Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಟಿ ಪೂಜಾ ಹೆಗ್ಡೆಯನ್ನು ಬ್ಯಾನ್ ಮಾಡಿತೆ ಟಾಲಿವುಡ್: ಕಾರಣವೇನು?

Pooja Hegde: ನಟಿ ಪೂಜಾ ಹೆಗ್ಡೆ ಕೆಲ ವರ್ಷದ ಹಿಂದಿನ ವರೆಗೂ ಟಾಲಿವುಡ್​ನ ಬಲು ಬೇಡಿಕೆಯ ನಟಿಯಾಗಿದ್ದರು. ಆದರೆ ಕಳೆದ ಮೂರು ವರ್ಷದಿಂದ ಅವರಿಗೆ ಒಂದೇ ಒಂದು ತೆಲುಗು ಸಿನಿಮಾ ಆಫರ್ ಆಗಿಲ್ಲ. ಕೆಲ ಆಂತರಿಕ ಸುದ್ದಿಗಳ ಪ್ರಕಾರ ನಟಿ ಪೂಜಾ ಹೆಗ್ಡೆ ಮೇಲೆ ತೆಲುಗು ಚಿತ್ರರಂಗದ ಪರೋಕ್ಷ ಬ್ಯಾನ್ ಹೇರಿದೆ ಎನ್ನಲಾಗುತ್ತಿದೆ. ಕಾರಣವೇನು?

ನಟಿ ಪೂಜಾ ಹೆಗ್ಡೆಯನ್ನು ಬ್ಯಾನ್ ಮಾಡಿತೆ ಟಾಲಿವುಡ್: ಕಾರಣವೇನು?
Pooja Hegde
Follow us
ಮಂಜುನಾಥ ಸಿ.
|

Updated on: Mar 02, 2025 | 9:27 AM

ನಟಿ ಪೂಜಾ ಹೆಗ್ಡೆ ಕೆಲ ವರ್ಷಗಳ ಹಿಂದಿನ ವರೆಗೆ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದರು. 2014 ರಿಂದಲೂ ಅವರು ಸತತವಾಗಿ ತೆಲುಗು ಸಿನಿಮಾಗಳಲ್ಲಿ ನಟಿಸುತ್ತಲೇ ಬಂದಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಸತತವಾಗಿ ಹಿಟ್ ಸಿನಿಮಾಗಳನ್ನು ನೀಡಿದ ಶ್ರೇಯ ಪೂಜಾ ಹೆಗ್ಡೆಗೆ ಇದೆ. ಅಲ್ಲು ಅರ್ಜುನ್, ಜೂ ಎನ್​ಟಿಆರ್, ಮಹೇಶ್ ಬಾಬು, ಪ್ರಭಾಸ್, ರಾಮ್ ಚರಣ್, ಪವನ್ ಕಲ್ಯಾಣ್ ಹೀಗೆ ತೆಲುಗಿನ ಎಲ್ಲ ಸ್ಟಾರ್ ನಟರೊಟ್ಟಿಗೆ ಪೂಜಾ ಹೆಗ್ಡೆ ನಟಿಸಿದ್ದರು. ಆದರೆ ಕಳೆದ ಮೂರು ವರ್ಷದಿಂದ ಪೂಜಾ ಹೆಗ್ಡೆ ಕೈಯಲ್ಲಿ ಒಂದೇ ಒಂದು ತೆಲುಗು ಸಿನಿಮಾ ಇಲ್ಲ!

ಒಂದರ ಹಿಂದೊಂದು ಹಿಟ್ ಸಿನಿಮಾ ನೀಡಿದ, ಸತತವಾಗಿ ಬ್ಲಾಕ್ ಬಸ್ಟರ್ ನೀಡಿದ ನಟಿಯ ಕೈಯಲ್ಲಿ ಈಗ ಒಂದೇ ಒಂದು ತೆಲುಗು ಸಿನಿಮಾ ಸಹ ಇಲ್ಲ! ಆಂತರಿಕ ಸುದ್ದಿಗಳ ಪ್ರಕಾರ, ತೆಲುಗು ಚಿತ್ರರಂಗ ನಟಿ ಪೂಜಾ ಹೆಗ್ಡೆ ಮೇಲೆ ಪರೋಕ್ಷವಾಗಿ ಬ್ಯಾನ್ ಹೇರಿದೆ. ಪೂಜಾ ಹೆಗ್ಡೆ ಮೇಲಿನ ಬ್ಯಾನ್ ಅನ್ನು ಬಹಿರಂಗವಾಗಿ ಘೋಷಿಸಲಾಗಿಲ್ಲವಾದರೂ ಸಿನಿಮಾ ನಿರ್ಮಾಪಕರುಗಳು ಒಗ್ಗಟ್ಟಿನಿಂದ ಆಂತರಿಕ ಮಾತುಕತೆ ಮೂಲಕ ನಟಿಯನ್ನು ಚಿತ್ರರಂಗದಿಂದ ಬ್ಯಾನ್ ಮಾಡಿದ್ದಾರೆ ಎನ್ನಲಾಗಿದೆ.

ಅಸಲಿಗೆ ಈ ಬ್ಯಾನ್​ಗೆ ಕಾರಣವೆಂದರೆ ಪೂಜಾ ಹೆಗ್ಡೆಯ ಅತಿಯಾದ ಸಂಭಾವನೆ ಮತ್ತು ಚಿತ್ರೀಕರಣ ಸೆಟ್​ನಲ್ಲಿ ಅವರು ಕೇಳುವ ಸವಲತ್ತುಗಳು. ಕಳೆದ ವರ್ಷ ಸಿನಿಮಾ ನಿರ್ಮಾಪಕರು ಇದೇ ವಿಷಯವಾಗಿ ಮಾಧ್ಯಮಗಳ ಬಳಿ ಮಾತನಾಡಿದ್ದರು, ಸಿನಿಮಾ ನಟ, ನಟಿಯರು ಸೆಟ್​ಗಳಲ್ಲಿ ಅತಿಯಾದ ಸವಲತ್ತುಗಳನ್ನು ಕೇಳುತ್ತಾರೆ. ಅವರಿಗೆ ಅತಿಯಾದ ಸಂಭಾವನೆ ನೀಡುವ ಜೊತೆಗೆ ಅವರು ಕೇಳಿದ ಕಡೆಯಿಂದ ಕೇಳಿದ ರೀತಿ ಊಟ, ವ್ಯಾನಿಟಿ ವ್ಯಾನ್, ಅದರೊಳಗೆ ಜಿಮ್ಮು ಇನ್ನಿತರೆ ಸವಲತ್ತುಗಳು, ಅವರಿಗೆ ಇಂಥಹುದ್ದೇ ಮೇಕಪ್ ಮ್ಯಾನ್, ಹೇರ್ ಡ್ರೆಸರ್, ಟಚಪ್ ಹೀಗೆ ಹಲವು ಬೇಡಿಕೆಗಳನ್ನು ಪೂರೈಸಬೇಕು ಎಂದು ನಿರ್ಮಾಪಕರು ಬೇಸರ ವ್ಯಕ್ತಪಡಿಸಿದ್ದರು. ನಿರ್ಮಾಪಕರ ಈ ದೂರಿಗೆ ಪೂಜಾ ಹೆಗ್ಡೆಯೇ ಕಾರಣ ಎನ್ನಲಾಗುತ್ತಿದೆ.

ಇದನ್ನೂ ಓದಿ:ರಜನಿ ಸಿನಿಮಾದಲ್ಲಿ ಐಟಂ ಸಾಂಗ್ ಮಾಡಲು ದೊಡ್ಡ ಮೊತ್ತ ಪಡೆದ ಪೂಜಾ ಹೆಗ್ಡೆ?

ಟಾಲಿವುಡ್​ನಿಂದ ದೂರಾಗಿರುವ ಪೂಜಾ ಹೆಗ್ಡೆ ಇದೀಗ ತಮಿಳು ಹಾಗೂ ಹಿಂದಿ ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ತಮಿಳಿನ ನಾಲ್ಕು ಸಿನಿಮಾಗಳಲ್ಲಿ ಪೂಜಾ ಹೆಗ್ಡೆ ನಟಿಸುತ್ತಿದ್ದಾರೆ. ಸೂರ್ಯ ಜೊತೆಗೆ ‘ರೆಟ್ರೊ’, ರಾಘವ್ ಲಾರೆನ್ಸ್ ನಟನೆಯ ‘ಕಾಂಚನಾ 4’, ದಳಪತಿ ವಿಜಯ್ ನಟಿಸುತ್ತಿರುವ ಕೊನೆಯ ಸಿನಿಮಾ ‘ಜನ ನಾಯಗನ್’, ರಜನೀಕಾಂತ್ ನಟನೆಯ ‘ಕೂಲಿ’ ಸಿನಿಮಾದ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಿಂದಿಯ ‘ಹೇ ಜವಾನಿ ತೋ ಇಷ್ಕ್ ಹೋನಾ ಹೇ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಪೂಜಾ ಹೆಗ್ಡೆ ಒಟಿಟಿಗೂ ಎಂಟ್ರಿ ನೀಡಲಿದ್ದಾರೆ. ಥ್ರಿಲ್ಲರ್ ವೆಬ್ ಸರಣಿಯೊಂದರಲ್ಲಿ ಪೂಜಾ ಹೆಗ್ಡೆ ನಟಿಸಲಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಶೀದ್ ಖಾನ್ ವಿರುದ್ಧ ಬೌಂಡರಿಗಳ ಮಳೆಗರೆದ ಲಿವಿಂಗ್‌ಸ್ಟೋನ್
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ರಸ್ತೆಯಲ್ಲಿ ಹೋಗುತ್ತಿದ್ದವರ ಮೇಲೆ ಗೂಳಿ ದಾಳಿ; ಶಾಕಿಂಗ್ ವಿಡಿಯೋ ಇಲ್ಲಿದೆ
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಬೀದರ್ ಜಡ್ಜ್​​ ಮನೆಯಲ್ಲಿಯೇ ಕಳ್ಳತನ ಮಾಡಿದ ಖತರ್ನಾಕ್ ಖದೀಮರು
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಕರ್ನಾಟಕದಲ್ಲಿ 30,000 ಎಕರೆ ವಕ್ಫ್ ಭೂಮಿ ವಿದೇಶಿ ಕಂಪನಿಗಳಿಗೆ ಗುತ್ತಿಗೆ;ಶಾ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ಸಿರಾಜ್ ಮಾರಕ ದಾಳಿಗೆ ತತ್ತರಿಸಿದ ಆರ್​ಸಿಬಿ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ನನಗೆ ನ್ಯಾಯ ಬೇಕೆಂದು ವಿಧಾನಸೌಧ ಮುಂದೆ ಆತ್ಮಹತ್ಯೆಗೆ ಯತ್ನಿಸಿದ ಯುವಕ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಕರ್ನಾಟಕ ಭವನದ ಉದ್ಘಾಟನೆ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ಸುಪ್ರೀಂ ಕೋರ್ಟ್ ಗಾರ್ಡನ್​ನಿಂದಲೇ ಗುಲಾಬಿ ಹೂವು ಕದ್ದ ಚಾಲಾಕಿ ಮಹಿಳೆ ಹೇಳಿದ
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವ್ಯಕ್ತಿ ಮುಖ್ಯವಲ್ಲ, ರಾಜ್ಯದ ಜನ ಮತ್ತು ಪಕ್ಷದ ಭವಿಷ್ಯ ಮುಖ್ಯ: ಬಿಪಿ ಹರೀಶ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್
ವಕ್ಫ್ ತಿದ್ದುಪಡಿ ಮಸೂದೆ ಪಾಸಾಗಿದ್ದಕ್ಕೂ ಶಿವಕುಮಾರ್ ನೋ ಕಾಮೆಂಟ್ಸ್