ಮನೆಯಲ್ಲಿ ನಡೆಯಿತು ಮದುವೆ ನಾಟಕ; ಸ್ಯಾಂಡಲ್ವುಡ್ ಸಹ ಕಲಾವಿದೆಯ ಚಿನ್ನ-ಹಣ ಕದ್ದು ವರ ಪರಾರಿ
ಪ್ರೀತಿ ಮಾಡುವ ನೆಪದಲ್ಲಿ ಯುವತಿ ಹಿಂದೆ ಹರೀಶ್ ಬಿದ್ದಿದ್ದರು. ನಿನ್ನನ್ನೇ ಮದುವೆಯಾಗ್ತೀನಿ ಎಂದು ನಂಬಿಸಿದ್ದರು. ಅಲ್ಲದೆ, ಮನೆಯಲ್ಲೆ ತಾಳಿ ಕಟ್ಟಿದಂತೆ ನಾಟ ಕೂಡ ಆಡಿದ್ದರು.
ಸಿನಿಮಾದಲ್ಲಿ ನಡೆಯುವ ಕೆಲ ಘಟನೆಗಳು ಕಲ್ಪನೆಗೆ ಮೀರಿದ್ದು. ಸಿನಿಮಾದಲ್ಲಿ ಬರುವ ದೃಶ್ಯಗಳು ನಿಜ ಜೀವನದಲ್ಲಿ ಘಟಿಸೋದು ತುಂಬಾನೇ ಅಪರೂಪ. ಆದರೆ, ಈಗ ಯುವತಿಯೊಬ್ಬಳ ಬಾಳಲ್ಲಿ ಸಿನಿಮೀಯ ಘಟನೆ ನಡೆದಿದೆ. ಆ ಯುವತಿ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದರುಅನ್ನೋದು ವಿಚಿತ್ರ. ಆ ಘಟನೆ ಏನು? ಮಾಡಿದ್ದು ಯಾರು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ.
ಬೆಂಗಳೂರಿನ ರಾಜಗೋಪಾಲನಗರದ ಯುವತಿ ವಂಚನೆಗೆ ಒಳಗಾದವರು. ಇವರು ಕನ್ನಡ ಚಿತ್ರರಂಗದಲ್ಲಿ ಸಹ ಕಲಾವಿದೆಯಾಗಿ ಕೆಲಸ ಮಾಡುತ್ತಿದ್ದಾರೆ. ರೌಡಿಶೀಟರ್ ಕುಣಿಗಲ್ ಗಿರಿ ಅಣ್ಣ ಹರೀಶ್ ವಂಚನೆ ಮಾಡಿದ ವ್ಯಕ್ತಿ. ಯುವತಿ ಜತೆ ಹರೀಶ್ ಪ್ರೀತಿಯ ನಾಟಕವಾಡಿದ್ದರು. ಮನೆಯಲ್ಲೇ ತಾಳಿ ಕಟ್ಟಿ ಮದುವೆಯಾದಂತೆ ಹರೀಶ್ ನಟಿಸಿದ್ದಾರೆ. ನಂತರ ಅವರ ಬಳಿ ಇದ್ದ ಹಣ ಹಾಗೂ ಚಿನ್ನ ಲೂಟಿ ಮಾಡಿ ಪರಾರಿಯಾಗಿದ್ದಾರೆ.
ಪ್ರೀತಿ ಮಾಡುವ ನೆಪದಲ್ಲಿ ಯುವತಿ ಹಿಂದೆ ಹರೀಶ್ ಬಿದ್ದಿದ್ದರು. ನಿನ್ನನ್ನೇ ಮದುವೆಯಾಗ್ತೀನಿ ಎಂದು ನಂಬಿಸಿದ್ದರು. ಅಲ್ಲದೆ, ಮನೆಯಲ್ಲೆ ತಾಳಿ ಕಟ್ಟಿದಂತೆ ನಾಟ ಕೂಡ ಆಡಿದ್ದರು. ನಂತರ ಯುವತಿಯ ಬಳಿಯಿದ್ದ 180 ಗ್ರಾಂ ಚಿನ್ನಾಭರಣ, 2.5 ಲಕ್ಷ ರೂಪಾಯಿ ನಗದು ಪಡೆದು ಹರೀಶ್ ಎಸ್ಕೇಪ್ ಆಗಿದ್ದಾರೆ.
ಈ ಘಟನೆ ಬಳಿ ಹರೀಶ್ ಸಂಪರ್ಕಿಸಿದರೆ ಯುವತಿಗೆ ಅವರು ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ಸಂತ್ರಸ್ತೆ ದೂರು ದಾಖಲು ಮಾಡಿದ್ದರು. ಒಂದೊಮ್ಮೆ ಕೇಸ್ ವಾಪಸ್ ಪಡೆಯದಿದ್ದರೆ ಕೊಲೆ ಮಾಡುವುದಾಗಿ ಹರೀಶ್ ಬೆದರಿಕೆ ಹಾಕಿದ್ದರು. ‘ನನ್ನ ಸಹೋದರ ಕುಣಿಗಲ್ ಗಿರಿ’ ಎಂದು ಯುವತಿಗೆ ಬೆದರಿಸಲಾಗಿದೆ. ಇತ್ತ ಯುವತಿಗೆ ಕುಣಿಗಲ್ ಗಿರಿಯಿಂದ ಬೆದರಿಕೆ ಬಂದಿದೆ. ರಾಜಗೋಪಾಲನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಂತ್ರಸ್ತ ಯುವತಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ‘ದುಬಾರಿ ಸಿನಿಮಾ ಖಂಡಿತಾ ಮಾಡ್ತೀವಿ’; ಜೊತೆಯಾಗಿ ನಿಂತು ಸ್ಪಷ್ಟನೆ ನೀಡಿದ ಧ್ರುವ ಸರ್ಜಾ-ನಂದಕಿಶೋರ್
Published On - 5:04 pm, Sun, 15 August 21