ರಾಧಿಕಾನ ಕೇರ್ ಮಾಡೋ ರೀತಿಗೆ ಯಶ್ನ ಜಂಟಲ್ಮನ್ ಎಂದು ಕರೆದ ಬಾಲಿವುಡ್ ಮಂದಿ
ರಾಕಿಂಗ್ ಸ್ಟಾರ್ ಯಶ್ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ 'ಮನದ ಕಡಲು' ಚಿತ್ರದ ಟ್ರೇಲರ್ ಲಾಂಚ್‌ನಲ್ಲಿ ಪಾಲ್ಗೊಂಡ ಬಳಿಕ, 'ಟಾಕ್ಸಿಕ್' ಚಿತ್ರದ ಚಿತ್ರೀಕರಣಕ್ಕಾಗಿ ಮುಂಬೈಗೆ ತೆರಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 'ಟಾಕ್ಸಿಕ್' ಚಿತ್ರದ ಪೋಸ್ಟರ್ ಬಿಡುಗಡೆಯಾಗಿ, ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಿಸಲಾಗಿದೆ.

ರಾಕಿಂಗ್ ಸ್ಟಾರ್ ಯಶ್ (Yash) ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದರು. ಅವರು ‘ಮನದ ಕಡಲು’ ಸಿನಿಮಾದ ಟ್ರೇಲರ್ ಲಾಂಚ್ಗೆ ಮುಖ್ಯ ಅತಿಥಿಯಾಗಿ ಬಂದಿದ್ದರು. ಈಗ ಅವರು ‘ಟಾಕ್ಸಿಕ್’ ಸಿನಿಮಾ ಕೆಲಸಕ್ಕಾಗಿ ಮುಂಬೈಗೆ ತೆರಳಿದ್ದಾರೆ. ಆ ಸಂದರ್ಭದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಯಶ್ ಅವರ ಲುಕ್ ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ. ಯಶ್ ಜೊತೆ ಅವರ ಪತ್ನಿ ರಾಧಿಕಾ ಪಂಡಿತ್ ಕೂಡ ಜೊತೆಗೆ ಇದ್ದರು.
ಯಶ್ ಅವರು ‘ಟಾಕ್ಸಿಕ್’ ಸಿನಿಮಾ ಘೋಷಣೆ ಮಾಡಿದಾಗಿನಿಂದಲೂ ಅಭಿಮಾನಿಗಳ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಈ ಚಿತ್ರ ಯಾವಾಗ ರಿಲೀಸ್ ಆಗುತ್ತದೆ ಎಂದು ಫ್ಯಾನ್ಸ್ ಕಾಯುತ್ತಾ ಇದ್ದಾರೆ. ಬೆಂಗಳೂರಿನಲ್ಲಿ ಒಂದು ಹಂತದ ಶೂಟ್ ಮುಗಿಸಿದ ಬಳಿಕ ಇಡೀ ತಂಡ ಮುಂಬೈಗೆ ಶಿಫ್ಟ್ ಆಗಿದೆ. ಅಲ್ಲಿ ಚಿತ್ರತಂಡ ಶರವೇಗದಲ್ಲಿ ಚಿತ್ರೀಕರಣ ಮಾಡುತ್ತಿದೆ.
ಸದ್ಯ ಯಶ್ ಅವರು ಮುಂಬೈನಲ್ಲಿ ಕಾಣಿಸಿಕೊಂಡಿದ್ದು, ‘ಟಾಕ್ಸಿಕ್’ ಚಿತ್ರದ ಶೂಟ್ಗಾಗಿ ಅವರು ಅಲ್ಲಿ ಭಾಗಿ ಆಗಿದ್ದಾರೆ ಎನ್ನಲಾಗುತ್ತಿದೆ. ಯಶ್ ಅವರು ಪಾಪರಾಜಿಗಳನ್ನು ಕಾಣುತ್ತಿದ್ದಂತೆ ಅವರತ್ತ ಕೈ ಬೀಸಿದ್ದಾರೆ. ಅವರೆಲ್ಲರಿಗೂ ನಮಸ್ಕರಿಸಿ ಆ ಬಳಿಕ ಕಾರನ್ನು ಏರಿದ್ದಾರೆ. ಯಶ್ ಜೊತೆ ರಾಧಿಕಾ ಪಂಡಿತ್ ಕೂಡ ಇದ್ದರು ಅನ್ನೋದು ವಿಶೇಷ. ಅವರ ಕೈ ಹಿಡಿದು ಯಶ್ ಬಂದಿದ್ದು, ಯಶ್ನ ಜಂಟಲ್ಮೆನ್ ಎಂದು ಪಾಪರಾಜಿಗಳು ಕರೆದಿದ್ದಾರೆ.
View this post on Instagram
ಯಶ್ ಅವರು ಭಾನುವಾರ (ಮಾರ್ಚ್ 23) ಬೆಂಗಳೂರಿನಲ್ಲಿ ಇದ್ದರು. ನಗರದ ಲುಲು ಮಾಲ್ನಲ್ಲಿ ಆಯೋಜಿಸಿದ್ದ ‘ಮನದ ಕಡಲು’ ಸಿನಿಮಾದ ಟ್ರೇಲರ್ ಲಾಂಚ್ ಕಾರ್ಯಕ್ರಮಕ್ಕೆ ಯಶ್ ಅತಿಥಿಯಾಗಿ ತೆರಳಿದ್ದರು. ಅವರು ಹೊಸ ಕಲಾವಿದರನ್ನು ಬೆಂಬಲಿಸಿ ಬಂದಿದ್ದಾರೆ. ಇದಾದ ಬೆನ್ನಲ್ಲೇ ಅವರು ಮುಂಬೈಗೆ ಹಾರಿದ್ದಾರೆ.
ಇದನ್ನೂ ಓದಿ: ಯಶ್ನ ಪ್ರೀತಿಸುತ್ತಿದ್ದ ವಿಚಾರವನ್ನು ಈ ನಟಿಯರ ಬಳಿ ಹೇಳಿಕೊಂಡಿದ್ದ ರಾಧಿಕಾ ಪಂಡಿತ್
ಯಶ್ ಅವರ ನಟನೆಯ ‘ಟಾಕ್ಸಿಕ್’ ಚಿತ್ರದ ಹೊಸ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಗಿದೆ. ಈ ಪೋಸ್ಟರ್ನಲ್ಲಿ ಸಿನಿಮಾ ಮುಂದಿನ ವರ್ಷ ಮಾರ್ಚ್ 19ರಂದು ರಿಲೀಸ್ ಆಗಲಿದೆ ಎಂಬ ಮಾಹಿತಿ ರಿವೀಲ್ ಆಗಿದೆ. ಇದನ್ನು ಕೇಳಿ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:47 am, Tue, 25 March 25