ತೆಲುಗಿನಿಂದ ಕನ್ನಡ ಚಿತ್ರರಂಗಕ್ಕೆ ಬರ್ತಿದ್ದಾರೆ ನಟ ಸಾಯಿಕುಮಾರ್ ಪುತ್ರ ಆದಿ
ಹಿರಿಯ ನಟ ಸಾಯಿ ಕುಮಾರ್ ಅವರದ್ದು ಕಲಾವಿದರ ಕುಟುಂಬ. ಅವರ ಸಹೋದರ ರವಿಶಂಕರ್ ಸಹ ಬಲು ಜನಪ್ರಿಯ ನಟ. ಅವರ ಪುತ್ರ ಆದಿ ಸಹ ತೆಲುಗು ಚಿತ್ರರಂಗದಲ್ಲಿ ಜನಪ್ರಿಯ ನಟ. ಕಳೆದ 15 ವರ್ಷಗಳಿಂದಲೂ ತೆಲುಗು ಸಿನಿಮಾಗಳಲ್ಲಿ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಇದೀಗ ಆದಿ ಮೊದಲ ಬಾರಿ ಕನ್ನಡ ಚಿತ್ರರಂಗಕ್ಕೆ ಕಾಲಿಸಿದ್ದು, ಕನ್ನಡ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ.

ಸಾಯಿ ಕುಮಾರ್, ದಶಕಗಳಿಂದಲೂ ಪ್ಯಾನ್ ಇಂಡಿಯಾ ನಟ. ಕನ್ನಡ, ತೆಲುಗು ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿರುವುದು ಮಾತ್ರವೇ ಅಲ್ಲದೆ ಅಭಿಮಾನಿಗಳನ್ನು ಸಹ ಹೊಂದಿದ್ದಾರೆ. ಹಿರಿಯ ನಟ ಸಾಯಿ ಕುಮಾರ್ ಅವರದ್ದು ಕಲಾವಿದರ ಕುಟುಂಬ. ಅವರ ಸಹೋದರ ರವಿಶಂಕರ್ ಸಹ ಬಲು ಜನಪ್ರಿಯ ನಟ. ಅವರ ಪುತ್ರ ಆದಿ ಸಹ ತೆಲುಗು ಚಿತ್ರರಂಗದಲ್ಲಿ ಜನಪ್ರಿಯ ನಟ. ಕಳೆದ 15 ವರ್ಷಗಳಿಂದಲೂ ತೆಲುಗು ಸಿನಿಮಾಗಳಲ್ಲಿ ಅವರು ನಾಯಕನಾಗಿ ನಟಿಸುತ್ತಿದ್ದಾರೆ. ಇದೀಗ ಆದಿ ಮೊದಲ ಬಾರಿ ಕನ್ನಡ ಚಿತ್ರರಂಗಕ್ಕೆ ಕಾಲಿಸಿದ್ದು, ಕನ್ನಡ ಸಿನಿಮಾನಲ್ಲಿ ನಟಿಸಲು ಮುಂದಾಗಿದ್ದಾರೆ.
15 ವರ್ಷಗಳಲ್ಲಿ ‘ಪ್ರೇಮ ಕಾವಾಲಿ’, ‘ಲವ್ಲಿ’, ‘ಶಂಭಾಲ’, ‘ಸಿಎಸ್ಐ ಸನಾತನ’, ‘ಎಸ್ಐ ಯುಗಂಧರ್’ ಮುಂತಾದ 20ಕ್ಕೂ ಹೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಆದಿ, ಇದೀಗ ಕನ್ನಡದ ಭರ್ಜರಿ ಪ್ಯಾನ್ ಇಂಡಿಯಾ ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ. ‘ವೈರ’, ‘ದಮಯಂತಿ’ ಖ್ಯಾತಿಯ ನಿರ್ದೇಶಕ ನವರಸನ್ ನಿರ್ದೇಶನ ಮಾಡಲಿರುವ ಹೊಸ ಸಿನಿಮಾನಲ್ಲಿ ಆದಿ ನಾಯಕನಾಗಿ ನಟನೆ ಮಾಡುತ್ತಿದ್ದಾರೆ. ಪ್ರಾಜೆಕ್ಟ್ ಇತ್ತೀಚೆಗಷ್ಟೆ ಅಧಿಕೃತವಾಗಿ ಘೋಷಣೆಯಾಗಿದೆ.
ಈ ಬಗ್ಗೆ ಮಾತನಾಡಿರುವ ನಿರ್ದೇಶಕ ನವರಸನ್, ಇದು ದೊಡ್ಡ ಸ್ಕೇಲ್ನಲ್ಲಿ ಮೂಡಿಬರಲಿರುವ ಪ್ಯಾನ್ ಇಂಡಿಯಾ ಸಿನಿಮಾ ಎಂದು ತಿಳಿಸಿದ್ದಾರೆ. ಕನ್ನಡ ಮತ್ತು ತೆಲುಗು ಎರಡೂ ಭಾಷೆಗಳಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡುವುದಲ್ಲದೆ, ಹಿಂದಿ, ತಮಿಳು ಹಾಗೂ ಮಲಯಾಳಂ ಭಾಷೆಗಳಿಗೂ ಡಬ್ ಮಾಡಿ ಬಿಡುಗಡೆ ಮಾಡಲು ಚಿತ್ರತಂಡ ಯೋಜನೆ ಹಾಕಿಕೊಂಡಿದೆ.
ಇದನ್ನೂ ಓದಿ:‘ಚೌಕಿಧಾರ್’: ಸಾಯಿ ಕುಮಾರ್ ಬಗ್ಗೆ ನಟಿ ಧನ್ಯಾ ಮಾತು
ಚಿತ್ರದ ಕಥೆ ಹಾಗೂ ವಿಶೇಷತೆಗಳ ಬಗ್ಗೆ ತಿಳಿಸಿರುವ ನಿರ್ದೇಶಕರು, ‘ಇದು ಚಿತ್ತೂರು ಹಿನ್ನೆಲೆಯಲ್ಲಿ ಸಾಗುವ ದೈವಿಕ ರಹಸ್ಯ ಮತ್ತು ಸಸ್ಪೆನ್ಸ್ ಕಥೆಯಾಗಿದೆ. ಆಧ್ಯಾತ್ಮಿಕ ನಂಬಿಕೆಗಳು, ದೈವಿಕ ಶಕ್ತಿಗಳು ಹಾಗೂ ನಿಗೂಢ ಸಂಗತಿಗಳ ಸುತ್ತ ಈ ಸಿನಿಮಾ ಸುತ್ತಲಿದೆ” ಎಂದು ವಿವರಿಸಿದ್ದಾರೆ. ಪ್ರೇಕ್ಷಕರಿಗೆ ವಿಭಿನ್ನವಾದ ಸಿನಿಮೀಯ ಅನುಭವ ನೀಡುವ ಈ ಚಿತ್ರಕ್ಕೆ ಈಗಾಗಲೇ ಪ್ರಿ-ಪ್ರೊಡಕ್ಷನ್ ಹಾಗೂ ಸಿಜಿ, ವಿಎಫ್ಎಕ್ಸ್ ಕೆಲಸಗಳು ಭರದಿಂದ ಸಾಗಿದ್ದು, ಇದೇ ಅಕ್ಟೋಬರ್ 20ರಂದು ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಗೊಳ್ಳಲಿದೆ.
‘ದಂಡುಪಾಳ್ಯ’ ಮತ್ತು ‘ಕೃಷ್ಣಂ ಪ್ರಣಯ ಸಖಿ’ ಖ್ಯಾತಿಯ ನಿರ್ಮಾಪಕ ಪ್ರಶಾಂತ್ ರುದ್ರಪ್ಪ ಅವರು ತ್ರಿಶೂಲ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿಯಲ್ಲಿ ಈ ಚಿತ್ರಕ್ಕೆ ಭರ್ಜರಿ ಬಂಡವಾಳ ಹೂಡುತ್ತಿದ್ದು, ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ನೀಡಲಿದ್ದಾರೆ. ಚಿತ್ರೀಕರಣ 2027ರಲ್ಲಿ ಪ್ರಾರಂಭವಾಗಿ ಅದೇ ವರ್ಷ ರಿಲೀಸ್ ಸಹ ಆಗಲಿದೆ ಸಿನಿಮಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:05 pm, Wed, 14 October 26




