ್ಪಾ ಅವರು ಹಾಸನದಲ್ಲಿ ತೋಟ ಮಾಡಿದ್ದಾರೆ. ಅಲ್ಲಿ ಅವರು ತೋಟದ ಕೆಲಸಗಳನ್ನು ಮಾಡುತ್ತಾರೆ. ಈ ಕಾರಣಕ್ಕೆ ಅವರು ಹಾಸನದಲ್ಲೇ ಇರುತ್ತಾರೆ. ಅಲ್ಲಿ ಬಾಡಿಗೆ ಮನೆಯಲ್ಲಿ ಇರೋಕೆ ಪುಷ್ಪಾಗೆ ಇಷ್ಟ ಇಲ್ಲ. ಹೀಗಾಗಿ, ಸ್ವಂತ ಮನೆ ಖರೀದಿ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:36 am, Fri, 11 July 25