‘ಟಾಕ್ಸಿಕ್’ ಚಿತ್ರಕ್ಕೆ ಠಕ್ಕರ್ ಕೊಡಲು ಬರ್ತಿದೆ ಮತ್ತೆರಡು ಬಿಗ್ ಬಜೆಟ್ ಸಿನಿಮಾ
ಯಶ್ ಅಭಿನಯದ‘ಟಾಕ್ಸಿಕ್’ ಭಾರತದ ಬಹು ನಿರೀಕ್ಷಿತ ಚಿತ್ರ ಎನಿಸಿಕೊಂಡಿದೆ. ಭಾರತದಲ್ಲಿ ಮಾತ್ರವಲ್ಲ ವಿದೇಶಿ ಅಭಿಮಾನಿಗಳು ಸಹ ‘ಟಾಕ್ಸಿಕ್’ ಸಿನಿಮಾದ ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ. ಈ ಚಿತ್ರಕ್ಕೆ ಠಕ್ಕರ್ ಕೊಡಲು ಎರಡು ಬಿಗ್ ಬಜೆಟ್ ಚಿತ್ರಗಳು ರೆಡಿ ಆಗಿವೆ. ಆ ಬಗ್ಗೆ ಇಲ್ಲಿದೆ ವಿವರ.

‘ಟಾಕ್ಸಿಕ್’ ಸಿನಿಮಾ (Toxic Movie) ಇದೇ ಏಪ್ರಿಲ್ 10ರಂದು ರಿಲೀಸ್ ಆಗಬೇಕಿತ್ತು. ಆದರೆ, ತಂಡದ ಪ್ಲ್ಯಾನ್ ಬದಲಾಗಿದೆ. ಶೂಟಿಂಗ್ಗೆ ಇನ್ನೂ ಸಾಕಷ್ಟು ಸಮಯ ಹಿಡಿಯಲಿರುವುದರಿಂದ ಚಿತ್ರದ ರಿಲೀಸ್ ದಿನಾಂಕವನ್ನು ಮುಂದಿನ ಮಾರ್ಚ್ 19ಕ್ಕೆ ಮುಂದೂಡಲಾಗಿದೆ. ಅಂದರೆ ಸಿನಿಮಾ ರಿಲೀಸ್ಗೆ ಇನ್ನೂ ಬರೋಬ್ಬರಿ 1 ವರ್ಷ ಕಾಯಬೇಕಿದೆ. ಸಾಕಷ್ಟು ಎಚ್ಚರಿಕೆಯಿಂದ ಕೆಲಸಗಳನ್ನು ಮಾಡಲಾಗುತ್ತಿರುವುದರಿಂದ ಸಿನಿಮಾದ ಶೂಟ್ಗೆ ಹೆಚ್ಚಿನ ಸಮಯದ ಅಗತ್ಯವಿದೆ ಎಂದು ಹೇಳಲಾಗುತ್ತಿದೆ. ಈಗ ಈ ಚಿತ್ರಕ್ಕೆ ಠಕ್ಕರ್ ಕೊಡಲು ಟಾಲಿವುಡ್ನ ಎರಡು ಸಿನಿಮಾಗಳು ರೆಡಿ ಆಗಿದೆ.
ಸಾಮಾನ್ಯವಾಗಿ ಬಿಗ್ ಬಜೆಟ್ ಚಿತ್ರ ಒಂದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗುತ್ತದೆ ಎಂದರೆ ಆ ಸಂದರ್ಭದಲ್ಲಿ ಮತ್ತೊಂದು ಬಿಗ್ ಬಜೆಟ್ ಚಿತ್ರವನ್ನು ತೆರೆಗೆ ತರುವ ಸಾಹಸವನ್ನು ನಿರ್ಮಾಕರು ಮಾಡುವುದಿಲ್ಲ. ಹಾಗೆ ಮಾಡಿದರೆ ಎರಡೂ ನಿರ್ಮಾಪಕರಿಗೆ ನಷ್ಟ ಆಗುವ ಸಾಧ್ಯತೆ ಇರುತ್ತದೆ. ಆದರೆ, ಟಾಲಿವುಡ್ ನಿರ್ಮಾಪಕರು ಈ ರೀತಿಯ ಸಾಹಸ ಮಾಡುವ ಕೆಲಸಕ್ಕೆ ಮುಂದಾಗುತ್ತಾ ಇದ್ದಾರೆ.
ಈ ರೀತಿ ಸಾಹಸಕ್ಕೆ ಮುಂದಾಗುತ್ತಿರುವುದು ರಾಮ್ ಚರಣ್ ಹಾಗೂ ಬುಚ್ಚಿ ಬಾಬು ಸನಾ ಒಟ್ಟಾಗಿ ಮಾಡುತ್ತಿರುವ ಸಿನಿಮಾ ತಂಡದವರು. ಸದ್ಯ ಈ ಚಿತ್ರಕ್ಕೆ ‘ಪೆಡ್ಡಿ’ ಎಂಬ ಟೈಟಲ್ ಇಡಲಾಗಿದೆ ಎನ್ನಲಾಗಿದೆ. ಮಾರ್ಚ್ 27ರಂದು ರಾಮ್ ಚರಣ್ ಜನ್ಮದಿನ. ಈ ವೇಳೆ ಈ ಬಗ್ಗೆ ಘೋಷಣೆ ಆಗೋ ಸಾಧ್ಯತೆ ಇದೆ.
19-03-2026 🙏 pic.twitter.com/9wk8ujqxgs
— Yash (@TheNameIsYash) March 22, 2025
ರಾಮ್ ಚರಣ್ ಅವರ ಮುಂದಿನ ಬರ್ತ್ಡೇ ಸಂದರ್ಭದಲ್ಲಿ ‘ಪೆಡ್ಡಿ’ ರಿಲೀಸ್ ಮಾಡುವ ಆಲೋಚನೆ ತಂಡಕ್ಕೆ ಬಂದಿದೆ. ರಾಮ್ ಚರಣ್ ಜನ್ಮದಿನ ಮಾರ್ಚ್ 27. ಹೀಗಾಗಿ, ಇದೇ ಸಮಯದ ಆಸುಪಾಸಿನಲ್ಲಿ ಚಿತ್ರ ರಿಲೀಸ್ ಆಗುವ ಸಾಧ್ಯತೆ ಹೆಚ್ಚಿದೆ. ನಾನಿ ನಟನೆಯ ‘ದಿ ಪ್ಯಾರಡೈಸ್’ ಸಿನಿಮಾ ಕೂಡ ಇದೇ ಸಂದರ್ಭದಲ್ಲಿ ಬಿಡುಗಡೆ ಆಗೋ ಸಾಧ್ಯತೆ ಇದೆ ಎಂದು ವರದಿ ಆಗಿದೆ. ಹೀಗಾಗಿ, ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಕ್ಲ್ಯಾಶ್ ಏರ್ಪಡುವ ಸಾಧ್ಯತೆ ಇದೆ.
ಇದನ್ನೂ ಓದಿ: ಸ್ಟೈಲಿಷ್ ಪೋಸ್ಟರ್ ಮೂಲಕ ‘ಟಾಕ್ಸಿಕ್’ ಬಿಡುಗಡೆ ದಿನಾಂಕ ಘೋಷಿಸಿದ ಯಶ್
ಮಾರ್ಚ್ ಸಂದರ್ಭದಲ್ಲಿ ಎಲ್ಲರೂ ಶಾಲಾ ಪರೀಕ್ಷೆಯಲ್ಲಿ ಬ್ಯುಸಿ ಇರುತ್ತಾರೆ. ಐಪಿಎಲ್ ಅಬ್ಬರ ಕೂಡ ಶುರುವಾಗಿರುತ್ತದೆ. ಇವುಗಳ ಮಧ್ಯೆಯೂ ದೊಡ್ಡ ದೊಡ್ಡ ಬಿಗ್ ಬಜೆಟ್ ಚಿತ್ರಗಳು ರಿಲೀಸ್ ಆಗುತ್ತಿರುವುದು ನಿಜಕ್ಕೂ ವಿಶೇಷ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.