ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್; ಪ್ರೀತಿಗಾಗಿ ಅಹಂಕಾರ ಬದಿಗಿಟ್ಟ ಗಾಯಕ

ಕನ್ನಡ ಹಾಡು ಹೇಳುವಂತೆ ಒತ್ತಾಯಿಸಿದ್ದನ್ನು ಪಹಲ್ಗಾಮ್ ಘಟನೆಗೆ ಹೋಲಿಸಿದ್ದ ಗಾಯಕ ಸೋನು ನಿಗಮ್ ಅವರನ್ನು ಕರ್ನಾಟಕದಲ್ಲಿ ಬ್ಯಾನ್ ಮಾಡಲು ನಿರ್ಧರಿಸಲಾಗಿತ್ತು. ಅದರ ಬೆನ್ನಲ್ಲೇ ಅವರು ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ. ‘ನಿಮ್ಮ ಮೇಲೆ ನನಗೆ ಇರುವ ಪ್ರೀತಿಯು ನನ್ನ ಅಹಂಕಾರಕ್ಕಿಂತ ದೊಡ್ಡದು’ ಎಂದು ಅವರು ಹೇಳಿದ್ದಾರೆ.

ಕನ್ನಡಿಗರ ಕ್ಷಮೆ ಕೇಳಿದ ಸೋನು ನಿಗಮ್; ಪ್ರೀತಿಗಾಗಿ ಅಹಂಕಾರ ಬದಿಗಿಟ್ಟ ಗಾಯಕ
Sonu Nigam

Updated on: May 05, 2025 | 9:58 PM

ಕಡೆಗೂ ಗಾಯಕ ಸೋನು ನಿಗಮ್ (Sonu Nigam) ಅವರು ಕನ್ನಡಿಗರಲ್ಲಿ ಕ್ಷಮೆ ಕೇಳಿದ್ದಾರೆ. ಬೆಂಗಳೂರಿನಲ್ಲಿ ಸಂಗೀತ ಕಾರ್ಯಕ್ರಮ ನಡೆಸುವಾಗ ಸೋನು ನಿಗಮ್ ನೀಡಿದ್ದ ಹೇಳಿಕೆ ಸಾಕಷ್ಟು ವಿವಾದ (Sonu Nigam Controversy) ಸೃಷ್ಟಿಸಿತ್ತು. ‘ಕನ್ನಡ ಕನ್ನಡ ಎನ್ನುವುದಕ್ಕೇ ಪಹಲ್ಗಾಮ್ ಘಟನೆ ನಡೆದಿದ್ದು’ ಎಂದು ಅವರು ಹೇಳಿದ್ದರು. ಅವರ ಹೇಳಿಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಲಾಗಿತ್ತು. ಅದರಂತೆ ಅವರೀಗ ಕರುನಾಡಿನ ಜನರಲ್ಲಿ ಕ್ಷಮೆ (Sonu Nigam Apology) ಕೇಳಿದ್ದಾರೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸೋನು ನಿಗಮ್ ಪೋಸ್ಟ್ ಮಾಡಿದ್ದಾರೆ.

‘ಕ್ಷಮೆ ಇರಲಿ ಕರ್ನಾಟಕ. ನಿಮ್ಮ ಮೇಲೆ ನನಗೆ ಇರುವ ಪ್ರೀತಿ ನನ್ನ ಅಹಂಕಾರಕ್ಕಿಂತಲೂ ದೊಡ್ಡದು. ನಿಮ್ಮನ್ನು ಯಾವಾಗಲೂ ಪ್ರೀತಿಸುತ್ತೇನೆ’ ಎಂದು ಸೋನು ನಿಗಮ್ ಅವರು ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಅವರು ವಿವಾದ ಅಂತ್ಯಗೊಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಸೋನು ನಿಗಮ್ ಮಾಡಿರುವ ಈ ಪೋಸ್ಟ್ ವೈರಲ್ ಆಗುತ್ತಿದೆ.

ಇದನ್ನೂ ಓದಿ
ಕನ್ನಡಿಗರ ಕೆಣಕಿದ ಸೋನು ನಿಗಮ್​ ಸ್ಯಾಂಡಲ್​ವುಡ್​ನಿಂದ ಬ್ಯಾನ್!
ಸೋನು ನಿಗಂಗೆ ನೊಟೀಸ್ ನೀಡಲಿರುವ ಬೆಂಗಳೂರು ಪೊಲೀಸ್
ಸೋನು ನಿಗಂ ಅನ್ನು ಕೂಡಲೇ ಬಂಧಿಸಬೇಕು: ವಾಟಾಳ್ ನಾಗರಾಜ್
ವಿವಾದದ ಬಳಿಕ ‘ಕನ್ನಡಿಗರು ತುಂಬಾನೇ ಒಳ್ಳೆಯವರು’ ಎಂದ ಸೋನು ನಿಗಮ್

ಸೋನು ನಿಗಮ್ ಮಾತಿಗೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾದ ಬೆನ್ನಲ್ಲೇ ರಾಷ್ಟ್ರಮಟ್ಟದಲ್ಲಿ ಸುದ್ದಿ ಆಗಿತ್ತು. ಆಗ ಸೋನು ನಿಗಮ್ ಅವರು ಕ್ಷಮೆ ಕೇಳುವ ಬದಲು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದರು. ಆಗ ಅವರ ವಿರುದ್ಧ ಇನ್ನಷ್ಟು ಆಕ್ರೋಶ ವ್ಯಕ್ತವಾಯಿತು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಸಿ, ಸೋನು ನಿಗಮ್ ಅವರನ್ನು ಬ್ಯಾನ್ ಮಾಡುವ ಬಗ್ಗೆ ಚರ್ಚಿಸಲಾಯಿತು. ಅದರ ಬೆನ್ನಲ್ಲೇ ಸೋನು ನಿಗಮ್ ಅವರು ಕ್ಷಮೆ ಕೇಳಿದ್ದಾರೆ.

ಇದನ್ನೂ ಓದಿ: ಬಹುಬೇಡಿಕೆಯಿಂದ ಬ್ಯಾನ್ ತನಕ; ಸೋನು ನಿಗಮ್ 900 ಕನ್ನಡ ಹಾಡುಗಳು

ಕನ್ನಡದಲ್ಲಿ ಸೋನು ನಿಗಮ್ ಅವರು 900ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಆ ಪೈಕಿ ಬಹುತೇಕ ಹಾಡುಗಳು ಸೂಪರ್ ಹಿಟ್ ಆಗಿವೆ. ಇಂದಿಗೂ ಅವರಿಗೆ ಅಷ್ಟೇ ಬೇಡಿಕೆ ಇದೆ. ಕನ್ನಡದ ಈಗಿನ ಎಲ್ಲ ಸೂಪರ್​ ಸ್ಟಾರ್​ ನಟರ ಸಿನಿಮಾಗಳ ಗೀತೆಗಳಿಗೆ ಸೋನು ನಿಗಮ್ ಧ್ವನಿ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಆದರೆ ಕನ್ನಡದ ವಿರುದ್ಧವಾಗಿ ಅವರು ಮಾತನಾಡಿದ್ದರಿಂದ ಕರ್ನಾಟಕದಲ್ಲಿ ವಿವಾದ ಸೃಷ್ಟಿ ಆಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 9:48 pm, Mon, 5 May 25