Ashitha: ಕನ್ನಡ ಚಿತ್ರರಂಗದ ಕಹಿ ಸತ್ಯ ಅನಾವರಣ; ಮತ್ತೆ ಮೀಟೂ ಬಿರುಗಾಳಿ ಎಬ್ಬಿಸಿದ ನಟಿ ಆಶಿತಾ

| Updated By: ಮದನ್​ ಕುಮಾರ್​

Updated on: Sep 16, 2022 | 3:41 PM

Ashitha | Me Too: ‘ಆಕಾಶ್​’, ‘ತವರಿನ ಸಿರಿ’, ‘ಬಾ ಬಾರೋ ರಸಿಕ’, ‘ರೋಡ್​ ರೋಮಿಯೋ’ ಮುಂತಾದ ಚಿತ್ರಗಳಲ್ಲಿ ನಟಿಸಿದ ಆಶಿತಾ ಅವರು ನೇರವಾಗಿ ಮಾತನಾಡಿದ್ದಾರೆ. ಮತ್ತೆ ಮೀಟೂ ಬಿರುಗಾಳಿ ಎಬ್ಬಿಸಿದ್ದಾರೆ.

Ashitha: ಕನ್ನಡ ಚಿತ್ರರಂಗದ ಕಹಿ ಸತ್ಯ ಅನಾವರಣ; ಮತ್ತೆ ಮೀಟೂ ಬಿರುಗಾಳಿ ಎಬ್ಬಿಸಿದ ನಟಿ ಆಶಿತಾ
ಆಶಿತಾ
Follow us on

ಬಣ್ಣದ ಲೋಕದಲ್ಲಿ ಭಾರಿ ಸಂಚಲನ ಮೂಡಿಸಿದ್ದ ಮೀಟೂ (Me Too) ಅಭಿಯಾನದ ಕೂಗು ಮತ್ತೆ ಕೇಳಿಬಂದಿದೆ. ಕನ್ನಡ ಚಿತ್ರರಂಗದ ಖ್ಯಾತ ನಟಿ ಆಶಿತಾ (Ashitha) ಅವರು ಒಂದಷ್ಟು ಶಾಕಿಂಗ್​ ಸತ್ಯಗಳನ್ನು ತೆರೆದಿಟ್ಟಿದ್ದಾರೆ. ಸ್ಯಾಂಡಲ್​ವುಡ್​ (Sandalwood) ನಿರ್ದೇಶಕನಿಂದ ತಮಗೆ ಆದ ಕೆಟ್ಟ ಅನುಭವದ ಬಗ್ಗೆ ಅವರೀಗ ಬಾಯಿ ಬಿಟ್ಟಿದ್ದಾರೆ. ನಟ, ನಿರ್ದೇಶಕ ರಘುರಾಮ್​ ಅವರು ತಮ್ಮದೇ ಯೂಟ್ಯೂಬ್​ ಚಾನೆಲ್​ ಹೊಂದಿದ್ದಾರೆ. ಅದರಲ್ಲಿ ನಡೆಸಿದ ಸಂದರ್ಶನದಲ್ಲಿ ಆಶಿತಾ ಅವರು ಅನೇಕ ವಿಚಾರಗಳನ್ನು ಹೇಳಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಅವರು ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಅದಕ್ಕೆ ಮೀಟೂ ಕಾರಣ ಎಂದು ಅವರು ಹೇಳಿದ್ದಾರೆ. ಇಷ್ಟೆಲ್ಲ ಹೇಳಿರುವ ಅವರು ಯಾವುದೇ ನಿರ್ದಿಷ್ಟ ವ್ಯಕ್ತಿಯ ಹೆಸರನ್ನು ಬಾಯಿ ಬಿಟ್ಟಿಲ್ಲ. ಇದರ ಜೊತೆ ತಮ್ಮ ಮದುವೆ ಮುರಿದು ಬಿದ್ದಿದ್ದರ ಬಗ್ಗೆಯೂ ಮಾತನಾಡಿದ್ದಾರೆ.

‘ಆಕಾಶ್​’, ‘ತವರಿನ ಸಿರಿ’, ‘ಬಾ ಬಾರೋ ರಸಿಕ’, ‘ರೋಡ್​ ರೋಮಿಯೋ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಆಶಿತಾ ಫೇಮಸ್​ ಆಗಿದ್ದರು. ‘ರೋಡ್​ ರೋಮಿಯೋ’ ಚಿತ್ರದ ಬಳಿಕ ಅವರು ಬಣ್ಣದ ಲೋಕದಲ್ಲಿ ಹೆಚ್ಚಾಗಿ ಸಕ್ರಿಯವಾಗಲಿಲ್ಲ. ಅದಕ್ಕೆ ಮೀಟೂ ಪಿಡುಗು ಕಾರಣ ಎಂದು ಆಶಿತಾ ಹೇಳಿದ್ದಾರೆ. ಶೂಟಿಂಗ್ ಸೆಟ್​ನಲ್ಲಿ ಎದುರಾದ ಎಲ್ಲ ಕಷ್ಟದ ಅನುಭವವನ್ನು ಅವರು ತೆರೆದಿಟ್ಟಿದ್ದಾರೆ.

‘2005-2006 ಸಂದರ್ಭದಲ್ಲಿ ಚಿತ್ರರಂಗದಲ್ಲಿ ಕಮರ್ಷಿಯಲ್​ ಜಾಸ್ತಿ ಆಯ್ತು. ರಾಜಕೀಯ, ರಿಯಲ್​ ಎಸ್ಟೇಟ್​ ಮುಂತಾದ ಕ್ಷೇತ್ರಗಳಿಂದ ನಿರ್ಮಾಪಕರು ಬರಲು ಆರಂಭಿಸಿದರು. ಆಗ ಬೇರೆ ಬೇರೆ ರೀತಿಯ ಡಿಮ್ಯಾಂಡ್​ ಮಾಡಲು ಶುರು ಮಾಡಿದರು. ಕೆಟ್ಟ ಡಿಮ್ಯಾಂಡ್​ಗಳಿಗೆ ನಾನು ಒಪ್ಪಿಕೊಳ್ಳಲಿಲ್ಲ. ಅದರಿಂದ ಕೆಲವು ಅವಕಾಶ ತಪ್ಪಿಹೋಯ್ತು. ಅಂಥ ಅವಕಾಶ ಕಳೆದುಕೊಂಡಿದ್ದಕ್ಕೆ ನನಗೆ ಕಿಂಚಿತ್ತೂ ಬೇಸರ ಇಲ್ಲ’ ಎಂದು ಆಶಿತಾ ಹೇಳಿದ್ದಾರೆ.

ಇದನ್ನೂ ಓದಿ
ಶತ್ರುಘ್ನಾ ಸಿನ್ಹಾ ಮಾಟ ಮಾಡಿಸಿದ್ದರು ಎಂದು ಆರೋಪಿಸಿದ್ದ ಮಾಜಿ ಬಿಗ್​ಬಾಸ್ ಸ್ಪರ್ಧಿಯ ಮೇಲೆ ಹರಿಹಾಯ್ದ ಲವ್ ಸಿನ್ಹಾ; ಏನಿದು ಪ್ರಕರಣ?
ಮೀಟೂ ಆರೋಪಿ ಜತೆ ವೇದಿಕೆ ಹಂಚಿಕೊಳ್ಳಲಿರುವ ಸಿಎಂ; ಅಸಮಾಧಾನ ಹೊರಹಾಕಿದ ಗಾಯಕಿ
ಶ್ರುತಿ ಹರಿಹರನ್​ ಮೀಟೂ ಕಾನೂನು ಸಮರ: ಅರ್ಜುನ್​ ಸರ್ಜಾಗೆ ಗೆಲುವು? ಸಾಕ್ಷಿ ಕೊರತೆಯಿಂದ ಬಿ ರಿಪೋರ್ಟ್​
ಮೀಟೂ ಕೇಸ್​: ಶ್ರುತಿ ಹರಿಹರನ್​ಗೆ ಹಿನ್ನಡೆ ಬಳಿಕ ಧ್ರುವ ಸರ್ಜಾ, ಮೇಘನಾ ರಾಜ್​ ಪ್ರತಿಕ್ರಿಯೆ ಏನು?

‘ನಾನು ಚಿತ್ರರಂಗದಿಂದ ಹೊರಗೆ ಹೋಗಲು ಇದೇ ಕಾರಣ. ದೊಡ್ಡ ದೊಡ್ಡ ಚಿತ್ರಗಳ ಅವಕಾಶ ಬಂದರೂ ನನಗೆ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಅವರು ಕೇಳಿದ್ದನ್ನು ನಾನು ಮಾಡುತ್ತಿಲ್ಲ ಎಂಬ ಕಾರಣಕ್ಕೆ ಸೆಟ್​ನಲ್ಲಿ ನನಗೆ ಕಷ್ಟ ಕೊಟ್ಟಿದ್ದಾರೆ. ಟೇಕ್​ ಸರಿಯಿದ್ದರೂ ಕೂಡ ರೀಟೇಕ್​ ಕೇಳುತ್ತಿದ್ದರು. ಇದನ್ನು ಮಾಡಿದರೆ ಮಾತ್ರ ಚಾನ್ಸ್​ ಕೊಡುತ್ತೇವೆ, ಹೆಚ್ಚಿನ ಪೇಮೆಂಟ್​ ಕೊಡುತ್ತೇವೆ ಎನ್ನುತ್ತಿದ್ದರು. ಹಾಗಾಗಿ ನನಗೆ ಈ ಕ್ಷೇತ್ರ ಬೇಡ ಎನಿಸಿತು’ ಎಂದು ಆಶಿತಾ ಹೇಳಿದ್ದಾರೆ.

‘ಒಳ್ಳೆಯ ಸಿನಿಮಾದ ಅವಕಾಶಕ್ಕಾಗಿ ನಾನು ಹುಟುಕಾಟ ನಡೆಸುತ್ತಿದ್ದೆ. ಆ ಸಂದರ್ಭದಲ್ಲಿ ವಿದ್ಯಾಭ್ಯಾಸ ಕೂಡ ಮಾಡುತ್ತಿದ್ದೆ. ಹಾಗಾಗಿ ‘ಮೊಗ್ಗಿನ ಮನಸು’ ಚಿತ್ರದ ಆಫರ್ ಬಂದರೂ ಕೂಡ ನನಗೆ ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ’ ಎಂದು ಆಶಿತಾ ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Published On - 3:17 pm, Fri, 16 September 22