ಶರಣ್​-ಶ್ರುತಿ ಕುಟುಂಬದ 3ನೇ ತಲೆಮಾರಿನ ನಟಿ ಕೀರ್ತಿ ಚಿತ್ರರಂಗಕ್ಕೆ ಎಂಟ್ರಿ; ‘ಧರಣಿ’ ಚಿತ್ರಕ್ಕೆ ನಾಯಕಿ

Keerthi Krishna | Sandalwood News: ಒಳ್ಳೆಯ ಕಥೆ ಮತ್ತು ಪಾತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಬೇಕು ಎಂಬುದು ಕೀರ್ತಿ ಅವರ ಉದ್ದೇಶ ಆಗಿತ್ತು. ‘ಧರಣಿ’ ಚಿತ್ರದಲ್ಲಿ ನಟಿಸಲು ಅವರು ಒಪ್ಪಿಕೊಂಡಿದ್ದಾರೆ.

ಶರಣ್​-ಶ್ರುತಿ ಕುಟುಂಬದ 3ನೇ ತಲೆಮಾರಿನ ನಟಿ ಕೀರ್ತಿ ಚಿತ್ರರಂಗಕ್ಕೆ ಎಂಟ್ರಿ; ‘ಧರಣಿ’ ಚಿತ್ರಕ್ಕೆ ನಾಯಕಿ
ಕೀರ್ತಿ ಕೃಷ್ಣ
Follow us
ಮದನ್​ ಕುಮಾರ್​
|

Updated on:Jan 27, 2023 | 6:48 PM

ಮನೋಜ್ ನಾಯಕನಾಗಿ ನಟಿಸುತ್ತಿರುವ ‘ಧರಣಿ’ ಚಿತ್ರದ (Dharani Movie) ಫಸ್ಟ್ ಲುಕ್ ಪೋಸ್ಟರ್ ಇತ್ತೀಚೆಗೆ ಬಿಡುಗಡೆ ಆಯಿತು. ಕೋಳಿ ಪಂದ್ಯದ ಜೊತೆಗೆ ಒಂದು ಮನ ಸೆಳೆಯುವ ಕಹಾನಿ ಈ ಸಿನಿಮಾದಲ್ಲಿ ಇದೆ ಅಂತ ಚಿತ್ರತಂಡ ಹೇಳಿಕೊಂಡಿದೆ. ಈಗ ಈ ಚಿತ್ರತಂಡದಿಂದ ಇನ್ನೊಂದು ನ್ಯೂಸ್​ ಹೊರಬಿದ್ದಿದೆ. ‘ಧರಣಿ’ ಚಿತ್ರಕ್ಕೆ ನಾಯಕಿಯಾಗಿ ಹೊಸ ನಟಿ ಕೀರ್ತಿ ಆಯ್ಕೆ ಆಗಿದ್ದಾರೆ. ಶರಣ್ (Sharan)​, ಶ್ರುತಿ ಅವರ ಕುಟುಂಬದ 3ನೇ ತಲೆಮಾರಿನ ಪ್ರತಿಭೆ ಈ ಕೀರ್ತಿ ಎಂಬುದು ವಿಶೇಷ! ಇತ್ತೀಚೆಗೆ ಶರಣ್ ಅವರ ಮಗ ‘ಗುರು ಶಿಷ್ಯರು’ ಚಿತ್ರದಲ್ಲಿ ಪಾತ್ರವೊಂದನ್ನು ನಿಭಾಯಿಸಿದ್ದರು. ಈಗ ಶರಣ್ ಅವರ ಕೊನೆಯ ಸಹೋದರಿ ಉಷಾ ಕೃಷ್ಣ ಅವರ ಮಗಳು ಕೀರ್ತಿ ಕೃಷ್ಣ (Keerthi Krishna) ಕೂಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಶರಣ್​ ಸಹೋದರಿ ಶೃತಿ ಭಾರತೀಯ ಚಿತ್ರರಂಗದಲ್ಲಿ ದೊಡ್ಡ ಹೆಸರು ಮಾಡಿರುವ ಕಲಾವಿದೆ. ಶರಣ್ ಅವರ ಕನ್ನಡ ಚಿತ್ರರಂಗದ ಸ್ಟಾರ್ ನಟ. ಕೀರ್ತಿ ಕೃಷ್ಣ ಯಾವ ಚಿತ್ರದಿಂದ ಚಿತ್ರರಂಗಕ್ಕೆ ಕಾಲಿಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಸ್ಯಾಂಡಲ್​ವುಡ್​ನ ಅನೇಕರು ಕೀರ್ತಿ ಅವರನ್ನು ತಮ್ಮ ಸಿನಿಮಾದ ಮೂಲಕ ಪರಿಚಯಿಸಲು ತಯಾರಾಗಿದ್ದರು. ಕೊನೆಗೂ ‘ಧರಣಿ’ ಚಿತ್ರವನ್ನು ಕೀರ್ತಿ ಕೃಷ್ಣ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ: ‘ಧರಣಿ’ ಚಿತ್ರದ ಮೂಲಕ ಕೋಳಿ ಕಾಳಗದ ಕಥೆ ಹೇಳ ಹೊರಟ ನಟ ಮನೋಜ್

ಇದನ್ನೂ ಓದಿ
Image
Choo Mantar Movie: ‘ಛೂ ಮಂತರ್’ ಸಿನಿಮಾ ಸೆಟ್​​ನಲ್ಲಿ ಶರಣ್​ಗೆ ಹಾರರ್ ಅನುಭವ
Image
Choo Mantar: ‘ಛೂ ಮಂತರ್​’ ಚಿತ್ರದಲ್ಲಿ ಮತ್ತೆ ಶರಣ್​-ಚಿಕ್ಕಣ್ಣ ಜೋಡಿ; ಸಿನಿಮಾ ಬಗ್ಗೆ ಪೂರ್ತಿ ವಿವರ ತೆರೆದಿಟ್ಟ ‘ಅಧ್ಯಕ್ಷ’
Image
‘ಗುರು ಶಿಷ್ಯರು’ ಸಿನಿಮಾದ ಹೆಸರು ಮರುಬಳಕೆ ಮಾಡಿಕೊಂಡಿದ್ದು ಯಾಕೆ? ಶರಣ್​ ನೀಡಿದ್ರು ಉತ್ತರ
Image
ನಟನಾಗುವ ಮೊದಲು ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಶರಣ್!

ಈ ಹಿಂದೆ ಬಾಲನಟಿಯಾಗಿ ಬಣ್ಣ ಹಚ್ಚಿದ ಅನುಭವ ಕೀರ್ತಿ ಅವರಿಗೆ ಇದೆ. 12 ವರ್ಷಗಳ ಹಿಂದೆ ತೆರೆ ಕಂಡಿದ್ದ ರಾಮ್ ಕುಮಾರ್ ಮತ್ತು ಶೃತಿ ನಟನೆಯ ‘ಶ್ರೀ ನಾಗಶಕ್ತಿ’ ಚಿತ್ರದಲ್ಲಿ ಬಾಲ ಕಲಾವಿದೆಯಾಗಿ ಕೀರ್ತಿ ನಟಿಸಿದ್ದರು. ನಂತರ ವಿದ್ಯಾಭ್ಯಾಸ ಪೂರ್ಣಗೊಳಿಸುವ ಸಲುವಾಗಿ ನಟನೆಯಿಂದ ದೂರವೇ ಉಳಿದಿದ್ದರು. ಈಗ ಬಿಬಿಎ ಮುಗಿಸಿರುವ ಕೀರ್ತಿ ಅವರು ಪೂರ್ಣ ಪ್ರಮಾಣದಲ್ಲಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳಲು ಸಜ್ಜಾಗಿದ್ದಾರೆ.

ಇದನ್ನೂ ಓದಿ: ನಟನಾಗುವ ಮೊದಲು ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ ಶರಣ್!

ಒಳ್ಳೆಯ ಕಥೆ ಮತ್ತು ಪಾತ್ರದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಬೇಕು ಎಂಬುದು ಕೀರ್ತಿ ಅವರ ಉದ್ದೇಶ ಆಗಿತ್ತು. ಸೂಕ್ತ ಕಥೆ ಸಿಕ್ಕರೆ ಮಾತ್ರ ಒಪ್ಪಿಕೊಳ್ಳಬೇಕು ಎಂದುಕೊಂಡಿದ್ದ ಅವರಿಗೆ ‘ಧರಣಿ’ ಸಿನಿಮಾದ ಕಥೆ ಇಷ್ಟ ಆಗಿದೆ. ಹಾಗಾಗಿ ಅವರು ಈ ಸಿನಿಮಾ ಮೂಲಕ ಹೀರೋಯಿನ್​ ಆಗಿ ಬಣ್ಣದ ಲೋಕಕ್ಕೆ ಪರಿಚಯಗೊಳ್ಳುತ್ತಿದ್ದಾರೆ. ಅವರ ಇಡೀ ಕುಟುಂಬ ಕಲಾಸೇವೆಯಲ್ಲಿ ತೊಡಗಿಸಿಕೊಂಡಿದೆ. ಶ್ರುತಿ ಅವರ ತಂದೆ ಕೃಷ್ಣ, ತಾಯಂದಿರಾದ ರಾಧ-ರುಕ್ಮಿಣಿ ರಂಗಭೂಮಿ ಮತ್ತು ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಕೃಷ್ಣ ಅವರ ತಾಯಿ ಕೂಡಾ ನಟಿಯಾಗಿದ್ದರು. ಬಳಿಕ ಶೃತಿ, ಶರಣ್ ಅವರು ಚಿತ್ರರಂಗದಲ್ಲಿ ಮಿಂಚಿದರು. ಈಗ ಅವರ ಕುಟುಂಬದ 3ನೇ ತಲೆಮಾರಿನ ಕೀರ್ತಿ ಅವರು ಚಿತ್ರರಂಗಕ್ಕೆ ಬಂದಿದ್ದಾರೆ.

‘ಧರಣಿ’ ಚಿತ್ರಕ್ಕೆ ಸುಧೀರ್ ಶಾನಭೋಗ್ ನಿರ್ದೇಶನ ಮಾಡುತ್ತಿದ್ದಾರೆ. ‘ಯಂಗ್ ಥಿಂಕರ್ಸ್ ಫಿಲಂಸ್’ ಮೂಲಕ ಜಿ.ಕೆ. ಉಮೇಶ್. ಕೆ. ಗಣೇಶ್ ಐತಾಳ್ ನಿರ್ಮಾಣ ಮಾಡುತ್ತಿದ್ದಾರೆ.  ಶಶಾಂಕ್ ಶೇಷಗಿರಿ ಸಂಗೀತ, ಅರುಣ್ ಸುರೇಶ್ ಛಾಯಾಗ್ರಹಣದ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 6:44 pm, Fri, 27 January 23

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಅಜ್ಜನ ಜಾತ್ರೆ ಸಂಪನ್ನ: ಭಕ್ತರಲ್ಲಿ ಮೂರು ವಚನ ಕೇಳಿದ ಕೊಪ್ಪಳದ ಗವಿಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ
ಚಿಟ್ಟಾಣಿ ಆಸೆ ಈಡೇರಿಸಲು ಯಕ್ಷಗಾನದಲ್ಲಿ ಅಭಿನಯಿಸಿದ ನಟಿ ಉಮಾಶ್ರೀ