
ನಟ ಶಿವರಾಜ್ಕುಮಾರ್ (Shivarajkumar) ಅವರಿಗೆ ಇಂದು (ಜುಲೈ 12) ಜನ್ಮದಿನ. ನಟನ ಬರ್ತ್‌ಡೇ ದಿನಕ್ಕೆ ಹೊಸ ಹೊಸ ಸಿನಿಮಾಗಳು ಘೋಷಣೆ ಆಗುತ್ತಿವೆ. ಶಿವರಾಜ್ಕುಮಾರ್ಗೆ ಈಗ 63 ವರ್ಷ ವಯಸ್ಸು. ಅವರು ಈಗಲೂ ಸಿನಿಮಾ ಕೃಷಿ ಮುಂದುವರಿಸಿದ್ದಾರೆ. ಅವರ ಕೈಯಲ್ಲಿ ಇರುವ ಸಿನಿಮಾಗಳ ಸಂಖ್ಯೆ ಕೇಳಿದರೆ ನೀವು ಅಚ್ಚರಿಗೆ ಒಳಗಾಗೋದು ಗ್ಯಾರಂಟಿ. ಈ ವಯಸ್ಸಲ್ಲೂ ಅವರು ಇಷ್ಟೊಂದು ಸಿನಿಮಾ ಮಾಡುತ್ತಿದ್ದಾರಾ ಎಂದು ನಿಮಗೆ ಅನ್ನಿಸದರೆ ಇರದು. ಆ ಬಗ್ಗೆ ಇಲ್ಲಿದೆ ವಿವರ.
ಶಿವರಾಜ್ಕುಮಾರ್ ಮೊದಲ ಸಿನಿಮಾ ಆರಂಭಿಸಿದ್ದು 23ನೇ ವಯಸ್ಸಿಗೆ. ಈಗ ಅವರಿಗೆ 63 ವರ್ಷ. ಕಳೆದ, 40 ವರ್ಷಗಳಿಂದ ಅವರು ನಿರಂತರವಾಗಿ ಸಿನಿಮಾಗಳು ಮಾಡುತ್ತಾ ಬರುತ್ತಿದ್ದಾರೆ. ನೂರಾರು ಚಿತ್ರಗಳನ್ನು ಅವರು ನೀಡಿದ್ದಾರೆ. ಈ ಪೈಕಿ ಅನೇಕ ಚಿತ್ರಗಳು ಸೂಪರ್ ಹಿಟ್ ಎನಿಸಿಕೊಂಡಿವೆ. ಬರ್ತ್‌ಡೇ ಸಮಯದಲ್ಲಿ ಅವರ ನಟನೆಯ ಹಲವು ಚಿತ್ರಗಳು ಅನೌನ್ಸ್ ಆಗಿವೆ.
ಶಿವರಾಜ್ಕುಮಾರ್ ಅವರು ಇತ್ತೀಚೆಗೆ ಸೀಕ್ವೆಲ್ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ ಎಂದರೂ ತಪ್ಪಾಗಲಾರದು. ‘ಮಫ್ತಿ’ ಚಿತ್ರದ ಪ್ರಿಕ್ವೆಲ್ ಆಗಿ ‘ಭೈರತಿ ರಣಗಲ್’ ಸಿನಿಮಾ ಮೂಡಿ ಬಂತು. ಅವರು ಈಗ ‘ಜೈಲರ್ 2’ ಸಿನಿಮಾ ಮಾಡುತ್ತಿದ್ದಾರೆ. 2023ರಲ್ಲಿ ರಿಲೀಸ್ ಆಗಿ ಸೂಪರ್ ಹಿಟ್ ಆದ ರಜನಿಕಾಂತ್ ನಟನೆಯ ಚಿತ್ರ ಇದು. ಇನ್ನು, ‘ಟಗರು’ ಸಿನಿಮಾಗೆ ಸೀಕ್ವೆಲ್ ಬರುತ್ತಿದೆ. ಶಿವಣ್ಣನ ಬರ್ತ್‌ಡೇ ಪ್ರಯುಕ್ತ ‘ಟಗರು 2’ ಅನೌನ್ಸ್ ಆಗಿದೆ. ಟಗರು ಶಿವನ ಪಾತ್ರದಲ್ಲಿ ಅವರು ಮುಂದುವರಿಯುತ್ತಿದ್ದಾರೆ.
ಟಗರುಗೆ ನೀವು ಕೊಟ್ಟ ಪ್ರೀತಿ ಬಲು ಜೋರು
ಮತ್ತೆ ಎಳೆಯೋಣ ಬನ್ನಿ ಸಿನಿಮಾದ ಥೇರು!!ಅಭಿಮಾನಿಗಳ ಅಭಿಮಾನದ ದೊರೆಗೆ ಹುಟ್ಟುಹಬ್ಬದ ಶುಭಾಶಯಗಳು ❤️#Shivanna #HappyBirthdayShivanna #DrShivaRajkumar #ShivuaDDa pic.twitter.com/NmiEwPgg58
— ಶಿವು ಅಡ್ಡ™ | 𝓼𝓱𝓲𝓿𝓾 𝓪𝓓𝓓𝓪™ (@shivuaDDa) July 11, 2025
ಶಿವರಾಜ್ಕುಮಾರ್ ಅವರು ‘45’ ಸಿನಿಮಾದಲ್ಲಿ ನಟಿಸಿಯಾಗಿದೆ. ಈ ಚಿತ್ರ ಆಗಸ್ಟ್ 14ರಂದು ತೆರೆಗೆ ಬರಲಿದೆ. ‘ಉತ್ತರಕಾಂಡ’, ‘ಭೈರವನ ಕೊನೆಯ ಪಾಠ’, ಶಿವರಾಜ್ಕುಮಾರ್ 131ನೇ ಚಿತ್ರ, ‘666 ಆಪರೇಷನ್ ಡ್ರೀಮ್ ಥಿಯೇಟರ್’ ಹಾಗೂ ‘ಮಂಡ್ಯ ಬ್ರದರ್ಸ್’ ಹೆಸರಿನ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು, ‘ಆನಂದ್’ ಹೆಸರಿನ ಸಿನಿಮಾ ಕೂಡ ಅನೌನ್ಸ್ ಆಗಿದ್ದು, ಗೀತಾ ಶಿವರಾಜ್ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ.
ಇದನ್ನೂ ಓದಿ: ಶಿವಣ್ಣ ಹುಟ್ಟಿದ ಬಳಿಕ ಸಂಜೆಯಿಂದ ಬೆಳಗ್ಗಿನವರೆಗೆ ಸ್ವೀಟ್ ಹಂಚಿದ್ದ ರಾಜ್ಕುಮಾರ್
ಶಿವರಾಜ್ಕುಮಾರ್ ಅವರು ಕನ್ನಡದ ಜೊತೆಗೆ ಪರಭಾಷೆಯಲ್ಲೂ ಬ್ಯುಸಿ ಆಗಿದ್ದಾರೆ. ರಜನಿ ನಟನೆಯ ‘ಜೈಲರ್ 2’, ರಾಮ್ ಚರಣ್ ಅಭಿನಯದ ‘ಪೆದ್ದಿ’ ಸಿನಿಮಾಗಳು ಅವರ ಕೈಯಲ್ಲಿ ಇವೆ. ಮಮ್ಮುಟ್ಟಿ-ಮೋಹನ್ಲಾಲ್ ಚಿತ್ರದ ಜೊತೆ ಅವರು ಮಾತುಕತೆ ನಡೆಸುತ್ತಿದ್ದಾರೆ ಎಂಬ ವರದಿ ಇದೆ. ‘ಜನ ನಾಯಕನ್’ ಚಿತ್ರದಲ್ಲಿ ಅವರು ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇದೆಲ್ಲ ಸೇರಿದರೆ ಅವರ ಕೈಯಲ್ಲಿ ಈಗ ಒಂದು ಡಜನ್ ಸಿನಿಮಾ ಇದ್ದಂತೆ ಆಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 11:00 am, Sat, 12 July 25