AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಭಿಮಾನಿಯ ಬೈಕ್​ ಓಡಿಸಿದ ಶಿವರಾಜ್​ಕುಮಾರ್; ವಿಡಿಯೋ ವೈರಲ್

ಶಿವರಾಜ್​ಕುಮಾರ್​ ಅಭಿಮಾನಿಯೋರ್ವ ಹೊಸ ಬೈಕ್​ ಖರೀಸಿದ್ದರು. ತಮ್ಮ ಬೈಕ್​ ಅನ್ನು ​ಶಿವಣ್ಣ ರೈಡ್ ಮಾಡಬೇಕು ಎಂಬುದು ಅವರ ಕನಸಾಗಿತ್ತು

ಅಭಿಮಾನಿಯ ಬೈಕ್​ ಓಡಿಸಿದ ಶಿವರಾಜ್​ಕುಮಾರ್; ವಿಡಿಯೋ ವೈರಲ್
ಅಭಿಮಾನಿಯ ಬೈಕ್​ ಓಡಿಸಿದ ಶಿವರಾಜ್​ಕುಮಾರ್; ವಿಡಿಯೋ ವೈರಲ್
TV9 Web
| Edited By: |

Updated on: Sep 01, 2021 | 10:42 PM

Share

ನಟ ಶಿವರಾಜ್​ಕುಮಾರ್​ ಅವರು ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಸ್ವಲ್ಪವೂ ಗರ್ವ ಬಂದಿಲ್ಲ. ಅವರು ಎಲ್ಲರ ಜತೆಗೆ ಸಾಮಾನ್ಯರಂತೆ ಬೆರೆಯುತ್ತಾರೆ. ಅಭಿಮಾನಿಗಳಿಗೆ ಅವರು ಬೇಸರ ಮಾಡಿದ ಉದಾಹರಣೆಯೇ ಇಲ್ಲ. ಈಗ ಶಿವರಾಜ್​ಕುಮಾರ್​ ಅವರು ಅಭಿಮಾನಿಯ ಬೈಕ್​ ಓಡಿಸಿ ಸುದ್ದಿಯಾಗಿದ್ದಾರೆ. ಈ ವಿಡಿಯೋ ಕೂಡ ವೈರಲ್ ಆಗುತ್ತಿದೆ.

ಹೌದು, ಶಿವರಾಜ್​ಕುಮಾರ್​ ಅಭಿಮಾನಿಯೋರ್ವ ಹೊಸ ಬೈಕ್​ ಖರೀಸಿದ್ದರು. ತಮ್ಮ ಬೈಕ್​ ಅನ್ನು ​ಶಿವಣ್ಣ ರೈಡ್ ಮಾಡಬೇಕು ಎಂಬುದು ಅವರ ಕನಸಾಗಿತ್ತು. ಈ ಕಾರಣಕ್ಕೆ ಶಿವರಾಜ್​ಕುಮಾರ್​ ಬಳಿ ಬೈಕ್​ ತೆಗೆದುಕೊಂಡು ಬಂದಿದ್ದಾರೆ. ಶಿವರಾಜ್​ಕುಮಾರ್​ ಇದಕ್ಕೆ ನೋ ಎನ್ನಲಿಲ್ಲ. ಬದಲಿಗೆ ಬೈಕ್​ ಮೇಲೆ ಆಟೋಗ್ರಾಫ್​ ಹಾಕಿ ಈ ಬೈಕ್​ ಓಡಿಸಿದ್ದಾರೆ. ಸದ್ಯ, ಈ ವಿಡಿಯೋ ವೈರಲ್​ ಆಗುತ್ತಿದೆ. ಶಿವರಾಜ್​ಕುಮಾರ್​ ಅವರ ಸಿಂಪ್ಲಿಸಿಟಿ ನೋಡಿ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಯುವ ನಟ ಶ್ರೇಯಸ್​ಗೆ ಲಾಂಗ್​ ಹಿಡಿಯೋದು ಹೇಗೆ ಎನ್ನುವ ಪಾಠವನ್ನು ಶಿವಣ್ಣ ಮಾಡಿದ್ದರು. ಗುಜ್ಜಲ್ ಪುರುಶೋತ್ತಮ್ ನಿರ್ಮಾಣ ಮಾಡುತ್ತಿರುವ ಹಾಗೂ ನಂದ ಕಿಶೋರ್ ನಿರ್ದೇಶನದ ‘ರಾಣ’ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ಈ ಸಿನಿಮಾಗೆ ಶ್ರೇಯಸ್ ನಾಯಕ. ಇತ್ತೀಚೆಗೆ ಚಿತ್ರತಂಡ ಹ್ಯಾಟ್ರಿಕ್ ಹೀರೋ ಶಿವರಾಜ್​ಕುಮಾರ್ ಅವರನ್ನು ಭೇಟಿ ಮಾಡಿತ್ತು. ಲಾಂಗ್ ಹೇಗೆ ಹಿಡಿಯಬೇಕು, ಕ್ಯಾಮೆರಾ ಮುಂದೆ ಲಾಂಗ್ ಹಿಡಿದು ಹೇಗೆ ಅಭಿನಯಿಸಬೇಕು ಎನ್ನುವುದನ್ನು ಶ್ರೇಯಸ್​​ಗೆ ಶಿವರಾಜ್​ಕುಮಾರ್​ ಹೇಳಿಕೊಟ್ಟಿದ್ದು ವಿಶೇಷವಾಗಿತ್ತು. ‘ರಾಣ’ ಚಿತ್ರಕ್ಕಾಗಿ ಶ್ರೇಯಸ್​ ಇದೇ ಮೊದಲ ಬಾರಿಗೆ ಲಾಂಗ್​ ಹಿಡಿಯುತ್ತಿದ್ದಾರೆ. ಈ ಕಾರಣಕ್ಕೆ ಹಿರಿಯ ನಟ ಶಿವಣ್ಣನ ಬಳಿ ಟ್ರೇನಿಂಗ್​ ಪಡೆದರೆ ಉತ್ತಮ ಎನ್ನುವ ಆಲೋಚನೆ ಚಿತ್ರತಂಡದ್ದಾಗಿತ್ತು. ಹೀಗಾಗಿ, ನಿರ್ದೇಶಕ ನಂದ ಕಿಶೋರ್ ಹಾಗೂ ಶ್ರೇಯಸ್​ ಹ್ಯಾಟ್ರಿಕ್​ ಹೀರೋನನ್ನು ಭೇಟಿ ಆಗಿದ್ದಾರೆ.

‘ಪಾತ್ರ ಎಂದು ಬಂದಾಗ ಎಲ್ಲ ರೀತಿಯ ಕ್ಯಾರೆಕ್ಟರ್​ಗಳನ್ನೂ ಮಾಡಬೇಕು. ನನಗಿಂತ ಉತ್ತಮವಾಗಿ ಮಚ್ಚು ಹಿಡಿಯವವರು ಇದ್ದಾರೆ. ಪ್ರತಿ ಪಾತ್ರಕ್ಕೂ ಒಂದು ಆ್ಯಟಿಟ್ಯೂಡ್​ ಇರುತ್ತದೆ. ಅದು ತುಂಬಾನೇ ಮುಖ್ಯ. ನಾನು ಮಚ್ಚು ಹಿಡಿದೆ, ಅದಕ್ಕೆ ಸಿನಿಮಾ ಹಿಟ್​ ಆಯಿತು ಎಂದು ಹೇಳೋಕಾಗಲ್ಲ. ನಾನು ಸಿನಿಮಾದಲ್ಲಿ ಮಚ್ಚು ಹಿಡಿದು ನಟಿಸ್ತೀನಿ ನಿಜ. ಆದರೆ, ಅದನ್ನು ಹೇಳಿಕೊಡಿ ಎಂದರೆ ಅದು ಸ್ವಲ್ಪ ಕಷ್ಟದ ಕೆಲಸ’ ಎಂದಿದ್ದರು ಶಿವರಾಜ್​ಕುಮಾರ್​.

ಇದನ್ನೂ ಓದಿ: ಯುವ ನಟನಿಗೆ ಮಚ್ಚು ಹಿಡಿಯುವ ಪಾಠ ಮಾಡಿದ ಶಿವರಾಜ್​ಕುಮಾರ್​

ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನೈಜೀರಿಯಾದಲ್ಲಿ ಐಸಿಸ್ ನೆಲೆಗಳ ಮೇಲೆ ಟ್ರಂಪ್ ಪಡೆಯ ಮಾರಕ ದಾಳಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ನಿದ್ದೆಗಣ್ಣಿನಲ್ಲಿ 10ನೇ ಮಹಡಿಯಿಂದ ಕೆಳಗೆ ಬಿದ್ದ ವ್ಯಕ್ತಿ
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ತೋರು ಬೆರಳಿನ ಆಕಾರದಿಂದ ಮನುಷ್ಯನ ವ್ಯಕ್ತಿತ್ವ ಗೊತ್ತಾಗುತ್ತಾ?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಿಗೆ ಅಡ್ಡಿ
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಹಾಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್