ಕನ್ನಡ ಸಿನಿಮಾಗಳಿಗಾಗಿ ಒಟಿಟಿ, ಕೈಗಾರಿಕಾ ನೀತಿಯಡಿ ಚಿತ್ರರಂಗ; ಬಜೆಟ್​ನಲ್ಲಿ ಘೋಷಣೆ ಮಾಡಿದ ಸಿದ್ದರಾಮಯ್ಯ

| Updated By: ರಾಜೇಶ್ ದುಗ್ಗುಮನೆ

Updated on: Mar 07, 2025 | 11:17 AM

ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ರಿಲೀಸ್ ಆಗುತ್ತಿವೆ. ಆದರೆ, ಒಟಿಟಿಯಲ್ಲಿ ಅವುಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಈ ಕಾರಣಕ್ಕೆ ಅನೇಕ ಸಿನಿಮಾಗಳು ಮಾರಾಟವಾಗದೆ ಉಳಿದಿವೆ. ಥಿಯೇಟರ್​ನಲ್ಲಿ ರಿಲೀಸ್ ಆದ ಅನೇಕ ಒಳ್ಳೆಯ ಸಿನಿಮಾಗಳು ಒಟಿಟಿಗೆ ಬರದೆ ಮೂಲೆಗುಂಪಾಗಿವೆ. ಅವುಗಳು ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಈಗ ಪರಿಹಾರ ಸಿಕ್ಕಂತೆ ಆಗಿದೆ.

ಕನ್ನಡ ಸಿನಿಮಾಗಳಿಗಾಗಿ ಒಟಿಟಿ, ಕೈಗಾರಿಕಾ ನೀತಿಯಡಿ ಚಿತ್ರರಂಗ; ಬಜೆಟ್​ನಲ್ಲಿ ಘೋಷಣೆ ಮಾಡಿದ ಸಿದ್ದರಾಮಯ್ಯ
ಸಿದ್ದರಾಮಯ್ಯ
Follow us on

ಕನ್ನಡದ ಸಿನಿಮಾಗಳನ್ನು ಒಟಿಟಿಯವರು ಖರೀದಿ ಮಾಡಲು ಮುಂದೆ ಬರುತ್ತಿಲ್ಲ ಎನ್ನುವ ಕೊರಗು ಮೊದಲಿನಿಂದಲೂ ಇದೆ. ಬಿಗ್ ಬಜೆಟ್ ಚಿತ್ರಗಳಿಗೆ ಮಾತ್ರ ಮಣೆ ಹಾಕುವ ಒಟಿಟಿ ಪ್ಲಾಟ್​ಫಾರ್ಮ್​ಗಳು, ಸಣ್ಣ ಚಿತ್ರಗಳನ್ನು ಕಡೆಗಣಿಸಿದ್ದವು. ಈ ಕಾರಣಕ್ಕೆ ಯೂಟ್ಯೂಬ್​ನಲ್ಲೇ ಸಿನಿಮಾ ಬಿಡುಗಡೆ ಮಾಡುವ ಕೆಲಸ ಆಗುತ್ತಿತ್ತು. ಬಜೆಟ್​​ನಲ್ಲಿ ಇದಕ್ಕೆ ಪರಿಹಾರ ಕಂಡು ಹಿಡಿಯುವ ಕೆಲಸ ಸರ್ಕಾರದಿಂದ ಆಗಿದೆ. ಕನ್ನಡ ಸಿನಿಮಾಗಳಿಗಾಗಿ ವಿಶೇಷ ಒಟಿಟಿ ತರೋ ಬಗ್ಗೆ ಸರ್ಕಾರ ಘೋಷಣೆ ಮಾಡಿದೆ.

ಕನ್ನಡದಲ್ಲಿ ಒಳ್ಳೆಯ ಸಿನಿಮಾಗಳು ರಿಲೀಸ್ ಆಗುತ್ತಿವೆ. ಆದರೆ, ಒಟಿಟಿಯಲ್ಲಿ ಅವುಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ಈ ಕಾರಣಕ್ಕೆ ಅನೇಕ ಸಿನಿಮಾಗಳು ಮಾರಾಟವಾಗದೆ ಉಳಿದಿವೆ. ಥಿಯೇಟರ್​ನಲ್ಲಿ ರಿಲೀಸ್ ಆದ ಅನೇಕ ಒಳ್ಳೆಯ ಸಿನಿಮಾಗಳು ಒಟಿಟಿಗೆ ಬರದೆ ಮೂಲೆಗುಂಪಾಗಿವೆ. ಅವುಗಳು ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಈಗ ಪರಿಹಾರ ಸಿಕ್ಕಂತೆ ಆಗಿದೆ.

ಇದನ್ನೂ ಓದಿ: ಒಳ್ಳೆಯ ಸಿನಿಮಾ ಸಿಗುತ್ತಿಲ್ಲ, ಒಟಿಟಿ ಬಗ್ಗೆ ಆಸಕ್ತಿ ವ್ಯಕ್ತಪಡಿಸಿದ ರಮ್ಯಾ

ಇದನ್ನೂ ಓದಿ
ಮಲ್ಟಿಪ್ಲೆಕ್ಸ್​ಗಳ ನಟ್ಟು-ಬೋಲ್ಟು ಟೈಟ್ ಮಾಡಿದ ರಾಜ್ಯ ಸರ್ಕಾರ
ಮಲ್ಟಿಪ್ಲೆಕ್ಸ್-ಚಿತ್ರಮಂದಿರಕ್ಕೆ ಏಕ ರೂಪದ ದರ ನೀತಿ? ತಗ್ಗಲಿದೆ ಬೆಲೆ

ಕಳೆದ ವರ್ಷ ಕೇರಳ ಸರ್ಕಾರವು ಹೊಸ ಒಟಿಟಿಯನ್ನು ಆರಂಭಿಸಿತ್ತು. ಇದು ಸರ್ಕಾರಿ ಸ್ವಾಮ್ಯದ ಮೊದಲ ಒಟಿಟಿ ಎನ್ನುವ ಹೆಗ್ಗಳಿಕೆಗೆ ಪಾತ್ರವಾಯಿತು. ಸದ್ಯ ನಮ್ಮ ರಾಜ್ಯ ಸರ್ಕಾರ ಕನ್ನಡ ಸಿನಿಮಾಗಳಿಗೆ OTT ವೇದಿಕೆ ಸೃಷ್ಟಿಸಲು ನಿರ್ಧಾರ ಮಾಡಿದೆ. ಇದರಿಂದ ಕನ್ನಡ ಚಿತ್ರರಂಗ ಬೆಳೆಯಲು ಮತ್ತಷ್ಟು ಸಹಕಾರಿ ಆಗಲಿದೆ. ಖಾಸಗಿ ಒಟಿಟಿ ಸಂಸ್ಥೆಗಳ ಮೇಲೆ ಅವಲಂಬಿತ ಆಗುವುದು ತಪ್ಪಲಿದೆ. ಮುಂದಿನ ದಿನಗಳಲ್ಲಿ ಇದರ ಕಾರ್ಯವೈಖರಿ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.

ಚಿತ್ರರಂಗ ಇನ್ನು ಉದ್ಯಮ

ಸಿನಿಮಾ ಕ್ಷೇತ್ರವನ್ನ ಕೈಗಾರಿಕಾ ನೀತಿಯಡಿ ತರಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಬಜೆಟ್​ನಲ್ಲಿ ಘೋಷಣೆ ಮಾಡಲಾಗಿದೆ. ಸಿನಿಮಾ ರಂಗವನ್ನು ಉದ್ಯಮ ಎಂದು ಪರಿಗಣಿಸಿ ಸರ್ಕಾರ ಘೋಷಣೆ ಮಾಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.