ಅನೇಕ ಸಿನಿಮಾಗಳಿಗೆ ಛಾಯಾಗ್ರಾಹಕನಾಗಿ ಕೆಲಸ ಮಾಡಿದ್ದ ಗೋಪಾಲಕೃಷ್ಣನ್ (Cinematographer Gopalakrishnan) ಅವರು ಇಂದು (ಡಿ.16) ನಿಧನರಾದರು. ಅನಾರೋಗ್ಯದ ಕಾರಣ ಬೆಂಗಳೂರಿನ ಮಹಾವೀರ್ ಜೈನ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಕೆಲವು ದಿನಗಳಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಹೃದಯಾಘಾತದಿಂದ (Heart Attack) ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಆದರೆ ಗೋಪಾಲಕೃಷ್ಣನ್ ಸಾವಿನ ಬಗ್ಗೆ ಅವರ ಪುತ್ರ ಮಹೇಂದ್ರ ಅನುಮಾನ ವ್ಯಕ್ತಪಡಿಸಿದ್ದಾರೆ. ತಂದೆಯ ನಿಧನಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಆಸ್ಪತ್ರೆಯ ವೈದ್ಯರ ವಿರುದ್ಧ ಮಹೇಂದ್ರ ಅವರು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ (High Ground Police Station) ದೂರು ನೀಡಿದ್ದಾರೆ.
ಹಲವು ದಿನಗಳ ಹಿಂದೆ ಗೋಪಾಲಕೃಷ್ಣನ್ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಕಿವಿಯ ಶಸ್ತ್ರ ಚಿಕಿತ್ಸೆ ಸಲುವಾಗಿ ಮಹಾವೀರ್ ಜೈನ್ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ಅ.23ರಂದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಬರಲಾಗಿತ್ತು. ಅ.28ರಂದು ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿದ್ದರು. ಆ ಬಳಿಕ ಅವರ ಆರೋಗ್ಯ ಸಮಸ್ಯೆ ಉಲ್ಬಣ ಆಗಿತ್ತು.
ಶಸ್ತ್ರ ಚಿಕಿತ್ಸೆ ನೆರವೇರಿದ ನಂತರ ಗೋಪಾಲಕೃಷ್ಣನ್ ಅವರು ಚಿಂತಾಜನಕ ಸ್ಥಿತಿ ತಲುಪಿದ್ದರು. ದೇಹದ ಬಲಭಾಗದ ಸ್ವಾದೀನ ಕಳೆದುಕೊಂಡು ಅವರು ಪ್ರಜ್ಞಾಹೀನ ಸ್ಥಿತಿಗೆ ಅವರು ಹೋಗಿದ್ದರು. ತಂದೆಯ ಸ್ಥಿತಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಅವರ ಮಗ ಮಹೇಂದ್ರ ಆರೋಪಿಸಿದ್ದಾರೆ. ಹಾಗಾಗಿ ವೈದ್ಯರ ವಿರುದ್ಧ ಹೈಗ್ರೌಂಡ್ಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ:
ತೀವ್ರ ಹೃದಯಾಘಾತ: ಜನ್ಮದಿನ ಪ್ರವಚನ ಮಾಡುತ್ತಲೇ ಜೀವ ಬಿಟ್ಟ ಸ್ವಾಮೀಜಿ, ಮೊಬೈಲ್ ನಲ್ಲಿ ಸೆರೆ
Published On - 12:29 pm, Thu, 16 December 21