Shivarajkumar Net Worth: ಶಿವರಾಜ್​ಕುಮಾರ್ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು, ಸಾಲ ಎಷ್ಟು? ಗೀತಾ ಅಫಿಡವಿಟ್​ನಲ್ಲಿದೆ ಮಾಹಿತಿ

Shiva rajkumar Net Worth Details in Kannada: ಶಿವರಾಜ್​ಕುಮಾರ್ ಅವರ ನಿಜವಾದ ಹೆಸರು ಎಂಎಸ್ ಪುಟ್ಟಸ್ವಾಮಿ. ಇದೇ ಹೆಸರಲ್ಲಿ ವಿವರ ಇದೆ.  2022-2023 ಆರ್ಥಿಕ ವರ್ಷದಲ್ಲಿ 2,97,27,100 ರೂಪಾಯಿ ಆದಾಯ ಹೊಂದಿದ್ದಾರೆ. ಅದೇ ವರ್ಷ ಗೀತಾ ಅವರು 1,48,63,750 ಕೋಟಿ ರೂಪಾಯಿ ಆದಾಯ ಹೊಂದಿದ್ದಾರೆ.

Shivarajkumar Net Worth: ಶಿವರಾಜ್​ಕುಮಾರ್ ಬ್ಯಾಂಕ್ ಬ್ಯಾಲೆನ್ಸ್ ಎಷ್ಟು, ಸಾಲ ಎಷ್ಟು? ಗೀತಾ ಅಫಿಡವಿಟ್​ನಲ್ಲಿದೆ ಮಾಹಿತಿ
ಶಿವಣ್ಣ
Follow us
ರಾಜೇಶ್ ದುಗ್ಗುಮನೆ
| Updated By: Digi Tech Desk

Updated on:Apr 15, 2024 | 3:48 PM

ಶಿವರಾಜ್​ಕುಮಾರ್ (Shivarajkumar) ಅವರು ಚಿತ್ರರಂಗದ ಬೇಡಿಕೆಯ ಹೀರೋ ಆಗಿ ಗಮನ ಸೆಳೆದಿದ್ದಾರೆ. ಅವರ ಖ್ಯಾತಿ ದಿನ ಕಳೆದಂತೆ ಹೆಚ್ಚುತ್ತಿದೆ. ಅವರು ಪ್ರತಿ ಸಿನಿಮಾಗೆ ಕೋಟ್ಯಂತರ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಲೋಕಸಭೆ ಚುನಾವಣೆಗೆ ಸ್ಪರ್ಧಿಸಿರುವ ಪತ್ನಿ ಗೀತಾ ಅವರ ಪರವಾಗಿ ಶಿವಣ್ಣ ಶಿವಮೊಗ್ಗದಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಈಗ ಗೀತಾ ಶಿವಮೊಗ್ಗದಲ್ಲಿ ಅಫಿಡವಿಟ್ ಸಲ್ಲಿಕೆ ಮಾಡಿದ್ದಾರೆ. ಇದರಲ್ಲಿ ಶಿವಣ್ಣ ಅವರ ಆಸ್ತಿ ಬಗ್ಗೆಯೂ ಮಾಹಿತಿ ಇದೆ. ಆ ಬಗ್ಗೆ ಇಲ್ಲಿದೆ ವಿವರ.

ಶಿವರಾಜ್​ಕುಮಾರ್ ಅವರ ನಿಜವಾದ ಹೆಸರು ಎಂಎಸ್ ಪುಟ್ಟಸ್ವಾಮಿ. ಇದೇ ಹೆಸರಲ್ಲಿ ವಿವರ ಇದೆ.  2022-2023 ಆರ್ಥಿಕ ವರ್ಷದಲ್ಲಿ 2,97,27,100 ರೂಪಾಯಿ ಆದಾಯ ಹೊಂದಿದ್ದಾರೆ. ಅದೇ ವರ್ಷ ಗೀತಾ ಅವರು 1,48,63,750 ಕೋಟಿ ರೂಪಾಯಿ ಆದಾಯ ಹೊಂದಿದ್ದಾರೆ. ಕೈಯಲ್ಲಿ ಎಷ್ಟು ಕ್ಯಾಶ್ ಇದೆ ಎಂಬ ವಿವರವನ್ನೂ ನೀಡಲಾಗಿದೆ. ಶಿವಣ್ಣ ಬಳಿ 22,58,338 ರೂಪಾಯಿ ಕ್ಯಾಶ್ ಇದೆ. ಗೀತಾ ಅವರ ಬಳಿ 3 ಲಕ್ಷ ರೂಪಾಯಿ ಕ್ಯಾಶ್ ಇದೆ.

ಬ್ಯಾಂಕ್ ಬ್ಯಾಲೆನ್ಸ್ ವಿವರವನ್ನೂ ನೀಡಲಾಗಿದೆ. ಶಿವರಾಜ್​ಕುಮಾರ್ ಬಳಿ ಬ್ಯಾಂಕ್ ಬ್ಯಾಲೆನ್ಸ್ 4.82 ಕೋಟಿ ರೂಪಾಯಿ ಇದೆ. ಗೀತಾ ಅವರ ಬ್ಯಾಂಕ್ ಬ್ಯಾಲೆನ್ಸ್ 64 ಲಕ್ಷ ರೂಪಾಯಿ ಇದೆ. ಶಿವಣ್ಣ ಬಳಿ 18 ಕೋಟಿ ರೂಪಾಯಿ ಹಾಗೂ ಗೀತಾ ಬಳಿ 5 ಕೋಟಿ ರೂಪಾಯಿ ಚರಾಸ್ತಿ ಇದೆ. ಸ್ಥಿರಾಸ್ತಿ ವಿಚಾರಕ್ಕೆ ಬಂದರೆ ಶಿವಣ್ಣ ಬಳಿ 31 ಕೋಟಿ ಬೆಲೆ ಬಾಳುವ ಸ್ಥಿರಾಸ್ತಿ ಇದೆ. ಗೀತಾ ಬಳಿ 34 ಕೋಟಿ ರೂಪಾಯಿ ಸ್ಥಿರಾಸ್ತಿ ಇದೆ.

ಇದನ್ನೂ ಓದಿ: ಶಿವಮೊಗ್ಗದಲ್ಲಿ ಗೀತಾ ಶಿವರಾಜ್​ಕುಮಾರ್ ನಾಮಪತ್ರ ಸಲ್ಲಿಕೆ; ಸಾಥ್ ಕೊಟ್ಟ ನಿರ್ಮಾಪಕರು

ಸಾಲದ ವಿಚಾರಕ್ಕೆ ಬಂದರೆ ಶಿವಣ್ಣನಿಗೆ 17 ಕೋಟಿ ರೂಪಾಯಿ ಸಾಲ/ಅಡ್ವಾನ್ಸ್ ಇದೆ. ಇದರಲ್ಲಿ ಸಾಲ 3 ಕೋಟಿ ರೂಪಾಯಿ, ಅಡ್ವಾನ್ಸ್ 13.6 ಕೋಟಿ ರೂಪಾಯಿ. ಗೀತಾ ಅವರದ್ದು 7 ಕೋಟಿ ರೂಪಾಯಿ ಸಾಲ ಇದೆ. ಸಿನಿ ಮುತ್ತು ಸರ್ವಿಸ್​ಗೆ 1.64 ಕೋಟಿ ರೂಪಾಯಿ, ಗೀತಾ ಪಿಕ್ಚರ್ಸ್​ಗೆ 6 ಕೋಟಿ ರೂಪಾಯಿ, ಧ್ರುವಕುಮಾರ್​ಗೆ 2.30 ಕೋಟಿ ರೂಪಾಯಿ ಹಾಗೂ ಇತರರಿಗೆ 2.13 ಕೋಟಿ ರೂಪಾಯಿ ಸಾಲ ನೀಡಿದ್ದಾರೆ ಶಿವಣ್ಣ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 3:17 pm, Mon, 15 April 24