AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಣ್ಣೆ ಬಾಟಲಿ ಮಾರಿ ರೇಷನ್ ಖರೀದಿಸುತ್ತಿದ್ದ ಸಿಹಿ-ಕಹಿ ಚಂದ್ರು, ಪ್ರಕಾಶ್ ರೈ

Sihi Kahi Chandru and Prakash Rai: ಪ್ರಕಾಶ್ ರೈ ಮತ್ತು ಸಿಹಿ ಕಹಿ ಚಂದ್ರು ಒಂದೇ ರೂಂನಲ್ಲಿದ್ದರು. ಆಗ ಬಹಳ ಕಷ್ಟದ ದಿನಗಳು. ಅಷ್ಟೋ ಇಷ್ಟೊ ದುಡಿಯುತ್ತಿದ್ದಿದ್ದು ಸಿಹಿ ಕಹಿ ಚಂದ್ರು ಮಾತ್ರ. ಆಗ ಪಡುತ್ತಿದ್ದ ಕಷ್ಟಗಳು, ಆದರೂ ಅದರಲ್ಲೂ ಕಾಣುತ್ತಿದ್ದ ಸುಖದ ಬಗ್ಗೆ ಸಿಹಿ ಕಹಿ ಚಂದ್ರು ಮಾತನಾಡಿದ್ದಾರೆ.

ಎಣ್ಣೆ ಬಾಟಲಿ ಮಾರಿ ರೇಷನ್ ಖರೀದಿಸುತ್ತಿದ್ದ ಸಿಹಿ-ಕಹಿ ಚಂದ್ರು, ಪ್ರಕಾಶ್ ರೈ
Prakash Sihi
ಮಂಜುನಾಥ ಸಿ.
|

Updated on: Feb 23, 2025 | 7:35 PM

Share

ಸಿಹಿ ಕಹಿ ಚಂದ್ರು ಚಿತ್ರರಂಗದ ಹಿರಿಯ ನಟ, ಟಿವಿ ಲೋಕದ ಜನಪ್ರಿಯ ತಾರೆ. ಸಿಹಿ ಕಹಿ ಚಂದ್ರು ಅವರಿಗೆ ಕನ್ನಡ ಮನರಂಜನಾ ಕ್ಷೇತ್ರದೊಂದಿಗೆ ದಶಕಗಳ ನಂಟಿದೆ. ಇಂದು ಸ್ಟಾರ್ ಗಳಾಗಿರುವ ಹಲವರು ಸಿಹಿ ಕಹಿ ಚಂದ್ರು ಅವರ ಯೌವ್ವನದ ಗೆಳೆಯರು. ಈಗಿನ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸಹ ಸಿಹಿ ಕಹಿ ಚಂದ್ರು ಅವರು ಬಲು ಹಳೆಯ ಮಿತ್ರರು. ನಟ ಪ್ರಕಾಶ್ ರೈ ಅಂತೂ ಸಿಹಿ ಕಹಿ ಚಂದ್ರು ಅವರೊಟ್ಟಿಗೆ ಒಂದೇ ರೂಂನಲ್ಲಿ ನೆಲೆಸಿದ್ದವರು. ಪ್ರಕಾಶ್ ರೈ ಜೊತೆಗೆ ಕಳೆದ ದಿನಗಳನ್ನು ಸಿಹಿ ಕಹಿ ಚಂದ್ರು ಸಂದರ್ಶನವೊಂದರಲ್ಲಿ ವಿವರಿಸಿದ್ದಾರೆ.

ಪ್ರಕಾಶ್ ರೈ, ಸಿಹಿ ಕಹಿ ಚಂದ್ರು ಮತ್ತು ಗ್ರಾಫ್ ಎಂಬ ಮೂವರು ಒಂದೇ ರೂಂನಲ್ಲಿ ಇರುತ್ತಿದ್ದರಂತೆ. ಆಗ ಅವರಿಗೆ ರೇಷನ್ ಖರೀದಿಸಲು ಸಹ ಹಣ ಇರುತ್ತಿರಲಿಲ್ಲವಂತೆ. ಬಹಳ ಕಷ್ಟದ ಜೀವನ ಅದು, ಯಾರಿಗೂ ಕೆಲಸ ಇರಲಿಲ್ಲ. ಇರುವುದರಲ್ಲಿ ಸಿಹಿ ಕಹಿ ಚಂದ್ರು ಆಗೊಮ್ಮೆ ಈಗೊಮ್ಮೆ 100-200 ದುಡಿಯುತ್ತಿದ್ದರಂತೆ. ಆಗ ರೂಂಗೆ ರೇಷನ್ ತರುತ್ತಿದ್ದರಂತೆ. ಯಾವಾಗ ಹಣ ಇರುತ್ತಿರಲಿಲ್ಲವೊ, ಸಿಹಿ-ಕಹಿ ಚಂದ್ರು, ತಮ್ಮ ರೂಂ ಅನ್ನು ಆ ಏರಿಯಾದ ಕುಡುಕರಿಗೆ ಬಾಡಿಗೆಗೆ ಕೊಟ್ಟು ಬಿಡುತ್ತಿದ್ದರಂತೆ!

ಹೌದು, ಏರಿಯಾದ ಕುಡುಕ ಗೆಳೆಯರಿಗೆ ಹೇಳಿ, ಇವತ್ತು ನಮ್ಮ ರೂಂನಲ್ಲಿ ಪಾರ್ಟಿ ಮಾಡಿಕೊಳ್ಳಿ ಎನ್ನುತ್ತಿದ್ದರಂತೆ. ಎಲ್ಲರೂ ಬಂದು ಪಾರ್ಟಿ ಮಾಡಿ ಎಣ್ಣೆ ಹೊಡೆದು ಹೋಗುತ್ತಿದ್ದರಂತೆ. ಕೊನೆಗೆ 20-25 ಬಾಟಲಿಗಳು ಖಾಲಿ ಆಗುತ್ತಿದ್ದವಂತೆ, ಆ ಬಾಟಲಿಗಳನ್ನು ಸಂಗ್ರಹಿಸಿ ಅವನ್ನು ಮಾರಾಟ ಮಾಡಿ ರೇಷನ್ ಖರೀದಿ ಮಾಡಿದ ದಿನಗಳು ಸಹ ಇವೆಯಂತೆ.

ಇದನ್ನೂ ಓದಿ:ನಟಿಗೂ ಕಿರುಕುಳ ಕೊಟ್ಟಿದ್ದ, ಸಂಬರ್ಗಿಯನ್ನು ಸುಮ್ಮನೆ ಬಿಡಲ್ಲ: ಪ್ರಕಾಶ್ ರೈ

ಒಮ್ಮೆ ಪ್ರಕಾಶ್ ರೈ, ಸಿಹಿ ಕಹಿ ಚಂದ್ರು ಬಳಿ ನಾನು ಒಮ್ಮೆಯೂ ಸಹ ಜೀವನದಲ್ಲಿ ಫೈವ್ ಸ್ಟಾರ್ ಹೋಟೆಲ್​ಗೆ ಹೋಗಿಲ್ಲ ಅಂದರಂತೆ. ಕೂಡಲೇ ಸಿಹಿ ಕಹಿ ಚಂದ್ರು, ಸರಿ ಎಲ್ಲರೂ ನಿಮ್ಮ ಬಳಿ ಹಣ ಎಷ್ಟಿದೆ ಹುಡುಕಿ ಎಂದು ಹೇಳಿದ್ದಾರೆ, ಎಲ್ಲವನ್ನೂ ತಡಕಾಡಿದರೆ 25 ರೂಪಾಯಿ ಸಿಕ್ಕಿದೆ. ಸರಿ ಎಂದು ರಾಜಾಜಿನಗರದಿಂದ ವಿಂಡ್ಸರ್​ಮ್ಯಾನರ್​ ಹೋಟೆಲ್​ಗೆ ನಡೆದುಕೊಂಡೇ ಬಂದರಂತೆ. ಬಂದು ಅಲ್ಲಿ ಬೈಟು ಕಾಫಿ ಆರ್ಡರ್ ಮಾಡಿದರಂತೆ. ಬೈಟು ಕಾಫಿಯ ಬೆಲೆ ಆಗಲೇ 25 ರೂಪಾಯಿಗಳಿತ್ತಂತೆ. ಬಂದ ಕಾಫಿಯನ್ನು ಮೂವರೂ ಕುಡಿದು, ಖುಷಿಯಿಂದ ರೂಂಗೆ ನಡೆಯುತ್ತಲೇ ಹೊರಟರಂತೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ