‘ಟಾಕ್ಸಿಕ್’ ಬೋಲ್ಡ್ ದೃಶ್ಯಕ್ಕೆ ರುಕ್ಮಿಣಿ ವಸಂತ್ ಟ್ರೋಲ್: ನಟಿಯ ಬೆಂಬಲಕ್ಕೆ ನಿಂತ ಫ್ಯಾನ್ಸ್

‘ಟಾಕ್ಸಿಕ್’ ಸಿನಿಮಾ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗುತ್ತಿದೆ. ನಟಿ ರುಕ್ಮಿಣಿ ವಸಂತ್ ಅವರು ಮಾಡಿರುವ ಪಾತ್ರದ ಬಗ್ಗೆ ಕೂಡ ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಯಶ್ ಜೊತೆ ರುಕ್ಮಿಣಿ ವಸಂತ್ ಅವರು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದು ಕೆಲವರಿಗೆ ಇಷ್ಟ ಆಗಿಲ್ಲ. ಆದರೆ ಫ್ಯಾನ್ಸ್ ಬೆಂಬಲ ಸೂಚಿಸಿದ್ದಾರೆ.

‘ಟಾಕ್ಸಿಕ್’ ಬೋಲ್ಡ್ ದೃಶ್ಯಕ್ಕೆ ರುಕ್ಮಿಣಿ ವಸಂತ್ ಟ್ರೋಲ್: ನಟಿಯ ಬೆಂಬಲಕ್ಕೆ ನಿಂತ ಫ್ಯಾನ್ಸ್
Rukmini Vasanth

Updated on: Aug 27, 2026 | 11:17 PM

‘ರಾಕಿಂಗ್ ಸ್ಟಾರ್’ ಯಶ್ (Yash) ಹಾಗೂ ನಿರ್ದೇಶಕಿ ಗೀತು ಮೋಹನ್ ದಾಸ್ ಕಾಂಬಿನೇಷನ್‌ನ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಸಿನಿಮಾ ಬಿಡುಗಡೆಯಾಗಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿರುವ ಈ ಸಿನಿಮಾದಲ್ಲಿ, ನಟಿ ರುಕ್ಮಿಣಿ ವಸಂತ್ (Rukmini Vasanth) ಅವರ ಪಾತ್ರ ಹಾಗೂ ಬೋಲ್ಡ್ ದೃಶ್ಯವೊಂದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್‌ಗಳು ಆರಂಭವಾಗಿವೆ. ಆದರೆ, ರುಕ್ಮಿಣಿ ಅಭಿಮಾನಿಗಳು ಟ್ರೋಲಿಗರಿಗೆ ತಕ್ಕ ತಿರುಗೇಟು ನೀಡುವ ಮೂಲಕ ನಟಿಯ ಬೆಂಬಲಕ್ಕೆ ನಿಂತಿದ್ದಾರೆ.

ಸಿನಿಮಾದಲ್ಲಿ ರುಕ್ಮಿಣಿ ಪಾತ್ರವೇನು?

‘ಟಾಕ್ಸಿಕ್’ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರು ಮೆಲಿಸಾ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಥೆಯ ನಾಯಕ ರಾಯನನ್ನು ಕೊಲ್ಲುವ ಉದ್ದೇಶದಿಂದ ಬರುವ ಮೆಲಿಸಾ, ನಂತರ ಆತನ ಪ್ರೇಯಸಿಯಾಗುತ್ತಾಳೆ. ಚಿತ್ರದಲ್ಲಿ ಇಬ್ಬರ ನಡುವಿನ ಆಪ್ತ ದೃಶ್ಯಗಳು ಕೇವಲ ಸೂಚ್ಯವಾಗಿ ತೋರಿಸಲಾಗಿದೆಯೇ ಹೊರತು ಯಾವುದೇ ಗ್ಲಾಮರಸ್ ಅಥವಾ ನೇರ ದೃಶ್ಯಗಳಿಲ್ಲ.

ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ:

ರುಕ್ಮಿಣಿ ಮತ್ತು ಯಶ್ ಅವರ ಆಪ್ತ ದೃಶ್ಯಗಳನ್ನು ಸೂಚ್ಯವಾಗಿ ತೋರಿಸಲಾಗಿದ್ದರೂ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ರುಕ್ಮಿಣಿ ವಸಂತ್ ಅವರನ್ನು ಗುರಿಯಾಗಿಸಿಕೊಂಡು, ‘ನಿಮ್ಮಿಂದ ಇದನ್ನು ನಿರೀಕ್ಷಿಸಿರಲಿಲ್ಲ’, ‘ರುಕ್ಮಿಣಿ ಎಂದರೆ ನಮಗೆ ವೈಫ್ ಮೆಟೀರಿಯಲ್ ಕಲ್ಪನೆಯಿತ್ತು. ಅವರನ್ನು ಇಂತಹ ದೃಶ್ಯದಲ್ಲಿ ನೋಡಲು ಸಾಧ್ಯವಿಲ್ಲ’ ಎಂದೆಲ್ಲ ಕಮೆಂಟ್ ಮಾಡಿ ಟ್ರೋಲ್ ಮಾಡಲು ಶುರುಮಾಡಿದ್ದರು.

ಟ್ರೋಲಿಗರಿಗೆ ತಕ್ಕ ಉತ್ತರ ನೀಡಿದ ಫ್ಯಾನ್ಸ್:

ಈ ಅನಗತ್ಯ ಟ್ರೋಲ್‌ಗಳ ವಿರುದ್ಧ ರುಕ್ಮಿಣಿ ಅಭಿಮಾನಿಗಳು ತೀವ್ರವಾಗಿ ಕಿಡಿಕಾರಿದ್ದಾರೆ. ‘ಸಿನಿಮಾದಲ್ಲಿ ಯಾವುದೇ ಮುತ್ತಿನ ದೃಶ್ಯ ಅಥವಾ ಬೋಲ್ಡ್ ದೃಶ್ಯವಿಲ್ಲದಿದ್ದರೂ ಕೆಲವರು ಅಟೆನ್ಷನ್‌ಗಾಗಿ ಅನಗತ್ಯವಾಗಿ ಕಮೆಂಟ್ ಮಾಡುತ್ತಿದ್ದಾರೆ’ ಎಂದು ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ. ‘ಇಂತಹ ಸಣ್ಣ ಮನಸ್ಸು ಹೊಂದಿರುವ ಟ್ರೋಲಿಗರು ಅಳುವುದನ್ನು ನೋಡಿದರೆ ಖುಷಿಯಾಗುತ್ತದೆ. ರುಕ್ಮಿಣಿ ಇಂತಹ ಇನ್ನಷ್ಟು ವಿಭಿನ್ನ ಪಾತ್ರಗಳನ್ನು ಮಾಡಬೇಕು’ ಎಂದು ನಟಿಗೆ ಫ್ಯಾನ್ಸ್ ಬೆಂಬಲ ಸೂಚಿಸಿದ್ದಾರೆ.

ಇದನ್ನೂ ಓದಿ: ‘ಟಾಕ್ಸಿಕ್’ ಮೊದಲ ದಿನದ ಗಳಿಕೆ 150 ಕೋಟಿ ರೂಪಾಯಿ; ಚಿತ್ರತಂಡದ ಅಧಿಕೃತ ಮಾಹಿತಿ

ಮತ್ತೊಬ್ಬ ಅಭಿಮಾನಿ ಕಮೆಂಟ್ ಮಾಡಿ, ‘ನಿಮ್ಮ ಕಲ್ಪನೆಗೆ ತಕ್ಕಂತೆ ನಟಿಯರು ಬದುಕಬೇಕು ಎಂದುಕೊಳ್ಳುವುದು ಮಾನಸಿಕ ಅಸ್ವಸ್ಥತೆ. ನಟಿಯರ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಗೌರವಿಸುವುದನ್ನು ಕಲಿಯಿರಿ’ ಎಂದು ಕ್ಲಾಸ್ ತೆಗೆದುಕೊಂಡಿದ್ದಾರೆ. ಇವುಗಳ ಬಗ್ಗೆ ರುಕ್ಮಿಣಿ ವಸಂತ್ ಅವರು ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Loading...
Unable to load recommendations.
Follow Us