NFT ಲೋಕದಲ್ಲಿ ರಾರಾಜಿಸಲಿದ್ದಾರೆ ಕನ್ನಡದ ಸ್ಟಾರ್​ ಹೀರೋ; ಜೋರಾಗಿದೆ ಫ್ಯಾನ್ಸ್​ ಕೌತುಕ

| Updated By: ಮದನ್​ ಕುಮಾರ್​

Updated on: Jul 07, 2022 | 1:51 PM

ಎರಡು-ಮೂರು ದಿನಗಳಲ್ಲಿ ಚಿತ್ರತಂಡದಿಂದಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ನಂತರವೇ ಎನ್​ಎಫ್​ಟಿಗೆ ಆ ಸ್ಟಾರ್​ ಹೀರೋ ಎಂಟ್ರಿ ಆಗಲಿದೆ ಎಂದು ಮೂಲಗಳು ಹೇಳಿವೆ.

NFT ಲೋಕದಲ್ಲಿ ರಾರಾಜಿಸಲಿದ್ದಾರೆ ಕನ್ನಡದ ಸ್ಟಾರ್​ ಹೀರೋ; ಜೋರಾಗಿದೆ ಫ್ಯಾನ್ಸ್​ ಕೌತುಕ
ಎನ್​ಎಫ್​ಟಿ
Image Credit source: Business Today
Follow us on

ಡಿಜಿಟಲ್​ ಜಗತ್ತು ದಿನದಿನವೂ ಹೊಸತನಕ್ಕೆ ಒಡ್ಡಿಕೊಳ್ಳುತ್ತಿದೆ. ಆ ಎಲ್ಲ ಪ್ರಯೋಗಗಳಿಗೂ ವಿವಿಧ ಕ್ಷೇತ್ರಗಳು ತೆರೆದುಕೊಳ್ಳುತ್ತಿವೆ. ಅದಕ್ಕೆ ಕನ್ನಡ ಚಿತ್ರರಂಗ (Kannada Film Industry) ಕೂಡ ಹೊರತಾಗಿದೆ. ಇಂಟರ್​ನೆಟ್​ ದುನಿಯಾದಲ್ಲಿ ಹೊಸದಾಗಿ ಸದ್ದು ಮಾಡುತ್ತಿರುವ ಎನ್​ಎಫ್​ಟಿ (non-fungible tokens) ಕ್ಷೇತ್ರದ ಕಡೆಗೆ ಬಣ್ಣದ ಲೋಕದವರು ಕೂಡ ಸಖತ್​ ಆಸಕ್ತಿ ತೋರಿಸುತ್ತಿದ್ದಾರೆ. ಇತ್ತೀಚೆಗೆ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ಎನ್​ಎಫ್​ಟಿಯಲ್ಲಿ (NFT) ತನ್ನ ವ್ಯಾಪ್ತಿಯನ್ನು ವಿಸ್ತರಿಸಿತ್ತು. ಈಗ ಕನ್ನಡದ (Sandalwood) ಮತ್ತೋರ್ವ ಸ್ಟಾರ್​ ನಟ ಕೂಡ ಈ ಮಾರುಕಟ್ಟೆಗೆ ಎಂಟ್ರಿ ನೀಡಲಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಅವರು ಎನ್​ಎಫ್​ಟಿಗೆ ಲಗ್ಗೆ ಇಡುವುದಕ್ಕೂ ಮುನ್ನವೇ ಸಖತ್​ ಹೈಪ್​ ಸೃಷ್ಟಿ ಆಗಿದೆ. ಆ ಸ್ಟಾರ್​ ನಟ ಯಾರು ಎಂಬುದನ್ನು ತಿಳಿಯಲು ಅಭಿಮಾನಿಗಳು ಕಾತರರಾಗಿದ್ದಾರೆ.

ಬೇರೆ ಬೇರೆ ಭಾಷೆಯ ಚಿತ್ರರಂಗದಲ್ಲಿ ಈ ಟ್ರೆಂಡ್​ ಈಗತಾನೇ ಶುರುವಾಗಿದೆ. ಅಮಿತಾಭ್​ ಬಚ್ಚನ್​, ಸನ್ನಿ ಲಿಯೋನ್​, ಕಮಲ್​ ಹಾಸನ್​ ಮುಂತಾದ ಸೆಲೆಬ್ರಿಟಿಗಳು ಎನ್​ಎಫ್​ಟಿ ಮಾರುಕಟ್ಟೆಯಲ್ಲೂ ಅಭಿಮಾನಿಗಳನ್ನು ಸೆಳೆಯುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ರಾಕಿ ಭಾಯ್ ಸಾಮ್ರಾಜ್ಯ ಕೂಡ ಕೆಲವೇ ತಿಂಗಳ ಹಿಂದೆ ಈ ಮಾರುಕಟ್ಟೆಯಲ್ಲಿ ಲಭ್ಯವಾಯ್ತು. ಈಗ ಈ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆಯಲು ಕನ್ನಡದ ಸೆಲೆಬ್ರಿಟಿಯೊಬ್ಬರು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಈ ವಿಷಯದ ಕುರಿತು ಹಲವರು ಟ್ವೀಟ್​ ಮಾಡುತ್ತಿದ್ದಾರೆ. ಆ ಮೂಲಕ ಎಲ್ಲರಲ್ಲೂ ಕೌತುಕ ನಿರ್ಮಾಣ ಮಾಡುವ ಕಾರ್ಯ ನಡೆಯುತ್ತಿದೆ. ಇನ್ನು ಎರಡು-ಮೂರು ದಿನಗಳಲ್ಲಿ ಚಿತ್ರತಂಡದಿಂದಲೇ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಲಿದೆ. ಬಹುತೇಕ ಜನರಿಗೆ ಎನ್​ಎಫ್​ಟಿ ಎಂದರೆ ಏನು ಎಂಬುದು ತಿಳಿದಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ಒಂದಷ್ಟು ಮಾಹಿತಿ ನೀಡುವ ಕೆಲಸವೂ ಚಿತ್ರತಂಡದಿಂದ ಆಗಲಿದೆ. ನಂತರವೇ ಎನ್​ಎಫ್​ಟಿಗೆ ಆ ಸ್ಟಾರ್​ ಹೀರೋ ಎಂಟ್ರಿ ಆಗಲಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ
ಬಾಗಲಕೋಟೆಯಲ್ಲಿ ರಾ.. ರಾ.. ರಕ್ಕಮ್ಮ ಹಾಡಿಗೆ ನೂರಾರು ಜನರಿಂದ ಭರ್ಜರಿ ಸ್ಟೆಪ್
Jacqueline Fernandez: ಸೆನ್ಸೇಶನ್ ಸೃಷ್ಟಿಸಿದ ‘ರಾ ರಾ ರಕ್ಕಮ್ಮ’; ಕನ್ನಡದಲ್ಲೇ ಧನ್ಯವಾದ ಹೇಳಿದ ಜಾಕ್ವೆಲಿನ್​
 ‘ರಾ ರಾ ರಕ್ಕಮ್ಮಾ..’ ಹಾಡಿಗೆ ಮಸ್ತ್​ ಆಗಿ ಹೆಜ್ಜೆ ಹಾಕಿದ ಅರವಿಂದ್ ಕೆಪಿ-ದಿವ್ಯಾ ಉರುಡುಗ
Vikrant Rona: ಕನ್ನಡದಲ್ಲೇ ಮಾತನಾಡಿದ ಜಾಕ್ವೆಲಿನ್; ‘ರಕ್ಕಮ್ಮ’ಗಾಗಿ ಮೊದಲ ಬಾರಿಗೆ ರೀಲ್ಸ್ ಮಾಡಿದ ಕಿಚ್ಚ ಸುದೀಪ್

ಕನ್ನಡದ ಕೆಲವು ಸಿನಿಮಾಗಳು ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಲು ಸಜ್ಜಾಗಿವೆ. ಶೀಘ್ರದಲ್ಲೇ ಬಿಡುಗಡೆಗೆ ಸಜ್ಜಾಗಿರುವ ಸಿನಿಮಾದ ಸ್ಟಾರ್​ ನಟರೇ ಈಗ ಎನ್​ಎಫ್​ಟಿ ಮಾರುಕಟ್ಟೆಯ ಕದ ತಟ್ಟಲಿದ್ದಾರೆ ಎಂಬುದು ಗಾಂಧಿನಗರದಲ್ಲಿ ಹರಿದಾಡುತ್ತಿರುವ ಸುದ್ದಿ. ಆ ನಟ ಯಾರು ಎಂಬುದು ಶೀಘ್ರವೇ ರಿವೀಲ್​ ಆಗಲಿದೆ. ಅದನ್ನು ತಿಳಿಯಲು ಅಭಿಮಾನಿಗಳು ಕಾದಿದ್ದಾರೆ.

ಇದನ್ನೂ ಓದಿ: Kamal Haasan: ನಟ ಕಮಲ್ ಹಾಸನ್ ಎನ್​ಎಫ್​ಟಿ ಪ್ರವೇಶಕ್ಕೆ ಸಿದ್ಧತೆ; ಏನಿದು ನಾನ್​ ಫಂಗಬಲ್​ ಟೋಕನ್?

ಹರಾಜಾಗುತ್ತಿದೆ ಯಾರೂ ಕೇಳಿರದ ಪ್ರಭಾಸ್​ ಸಿನಿಮಾ ಹಾಡು; ಭಾರತಲ್ಲೇ ಇದು ಮೊದಲ ಪ್ರಯೋಗ

Published On - 1:51 pm, Thu, 7 July 22