ಶಿವಣ್ಣ ಸಿನಿಮಾ ಜರ್ನಿಗೆ 40 ವರ್ಷ; ಶುಭಕೋರಿದ ಪರಭಾಷೆಯ ಸ್ಟಾರ್ ಕಲಾವಿದರು

ಶಿವರಾಜ್​ಕುಮಾರ್ ಎಂದರೆ ಕರ್ನಾಟಕ ಮಾತ್ರವಲ್ಲದೇ ಅಕ್ಕ ಪಕ್ಕದ ರಾಜ್ಯಗಳ ಸೆಲೆಬ್ರಿಟಿಗಳಿಗೂ ತುಂಬ ಅಭಿಮಾನ. ಅವರ ಜೊತೆ ಎಲ್ಲರೂ ಉತ್ತಮ ಒಡನಾಟ ಹೊಂದಿದ್ದಾರೆ. ಬಣ್ಣದ ಲೋಕದಲ್ಲಿ 40 ವರ್ಷ ಪೂರೈಸುತ್ತಿರುವ ಶಿವಣ್ಣ ಅವರಿಗೆ ಕನ್ನಡ, ತೆಲುಗು, ತಮಿಳು ಮುಂತಾದ ಭಾಷೆಯ ಚಿತ್ರರಂಗದ ಸೆಲೆಬ್ರಿಟಿಗಳು ವಿಶ್ ಮಾಡಿದ್ದಾರೆ.

ಶಿವಣ್ಣ ಸಿನಿಮಾ ಜರ್ನಿಗೆ 40 ವರ್ಷ; ಶುಭಕೋರಿದ ಪರಭಾಷೆಯ ಸ್ಟಾರ್ ಕಲಾವಿದರು
South Indian Celebrities

Updated on: Jun 10, 2025 | 5:35 PM

‘ಹ್ಯಾಟ್ರಿಕ್ ಹೀರೋ’ ಶಿವರಾಜ್​ಕುಮಾರ್ (Shivarajkumar) ಅವರು ಚಿತ್ರರಂಗಕ್ಕೆ ಬಂದು 40 ವರ್ಷ ಕಳೆಯುತ್ತಿದೆ. ಇಂದಿಗೂ ಅವರು ಬಹುಬೇಡಿಕೆಯ ನಟನಾಗಿ ಬ್ಯುಸಿ ಆಗಿದ್ದಾರೆ. ಬಣ್ಣದ ಲೋಕದಲ್ಲಿ 40 ವರ್ಷದ ಮೈಲಿಗಲ್ಲು ತಲುಪಿದ್ದಕ್ಕೆ ಶಿವರಾಜ್​ಕುಮಾರ್ ಅವರಿಗೆ ಅನೇಕರು ಅಭಿನಂದನೆ ತಿಳಿಸುತ್ತಿದ್ದಾರೆ. ವಿಶೇಷ ಏನೆಂದರೆ, ಪರಭಾಷೆಯ ಸ್ಟಾರ್ ಕಲಾವಿದರು, ನಿರ್ದೇಶಕರು ಶಿವಣ್ಣ (Shivanna) ಬಗ್ಗೆ ಪ್ರೀತಿಯ ಮಾತುಗಳನ್ನಾಡಿದ್ದಾರೆ. ‘ಮೆಗಾ ಸ್ಟಾರ್’ ಚಿರಂಜೀವಿ (Mega Star Chiranjeevi), ನಾಗಾರ್ಜುನ, ವಿಜಯ್ ದೇವರಕೊಂಡ, ನಾನಿ, ಪುರಿ ಜಗನ್ನಾಥ್, ಬುಚ್ಚಿ ಬಾಬು ಸನಾ, ಕಮಲ್ ಹಾಸನ್ ಸೇರಿದಂತೆ ಹಲವರು ಶಿವರಾಜ್​ಕುಮಾರ್ ಅವರು 4 ದಶಕಗಳ ಸಿನಿಪಯಣಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಟಾಲಿವುಡ್ ನಟ ಚಿರಂಜೀವಿ ಅವರು ವಿಡಿಯೋ ಮೂಲಕ ಮನಸಾರೆ ಹಾರೈಸಿದ್ದಾರೆ. ‘ಡಾ. ರಾಜ್​ಕುಮಾರ್ ಜೊತೆ ನನಗೆ ಯಾವಾಗಲೂ ವಿಶೇಷ ಬಾಂಧವ್ಯ ಇತ್ತು. ನನಗೆ ಅವರು ತಂದೆ ಸಮಾನರು. ಅವರಿಂದ ಶಿವಣ್ಣ, ಅಪ್ಪು ಮತ್ತು ರಾಘವೇಂದ್ರ ಬಗ್ಗೆ ತಿಳಿಯಿತು. ಅವರೆಲ್ಲ ನಮ್ಮ ಕುಟುಂಬದವರೇ ಅನಿಸಿದರು. ಶಿವಣ್ಣ ಸ್ಟಾರ್ ಆಗಿ ಬೆಳೆದಿದ್ದನ್ನು ನೋಡಲು ಖುಷಿ ಆಗುತ್ತದೆ. ತಂದೆಯ ದಾರಿಯಲ್ಲಿ ನಡೆದು ಬಂದಿದ್ದು ಮಾತ್ರವಲ್ಲದೇ, ಅವರು ತಮ್ಮದೇ ಛಾಪು ಮೂಡಿಸಿ, ಜನಮನ ಗೆದ್ದರು. ಚಿತ್ರರಂಗದಲ್ಲಿ ಅವರು 40 ವರ್ಷ ಪೂರೈಸಿದರು ಎಂದರೆ ನಂಬೋಕೆ ಆಗಲ್ಲ. ಎಂತಹ ಅದ್ಭುತ ಜರ್ನಿ. ಅವರಿಗೆ ಇನ್ನೂ ಹೆಚ್ಚಿನ ಯಶಸ್ಸು ಸಿಗಲಿ’ ಎಂದು ಚಿರಂಜೀವಿ ಅವರು ವಿಶ್ ಮಾಡಿದ್ದಾರೆ.

ನಟ ನಾನಿ ಮಾತನಾಡಿ, ‘ಶಿವಣ್ಣ ಅವರ 40 ವರ್ಷಗಳ ಜರ್ನಿಯನ್ನು ನಾವೆಲ್ಲರೂ ಸೆಲೆಬ್ರೇಟ್ ಮಾಡಬೇಕು. ಅವರು ಚಿತ್ರರಂಗಕ್ಕಾಗಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೇ ಬೇರೆ ಭಾಷೆಯ ಸಿನಿಮಾದವರಿಗೂ ಅವರು ಸಹಾಯ ಮಾಡಿದ್ದಾರೆ. ನಾನು ಬೆಂಗಳೂರಿಗೆ ಬಂದಾಗ ಮನೆ ರೀತಿಯ ಫೀಲ್ ನೀಡಿದರು. ಪ್ರತಿ ಬಾರಿ ಅಲ್ಲಿಗೆ ಹೋದಾಗ ಅವರನ್ನು ಭೇಟಿ ಆಗುತ್ತೇನೆ’ ಎಂದಿದ್ದಾರೆ.

ಇದನ್ನೂ ಓದಿ
ಶಿವರಾಜ್​ಕುಮಾರ್-ಗೀತಾ ಪ್ರೇಮ ನೋಡಿ ಆ ವ್ಯಕ್ತಿಗೆ ನಿಜಕ್ಕೂ ಶಾಕ್ ಆಗಿತ್ತು..
ಬಾಲಕನಂತೆ ಸೈಕಲ್ ಸವಾರಿ ಮಾಡಿದ ಶಿವಣ್ಣ; ವೈರಲ್ ವಿಡಿಯೋ ನೋಡಿ..
ಸುಧಾರಾಣಿಗೆ ಶಿವಣ್ಣ ಪ್ರೀತಿಯಿಂದ ಕರೆಯೋದೇನು? ಕೊನೆಗೂ ರಿವೀಲ್ ಆಯ್ತು
29 ವರ್ಷಗಳ ಬಳಿಕ ಯಾಣಗೆ ಭೇಟಿ ನೀಡಿದ ಶಿವರಾಜ್​ಕುಮಾರ್​; ಇಲ್ಲಿವೆ ಫೋಟೋಸ್

‘ಚಿತ್ರರಂಗದಲ್ಲಿ 40 ವರ್ಷ ಕಳೆಯುವುದು ಸುಲಭ ಅಲ್ಲ’ ಎಂದು ನಾಗಾರ್ಜುನ ಹೇಳಿದ್ದಾರೆ. ‘ಸಿನಿಮಾದಲ್ಲಿ 40 ವರ್ಷ ಪೂರೈಸುವುದು ಸಾಕಷ್ಟು ನಟರ ಕನಸು. ಒಬ್ಬ ವ್ಯಕ್ತಿಯಾಗಿ ನಿಮ್ಮನ್ನು ನಾನು ತುಂಬ ಇಷ್ಟಪಡುತ್ತೇನೆ. ಹಲವು ಬಾರಿ ನಿಮ್ಮ ಜೊತೆ ಮಾತನಾಡಿದ್ದೇನೆ. ಪಾಸಿಟಿವ್ ವೈಬ್ ನೀಡುತ್ತೀರು. ನಿಮ್ಮ ಇಡೀ ಕುಟುಂಬದಿಂದ ಅದು ಸಿಗುತ್ತದೆ. ನಾವು ಜೊತೆಯಾಗಿ ಕೆಲಸ ಮಾಡಿಲ್ಲ. ಆದರೆ ಜಾಹೀರಾತುಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇನೆ. ಅದು ಸವಿ ನೆನಪುಗಳು. ಶೀಘ್ರದಲ್ಲೇ ನಿಮ್ಮ ಜೊತೆ ಸಿನಿಮಾ ಮಾಡಲು ಬಯಸುತ್ತೇನೆ’ ಎಂದಿದ್ದಾರೆ ನಾಗಾರ್ಜುನ.

ಇದನ್ನೂ ಓದಿ: ಶಿವಣ್ಣನ ವೃತ್ತಿ ಬದುಕಿಗೆ 40 ವರ್ಷ; ಕಲರ್ಸ್ ವೇದಿಕೆ ಮೇಲೆ ಉತ್ಸವ

ವಿಜಯ್ ದೇವರಕೊಂಡ ಮಾತನಾಡಿ, ‘ನಮಸ್ಕಾರ ಶಿವಣ್ಣ, ನೀವು 40 ವರ್ಷದಿಂದ ಚಿತ್ರರಂಗದಲ್ಲಿ ಇದ್ದೀರಿ. ಕಳೆದ 7 ವರ್ಷದಿಂದ ನಾನು ನಿಮಗೆ ಪರಿಚಯ. 7 ವರ್ಷದ ಹಿಂದೆ ನೀವು ನನ್ನನ್ನು ಬಹಳ ಪ್ರೀತಿಯಿಂದ ನಿಮ್ಮ ಮನೆಗೆ ಸ್ವಾಗತಿಸಿದಿರಿ. ಭಾರತೀಯ ಚಿತ್ರರಂಗಕ್ಕೆ, ಕನ್ನಡ ಚಿತ್ರರಂಗಕ್ಕೆ ನೀವು ಸಾಕಷ್ಟು ಕೊಡುಗೆ ನೀಡಿದ್ದೀರಿ. ನನ್ನಂತಹ ಹೊಸ ನಟರಿಗೆ ನೀಡುವ ಸಹಕಾರಕ್ಕೂ ಧನ್ಯವಾದಗಳು’ ಎಂದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.