ಹೊಸ ಗೆಟಪ್​ನಲ್ಲಿ ಬಂದ ದಿಗಂತ್-ಸಂಗೀತಾ ಶೃಂಗೇರಿ; ಇದು ‘ಮಾರಿಗೋಲ್ಡ್’ ಕಥೆ

|

Updated on: Feb 06, 2024 | 2:57 PM

Marigold Teaser: ರಾಘವೇಂದ್ರ ಎಂ. ನಾಯಕ್ ‘ಮಾರಿಗೋಲ್ಡ್’ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ದಿಗಂತ್, ಸಂಗೀತಾ, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಸಿನಿಮಾ ತಂಡದವರು ಸುದ್ದಿಗೋಷ್ಠಿ ನಡೆಸಿ ಟೀಸರ್ ರಿಲೀಸ್ ಮಾಡಿದ್ದಾರೆ. ಈ ಟೀಸರ್ ಎಲ್ಲರ ಗಮನ ಸೆಳೆದಿದೆ.

ಹೊಸ ಗೆಟಪ್​ನಲ್ಲಿ ಬಂದ ದಿಗಂತ್-ಸಂಗೀತಾ ಶೃಂಗೇರಿ; ಇದು ‘ಮಾರಿಗೋಲ್ಡ್’ ಕಥೆ
ಮಾರಿಗೋಲ್ಡ್ ತಂಡ
Follow us on

ಸಂಗೀತಾ ಶೃಂಗೇರಿ (Sangeetha Sringeri) ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಎರಡನೇ ರನ್ನರ್ ಅಪ್ ಆಗಿದ್ದಾರೆ. ಅವರಿಗೆ ದೊಡ್ಮನೆಯಲ್ಲಿ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ಅವರು ಕೆಲವು ಚಿತ್ರಗಳನ್ನು ಒಪ್ಪಿ ನಟಿಸುತ್ತಿದ್ದಾರೆ. ಬಿಗ್ ಬಾಸ್​ನಿಂದ ಹೊರ ಬರುತ್ತಿದ್ದಂತೆ ಅವರ ಸಿನಿಮಾ ತಂಡಗಳು ಪ್ರಚಾರ ಶುರುಮಾಡಿವೆ. ಈ ಪೈಕಿ ‘ಮಾರಿಗೋಲ್ಡ್’ ಸಿನಿಮಾ ಕೂಡ ಒಂದು. ಈ ಚಿತ್ರದ ಟೀಸರ್ ಇಂದು (ಫೆಬ್ರವರಿ 6) ರಿಲೀಸ್ ಆಗಿದ್ದು ಗಮನ ಸೆಳೆಯುತ್ತಿದೆ. ದಿಗಂತ್ ಹಾಗೂ ಸಂಗೀತಾ ಒಟ್ಟಾಗಿ ನಟಿಸಿದ ಸಿನಿಮಾ ಇದು ಎನ್ನುವ ಕಾರಣಕ್ಕೂ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟುಹಾಕಿದೆ.

ರಾಘವೇಂದ್ರ ಎಂ. ನಾಯಕ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ದಿಗಂತ್, ಸಂಗೀತಾ, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ ಮೊದಲಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ರಘುವರದನ್ ಬಂಡವಾಳ ಹೂಡಿದ್ದಾರೆ. ಈ ಸಿನಿಮಾದವರು ಇಂದು ಸುದ್ದಿಗೋಷ್ಠಿ ನಡೆಸಿ ಟೀಸರ್ ರಿಲೀಸ್ ಮಾಡಿದ್ದಾರೆ. ಝಂಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ಮೂಲಕ ಈ ವಿಡಿಯೋ ರಿಲೀಸ್ ಆಗಿದೆ.

ಹೆಸರೇ ಹೇಳುವಂತೆ ಇದು ‘ಗೋಲ್ಡ್’ ಹುಡುಕಿ ಹೋಗೋ ಕಥೆ. ದಿಗಂತ್ ಹಾಗೂ ಸಂಗೀತಾ ಶೃಂಗೇರಿ ಬೇರೆಯದೇ ಗೆಟಪ್ ತಾಳಿದ್ದಾರೆ. ಈ ಸಿನಿಮಾದಲ್ಲಿ ಸಖತ್ ಸಸ್ಪೆನ್ಸ್ ಇರಲಿದೆ ಎಂಬುದು ಟೀಸರ್ ಮೂಲಕ ಗೊತ್ತಾಗಿದೆ. ದಿಗಂತ್ ಅವರು ಚಾಕೋಲೇಟ್ ಬಾಯ್ ಆಗಿಯೇ ಹೆಚ್ಚು ಹೈಲೈಟ್ ಆದವರು. ಅವರ ವೃತ್ತಿ ಜೀವನದಲ್ಲಿ ಇದೊಂದು ಭಿನ್ನ ಸಿನಿಮಾ ಆಗಲಿದೆ.

ಇದನ್ನೂ ಓದಿ: ಬಿಗ್​ ಬಾಸ್ ಮುಗಿದ ಬಳಿಕ ಸುದೀಪ್​ಗೆ ಸಂಗೀತಾ ಶೃಂಗೇರಿ ವಿಶೇಷ ಮಾತು

‘ದೂರದಿಂದ ನೋಡೋಕೆ ಸಕ್ಕರೆ, ಉಪ್ಪು ಒಂದೇ ರೀತಿ ಕಾಣುತ್ತದೆ. ಆದರೆ ಎರಡೂ ಬೇರೆ ಬೇರೆ’, ‘ಕಾಂಡಿಮೆಂಟ್ಸ್​ಗೆ ಬಂದು ಕಾಂಡಮ್ ಕೇಳ್ತಿದೀರಲ್ಲ’, ‘ಬದುಕೋಕೆ ಚಿನ್ನ ಮುಖ್ಯ ಅಲ್ಲ ಮೂರು ಹೊತ್ತು ಊಟ ಮುಖ್ಯ’ ಎಂಬಿತ್ಯಾದಿ ಡೈಲಾಗ್​ ಗಮನ ಸೆಳೆಯುತ್ತಿವೆ. ಬಿಗ್ ಬಾಸ್ ರೆಫರೆನ್ಸ್ ಕೂಡ ಒಮ್ಮೆ ಬಂದು ಹೋಗುತ್ತದೆ. ವೀರ್ ಸಮರ್ಥ್ ಅವರು ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಸಿನಿಮಾದ ರಿಲೀಸ್ ದಿನಾಂಕದ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ