ನಟಿ ಸಂಜನಾ ಗಲ್ರಾನಿಗೆ ವಂಚನೆ ಪ್ರಕರಣ; ತಮಗಾದ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನಟಿ

Sanjjana Galrani: ನಟಿ ಸಂಜನಾ ಗಲ್ರಾನಿ ತಮಗಾದ ವಂಚನೆಯನ್ನು ಎಳೆಎಳೆಯಾಗಿ ತೆರೆದಿಟ್ಟಿದ್ದಾರೆ. ಆಪ್ತರಾಗಿದ್ದ ರಾಹುಲ್ ಥೋನ್ಸೆ ಹಾಗೂ ಅವರ ಪೋಷಕರು ಮೋಸ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ನಟಿ ಸಂಜನಾ ಗಲ್ರಾನಿಗೆ ವಂಚನೆ ಪ್ರಕರಣ; ತಮಗಾದ ಅನ್ಯಾಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ನಟಿ
ನಟಿ ಸಂಜನಾ ಗಲ್ರಾನಿ
Follow us
TV9 Web
| Updated By: shivaprasad.hs

Updated on: Oct 20, 2021 | 2:18 PM

ಸ್ಯಾಂಡಲ್​ವುಡ್ ನಟಿ ಸಂಜನಾ ಗಲ್ರಾನಿ ತಮಗೆ ವಂಚನೆಯಾಗಿದೆ ಎಂದು ನ್ಯಾಯಾಲಯದಲ್ಲಿ ಪಿಸಿಆರ್ ದಾಖಲಿಸಿದ್ದರು. ನ್ಯಾಯಾಲಯವು ವಿಚಾರಣೆ ನಡೆಸಿ, ತನಿಖೆಗೆ ಆದೇಶಿಸಿದೆ. ಅದರಂತೆ ಸಂಜನಾ ಸ್ನೇಹಿತ ರಾಹುಲ್ ಥೋನ್ಸೆ ಸೇರಿದಂತೆ ಮೂವರ ವಿರುದ್ಧ ಇಂದಿರಾ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಸಂಜನಾ ಆರೋಪಿಸಿರುವ ಪ್ರಕಾರ, ‘ತನ್ನ ಹಣ ಬಳಸಿಕೊಂಡು ರಾಹುಲ್ ಥೋನ್ಸೆ ಹಾಗೂ ಇತರರು ಲಾಭ ಗಳಿಸಿದ್ದಾರೆ ಹಾಗೂ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ಹಣ ತೊಡಗಿಸಿದ್ದಾರೆ. ಇದರಿಂದ ತನ್ನ ಘನತೆಗೆ ಧಕ್ಕೆ ಬರುವಂತಾಗಿದೆ. ಇದಲ್ಲದೇ ರಾಹುಲ್ ಥೋನ್ಸೆ ಸುಳ್ಳು ಆರೋಪ ಮಾಡಿದ್ದಾರೆ. ಆದ್ದರಿಂದ ರಾಹುಲ್ ವಿರುದ್ಧ ದೂರು ದಾಖಲಿಸಬೇಕು’ ಎಂದಿದ್ದಾರೆ. ಇದೀಗ ತಮಗಾಗಿದ್ದ ಅನ್ಯಾಯದ ಕುರಿತು ಎಳೆಎಳೆಯಾಗಿ ಸಂಜನಾ ಸಾಮಾಜಿಕ ಜಾಲತಾಣಗಳಲ್ಲಿ ಬರಹವೊಂದನ್ನು ಹಂಚಿಕೊಂಡಿದ್ದಾರೆ.

ರಾಹುಲ್ ಥೋನ್ಸೆ, ಅವರ ಪೋಷಕರಿಂದ ಪ್ರಾಣ ಬೆದರಿಕೆ ಇದ್ದು, ಅವಾಚ್ಯ ಶಬ್ದಗಳಿಂದ ಬೈದು ಮಾನಹಾನಿ ಮಾಡಿದ್ದಾರೆ. ಆದ್ದರಿಂದ ರಾಹುಲ್, ಅವರ ಪೋಷಕರ ವಿರುದ್ಧ ದೂರು ನೀಡಿರುವುದಾಗಿ ಸಂಜನಾ ಮಾಧ್ಯಮ ಪ್ರಕಟಣೆ ಹೊರಡಿಸಿದ್ದಾರೆ. ಜೊತೆಗೆ ಕ್ಯಾಸಿನೋದಲ್ಲಿ ಹಣ ಹೂಡಲು ತಾನು ಹಣ ನೀಡಿರಲಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ಈ ಕುರಿತು ಅವರು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಬರಹ ಹಂಚಿಕೊಂಡಿದ್ದಾರೆ.

ಸಂಜನಾ ಹಂಚಿಕೊಂಡಿರುವ ಬರಹ ಇಲ್ಲಿದೆ: ‘ನಿನ್ನೆಯಿಂದ ಹೊಸದೊಂದು ನನ್ನ ಬಗ್ಗೆ ಸುದ್ದಿ ಹಬ್ಬುತ್ತಿದೆ. ಈಗಾಗಲೇ ನೊಂದಿರುವ ನನಗೆ ಈ ವದಂತಿಗಳೂ ಇನ್ನೂ ದುಃಖಕ್ಕೆ ತಳ್ಳಿವೆ. ಹೌದು, ನಾನು ಸಹೋದರನಂತೆ ನಂಬಿದ್ದ ರಾಹುಲ್ ಮತ್ತು ಅವರ ತಂದೆ-ತಾಯಿ ನನಗೆ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡುವಂತೆ ತಿಳಿಸಿ ನಂತರ ವಾಪಸ್ಸು ಕೂಡುವುದಾಗಿ ನಂಬಿಸಿ ಆತನ ವ್ಯವಹಾರಕ್ಕೆ ನಾನು ಕಷ್ಟ ಪಟ್ಟು ದುಡಿದ ಹಣವನ್ನ ಆತನ ತಂದೆ ತಾಯಿಗಳೇ ಕೇಳಿದರೆಂದೇ ಅವರ ಖಾತೆಗೆ ಕೊಟ್ಟಿದ್ದೆ. ಆತ ಹಲವಾರು ತಿರುವಿನ ನಂತರ ಹಣ ವಾಪಾಸು ಮಾಡದೇ ಹೋದಾಗ, ನ್ಯಾಯಾಲಯದ ಮೊರೆ ಹೋದೆ.’

‘ನಾನು ನೀಡಿದ ಹಣ ಕ್ಯಾಸಿನೊ ವ್ಯವಹಾರಕ್ಕಲ್ಲ. ಕ್ಯಾಸಿನೋ ಆಡುವಷ್ಟು ಶ್ರೀಮಂತಳೂ ಅಲ್ಲ. ಅಂತಹ ಜೂಜಿನ ಯಾವುದೇ ಹವ್ಯಾಸಗಳಿಲ್ಲ. ಇದು ಸಹೋದರನೊಬ್ಬ ಮಾಡಿದ ಮೋಸದ ನೊಂದ ಹೆಣ್ಣಿನ ಕಥೆ. ದಯಮಾಡಿ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಬೇಡುತ್ತೇನೆ. ಹಣವನ್ನು ನಾನು ವಾಪಸ್ ಕೇಳಿದಾಗ ಆತ ಮತ್ತು ಆತನ ಪೋಷಕರು ನನಗೆ ಅವಾಚ್ಯ ಶಬ್ದಗಳಿಂದ ಬೈದು ಮಾನಹಾನಿ ಮಾಡಿರುತ್ತಾರೆ ಹಾಗೂ ಪ್ರಾಣ ಬೆದರಿಕೆ ಹಾಕಿರುತ್ತಾರೆ. ಈ ಸಲುವಾಗಿ ನಾನು ನ್ಯಾಯಾಲಯದ ಮೊರೆ ಹೋಗಿ ನಾನು ರಾಹುಲ್ ಮತ್ತು ಆತನ ಪೋಷಕರ ವಿರುದ್ಧ ದೂರು ಸಲ್ಲಿಸಿರುತ್ತೇನೆ’- ಹೀಗೆ, ಸಂಜನಾ ಬರಹವನ್ನು ಬರೆದಿದ್ದಾರೆ.

ಸಂಜನಾ ಬರೆದಿರುವ ಸಂಪೂರ್ಣ ಬರಹ ಇಲ್ಲಿದೆ:

Sanjjana Galrani press note

ಸಂಜನಾ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ಬರಹ (ಕೃಪೆ: ಸಂಜನಾ ಗಲ್ರಾನಿ/ ಇನ್ಸ್ಟಾಗ್ರಾಂ)

ಸಂಜನಾ ದಾಖಲಿಸಿದ್ದ ಪಿಸಿಆರ್ ಅನ್ನು ವಿಚಾರಣೆ ನಡೆಸಿದ್ದ 4ನೇ ಎಸಿಎಂಎಂ ನ್ಯಾಯಾಲಯ ತನಿಖೆಗೆ ಆದೇಶ ನೀಡಿತ್ತು. ಕೋರ್ಟ್ ಆದೇಶದಂತೆ ಇಂದಿರಾನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಪ್ರಸ್ತುತ ರಾಹುಲ್ ಥೋನ್ಸೆ ಸೇರಿ ಮೂವರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಐಪಿಸಿ ಸೆಕ್ಷನ್ 120ಬಿ, 107, 354, 406, 420, 506, ಕಲಂ 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆಯನ್ನು  ಆರಂಭಿಸಿದ್ದಾರೆ.

ಇದನ್ನೂ ಓದಿ:

ನಟಿ ಸಂಜನಾಗೆ ವಂಚನೆ ಪ್ರಕರಣ; ರಾಹುಲ್ ಥೋನ್ಸೆ ಸೇರಿ ಮೂವರ ವಿರುದ್ಧ ಎಫ್​ಐಆರ್​ ದಾಖಲು

‘ನಾನು ಮತ್ತೊಮ್ಮೆ ಹಳೆಯ ದಿನಗಳನ್ನು ಜೀವಿಸಿದೆ’; ‘ರತ್ನನ್​ ಪ್ರಪಂಚ’ದ ಬಗ್ಗೆ ಧನಂಜಯ​ ಮಾತು

ಒಂದೇ ಮಾತರಂ ಗೀತೆಗೆ ಅಮ್ಮ ಮತ್ತು ಮಗನ ಯಕ್ಷಗಾನ ಕುಣಿತ; ವಿಡಿಯೋ ವೈರಲ್

ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಸುಖಾಸುಮ್ಮನೆ ವಿರಾಟ್ ಕೊಹ್ಲಿ ಕಿರಿಕ್: ತಿರುಗಿ ನಿಂತ ಸ್ಯಾಮ್ ಕೊನ್​ಸ್ಟಾಸ್
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಬಡತನದಿಂದ ಮುಕ್ತಿ ಹೊಂದಲು, ಮನೆಯಲ್ಲಿ ನೆಮ್ಮದಿಗೆ ಇಲ್ಲಿದೆ ಸುಲಭ ಉಪಾಯ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಸಫಲ ಏಕಾದಶಿಯ ಈ ದಿನ ನಿಮ್ಮ ರಾಶಿ ಭವಿಷ್ಯ ಹೇಗಿರಲಿದೆ ನೋಡಿ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಕ್ರಿಸ್​ಮಸ್ ಸಂಭ್ರಮ: ಬೆಂಗಳೂರಿನಲ್ಲಿ ಟ್ರಾಫಿಕ್ ​​ಜಾಮ್, ಸವಾರರು ಪರದಾಟ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ಜೊಮ್ಯಾಟೊ ಡೆಲಿವರಿ ಬಾಯ್​ ಧರಿಸಿದ್ದ ಸಾಂತಾಕ್ಲಾಸ್​ ಡ್ರೆಸ್ ಬಿಚ್ಚಿಸಿದ ಹಿಂ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ದೇವರು ನನ್ನ ಹೊಟ್ಟೆಗೆ ಕಲ್ಲು ಮಣ್ಣು ತುಂಬಿಸಿ ಬಿಟ್ಟ: ತಾಯಿ ಆಕ್ರಂದನ
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಬಿಪಿಎಸ್‌ಸಿ ಪರೀಕ್ಷೆ ರದ್ದುಗೊಳಿಸಲು ಪ್ರತಿಭಟನೆ; ಪೊಲೀಸರ ಲಾಠಿ ಚಾರ್ಜ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ